
ಮಡಿಕೇರಿ NEWS DESK ಆ.9 : ನಗರದ ಶಕ್ತಿ ದೇವತೆಗಳಲ್ಲಿ ಒಂದಾದ ಶ್ರೀ ಕೋಟೆ ಮಾರಿಯಮ್ಮ ದೇವಾಲಯದ ಶ್ರೀ ಕೋಟೆ ಮಾರಿಯಮ್ಮ ಯುವಕ ಮಿತ್ರ ಮಂಡಳಿಯ 51 ನೇ ವರ್ಷದ ದಸರಾ ಉತ್ಸವ ಸಮಿತಿಯ ಅಧ್ಯಕ್ಷರಾಗಿ ಹೆಚ್.ಎಲ್.ಯೋಗೇಶ್ ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಮುದ್ದುರಾಜು ಬಿ.ಎನ್, ಸಹ ಕಾರ್ಯದರ್ಶಿಯಾಗಿ ಅನಿಲ್ ಎಂ.ಆರ್, ಖಜಾಂಚಿಯಾಗಿ ಪ್ರದೀಪ್ ಹಾಗೂ ಜ್ಞಾನೇಶ್ ಸೂರ್ಯ ಆಯ್ಕೆಯಾದರು. ದೇವಾಲಯದ ಆವರಣದಲ್ಲಿ ಇಂದು ನಡೆದ ಸಮಿತಿಯ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.









