Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಅರ್ಥವತ್ತಾಗಿ ನಡೆದ ಅಖಿಲ ಕೊಡವ ಸಮಾಜ ಪೊಮ್ಮಕ್ಕಡ ಪರಿಷತ್ ನ ‘ಕಕ್ಕಡ ನಮ್ಮೆ’*
  • *ಶ್ರೀ ಕೋಟೆ ಮಾರಿಯಮ್ಮ ದಸರಾ ಉತ್ಸವ ಸಮಿತಿಯ ಅಧ್ಯಕ್ಷರಾಗಿ ಹೆಚ್.ಎಲ್.ಯೋಗೇಶ್ ಆಯ್ಕೆ*
  • *ರಾಜರ ಗದ್ದುಗೆ ಹಾಗೂ ಕೋಟೆಗೆ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾ ಸ್ವಾಮೀಜಿ ಭೇಟಿ*
  • *ಸಮಥ೯ ಕನ್ನಡಿಗರು ಸಂಸ್ಥೆಯಿಂದ ಹಿಮವನ ಪ್ರತಿಭಾ ಸಂಗಮ – ಜಾನಕಿ ಗಾನನಮನ : ಸವ೯ಕಾಲಕ್ಕೂ ಸಲ್ಲುವ ಗಾಯಕಿ ಜಾನಕಿ ಕಲಾವಿದರ ಹಾಡುಗಳಲ್ಲಿ ಸದಾ ಜೀವಂತ : ಅನಿಲ್ ಹೆಚ್.ಟಿ.*
  • *ವಿಶ್ವ ಆದಿಮಸಂಜಾತರ ಹಕ್ಕುಗಳ ದಿನ : ಸಿಎನ್‌ಸಿಯಿಂದ ಸತ್ಯಾಗ್ರಹ : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ*
  • *ನೋಟರಿ ಅಚ್ಚಾಂಡಿರ ಪವನ್ ಪೆಮ್ಮಯ್ಯ ಕಚೇರಿ ಉದ್ಘಾಟನೆ*
  • *ಕೊಡಗು ಪತ್ರಕರ್ತರ ಸಂಘದ ವಾರ್ಷಿಕ ಮಹಾಸಭೆ : ಸಾಧಕರಿಗೆ ಸನ್ಮಾನ*
  • *ಮಾಲ್ದಾರೆಯಲ್ಲಿ ಚಿರತೆ ಸೆರೆ*
  • *ಮಹಿಳೆ ಮೇಲೆ ಕಾಡಾನೆ ದಾಳಿ*
  • *ಮಡಿಕೇರಿ ಪಟ್ಟಣ ಸಹಕಾರ ಬ್ಯಾಂಕ್ ಅಧ್ಯಕ್ಷರಾಗಿ ಬಿ.ಕೆ. ಜಗದೀಶ್, ಉಪಾಧ್ಯಕ್ಷರಾಗಿ ರೋಷನ್ ಅನ್ವೇಕರ್ ಆಯ್ಕೆ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಸೆ.22ರಿಂದ 30ರವರೆಗೆ ಮಡಿಕೇರಿ ದಸರಾ ಕ್ರೀಡಾಕೂಟ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಸೆ.22ರಿಂದ 30ರವರೆಗೆ ಮಡಿಕೇರಿ ದಸರಾ ಕ್ರೀಡಾಕೂಟ*

