Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಅರ್ಥವತ್ತಾಗಿ ನಡೆದ ಅಖಿಲ ಕೊಡವ ಸಮಾಜ ಪೊಮ್ಮಕ್ಕಡ ಪರಿಷತ್ ನ ‘ಕಕ್ಕಡ ನಮ್ಮೆ’*
  • *ಶ್ರೀ ಕೋಟೆ ಮಾರಿಯಮ್ಮ ದಸರಾ ಉತ್ಸವ ಸಮಿತಿಯ ಅಧ್ಯಕ್ಷರಾಗಿ ಹೆಚ್.ಎಲ್.ಯೋಗೇಶ್ ಆಯ್ಕೆ*
  • *ರಾಜರ ಗದ್ದುಗೆ ಹಾಗೂ ಕೋಟೆಗೆ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾ ಸ್ವಾಮೀಜಿ ಭೇಟಿ*
  • *ಸಮಥ೯ ಕನ್ನಡಿಗರು ಸಂಸ್ಥೆಯಿಂದ ಹಿಮವನ ಪ್ರತಿಭಾ ಸಂಗಮ – ಜಾನಕಿ ಗಾನನಮನ : ಸವ೯ಕಾಲಕ್ಕೂ ಸಲ್ಲುವ ಗಾಯಕಿ ಜಾನಕಿ ಕಲಾವಿದರ ಹಾಡುಗಳಲ್ಲಿ ಸದಾ ಜೀವಂತ : ಅನಿಲ್ ಹೆಚ್.ಟಿ.*
  • *ವಿಶ್ವ ಆದಿಮಸಂಜಾತರ ಹಕ್ಕುಗಳ ದಿನ : ಸಿಎನ್‌ಸಿಯಿಂದ ಸತ್ಯಾಗ್ರಹ : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ*
  • *ನೋಟರಿ ಅಚ್ಚಾಂಡಿರ ಪವನ್ ಪೆಮ್ಮಯ್ಯ ಕಚೇರಿ ಉದ್ಘಾಟನೆ*
  • *ಕೊಡಗು ಪತ್ರಕರ್ತರ ಸಂಘದ ವಾರ್ಷಿಕ ಮಹಾಸಭೆ : ಸಾಧಕರಿಗೆ ಸನ್ಮಾನ*
  • *ಮಾಲ್ದಾರೆಯಲ್ಲಿ ಚಿರತೆ ಸೆರೆ*
  • *ಮಹಿಳೆ ಮೇಲೆ ಕಾಡಾನೆ ದಾಳಿ*
  • *ಮಡಿಕೇರಿ ಪಟ್ಟಣ ಸಹಕಾರ ಬ್ಯಾಂಕ್ ಅಧ್ಯಕ್ಷರಾಗಿ ಬಿ.ಕೆ. ಜಗದೀಶ್, ಉಪಾಧ್ಯಕ್ಷರಾಗಿ ರೋಷನ್ ಅನ್ವೇಕರ್ ಆಯ್ಕೆ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಸಮಥ೯ ಕನ್ನಡಿಗರು ಸಂಸ್ಥೆಯಿಂದ ಹಿಮವನ ಪ್ರತಿಭಾ ಸಂಗಮ – ಜಾನಕಿ ಗಾನನಮನ : ಸವ೯ಕಾಲಕ್ಕೂ ಸಲ್ಲುವ ಗಾಯಕಿ ಜಾನಕಿ ಕಲಾವಿದರ ಹಾಡುಗಳಲ್ಲಿ ಸದಾ ಜೀವಂತ : ಅನಿಲ್ ಹೆಚ್.ಟಿ.*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಸಮಥ೯ ಕನ್ನಡಿಗರು ಸಂಸ್ಥೆಯಿಂದ ಹಿಮವನ ಪ್ರತಿಭಾ ಸಂಗಮ – ಜಾನಕಿ ಗಾನನಮನ : ಸವ೯ಕಾಲಕ್ಕೂ ಸಲ್ಲುವ ಗಾಯಕಿ ಜಾನಕಿ ಕಲಾವಿದರ ಹಾಡುಗಳಲ್ಲಿ ಸದಾ ಜೀವಂತ : ಅನಿಲ್ ಹೆಚ್.ಟಿ.*

