ಮಡಿಕೇರಿ ನ.3 NEWS DESK : ಕೊಡಗು ಕೊಡವ ತಕ್ಕ್ ಒಕ್ಕೂಟದ ಲಾಂಭನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಡುಗಡೆ ಮಾಡಿದರು. ಗೃಹ ಕಛೇರಿ ಕೃಷ್ಣದಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಅವರ ನೇತೃತ್ವದಲ್ಲಿ ಕೊಡವ ತಕ್ಕ್ ಒಕ್ಕೂಟ ಮಾತನಾಡುವ 21 ಮೂಲನಿವಾಸಿಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಭೇಟಿ ಮಾಡಿ ಮನವಿ ಸಲ್ಲಿಸಿದರು. ಕೊಡವ ತಕ್ಕ್ ಒಕೂಟ್ಟದ 21 ಮೂಲನಿವಾಸಿಗಳ ಅಭಿವೃದ್ಧಿಗೆ 8 ಎಕರೆ ಪೈಸಾರಿ ಜಾಗವನ್ನು ಮಂಜೂರು ಮಾಡಲು ಮನವಿ ಸಲ್ಲಿಸಿ, ಶಾಸಕ ಎ.ಎಸ್.ಪೊನ್ನಣ್ಣ ಅವರಿಗೆ ಮಂತ್ರಿ ಸ್ಥಾನ ನೀಡಲು ಮುಖ್ಯಮಂತ್ರಿಗಳಲ್ಲಿ ವಿನಂತಿಸಿದರು. ಈ ಸಂದರ್ಭದಲ್ಲಿ 21 ಕೊಡವ ತಕ್ಕ್ ಒಕ್ಕೂಟದ ಲಾಂಛನ ಬಿಡುಗಡೆ ಮಾಡಿ ಮಾತನಾಡಿದ ಮುಖ್ಯಮಂತ್ರಿಗಳು ಜಾಗ ಮಂಜೂರು ಮಾಡುವುದಾಗಿ ಭರವಸೆ ನೀಡಿದರು. ಈ ಸಂದರ್ಭ ಸಚಿವರುಗಳಾದ ಭೋಸರಾಜು, ಬೈರತಿ ಸುರೇಶ್, ಹಿಂದುಳಿದ ವರ್ಗಗಳ ಸಚಿವರು ಶಿವರಾಜ್ ತಂಗಡಗಿ, ಸಂಸ್ಥಾಪಕ ಅಧ್ಯಕ್ಷರು ಕೊರಕುಟ್ಟಿರ ಸರ ಚಂಗಪ್ಪ, ಅಧ್ಯಕ್ಷರು ಜಿ.ಅಯ್ಯಪ್ಪ, ಉಪಾಧ್ಯಕ್ಷರು ಕುಡಿಯರ ಮುತ್ತಪ್ಪ, ಬಾನಂಡ ಪ್ರಥ್ವಿ, ದಿನು ಬೊಜಪ್ಪ, ರಾಜಾ ಜೋಯಪ್ಪ, ಮುದ್ದಯ್ಯ, ಪಂದಿಕಂಡ ದಿನೇಶ್, ಉಮೇಶ್ ಕೆಂಚಮಯ್ಯ, ನಾಯಂದಿರ ಶಿವಾಜಿ, ಲವಪ್ಪ, ರೈನಾ ಕಾರ್ಯಪ್ಪ, ಉತ್ತಪ್ಪ, ನಾಣಯ್ಯ, ಅನು ಚಿಣ್ಣಪ್ಪ, ಹಾಗೂ ಪ್ರಮುಖರು ಉಪಸ್ಥಿತರಿದ್ದರು.











