Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada
Home»ಇತ್ತೀಚಿನ ಸುದ್ದಿಗಳು»ಸುಂಟಿಕೊಪ್ಪ : ಅಪರಾಧ ಪ್ರಕರಣಗಳ ಪತ್ತೆಗೆ ಪೊಲೀಸರಿಗೆ ಸಹಕರಿಸಿ : ಹೆಚ್ಚುವರಿ ಎಸ್‍ಪಿ ದಿನೇಶ್ ಕುಮಾರ್ ಬಾರಿಕೆ
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ ಪೊಲೀಸ್ ನ್ಯೂಸ್

ಸುಂಟಿಕೊಪ್ಪ : ಅಪರಾಧ ಪ್ರಕರಣಗಳ ಪತ್ತೆಗೆ ಪೊಲೀಸರಿಗೆ ಸಹಕರಿಸಿ : ಹೆಚ್ಚುವರಿ ಎಸ್‍ಪಿ ದಿನೇಶ್ ಕುಮಾರ್ ಬಾರಿಕೆ

ಜನವರಿ 8, 20262 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement

ಸುಂಟಿಕೊಪ್ಪ ಜ.8 NEWS DESK : ಕೊಡಗು ಪ್ರವಾಸಿಗಾರ ತಾಣವಾಗಿದ್ದು ಇಲ್ಲಿ ಬಂದು ಹೋಗುವ ಪ್ರವಾಸಿಗಾರನ್ನು ಹಾಗೂ ಸ್ಥಳೀಯವಾಗಿ ನಡೆಯುವ ಅಪರಾಧಗಳನ್ನು ತಡೆಗಟ್ಟಲು ಆಟೋ ಚಾಲಕರು ಜೀವಂತ ಸಿಸಿಕ್ಯಾಮರವಿದ್ದಂತೆ ಅವರ ಬಗ್ಗೆ ನಿಖರ ಮಾಹಿತಿಗಳನ್ನು ನಿಮ್ಮಿಂದ ಮಾತ್ರ ಪಡೆಯಲು ಸಾಧ್ಯವೆಂದು ಕೊಡಗು ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷರಾದ ದಿನೇಶ್ ಕುಮಾರ್ ಬಾರಿಕೆ ಅಭಿಪ್ರಾಯ ವ್ಯಕ್ತಪಡಿಸಿದರು.  ಸುಂಟಿಕೊಪ್ಪ ಗುಂಡುಗುಟ್ಟಿ ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ನಡೆದ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ನಡೆದ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹೆಚ್ಚುವರಿ ಪೊಲೀಸ್ ಅಧೀಕ್ಷರಾದ ದಿನೇಶ್ ಕುಮಾರ್ ಅವರು, ವಾಹನ ಚಾಲನೆಯ  ಸಂದರ್ಭ ಚಾಲನಾ ಪರವನಾಗಿ, ವಾಹನ ವಿಮೆ, ವಾಹನಗಳಿಗೆ ಸಂಬಂಧಿಸಿದ ದಾಖಲಾತಿಗಳನ್ನು ಕಡ್ಡಾಯವಾಗಿ ಹೊಂದಿರಬೇಕು. ಯಾಕೆಂದರೆ ಅಪಘಾತಗಳು ಸಂಭವಿಸಿದಾಗ ದಾಖಲಾತಿ ಹೊಂದಿಲ್ಲದೆ ಇರುವ ಸಂದರ್ಭ ವಾಹನಗಳ ಮಾಲೀಕರಿಗೆ ದುಪ್ಪಟ್ಟು ದಂಡ ಅಥವಾ ಜೀವನ ಪರ್ಯಂತ ಜೈಲು ಶಿಕ್ಷೆ ಅಥವಾ ದಂಡಕ್ಕೆ ತುತ್ತಾಗುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದರು. ಆದುರಿಂದ ಪ್ರತಿಯೊಬ್ಬ ಚಾಲಕರು ವಾಹನಗಳ ಚಾಲನೆಯ ಸಂದರ್ಭ ನಿಯಮಗಳನ್ನು ಉಲಂಘಿಸದೆ ಸುರಕ್ಷಿತ ಚಾಲನೆಗೆ ಒತ್ತು ನೀಡಬೇಕೆಂದು ಅವರು ಚಾಲಕರಿಗೆ ಕಿವಿ ಮಾತು ಹೇಳಿದರು.  