
ಗೋಣಿಕೊಪ್ಪ NEWS DESK ಸೆ.13 : 37ನೇ ವರ್ಷದ ಸ್ತಬ್ಧ ಚಿತ್ರ ಮೆರವಣಿಗೆಗೆ ನಾಡಹಬ್ಬ ದಸರಾ ಸಮಿತಿ, ಪೂರ್ವ ತಯಾರಿ ಮಾಡಿಕೊಂಡಿದೆೆ ಎಂದು ನಾಡ ಹಬ್ಬ ದಸರಾ ಸಮಿತಿ ಅಧ್ಯಕ್ಷ ಪ್ರಭಾಕರ್ ನೆಲ್ಲಿತ್ತಾಯ ತಿಳಿಸಿದ್ದಾರೆ. ಸಮಿತಿ ಕಚೇರಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಮಾಜಿಕ, ಪೌರಾಣಿಕ, ವಿಭಾಗಗಳಲ್ಲಿ ಸ್ತಬ್ಧ ಚಿತ್ರ ಮೆರವಣಿಗೆ ಆಕರ್ಷಣೆ ಆಗಲಿದೆ. ದಸರಾ ಆಚರಣೆಯ ಪ್ರಮುಖವಾಗಿ ಸ್ಥಬ್ಧ ಚಿತ್ರ ಗಮನ ಸೆಳೆಯುತ್ತಿರುವುದು ವಿಶಿಷ್ಟ. ಈ ಹಿನ್ನೆಲೆಯಲ್ಲಿ ವಿವಿಧ ಸಂಘ ಸಂಸ್ಥೆಗಳು ಸ್ಥಬ್ಧ ಚಿತ್ರಗಳ ಮಾದರಿ ತಯಾರಿಗಳನ್ನು ಮಾಡಿ ಮೆರವಣಿಗೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದಾರೆ. ಕೆಲ ವರ್ಷಗಳ ಹಿಂದೆ 32ಕ್ಕೂ ಹೆಚ್ಚು ಸ್ಥಬ್ಧ ಚಿತ್ರ ಭಾಗವಹಿಸಿ ಗಮನ ಸೆಳೆದಿದ್ದವು. ತದನಂತರ 25ಕ್ಕೂ ಹೆಚ್ಚು ಸ್ಥಬ್ಧ ಚಿತ್ರಗಳ ಮೆರವಣಿಗೆ ಆಕರ್ಷಣೆಯನ್ನು ಕಂಡಿದೆ. ಈ ವರ್ಷ ವಿಶೇಷವಾಗಿ ನಾಡಹಬ್ಬ ದಸರಾ ಸಮಿತಿಯ ಸ್ಥಬ್ಧಚಿತ್ರ ಮೆರವಣಿಗೆಯನ್ನು ಜನಕರ್ಷಣೆಯಾಗಿ ಮಾಡಲು, ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ. ಸರ್ಕಾರದ ವಿವಿಧ ಇಲಾಖೆಗಳು ಮಾದರಿ ತಯಾರಿಕೆಗಳ ಮೂಲಕ ಸ್ಥಬ್ಧಚಿತ್ರ ಮೆರವಣಿಗೆಯಲ್ಲಿ ಭಾಗವಹಿಸಲಿದೆ. ಅದರಂತೆ ವಿವಿಧ ಸಂಘಟನೆಗಳು ಸೇರಿ ಈಗಾಗಲೇ, ಮೆರವಣಿಗೆಯಲ್ಲಿ ಭಾಗವಹಿಸುವ ಭರವಸೆಯನ್ನು ನೀಡಿದ್ದಾರೆ. ಸಾಕಷ್ಟು ಸಂಸ್ಥೆಗಳು ಈ ತಯಾರಿಯನ್ನು ಈಗಾಗಲೇ ಪ್ರಾರಂಭಿಸಿದ್ದಾರೆ. ಈ ಬಾರಿ ಸುಮಾರು 40ಕ್ಕೂ ಹೆಚ್ಚು ಸ್ಥಬ್ಧ ಚಿತ್ರಗಳು ಆಕರ್ಷಣೆಯಾಗಬೇಕು ಎಂಬುವುದು