ಸೆಪ್ಟೆಂಬರ್ 18, 20252 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಸೆ.18 NEWS DESK : ಐತಿಹಾಸಿಕ ಮಡಿಕೇರಿ ದಸರಾ ಉತ್ಸವದ ಅಂಗವಾಗಿ ಇದೇ ಸೆ.22ರಿಂದ 30ರವರೆಗೆ ವೈವಿಧ್ಯಮಯ ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸಲಾಗಿದೆ ಎಂದು ದಸರಾ ಕ್ರೀಡಾ ಸಮಿತಿ ಅಧ್ಯಕ್ಷ ಪ್ರದೀಪ್ ಕರ್ಕೆರ ಅವರು ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಸೆ.22 ರಂದು ಬೆಳಗ್ಗೆ 6 ಗಂಟೆಗೆ ನಗರದ ಜನರಲ್ ಕೆ.ಎಸ್.ತಿಮ್ಮಯ್ಯ ವೃತ್ತದಿಂದ ಕ್ಯಾಪಿಟಲ್ ವಿಲೇಜ್‍ವರೆಗಿನ ರಸ್ತೆಯಲ್ಲಿ ಪುರುಷರು, ಮಹಿಳೆಯರು ಸೇರಿದಂತೆ ವಿದ್ಯಾರ್ಥಿಗಳಿಗಾಗಿ ನಾಲ್ಕು ವಿಭಾಗಗಳಲ್ಲಿ ಮೆರಥಾನ್ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಸೆ.23 ರಂದು ನಗರದ ಜ.ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಪುರುಷರಿಗೆ ಬಾಸ್ಕೆಟ್ ಬಾಲ್, ಸಾರ್ವಜನಿಕರಿಗೆ ಮತ್ತು 15 ವರ್ಷದೊಳಗಿನ ಶಾಲಾ ಮಕ್ಕಳಿಗೆ 5+2 ಆಟಗಾರರ ಫುಟ್ಬಾಲ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ ಎಂದರು. ಜಿಲ್ಲಾ ಕ್ರೀಡಾಂಗಣದಲ್ಲಿ ಸೆ.24 ರಂದು ಬೆಳಗ್ಗೆ ದಸರಾ ಕ್ರೀಡಾಕೂಟಕ್ಕೆ ವಿದ್ಯುಕ್ತ ಚಾಲನೆಯನ್ನು ನೀಡಲಾಗುತ್ತದೆ. ಈ ಸಂದರ್ಭ ಬನ್ನಿ ಮಂಟಪದಿಂದ ಶ್ರೀ ರಾಜರಾಜೇಶ್ವರಿ ಶಾಲಾ ವಿದ್ಯಾರ್ಥಿಗಳೊಂದಿಗೆ ಕ್ರೀಡಾಜ್ಯೋತಿಯನ್ನು ಮೈದಾನಕ್ಕೆ ತರಲಾಗುತ್ತದೆ. ಅಂದು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ, ಸಾರ್ವಜನಿಕ ವಿಭಾಗದಲ್ಲಿ ಪುರುಷರು, ಮಹಿಳೆಯರು, ದಸರಾ ಸಮಿತಿಯವರಿಗೆ ಓಟದ ಸ್ಪರ್ಧೆ, ಭಾರದ ಗುಂಡು ಎಸೆತ, ಹಗ್ಗಜಗ್ಗಾಟ, ಥ್ರೋಬಾಲ್, ನಿಧಾನ ದ್ವಿಚಕ್ರವಾಹನ ಚಾಲನೆ(ಗೇರ್ ಮೋಟಾರ್ ವಾಹನ) ಸೇರಿದಂತೆ ಮನರಂಜನಾ ಸ್ಪರ್ಧೆಗಳನ್ನು ಆಯೋಜಿಸಿರುವುದಾಗಿ ತಿಳಿಸಿದರು. :: ವಿಶೇಷ ಚೇತನರಿಗೆ ಸ್ಪರ್ಧೆ ::  ಅದೇ ದಿನದಂದು ವಿಶೇಷ ಚೇತನ ಬಾಲಕ-ಬಾಲಕಿಯರಿಗಾಗಿ 1 ರಿಂದ 4ನೇ ತರಗತಿ, 5 ರಿಂದ 7 ಮತ್ತು 8 ರಿಂದ 10ನೇ ತರಗತಿ ವಿಭಾಗಗಳಲ್ಲಿ ಓಟದ ಸ್ಪರ್ಧೆಯನ್ನು ಆಯೋಜಿಸಲಾಗಿದೆಯೆಂದು ಹೇಳಿದರು. ಕ್ರೀಡಾಕೂಟಕ್ಕೆ ಮೊದಲ ಬಾರಿಗೆ ‘ಸ್ನೂಕರ್’ ಸೇರ್ಪಡೆ- ಇದೇ ಮೊದಲ ಬಾರಿಗೆ ‘ಸ್ನೂಕರ್’ ಕ್ರೀಡೆಯನ್ನು ದಸರಾ ಕ್ರೀಡಾಕೂಟದಲ್ಲಿ ಸೇರ್ಪಡೆ ಮಾಡಲಾಗಿದೆ.