Close Menu
News-Desk-KannadaNews-Desk-Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಕಾಯಕ ಶರಣರ ಜಯಂತಿ ಸಮ ಸಮಾಜ ನಿರ್ಮಾಣದಲ್ಲಿ ಕಾಯಕ ಶರಣರ ಕೊಡುಗೆ ಅಪಾರ: ಹೇಮಲತಾ*
  • *ಸೌಂದರ್ಯ ತಜ್ಞರು ನಿತ್ಯ ವ್ಯಾಯಾಮದೊಂದಿಗೆ ತಮ್ಮ ಆರೋಗ್ಯ ವೃದ್ಧಿಸಿಕೊಳ್ಳುವ ಬಗ್ಗೆ ಗಮನಹರಿಸಬೇಕು ಎಂದು ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ ಕ್ರೀಡಾಪಟು ತಾತಪಂಡ ಜ್ಯೋತಿ ಸೋಮಯ್ಯ ಕಿವಿಮಾತು ಹೇಳಿದರು*
  • *ಮೈಸೂರು-ಕುಶಾಲನಗರ ರೈಲ್ವೆ ಯೋಜನೆ ಪುನಾರಂಭಿಸಲು ಅಶ್ವಿನ್‌ ವೈಷ್ಣವ್‌ಗೆ ಯದುವೀರ್‌ ಮನವಿ ಭೂ ಸ್ವಾಧೀನ ಪ್ರಕ್ರಿಯೆಗೆ ಚಾಲನೆ ನೀಡಲು ಕ್ರಮ ಕೈಗೊಳ್ಳಬೇಕೆಂದು ಸಂಸದರ ಪತ್ರ*
  • *ಕೊಡವ ಭಾಷೆಗೂ ಸಾಂವಿಧಾನಿಕ ಭದ್ರತೆ ನೀಡಬೇಕು : ಸಣ್ಣ ಸಣ್ಣ ಭಾಷೆಗಳನ್ನು ಹತ್ತಿಕಿದರೆ ಏಕತೆಗೆ ದಕ್ಕೆ : ಸಿಎನ್‌ಸಿ ಪ್ರತಿಪಾದನೆ*
  • *‘ಜಂತು ಹುಳು ರಹಿತ ಮಕ್ಕಳು – ಆರೋಗ್ಯವಂತ ಮಕ್ಕಳು’ ರಾಷ್ಟ್ರೀಯ ಜಂತು ಹುಳು ನಿವಾರಣಾ ಕಾರ್ಯಕ್ರಮ*
  • *ಫೆ.14 ರಂದು ಕೊಡವ ಭವನ ಉದ್ಘಾಟನೆ*
  • *ಮಡಿಕೇರಿಯಲ್ಲಿ “ಆರೋಗ್ಯ ಹಕ್ಕಿನ ಜಾಥಾ”*
  • *ಕೊಡವ ಕುಟುಂಬಗಳ ನಡುವಣ “ಮುಲ್ಲೇಂಗಡ ಕಬಡ್ಡಿ ನಮ್ಮೆ”*
  • *104 ಮೊಬೈಲ್ ಫೋನ್‌ಗಳನ್ನು ವಾರಸುದಾರರಿಗೆ ಹಸ್ತಾಂತರಿಸಿದ ಕೊಡಗು ಜಿಲ್ಲಾ ಪೊಲೀಸ್*
  • *ತಾಲ್ಲೂಕು ಮಟ್ಟದ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ನೀಡಲು ಅರ್ಜಿ ಆಹ್ವಾನ*
News-Desk-KannadaNews-Desk-Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News-Desk-KannadaNews-Desk-Kannada





Home » *ಪರಮ ಪವಿತ್ರ ಕ್ಷೇತ್ರ ಬಾರ್ದಿಲ ಶ್ರೀ ಸಾಂಬಸದಾಶಿವ ದೇವಸ್ಥಾನ*
ಮಹಾದೇಗುಲ

*ಪರಮ ಪವಿತ್ರ ಕ್ಷೇತ್ರ ಬಾರ್ದಿಲ ಶ್ರೀ ಸಾಂಬಸದಾಶಿವ ದೇವಸ್ಥಾನ*

November 29, 20252 Mins Read
Share
Facebook Twitter LinkedIn Pinterest WhatsApp Email

