ಮಡಿಕೇರಿ NEWS DESK ಆ.31 : ಬ್ರೈನೋಬ್ರೈನ್ ಇಂಟರ್ ನ್ಯಾಷನಲ್ ದುಬೈ ಸಂಸ್ಥೆಯ ವತಿಯಿಂದ ಚೆನ್ನೈನಲ್ಲಿ ನಡೆದ 46ನೇ ರಾಷ್ಟ್ರ ಮಟ್ಟದ ಬ್ರೈನೋಬ್ರೈನ್ ಸ್ಪರ್ಧೆ-2025ರಲ್ಲಿ ಮಡಿಕೇರಿಯ ಬ್ರೈನೋಬ್ರೈನ್ ಕೇಂದ್ರದಿಂದ ಭಾಗವಹಿಸಿದ್ದ ಎಲ್ಲಾ 28 ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ ವಿಜೇತರಾಗಿದ್ದು, 18 ಚಾಂಪಿಯನ್ ಟ್ರೋಫಿ, 7 ಚಿನ್ನದ ಪದಕ ಮತ್ತು 3 ಬೆಳ್ಳಿಯ ಪದಕಗಳನ್ನು ಗೆದ್ದಿದ್ದಾರೆ. ಚೆನ್ನೈನ ಚೆನ್ನೈ ಟ್ರೇಡ್ ಸೆಂಟರ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸ್ಪರ್ಧೆಯಲ್ಲಿ ಮಡಿಕೇರಿಯ ಬ್ರೈನೋಬ್ರೈನ್ ಕೇಂದ್ರದ ತರಬೇತುದಾರರಾದ ಮಾಪಂಗಡ ಕವಿತಾ ಕರುಂಬಯ್ಯ ಅವರ ನೇತೃತ್ವದಲ್ಲಿ ಒಟ್ಟು 28 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಭಾರತದ 340 ಕೇಂದ್ರಗಳಿಂದ ಒಟ್ಟು 8000 ಮಕ್ಕಳು ಭಾಗವಹಿಸಿದ್ದು, ಕೇವಲ 3 ನಿಮಿಷದಲ್ಲಿ ವಿವಿಧ ರೀತಿಯ ಲೆಕ್ಕಗಳನ್ನು ಅತೀ ಚುರುಕಾಗಿ ಮಾಡುವ ಮೂಲಕ ಮಡಿಕೇರಿಯ ಬ್ರೈನೋಬ್ರೈನ್ ಕೇಂದ್ರದ 28ವಿದ್ಯಾರ್ಥಿಗಳು ಪದಕಗಳನ್ನು ತಮ್ಮದಾಗಿಸಿಕೊಂಡರು. ಈ ಸಾಧನೆಯ ಹೆಗ್ಗಳಿಕೆಯು ಕಠಿಣ ಪರಿಶ್ರಮ ವಹಿಸಿದ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಸಲ್ಲಬೇಕು. ಪದಕಗಳನ್ನು ಗೆದ್ದ ಅದ್ಭುತ ಯಶಸ್ಸಿಗೆ ಕಾರಣಕರ್ತರಾದ ವಿದ್ಯಾರ್ಥಿಗಳು ಹಾಗೂ ಕಾಳಜಿ ವಹಿಸಿದ ಪೋಷಕರಿಗೆ ಅಭಿನಂದನೆ ಸಲ್ಲಿಸುವುದಾಗಿ ಮಾಪಂಗಡ ಕವಿತಾ ಕರುಂಬಯ್ಯ ತಿಳಿಸಿದರು.*ಚಾಂಪಿಯನ್ ಟ್ರೋಫಿ ವಿಜೇತರು* ನಿಲ್ಹಾ ಜೆ. ತಾರಕನ್, ಐಡೆನ್ ಜೆ.ತಾರಕನ್, ಹರ್ಷಿಣಿ ಎಂ.ಕೆ, ಲಿವ್ಯ ಸುನಿತ್ ಕುಮಾರ್, ಆರಾಧ್ಯ ಕೆ.ಸಿ., ದ್ರುಪದ್.ಪಿ ಮಣಿಕೋಥ್, ಜಾರ್ಜ್ ಮ್ಯಾಥಿವ್, ನಮನ್ ಎಂ.ಗೌಡ, ಲಿಖಿತ್ ಸೋಮಣ್ಣ ಕೆ.ಎಲ್, ಅನ್ವಿತ್ ಎಸ್., ಆರುಷಿ ಕೆ.ಸಿ, ದಿಯ ವೈ.ಬಿ, ಜೆಶ್ವಿತ ತಂಗಮ್ಮ ಎ.ಪಿ, ಸಮರ್ಥ್ ಗಣಪತಿ ಎಸ್.ಕೆ, ಶ್ರೀಹಾನ್ ಸಂಜಯ್ ಜಿತ್ತಿ, ಲಾಕ್ಷಿತ ಬಿ.ಆರ್, ಪ್ರಥಮ್ ಚಿಣ್ಣಪ್ಪ ಬಿ.ಎಲ್, ವಂಶಿ ಕೆ.ಎಂ. *ಚಿನ್ನದ ಪದಕ ವಿಜೇತರು* ಕನಿಷಾ ಸುನಿತ್ ಕುಮಾರ್, ರಿಯಾನ್ ಪೊನ್ನಪ್ಪ ಬಿ.ಡಿ, ಆಲುಫ್.ಎ.ಆರ್, ಮಿಯ ಅರುಣ್, ಎಸ್.ಕೆ.ಪರಾಗ್ ದೇವಯ್ಯ, ದೀಕ್ಷ ಭರತ್ ಎನ್., ಶಾನ್ ಪ್ರಥಮ್ ಬಿ.ಆರ್, *ಬೆಳ್ಳಿ ಪದಕ ವಿಜೇತರು* ಪರೀಕ್ಷ ಎ.ಎಲ್, ಜೋನ್ನಾ ಮಡ್ತಾ, ನಿಂಶಿ ಕೆ.ಎಂ. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಆನಂದ್ ಸುಬ್ರಮಣ್ಯಂ, ತಾಂತ್ರಿಕ ನಿರ್ದೇಶಕ ಅರುಲ್ ಸುಬ್ರಮಣ್ಯಂ ಹಾಗೂ ಎಲ್ಲಾ ರಾಜ್ಯದ ಸ್ಥಳೀಯ ವ್ಯವಸ್ಥಾಪಕ ನಿರ್ದೇಶಕರುಗಳು ಉಪಸ್ಥಿತರಿದ್ದರು.











