
ಮಡಿಕೇರಿ NEWS DESK ಸೆ.16 : ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತ್ತಿಗೋಡು ಸಾಕಾನೆ ಶಿಬಿರಕ್ಕೆ ಇಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು, ವಿರಾಜಪೇಟೆ ಕ್ಷೇತ್ರದ ಶಾಸಕರೂ ಆದ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಹಾಗೂ ಸಂಸದ ಅಜಯ್ ಮಾರ್ಕನ್ ಅವರು ಭೇಟಿ ನೀಡಿ ಪರಿಶೀಲಿಸಿದರು. ಸಾಕಾನೆ ಶಿಬಿರದಲ್ಲಿರುವ ಸೌಲಭ್ಯಗಳು, ಅಗತ್ಯವಿರುವ ವ್ಯವಸ್ಥೆಗಳು ಮತ್ತು ಆಹಾರ, ವಿಹಾರದ ಕುರಿತು ಶಾಸಕರು ಸಿಬ್ಬಂದಿಗಳೊಂದಿಗೆ ಚರ್ಚಿಸಿದರು. ಶಿಬಿರದಲ್ಲಿರುವ ಸಾಕಾನೆಗಳ ಸಂಖ್ಯೆ ಮತ್ತು ಅದಕ್ಕನುಗುಣವಾಗಿ ಇರುವ ಮೂಲಭೂತ ಸೌಕರ್ಯಗಳ ಬಗ್ಗೆ ಮಾಹಿತಿ ಪಡೆದರು. ಈ ಸಂದರ್ಭ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಕಾಳಿಮಾಡ ಪ್ರಶಾಂತ್, ತಿತಿಮತಿ ವಲಯ ಅಧ್ಯಕ್ಷ ನವೀನ್, ದೇವರಪುರ ವಲಯ ಅಧ್ಯಕ್ಷ ಬಸ್ ವಂತ್, ಕಾಂಗ್ರೆಸ್ ಪ್ರಮುಖರಾದ ಬೆನ್ನಿ, ಪಂಕಜ, ಹರೀಶ್ ಪೂವಯ್ಯ, ಚಿಣ್ಣಪ್ಪ, ಎ.ಜೆ.ಬಾಬು, ರಾಜು, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಜಮ್ಮಡ ಸೋಮಣ್ಣ, ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಯುವ ಅಧ್ಯಕ್ಷ ಪಟ್ಟಡ ರಕ್ಷಿತ್ ಚಂಗಪ್ಪ, ಸೋಮಣ್ಣ, ಅಲಿರ ರಶೀದ್, ಸಂತೋಷ್, ಕುಂಡಚೀರ ಮಂಜು ದೇವಯ್ಯ, ಚೆಕು, ಅನಿಲ್ ಮತ್ತಿತರ ಪ್ರಮುಖರು ಹಾಜರಿದ್ದರು.