ಬಾರ್ದಿಲ ಶ್ರೀ ಸಾಂಬಸದಾಶಿವ ದೇವಸ್ಥಾನವು ಮಂಗಳೂರು ತಾಲೂಕಿನ ಕಿಲೆಂಜಾರು ಗ್ರಾಮದಲ್ಲಿದೆ. ತೇತ್ರಾಯುಗದ ಕ್ಷತ್ರಿಯ ಸಂಹಾರಕ ಭಗವಾನ್ ಪರಶುರಾಮರು ತನ್ನ ಕೊಡಲಿಯನ್ನೆಸೆದು ಸೃಷ್ಟಿಸಿದ ಪವಿತ್ರ ಸ್ಥಳ. ಈ ತುಳು ನಾಡಿನ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಕಿಲೆಂಜಾರು ಗ್ರಾಮದ ದೇವರಗುಡ್ಡೆ ಎಂಬ ಎತ್ತರವಾದ ಗುಡ್ಡದಲ್ಲಿರುವ ಶ್ರೀ ಕ್ಷೇತ್ರದಲ್ಲಿ “ಅಂಬಾ(ಪಾರ್ವತಿ)ಗಣಪತಿ” ಸಮೇತರಾಗಿ ‘ಶಿವ ದೇವರು’ ನೆಲೆಸಿರುವುದರಿಂದ “ಸಾಂಬಸದಾಶಿವ” ಎಂಬ ಹೆಸರಿನಿಂದ ಆರಾಧಿಸಲ್ಪಡುತ್ತಿದ್ದು, ಶ್ರೀ ಕ್ಷೇತ್ರವು ಕಾರಣಿಕ ಹಿನ್ನಲೆಯುಳ್ಳ ಪರಮ ಪವಿತ್ರ ಕ್ಷೇತ್ರವಾಗಿದೆ.  :: ಇತಿಹಾಸ :: 
ಸಾವಿರಾರು ವರ್ಷಗಳ ಹಿಂದೆ ಭಗವಾನ್ ಪರಶುರಾಮ ದೇವರು ಈ ಎತ್ತರವಾದ ಗುಡ್ಡ ಪ್ರದೇಶದಲ್ಲಿ ತಪಸ್ಸನ್ನಾಚರಿಸಿದರು. ತದನಂತರ ಋಷಿಮುನಿಗಳು ಈ ಪ್ರದೇಶದಲ್ಲಿ ಹಲವು ಕಾಲ ಯಾಗ, ಯಜ್ಞ, ತಪಸ್ಸುಗಳನ್ನು ಮಾಡಿದ ತಪೋಭೂಮಿಯಾಯಿತು. ನಂತರದ ಕಾಲದಲ್ಲಿ ಇಲ್ಲಿಯ ಮೂಲ ನಿವಾಸಿಗಳು ತಮಗೆ ಬಂದ ತೊಂದರೆಗಳನ್ನು ಕಂಡು, ಈ ಪ್ರದೇಶದಲ್ಲಿ ದೈವಿ ಶಕ್ತಿಯಿದೆಯೆಂದು ತಿಳಿದು ತಮ್ಮದೇ ರೀತಿಯಲ್ಲಿ ದೇವಿ ಶಕ್ತಿ/ಕಾಳಿಶಕ್ತಿಯನ್ನು ಪೂಜಿಸಿ ಆರಾಧಿಸಿಕೊಂಡು ಬಂದಿದ್ದರು. ತದನಂತರ ರಾಜ ಮಹಾರಾಜರ ಆಳ್ವಿಕೆಯ ಕಾಲದಲ್ಲಿ ತಮಗೆ ಗಂಡು ಸಂತಾನ ಇಲ್ಲದೇ ದತ್ತು ಸ್ವೀಕಾರ ಮಾಡಬೇಕಾಗಿ ಬಂದ ಸಂದರ್ಭದಲ್ಲಿ ಪ್ರಾಯಶ್ಚಿತವಾಗಿ ಈ ಪ್ರದೇಶದ ಕೆಲವು ಕೃಷಿ ಭೂಮಿಯನ್ನು ಬ್ರಾಹ್ಮಣರಿಗೆ ದಾನವಾಗಿ ಕೊಟ್ಟು, ಇಲ್ಲಿ ವಾಸವಿರುವಂತೆ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟರು. ಸದ್ರಿ ಬ್ರಾಹ್ಮಣರಿಗೆ ಈ ಎತ್ತರದ ಪ್ರದೇಶದಲ್ಲಿರುವ ಪವಿತ್ರ ಚೈತನ್ಯವು ಗೋಚರಕ್ಕೆ ಬಂದು ಶ್ರೀ ಗಣಪತಿ ದೇವರನ್ನು ಆರಾಧಿಸಿಕೊಂಡು ಬಂದರು. ನಂತರದ ವರ್ಷಗಳಲ್ಲಿ ರಾಜರುಗಳ ಮುಂದಾಳತ್ವದಲ್ಲಿ ಇಲ್ಲಿ ಅಂಬಾಗಣಪತಿ ಸಮೇತನಾದ ಶ್ರೀ ಸಾಂಬಸದಾಶಿವ ದೇವಸ್ಥಾನವನ್ನು ನಿರ್ಮಿಸಿ ಪೂಜಾಧಿಗಳನ್ನು ಬಹಳ ವೈಭವದಿಂದ ನಡೆಸಿಕೊಂಡು ಬಂದರು. ನಂತರದ ಕಾಲದ ಸಹೋದರತ್ವದಲ್ಲಿ ಸ್ವಂತಿಕೆಗಾಗಿ ವೈರತ್ವ ಉಂಟಾಗಿ ಯುದ್ಧ ನಡೆದು ಕಷ್ಟ-ನಷ್ಟಗಳಾಗಿ, ಕಾಲಕ್ರಮೇಣ, ಕಾರಣಾಂತರದಿಂದ ಶ್ರೀ ಸಾಂಬಸದಾಶಿವ ದೇವಸ್ಥಾನವು ಶಿಥಿಲಗೊಂಡಿತೆಂದು ತಿಳಿದುಬಂದಿದೆ. ತದನಂತರ ಸುಮಾರು 800 ವರ್ಷಗಳ ಹಿಂದೆ, ಶಿಥಿಲಗೊಂಡಿರುವ ಈ ಕ್ಷೇತ್ರದ ಪವಿತ್ರ ಶಿವಲಿಂಗವನ್ನು ಚೌಟರ ಅರಸರ ಆಡಳಿತದಲ್ಲಿ ನಿರ್ಮಾಣಗೊಂಡ ಪುತ್ತಿಗೆ ಶ್ರೀ ಸೋಮನಾಥ ದೇವಸ್ಥಾನದಲ್ಲಿ ಪ್ರತಿಷ್ಠೆ ಮಾಡಲಾಯಿತೆಂದು ತಿಳಿದುಬಂದಿದೆ. ಸುಮಾರು ವರ್ಷಗಳ ಹಿಂದೆ ದೇವರಗುಡ್ಡೆ ಎಂಬ ಹೆಸರಿದ್ದ ಈ ಎತ್ತರದ ಕಾಡು ಪ್ರದೇಶದಲ್ಲಿ ಶಿವ ದೇವಾಲಯವಿದ್ದ ಕುರುಹುಗಳು ಲಭಿಸಿದವು. ಸದ್ರಿ ಕ್ಷೇತ್ರವನ್ನು ನವ ನಿರ್ಮಾಣಗೊಳಿಸಬೇಕೆಂದು ಸಂಕಲ್ಪ ಮಾಡಿ, ಶ್ರೀ ಎಮ್.ಕಾಂತಪ್ಪ ಶೆಟ್ಟಿಯವರ ಮುಂದಾಳತ್ವದಲ್ಲಿ ಶ್ರೀ ಮಿಜಾರು ಗುತ್ತು ಆನಂದ ಆಳ್ವ ಇವರ ಘನ ಅಧ್ಯಕ್ಷತೆಯಲ್ಲಿ ಹಾಗೂ ಶ್ರೀ.ಐ.ರಾಮ ಆಸ್ರಣ್ಣ ಅವರ ಆಶೀರ್ವಚನದೊಂದಿಗೆ ಜೀರ್ಣೋದ್ಧಾರ ಸಮಿತಿ ರಚನೆ ಮಾಡಿದರು. ಕಾರ್ಯಪ್ರವೃತರಾಗಿ, ಪ್ರಕೃತವಿರುವ ಗರ್ಭಗುಡಿಯೊಂದಿಗೆ ಈ ಹಿಂದೆ ಇದ್ದ ಸುತ್ತು ಪೌಳಿಯೊಂದಿಗೆ ಶ್ರೀ ಸಾಂಬಸದಾಶಿವ ದೇವಸ್ಥಾನವು ನಿರ್ಮಾಣವಾಯಿತು.  :: ಉತ್ಸವಗಳು ::  ಶ್ರೀ ಕ್ಷೇತ್ರದಲ್ಲಿ ಭಜನೆಗಳು, ರಂಗಪೂಜೆಗಳು, ನಿತ್ಯನಂದಾದೀಪ ಸೇವೆ, ಮಾಸ ಶಿವರಾತ್ರಿ, ಶಿವ ಜಾಗರಣೆ, ಚೌತಿ, ದೀಪಾವಳಿ ಆಚರಣೆ, ಹೋಮ-ಹವನಗಳು, ಅನ್ನದಾನದಿ ಸೇವೆಗಳು, ತ್ರಿಕಾಲ ಪೂಜಾ ಸೇವೆಗಳು ನಡೆಯುತ್ತವೆ.