ಆಗಷ್ಟ್ 9, 20262 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ NEWS DESK ಆ 9 : ಭಾರತದ ಮೇರು ಕಲಾವಿದೆಯಾಗಿದ್ದ ಎಸ್. ಜಾನಕಿಯವರು ಕೆಲವೇ ವಷ೯ಗಳಿಗೆ ಸಂದ ಗಾಯಕಿಯಾಗಿರದೇ ಮನಸೆಳೆಯುವ ಹಾಡುಗಳ ಮೂಲಕ ಸಾವ೯ಕಾಲಿಕವಾಗಿ ಸಲ್ಲುವ ನಾಡಿನ ಹೆಮ್ಮೆಯ ಗಾಯಕಿಯಾಗಿದ್ದರು. ಎಸ್. ಜಾನಕಿ ದೈಹಿಕವಾಗಿ ಕಣ್ಮರೆಯಾಗಿದ್ದರೂ ಕಲಾವಿದರ ಹಾಡುಗಳಲ್ಲಿ ಅವರು ಸದಾ ಜೀವಂತವಾಗಿರುತ್ತಾರೆ ಎಂದು ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಅನಿಲ್ ಹೆಚ್.ಟಿ. ಹೇಳಿದ್ದಾರೆ. ನಗರದ ಲಯನ್ಸ್ ಸಬಾಂಗಣದಲ್ಲಿ ಸಮಥ೯ ಕನ್ನಡಿಗರು ಸಂಸ್ಥೆಯ ವತಿಯಿಂದ ಮಡಿಕೇರಿ ಲಯನ್ಸ್ ಸಂಸ್ಥೆ ಸಹಯೋಗದಲ್ಲಿ ಆಯೋಜಿತ ಎಸ್ ಜಾನಕಿ ಗಾನ ನಮನ ಹಾಗೂ ಹಿಮವನ ಪ್ರತಿಭಾ ಸಂಗಮ ಕಾಯ೯ಕ್ರಮ ಉದ್ಘಾಟಿಸಿ ಮಾತನಾಡಿದ ಅನಿಲ್, 66 ವಷ೯ಗಳ ಸುಧೀಘ೯ ಕಾಲ ತನ್ನ ಹಾಡುಗಳ ಮಾಧುಯ೯ದ ಮೂಲಕ ಕಲಾಸೇವೆಯಲ್ಲಿ ತೊಡಗಿದ್ದು ಸಾಮಾನ್ಯ ಸಾಧನೆಯಲ್ಲ. ಸಂಗೀತ ಎಂಬುದು ಎಸ್. ಜಾನಕಿಯವರೆಗೆ ದೇವರು ಕೊಟ್ಟ ವರವಾಗಿತ್ತು ಎಂದರು. ಹಾಡುಗಾರರಿಗೆ ಸಕಾ೯ರ ತಾರತಮ್ಯ ಧೋರಣೆ ಮಾಡಿದ್ದನ್ನು ವಿರೋಧಿಸಿದ್ದ ಜಾನಕಿ 3 ವಷ೯ ಕನ್ನಡದಲ್ಲಿ ಹಾಡಲೇ ಇಲ್ಲ. ಇವರ ಮೌನ ಪ್ರತಿಭಟನೆಗೆ ಮಣಿದ ರಾಜ್ಯ ಸಕಾ೯ರ ಕೊನೆಗೂ ಹಿನ್ನಲೆ ಗಾಯಕರಿಗೆ ರಾಜ್ಯ ಪ್ರಶಸ್ತಿ ನೀಡುವಂತಾಯಿತು. ಆಕಾಶ ದೀಪವು ನೀನು ಎಂದು ಹಾಡಿದ್ದ ಜಾನಕಿ, ನಿಜವಾದ ಅಥ೯ದಲ್ಲಿಯೂ ಸಿನಿಮಾ ಕಲಾವಿದರ ಪಾಲಿಗೆ ಸಾಧನೆಗೆ ಕಾರಣವಾಗುವ ಪ್ರಜ್ವಲ ದೀಪವಾಗಿದ್ದರು ಎಂದೂ ಅನಿಲ್ ವಿಶ್ಲೇಷಿಸಿದರು. ಯುವಕಯುವತಿಯರು ತಮ್ಮಲ್ಲಿರುವ ಪ್ರತಿಭೆಯನ್ನು ಬೆಳಕಿಗೆ ತರುವ ನಿಟ್ಟಿನಲ್ಲಿ 8 ವಷ೯ಗಳಿಂದ ಸಮಥ೯ ಕನ್ನಡಿಗರು ಸಂಸ್ಥೆ ಶ್ಲಾಘನೀಯ ಕಾಯ೯ಕ್ರಮಗಳನ್ನು ನಡೆಸುತ್ತಾ ಬಂದಿದೆ. ಇಂಥ ಸಂಸ್ಥೆಗಳಿರುವುದರಿಂದಲೇ ಕೊಡಗಿನಲ್ಲಿ ಸಾಂಸ್ಕೖತಿಕ ಲೋಕ ಶ್ರೀಮಂತವಾಗಿದೆ. ರೀಲ್ಸ್, ಮೊಬೈಲ್ ನಲ್ಲಿ ಮುಳುಗಿರುವ ಯುವಪೀಳಿಗೆಯು ದೇಶಪ್ರೇಮ ಮೈಗೂಡಿಸಿಕೊಳ್ಳುವ ನಿಟ್ಟಿನಲ್ಲಿ ಈ ರೀತಿಯ ಕಾಯ೯ಕ್ರಮಗಳು ಸಹಕಾರಿಯಾಗಿದೆ ಎಂದೂ ಅನಿಲ್ ಹೆಚ್.ಟಿ. ಹೇಳಿದರು. ಮುಖ್ಯ ಅತಿಥಿಯಾಗಿದ್ದ ಕೊಡಗು ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ. ಅನಂತಶಯನ ಮಾತನಾಡಿ, ಅಣ್ವಸ್ತ್ರಗಳಿಗಿಂತ ನಮ್ಮಲ್ಲಿರುವ ಧ್ವನಿ ಮಾತುಗಳೇ ಪ್ರಬಲವಾದ ಅಸ್ತ್ರವಾಗಿದೆ.ಇದನ್ನು ಅಗತ್ಯವಿದ್ದಲ್ಲಿ ಸೂಕ್ತರೀತಿಯಲ್ಲಿ ಬಳಸಿಕೊಂಡಾಗ ಯಾವುದೇ ಗುರಿ ಸಾಧಿಸಬಹುದಾಗಿದೆ. ಶಸ್ತ್ರಾಸ್ತ್ರಗಳು ಕೊಲ್ಲಲು ಬಳಸಲ್ಪಟ್ಟರೆ, ಭರವಸೆಯ ಮಾತುಗಳು ಬದುಕಿಸುವ ಶಕ್ತಿ ಹೊಂದಿದೆ ಎಂದರು. ಹಾಡುಗಳು ನಮ್ಮನ್ನು ಭಾವಪರವಶವಾಗಿಸುವ ಶಕ್ತಿಯನ್ನು ಹೊಂದಿದ್ದು, ಗಾಯನ ಕಲೆಯನ್ನು ಮಕ್ಕಳು ಅಭ್ಯಾಸದ ಮೂಲಕ ಸಿದ್ದಿಸಿಕೊಳ್ಳಬೇಕೆಂದು ಅನಂತಶಯನ ಕರೆ ನೀಡಿದರು. ಮ್ತಡಿಕೇರಿ ಲಯನ್ಸ್  ಟ್ರಸ್ಟ್  ಅಧ್ಯಕ್ಷ ಅಂಬೆಕಲ್ ನವೀನ್ ಕುಶಾಲಪ್ಪ ಮಾತನಾಡಿ, 