ಸೆ.25ರಂದು ನಗರದ ಕೂರ್ಗ್ ಎಂಟರ್‍ಪ್ರೈಸಸ್ ಬಿಲ್ಡಿಂಗ್‍ನಲ್ಲಿ ಸ್ನೂಕರ್ ಪಂದ್ಯಾವಳಿ ನಡೆಯಲಿದೆ. ಅದೇ ದಿನ ಜಿಲ್ಲಾ ಕ್ರಿಡಾಂಗಣದಲ್ಲಿ ಮಡಿಕೇರಿ ದಸರಾ ಸಮಿತಿ, ದಸರಾ ಕ್ರೀಡಾ ಸಮಿತಿ, ಪೊಲೀಸ್ ಇಲಾಖೆ, ಪತ್ರಿಕಾ ಮಾಧ್ಯಮ, ದೃಶ್ಯ ಮಾಧ್ಯಮ, ಶಿಕ್ಷಕರು, ವಕೀಲರು, ಮೆಡಿಕಲ್, ಜಿಪಂ, ಕಾರಾಗೃಹ ಸಿಬ್ಬಂದಿಗಳು, ಅಗ್ನಿಶಾಮಕ ದಳ ತಂಡಗಳ ನಡುವೆ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆಯೆಂದು ವಿವರಗಳನ್ನಿತ್ತರು. :: ಚೆಸ್ ಮತ್ತು ಕೇರಂ ಪಂದ್ಯಾವಳಿ :: ಸೆ.26ರಂದು ನಗರದ ಹೋಟೆಲ್ ರಾಜದರ್ಶನ್‍ನಲ್ಲಿ ವಿವಿಧ ವಿಭಾಗಗಳಲ್ಲಿ ಚೆಸ್ ಮತ್ತು ಕೇರಂ ಪಂದ್ಯಾವಳಿ ನಡೆಯಲಿದೆಯೆಂದರು.
ಸೆ.27ರಂದು ಗಾಂಧಿ ಮೈದಾನದಲ್ಲಿ ಸಾರ್ವಜನಿಕರಿಗೆ ಮುಕ್ತ ವಾಲಿಬಾಲ್, ಸೆ.28ರಂದು ಕಬಡ್ಡಿ ಪಂದ್ಯಾವಳಿಯನ್ನು ಆಯೋಜಿಸಲಾಗಿದೆಯೆಂದು ತಿಳಿಸಿದರು. :: ದೇಹದಾಢ್ರ್ಯ ಮತ್ತು ಕಿಕ್ ಬಾಕ್ಸಿಂಗ್ ::  ಸೆ.29 ರಂದು ಸಂಜೆ 5 ಗಂಟೆಗೆ ನಗರದ ರಾಜದರ್ಶನ ಹೋಟೆಲ್‍ನಲ್ಲಿ ‘ದೇಹದಾಢ್ರ್ಯ’ ಸ್ಪರ್ಧೆ, ಸೆ.30 ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ಕಿಕ್ ಬಾಕ್ಸಿಂಗ್ ಸ್ಪರ್ಧೆಗಳನ್ನು ಆಯೋಜಿಸಲಾಗಿದೆಯೆಂದು ತಿಳಿಸಿದರು. :: *ದೊರೆಯದ ಸಹಕಾರ* :: ಜನೋತ್ಸವವಾಗಿ ಆಚರಿಸಲ್ಪಡುವ ಮಡಿಕೇರಿ ದಸರಾ ಉತ್ಸವದ ಪ್ರಯುಕ್ತ ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ಕ್ರೀಡಾಕೂಟಕ್ಕೆ ಯುವ ಜನ ಸೇವಾ ಮತ್ತು ಕ್ರೀಡಾ ಇಲಾಖೆಯಿಂದ ಅಗತ್ಯ ಸಹಕಾರ ದೊರಕುತ್ತಿಲ್ಲವೆಂದು ಪ್ರದೀಪ್ ಕರ್ಕೆರ ಬೇಸರ ವ್ಯಕ್ತಪಡಿಸಿದರು. ನಾಡ ಹಬ್ಬದ ಅಂಗವಾಗಿ ನಡೆಸಲಾಗುವ ಕ್ರೀಡಾಕೂಟದ ಆಯೋಜನೆಗೂ ಇಲಾಖೆಗೆ ಮೈದಾನ ಶುಲ್ಕವನ್ನು ನೀಡುವ ಪರಿಸ್ಥಿತಿ ಇದೆ. ಇಲಾಖೆಯಲ್ಲಿ ವಿವಿಧ ಕ್ರೀಡೆಗಳಿಗೆ ಸಂಬಂಧಿಸಿದಂತೆ ಅಗತ್ಯ ಕ್ರೀಡೋಪಕರಣಗಳು ಲಭ್ಯವಿಲ್ಲವೆಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ದಸರಾ ಕ್ರೀಡಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಕಪಿಲ್ ಕುಮಾರ್ ದುಗ್ಗಳ, ಉಪಾಧ್ಯಕ್ಷರುಗಳಾದ ಕೆ.ಆರ್. ದಿನೇಶ್ ಶೆಟ್ಟಿ, ಉಮೇಶ್, ಸಹ ಕಾರ್ಯರ್ಶಿ ನಿರಂಜನ್ ಎಂ.ಪಿ., ಗೌರವ ನಿರ್ದೇಶಕ ಜಿ.ಸಿ. ಕೃಷ್ಣ ಉಪಸ್ಥಿತರಿದ್ದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಅರ್ಥವತ್ತಾಗಿ ನಡೆದ ಅಖಿಲ ಕೊಡವ ಸಮಾಜ ಪೊಮ್ಮಕ್ಕಡ ಪರಿಷತ್ ನ ‘ಕಕ್ಕಡ ನಮ್ಮೆ’*