 

Share. Facebook Twitter Pinterest LinkedIn Tumblr Email WhatsApp
Previous Article*ಪ್ರಬಂಧ ಮತ್ತು ಚರ್ಚಾ ಸ್ಪರ್ಧೆ : ವಿಜೇತರಿಗೆ ಬಹುಮಾನ ವಿತರಣೆ*
Next Article ಕುಶಾಲನಗರದಲ್ಲಿ ಪ್ರೌಢಶಾಲಾ ಶಿಕ್ಷಕರಿಗೆ ತರಬೇತಿ : ಎಸ್‍ಎಸ್‍ಎಲ್‍ಸಿ ಪರೀಕ್ಷಾ ಫಲಿತಾಂಶ ಸುಧಾರಿಸಲು ಬಿಇಓ ಕೃಷ್ಣಪ್ಪ ಸಲಹೆ*

Related Posts

*ಐತಿಹಾಸಿಕ ಕುನ್ನತ್ತೂರು ಪಾಡಿ ಶ್ರೀ ಮುತ್ತಪ್ಪನ್ ಕ್ಷೇತ್ರ*

December 22, 2025

*ಶ್ರೀರಾಜರಾಜೇಶ್ವರಿ ದೇವಾಲಯದಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ ದೀಪಾವಳಿ ‘ದೀಪೋತ್ಸವ’ : ಸಹಸ್ರ ಸಹಸ್ರ ದೀಪಗಳನ್ನು ಹಚ್ಚಿ ಪುನೀತರಾದ ಭಕ್ತರು*

October 22, 2025

*ದುಷ್ಟ ಶಕ್ತಿಗಳಿಂದ ಮುಕ್ತಿ ಪ್ರಸಾದಿಸುವ ಗಾಲಿ ಆಂಜನೇಯ ಸ್ವಾಮಿ*

August 28, 2025

*ಸೌಂದರ್ಯ ತಜ್ಞರು ನಿತ್ಯ ವ್ಯಾಯಾಮದೊಂದಿಗೆ ತಮ್ಮ ಆರೋಗ್ಯ ವೃದ್ಧಿಸಿಕೊಳ್ಳುವ ಬಗ್ಗೆ ಗಮನಹರಿಸಬೇಕು ಎಂದು ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ ಕ್ರೀಡಾಪಟು ತಾತಪಂಡ ಜ್ಯೋತಿ ಸೋಮಯ್ಯ ಕಿವಿಮಾತು ಹೇಳಿದರು*