8 ವಷ೯ಗಳಿಂದ ಪ್ರತಿಭಾವಂತರನ್ನು ಬೆಳಕಿಗೆ ತರುವ ಉದ್ದೇಶದಿಂದ ಸಮಥ೯ ಕನ್ನಡಿಗರು ಸಂಸ್ಥೆ ಗಮನಾಹ೯ ಕಾಯ೯ಕ್ರಮಗಳನ್ನು ರೂಪಿಸುತ್ತಿರುವುದು ಮಾದರಿಯಾಗಿದೆ ಎಂದರು. ಮಡಿಕೇರಿ ಏಲಕ್ಕಿ ಮಾರಾಟಗಾರರ ಸಂಘದ ನಿದೇ೯ಶಕಿ ಮೂಟೇರ ಪುಪ್ಪಾವತಿ ರಮೇಶ್ ಮಾತನಾಡಿ, ಕನ್ನಡ ನಾಡು ನುಡಿಯ ಮಹತ್ವ ತಿಳಿಸಲು ಇಂಥ ಪ್ರತಿಭಾ ಸಂಗಮ ಅತ್ಯಗತ್ಯವಾಗಿದೆ.ನೂರಾರು ಪ್ರತಿಭೆಗಳು ಬೆಳಕಿಗೆ ಬರಲಿ ಎಂದು ಹಾರೈಸಿದರು. ಸಮಥ೯ ಕನ್ನಡಿಗರು ಸಂಸ್ಥೆಯ ಸಂಚಾಲಕಿ ಕೆ. ಜಯಲಕ್ಷ್ಮಿ ಮಾತನಾಡಿ, ಪೋಷಕರನ್ನು ಪ್ರೋತ್ಸಾಹಿಸಿ ಮಕ್ಕಳಲ್ಲಿ ದೇಶಪ್ರೇಮದ ಭಾವನೆ ಹೆಚ್ಚಿಸಲು ಸಂಸ್ಥೆಯಿಂದ ನಮ್ಮ ದೇಶ – ನಮ್ಮ ಹೆಮ್ಮೆ ಎಂಬ ಭಾಷಣ ಸಮೂಹಗಾಯನ, ಭಾಷಣ ಸ್ಪಧೆ೯ಗಳನ್ನು ಆಯೋಜಿಸಲಾಗಿದೆ. ಮಹಿಳೆಯರೇ ಸಂಸ್ಥೆಯನ್ನು ಸಮಥ೯ವಾಗಿ ನಿವ೯ಹಿಸಿಕೊಂಡು ಬರುತ್ತಿದ್ದು, ಪೋಷಕರ ಬೆಂಬಲ ಅತ್ಯಗತ್ಯ ಎಂದೂ ಕೋರಿದರು. ಮಡಿಕೇರಿಯ ಪ್ರಜ್ಞಾ ಕಲಾ ತಂಡ ಪ್ರಾಥಿ೯ಸಿ, ಸೌಮ್ಯ ಸಂತೋಷ್ ಭಟ್ ನಿರೂಪಿಸಿ, ಪವಿತ್ರಾ ಸಂತೋಷ್ ವಂದಿಸಿದರು. ಅನಿತಾ ಧನಂಜಯ್, ಅಂಬಿಕಾ ವಿ. ನಿವ೯ಹಿಸಿದರು. ಎಸ್. ಜಾನಕಿಯವರ ಭಾವಚಿತ್ರಕ್ಕೆ ಗಣ್ಯರು ಪುಪ್ಪ ನಮನ ಸಲ್ಲಿಸಿದರು. ಮಡಿಕೇರಿ ಲಯನ್ಸ್ ಕ್ಲಬ್ ಅಧ್ಯಕ್ಷ ಮೋಹನ್ ಕುಮಾರ್ ಇದ್ದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಅರ್ಥವತ್ತಾಗಿ ನಡೆದ ಅಖಿಲ ಕೊಡವ ಸಮಾಜ ಪೊಮ್ಮಕ್ಕಡ ಪರಿಷತ್ ನ ‘ಕಕ್ಕಡ ನಮ್ಮೆ’*