ಸಮಿತಿಯ ಕನಸಾಗಿದೆ ಎಂದು ಹೇಳಿದ್ದಾರೆ. ಭಾಗವಹಿಸಿದ ಸಮಿತಿಗಳಿಗೆ ಪ್ರಥಮ, ದ್ವಿತೀಯ, ತೃತೀಯ ಎಂದು ಕಳೆದ ಬಾರಿ ನೀಡಿದ ನಗುದು ಬಹುಮಾನಕ್ಕಿಂತ ಹೆಚ್ಚಿನ ಆಕರ್ಷಣೆಯ ನಗದು ಮತ್ತು ಟ್ರೋಫಿಯನ್ನು ನೀಡಲು ಸಮಿತಿ ನಿರ್ಧರಿಸಲಾಗಿದೆ. ಜೊತೆಗೆ ಭಾಗವಹಿಸಿದ ಎಲ್ಲಾ ಕಲಾತಂಡಗಳಿಗೂ ಪ್ರೋತ್ಸಾಹ ಬಹುಮಾನ ನೀಡಲಾಗುವುದು. ಹೆಚ್ಚಿನ ದರದಲ್ಲಿ ಅನುದಾನ ಸಂಗ್ರಹವಾದರೆ, ಅದರ ಪೂರ್ಣ ಹಣವನ್ನು ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳಿಗೆ ನೀಡಲು ನಿರ್ಧಾರದೊಂದಿಗೆ ಸಮಿತಿ ಕಾರ್ಯಪ್ರವೃತ್ತರಾಗಿದೆ ಎಂದು ಮಾಹಿತಿ ನೀಡಿದರು. ನಂತರ ಸಂಜೆ ನಡೆಯುವ ಶೋಭಾಯಾತ್ರೆ ಮೆರವಣಿಗೆಯಲ್ಲಿ ಡಿಜೆ ಅಳವಡಿಸದೆ ಮಾದರಿ ಮೆರವಣಿಗೆಯಾಗಿ ಸಾಗಿ ಬರಲು ಸಮಿತಿ ಚಿಂತನೆ ಹರಿಸಿದೆ.
ಕೊಡಗಿನ ವಾಲಗ ಚಂಡೆಗಳನ್ನು ಮಾತ್ರ ಬಳಸಿಕೊಂಡು ಭಾರತಮಾತೆಯನ್ನು ಆರಾಧಿಸುವ ನಿಟ್ಟಿನಲ್ಲಿ ನಾಡಹಬ್ಬ ದಸರಾ ಸಮಿತಿ ಜನ ಮನ ಗಮನ ಸೆಳೆಯಲಾಗುವುದು ಎಂದು ತಿಳಿಸಿದರು. ಸ್ತಬ್ಧ ಚಿತ್ರ ನಿರ್ಮಿಸುವ ವಿವಿಧ ಸಂಘಟನೆಗಳು, ನಾಡಹಬ್ಬ ದಸರಾ ಸಮಿತಿಯಲ್ಲಿ ತಮ್ಮ ಸಮಿತಿಯ ಹೆಸರನ್ನು ನೋಂದಾಯಿಸಿಕೊಂಡಾಗ ಹೆಚ್ಚಿನ ಪ್ರೋತ್ಸಾಹ ನೀಡುವ ಕಾರ್ಯಕ್ಕೆ ಅನುಕೂಲವಾಗಲಿದೆ. ಹೀಗಾಗಿ ಸಮಿತಿಯವರು 8762478982 ಹೆಚ್ಚಿನ ಮಾಹಿತಿ ಹಾಗೂ ನೋಂದಾಯಿಸಿಕೊಳ್ಳಲು ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ. ಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಬಾರಿತ್ತಾಯ, ಖಜಾಂಚಿ ರಜಿತ್ ಕುಟ್ಟ ಸದಸ್ಯರಾದ ಸುಬ್ರಮಣಿ ಎಂ.ಜಿ ಉಪಸ್ಥತರಿದ್ದರು.








