
ಗೋಣಿಕೊಪ್ಪ NEWS DESK ಸೆ.13 : ಮಕ್ಕಳ ಕಲಿಕೆಯ ಆಸಕ್ತಿಯನ್ನು ಉತ್ತೇಜಿಸಲು ಎ.ಐ ತಂತ್ರಜ್ಞಾನದ ಬಳಕೆಯಿಂದ ಸಾಧ್ಯವಾಗವಲ್ಲದು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಅಭಿಪ್ರಾಯ ವ್ಯಕ್ತಪಡಿಸಿದರು.
ಗೋಣಿಕೊಪ್ಪ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಕೇಂದ್ರ, ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆ ಮತ್ತು ಭಾರತೀಯ ಸಾಮಾಜಿಕ ವಿಜ್ಞಾನ ಸಂಶೋಧನಾ ಕೇಂದ್ರ, ಬೆಂಗಳೂರು ಕ್ರೈಸ್ಟ್ ವಿಶ್ವವಿದ್ಯಾಲಯ ಸಹಯೋಗದಲ್ಲಿ ನಡೆದ ಎಲ್.ಎಂ.ಸಿ ಸ್ವಯಂ ಚಾಲನೆ ಮತ್ತು ಎ.ಐ ಕುರಿತು ಶಿಕ್ಷಕರ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು. ತಂತ್ರಜ್ಞಾನದ ಮಾದರಿಗಳಿಂದ ಮಕ್ಕಳ ಕಲಿಕೆಯ ಗುಣಮಟ್ಟವನ್ನು ಹೆಚ್ಚಿಸಬಹುದು ಆ ನಿಟ್ಟಿನಲ್ಲಿ ನಡೆಯುತ್ತಿರುವ ಪ್ರಯೋಗ ಕಾರ್ಯಗಳು ಉತ್ತಮ ಬೆಳವಣಿಗೆಯಾಗಿದೆ ಎಂದರು. ಗ್ರಾಮ ಪಂಚಾಯತಿ ಸದಸ್ಯ ಬಿಎನ್ ಪ್ರಕಾಶ್ ಮಾತನಾಡಿ, ಮುಂದುವರೆಯುತ್ತಿರುವ ದೇಶದ ಪ್ರಗತಿಯಾಗಿ ಶಿಕ್ಷಣದ ಕಲಿಕೆಯ ಮಾರ್ಗವನ್ನು ಬದಲಾಯಿಸಬೇಕಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಕರು ತಂತ್ರಜ್ಞಾನಗಳ ಬಳಕೆಗೆ ಮುಂದಾಗುವುದು ಉತ್ತಮ ಎಂದು ಸಲಹೆ ನೀಡಿದರು. ಶಾಲೆ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಜಗದೀಶ್ ಜೋಡುಬೀಟಿ ಕಾರ್ಯಕ್ರಮದ ಅಧ್ಯಕ್ಷತೆಯಲ್ಲಿ ಮಾತನಾಡಿ, ಈಗಾಗಲೇ ಸಾಕಷ್ಟು ದೇಶಗಳು ತಂತ್ರಜ್ಞಾನದ ಬಳಕೆಯಿಂದ ಶಿಕ್ಷಣದ ಮೌಲ್ಯಗಳನ್ನು ತಿಳಿಸಿ ಕೊಡುತ್ತಿದೆ ಈ ಪ್ರಯತ್ನ ಭಾರತದಲ್ಲಿಯೂ ಮುಂದುವರೆಯುತ್ತಿದೆ. ಮಕ್ಕಳನ್ನು ಹೆಚ್ಚು ಆಕರ್ಷಿತರಾಗಲು, ಕಲಿಕೆಯ ಮೌಲ್ಯಗಳನ್ನು ಉತ್ತೇಜಿಸಲು, ಎ.ಐ ಶಿಕ್ಷಣದ ಮಾರ್ಗ ಪ್ರಯೋಜನಕಾರಿ ಎಂದು ಅಭಿಪ್ರಾಯಪಟ್ಟರು. ಶಾಲೆಯ ಮುಖ್ಯ ಶಿಕ್ಷಕ ಹೆಚ್ ಕೆ ಕುಮಾರ್, ಬೆಂಗಳೂರು ಕ್ರೈಸ್ಟ್ ವಿಶ್ವವಿದ್ಯಾಲಯ ಪ್ರಾಧ್ಯಾಪಕಿ ಬಿನೀಷಾ ಪಿ., ಸಂಪನ್ಮೂಲ ವ್ಯಕ್ತಿಗಳಾದ ಜಸ್ಟಿನ್ ಜಾಯ್, ಡಾ. ಶಿಬು ಕೆ. ಮಣಿ, ಡಾ. ರೇಖಾ ವಿ, ಸಮಾಜ ಸೇವಕಿ ವಿಜು ದೇವಯ್ಯ, ಸೇರಿದಂತೆ ಹಲವು ಶಾಲೆಯ ಶಿಕ್ಷಕರು ಕಾರ್ಯಗಾರದಲ್ಲಿ ಭಾಗವಹಿಸಿದ್ದರು.