ಆಗಷ್ಟ್ 9, 2026

*ಶ್ರೀ ಕೋಟೆ ಮಾರಿಯಮ್ಮ ದಸರಾ ಉತ್ಸವ ಸಮಿತಿಯ ಅಧ್ಯಕ್ಷರಾಗಿ ಹೆಚ್.ಎಲ್.ಯೋಗೇಶ್ ಆಯ್ಕೆ*

ಆಗಷ್ಟ್ 9, 2026

*ರಾಜರ ಗದ್ದುಗೆ ಹಾಗೂ ಕೋಟೆಗೆ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾ ಸ್ವಾಮೀಜಿ ಭೇಟಿ*

ಆಗಷ್ಟ್ 9, 2026

*ಶ್ರೀ ಕೋಟೆ ಮಾರಿಯಮ್ಮ ದಸರಾ ಉತ್ಸವ ಸಮಿತಿಯ ಅಧ್ಯಕ್ಷರಾಗಿ ಹೆಚ್.ಎಲ್.ಯೋಗೇಶ್ ಆಯ್ಕೆ*

ಆಗಷ್ಟ್ 9, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ NEWS DESK ಆ.9 : ನಗರದ ಶಕ್ತಿ ದೇವತೆಗಳಲ್ಲಿ ಒಂದಾದ ಶ್ರೀ ಕೋಟೆ ಮಾರಿಯಮ್ಮ ದೇವಾಲಯದ ಶ್ರೀ ಕೋಟೆ…

*ರಾಜರ ಗದ್ದುಗೆ ಹಾಗೂ ಕೋಟೆಗೆ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾ ಸ್ವಾಮೀಜಿ ಭೇಟಿ*

ಆಗಷ್ಟ್ 9, 2026

*ಸಮಥ೯ ಕನ್ನಡಿಗರು ಸಂಸ್ಥೆಯಿಂದ ಹಿಮವನ ಪ್ರತಿಭಾ ಸಂಗಮ – ಜಾನಕಿ ಗಾನನಮನ : ಸವ೯ಕಾಲಕ್ಕೂ ಸಲ್ಲುವ ಗಾಯಕಿ ಜಾನಕಿ ಕಲಾವಿದರ ಹಾಡುಗಳಲ್ಲಿ ಸದಾ ಜೀವಂತ : ಅನಿಲ್ ಹೆಚ್.ಟಿ.*

ಆಗಷ್ಟ್ 9, 2026

*ವಿಶ್ವ ಆದಿಮಸಂಜಾತರ ಹಕ್ಕುಗಳ ದಿನ : ಸಿಎನ್‌ಸಿಯಿಂದ ಸತ್ಯಾಗ್ರಹ : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ*

ಆಗಷ್ಟ್ 9, 2026

*ನೋಟರಿ ಅಚ್ಚಾಂಡಿರ ಪವನ್ ಪೆಮ್ಮಯ್ಯ ಕಚೇರಿ ಉದ್ಘಾಟನೆ*

ಆಗಷ್ಟ್ 9, 2026

*ಕೊಡಗು ಪತ್ರಕರ್ತರ ಸಂಘದ ವಾರ್ಷಿಕ ಮಹಾಸಭೆ : ಸಾಧಕರಿಗೆ ಸನ್ಮಾನ*

ಆಗಷ್ಟ್ 8, 2026

*ಮಾಲ್ದಾರೆಯಲ್ಲಿ ಚಿರತೆ ಸೆರೆ*

ಆಗಷ್ಟ್ 8, 2026

*ಮಹಿಳೆ ಮೇಲೆ ಕಾಡಾನೆ ದಾಳಿ*

ಆಗಷ್ಟ್ 8, 2026

*ಮಡಿಕೇರಿ ಪಟ್ಟಣ ಸಹಕಾರ ಬ್ಯಾಂಕ್ ಅಧ್ಯಕ್ಷರಾಗಿ ಬಿ.ಕೆ. ಜಗದೀಶ್, ಉಪಾಧ್ಯಕ್ಷರಾಗಿ ರೋಷನ್ ಅನ್ವೇಕರ್ ಆಯ್ಕೆ*

ಆಗಷ್ಟ್ 7, 2026

*ರೈತರ ಬಂಧನಕ್ಕೆ ಖಂಡನೆ : ಪೊಲೀಸ್ ಕ್ರಮದ ವಿರುದ್ಧ ಕೊಡಗು ಎಸ್‍ಪಿ ಕಚೇರಿ ಎದುರು ಪ್ರತಿಭಟನೆ*

ಆಗಷ್ಟ್ 7, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.