
ನಾಪೋಕ್ಲು ಸೆ.15 NEWS DESK : ಚೆನ್ನೈನಲ್ಲಿ ನಡೆದ ಇಂಡಿಯಾ – ಶ್ರೀಲಂಕಾ ಇನ್ವಿಟೇಶನ್ ಕರಾಟೆ ಚಾಂಪಿಯನ್ ಶಿಪ್ ಪಂದ್ಯಾವಳಿಯಲ್ಲಿ ಚೇರಂಬಾಣೆಯ ಭವಿತ್ ರೈ ಕಟ್ಟಾಸ್ ನಲ್ಲಿ ತೃತೀಯ ಸ್ಥಾನ ಹಾಗೂ ಫೈಟಿಂಗ್ ನಲ್ಲಿ ತೃತೀಯ ಸ್ಥಾನ ಪಡೆದು ಸಾಧನೆ ಮಾಡಿದ್ದಾನೆ. ನಾಪೋಕ್ಲುವಿನ ಅಂಕುರ್ ಪಬ್ಲಿಕ್ ಶಾಲೆಯಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಭವಿತ್ ರೈ, ಚೇರಂಬಾಣೆ ಗ್ರಾಮದ ನಿವಾಸಿ ಪ್ರದೀಪ್ ರೈ ಹಾಗೂ ಪ್ರಮೀಳಾ ರೈ ದಂಪತಿಯ ಪುತ್ರ. ಭವಿತ್ ರೈಹೆ ಶಿಹಾನ್ ಮಹಮ್ಮದ್ ಇಕ್ಬಾಲ್ ಮಾರ್ಗದರ್ಶನ ನೀಡಿದ್ದಾರೆ.
ವರದಿ : ದುಗ್ಗಳ ಸದಾನಂದ.