ಆಗಷ್ಟ್ 9, 2026

*ಶ್ರೀ ಕೋಟೆ ಮಾರಿಯಮ್ಮ ದಸರಾ ಉತ್ಸವ ಸಮಿತಿಯ ಅಧ್ಯಕ್ಷರಾಗಿ ಹೆಚ್.ಎಲ್.ಯೋಗೇಶ್ ಆಯ್ಕೆ*

ಆಗಷ್ಟ್ 9, 2026

*ರಾಜರ ಗದ್ದುಗೆ ಹಾಗೂ ಕೋಟೆಗೆ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾ ಸ್ವಾಮೀಜಿ ಭೇಟಿ*

ಆಗಷ್ಟ್ 9, 2026

*ಶ್ರೀ ಕೋಟೆ ಮಾರಿಯಮ್ಮ ದಸರಾ ಉತ್ಸವ ಸಮಿತಿಯ ಅಧ್ಯಕ್ಷರಾಗಿ ಹೆಚ್.ಎಲ್.ಯೋಗೇಶ್ ಆಯ್ಕೆ*

ಆಗಷ್ಟ್ 9, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ NEWS DESK ಆ.9 : ನಗರದ ಶಕ್ತಿ ದೇವತೆಗಳಲ್ಲಿ ಒಂದಾದ ಶ್ರೀ ಕೋಟೆ ಮಾರಿಯಮ್ಮ ದೇವಾಲಯದ ಶ್ರೀ ಕೋಟೆ…

*ರಾಜರ ಗದ್ದುಗೆ ಹಾಗೂ ಕೋಟೆಗೆ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾ ಸ್ವಾಮೀಜಿ ಭೇಟಿ*

ಆಗಷ್ಟ್ 9, 2026

*ಸಮಥ೯ ಕನ್ನಡಿಗರು ಸಂಸ್ಥೆಯಿಂದ ಹಿಮವನ ಪ್ರತಿಭಾ ಸಂಗಮ – ಜಾನಕಿ ಗಾನನಮನ : ಸವ೯ಕಾಲಕ್ಕೂ ಸಲ್ಲುವ ಗಾಯಕಿ ಜಾನಕಿ ಕಲಾವಿದರ ಹಾಡುಗಳಲ್ಲಿ ಸದಾ ಜೀವಂತ : ಅನಿಲ್ ಹೆಚ್.ಟಿ.*

ಆಗಷ್ಟ್ 9, 2026

*ವಿಶ್ವ ಆದಿಮಸಂಜಾತರ ಹಕ್ಕುಗಳ ದಿನ : ಸಿಎನ್‌ಸಿಯಿಂದ ಸತ್ಯಾಗ್ರಹ : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ*

ಆಗಷ್ಟ್ 9, 2026

*ನೋಟರಿ ಅಚ್ಚಾಂಡಿರ ಪವನ್ ಪೆಮ್ಮಯ್ಯ ಕಚೇರಿ ಉದ್ಘಾಟನೆ*

ಆಗಷ್ಟ್ 9, 2026

*ಕೊಡಗು ಪತ್ರಕರ್ತರ ಸಂಘದ ವಾರ್ಷಿಕ ಮಹಾಸಭೆ : ಸಾಧಕರಿಗೆ ಸನ್ಮಾನ*

ಆಗಷ್ಟ್ 8, 2026

*ಮಾಲ್ದಾರೆಯಲ್ಲಿ ಚಿರತೆ ಸೆರೆ*

ಆಗಷ್ಟ್ 8, 2026

*ಮಹಿಳೆ ಮೇಲೆ ಕಾಡಾನೆ ದಾಳಿ*

ಆಗಷ್ಟ್ 8, 2026

*ಮಡಿಕೇರಿ ಪಟ್ಟಣ ಸಹಕಾರ ಬ್ಯಾಂಕ್ ಅಧ್ಯಕ್ಷರಾಗಿ ಬಿ.ಕೆ. ಜಗದೀಶ್, ಉಪಾಧ್ಯಕ್ಷರಾಗಿ ರೋಷನ್ ಅನ್ವೇಕರ್ ಆಯ್ಕೆ*

ಆಗಷ್ಟ್ 7, 2026

*ರೈತರ ಬಂಧನಕ್ಕೆ ಖಂಡನೆ : ಪೊಲೀಸ್ ಕ್ರಮದ ವಿರುದ್ಧ ಕೊಡಗು ಎಸ್‍ಪಿ ಕಚೇರಿ ಎದುರು ಪ್ರತಿಭಟನೆ*

ಆಗಷ್ಟ್ 7, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.