February 10, 2026

ಮಡಿಕೇರಿ, NEWS DESK ಫೆ.10: ಕೊಡಗು ಜಿಲ್ಲಾ ಬ್ಯುಟೀಷಿಯನ್ ಅಸೋಸಿಯೇಷನ್ ವತಿಯಿಂದ ಮಡಿಕೇರಿಯ ಮ್ಯಾನ್ಸ್ ಕಾಂಪೌಂಡ್ ಮೈದಾನದಲ್ಲಿ ನಡೆದ ಜಿಲ್ಲಾಮಟ್ಟದ…

*ಮೈಸೂರು-ಕುಶಾಲನಗರ ರೈಲ್ವೆ ಯೋಜನೆ ಪುನಾರಂಭಿಸಲು ಅಶ್ವಿನ್‌ ವೈಷ್ಣವ್‌ಗೆ ಯದುವೀರ್‌ ಮನವಿ ಭೂ ಸ್ವಾಧೀನ ಪ್ರಕ್ರಿಯೆಗೆ ಚಾಲನೆ ನೀಡಲು ಕ್ರಮ ಕೈಗೊಳ್ಳಬೇಕೆಂದು ಸಂಸದರ ಪತ್ರ*

February 10, 2026

*ಕೊಡವ ಭಾಷೆಗೂ ಸಾಂವಿಧಾನಿಕ ಭದ್ರತೆ ನೀಡಬೇಕು : ಸಣ್ಣ ಸಣ್ಣ ಭಾಷೆಗಳನ್ನು ಹತ್ತಿಕಿದರೆ ಏಕತೆಗೆ ದಕ್ಕೆ : ಸಿಎನ್‌ಸಿ ಪ್ರತಿಪಾದನೆ*

February 10, 2026

*ಫೆ.14 ರಂದು ಕೊಡವ ಭವನ ಉದ್ಘಾಟನೆ*

February 10, 2026

*ಮಡಿಕೇರಿಯಲ್ಲಿ “ಆರೋಗ್ಯ ಹಕ್ಕಿನ ಜಾಥಾ”*

February 10, 2026

*ಕೊಡವ ಕುಟುಂಬಗಳ ನಡುವಣ “ಮುಲ್ಲೇಂಗಡ ಕಬಡ್ಡಿ ನಮ್ಮೆ”*

February 10, 2026

*104 ಮೊಬೈಲ್ ಫೋನ್‌ಗಳನ್ನು ವಾರಸುದಾರರಿಗೆ ಹಸ್ತಾಂತರಿಸಿದ ಕೊಡಗು ಜಿಲ್ಲಾ ಪೊಲೀಸ್*

February 10, 2026

*ತಾಲ್ಲೂಕು ಮಟ್ಟದ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ನೀಡಲು ಅರ್ಜಿ ಆಹ್ವಾನ*

February 10, 2026

*ಫೆ.15ರಂದು ಗೌಡ ಜನಾಂಗಗಳ ಜಿಲ್ಲಾ ಮಟ್ಟದ ಕ್ಯಾರಂಬೋರ್ಡ್ ಕ್ರೀಡಾಕೂಟ : ಏಪ್ರಿಲ್ ನಲ್ಲಿ ಟೆನ್ನಿಸ್ ಬಾಲ್ ಕ್ರಿಕೆಟ್*

February 10, 2026

*ಆಹಾರ ವಾಹಿನಿ ಯೋಜನೆಯಡಿ ಸಹಾಯಧನ ಸೌಲಭ್ಯ ಒದಗಿಸಲು ಅರ್ಜಿ ಆಹ್ವಾನ*

February 10, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.