ಸೋಮವಾರಪೇಟೆ ಉಪ ವಿಭಾಗ ಡಿವೈಎಸ್‍ಪಿ ಚಂದ್ರಶೇಖರ್ ಮಾತನಾಡಿ, ವಾಹನ ಚಾಲನೆ ಸಂದರ್ಭ ಅಪಘಾತ ಅವಘಡಗಳು ಒಂದಕ್ಕೊಂದು ಕೊಂಡಿ ಇದ್ದಂತೆ ಇದರಿಂದ 2 ಕುಟುಂಬಗಳು ಮತ್ತು ಅವರನ್ನು ಅವಲಂಭಿತರಾಗಿರುವ ಜೀವನ ಸಾಕಷ್ಟು ಸಂಕಷ್ಟಗಳನ್ನು ಎದುರಿಸುವಂತಾಗುತ್ತದೆ. ಇದರಿಂದ ವಾಹನ ಚಾಲನಾ ಸಂದರ್ಭದಲ್ಲಿ ಮೊಬೈಲ್ ಬಳಕೆ, ಮದ್ಯಪಾನ, ಮಾದಕ ವಸ್ತುಗಳ ಸೇವೆನೆ ಹಾಗೂ ಅಜಾಗರೂಕತೆಯಿಂದ ವಾಹನಗಳನ್ನು ಚಲಾಯಿಸುವುದರಿಂದ ಇಂತಹ ಅನಾಹುತಗಳು ಸಂಭವಿಸಿ ಅಪಘಾತಗಳಿಂದ 2 ಕುಟುಂಬಗಳೂ ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತದೆ ಇದರ ದೂರವಿರುವಂತೆ ಅಭಿಪ್ರಾಯ ವ್ಯಕ್ತಪಡಿಸಿದರು. ಕುಶಾಲನಗರ ಗ್ರಾಮಾಂತರ ವೃತ್ತ ನಿರೀಕ್ಷಕರಾದ ದಿನೇಶ್ ಕುಮಾರ್ ಮಾತನಾಡಿ, ವಾಹನ ಚಾಲನೆಯ ರಸ್ತೆಯ ನಿಯಮಗಳನ್ನು ಕಡ್ಡಾಯವಾಗಿ ಅಲ್ಲದೆ ಸರಕು ಸಾಗಾಣಿಕೆ ವಾಹನಗಳಲ್ಲಿ ಪ್ರಯಾಣಿಕರನ್ನು ಕರೆದೋಯ್ಯವುದು ಅಪರಾಧ. ಸರಕು ವಾಹನಗಳು ಅಪಘಾತಕ್ಕೀಡಾದಗ ವಾಹನ ಚಾಲಕರು ಮತ್ತು ಮಾಲೀಕರೆ ಪ್ರಯಾಣಿಕರಿಗೆ ಸಂಪೂರ್ಣ ವೆಚ್ಚವನ್ನು ಭರಿಸಬೇಕಾಗುತ್ತದೆ. ಅವರಿಗೆ ಜೀವವಿಮೆ ಲಭಿಸುವುದಿಲ್ಲವೆಂದು ಅವರು ಚಾಲಕರಿಗೆ ಕಿವಿಮಾತು ಹೇಳಿದರು.  ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಮೋಹನ್‍ರಾಜ್ ಮಾತನಾಡಿ, ಕೆಲವು ಆಟೋಗಳಲ್ಲಿ ನಿಯಮಕ್ಕಿಂತ ಅಧಿಕ ಮಕ್ಕಳನ್ನು ಕರೆದೋಯ್ಯುತ್ತಿರುವುದು ಕಂಡು ಬಂದಿದ್ದು ಮುಂದಿನ ದಿನಗಳಲ್ಲಿ ನಿಯಮವನ್ನು ಉಲ್ಲಂಘಿಸಿ ಅಧಿಕ ಮಕ್ಕಳನ್ನು ಕರೆದೋಯ್ಯುವ ಆಟೋಗಳ ವಿರುದ್ದ ನಿರ್ಧಾಕ್ಷಣ್ಯ ಕಾನೂನು ಕ್ರಮಗಳನ್ನು ಜರುಗಿಸಲಾಗುವುದು ಎಂದು ಅವರು ಆಟೋಚಾಲಕರಿಗೆ ಎಚ್ಚರಿಸಿದರು.  ಇದೇ ಸಂದರ್ಭ ಆಟೋ ಚಾಲಕರ ಸಂಘದ ಅಧ್ಯಕ್ಷ 15 ಕಿ.ಮೀ ದೂರ ಸಂಚರಿಸುವ ಪರವನಾಗಿ ಆಟೋಗಳಿಗೆ ಇದ್ದು ಕುಶಾಲನಗರ ಹಾಗೂ ಮಡಿಕೇರಿ ಭಾಗಗಳಿಗೆ ತುರ್ತು ಅನಾರೋಗ್ಯ ಪೀಡಿತ ರೋಗಿಗಳನ್ನು ಜಿಲ್ಲಾಸ್ಪತ್ರೆ ಹಾಗೂ ಸಾರ್ವಜನಿಕ ಆರೋಗ್ಯ ಕೇಂದ್ರಗಳಿಗೆ ಕರೆದೋಯ್ಯುವ ಸಂದರ್ಭ ಪೊಲೀಸರು ದಂಡವನ್ನು ವಿಧಿಸುತ್ತಿದ್ದು ಇದಕ್ಕೆ ವಿನಾಯಿತಿ ನೀಡುವಂತೆ ಮನವಿ ಮಾಡಿದರು.  ಈ ಸಂದರ್ಭ ವಾಹನ ಚಾಲಕರ ಸಂಘದ ಅಧ್ಯಕ್ಷ ಕಿಟ್ಟಣ್ಣ ರೈ, ಪದಾಧಿಕಾರಿಗಳು,  ಆಟೋಚಾಲಕರು ಸಂಘದ ಪದಾಧಿಕಾರಿಗಳು ಮತ್ತಿತರರು ಇದ್ದರು.

 

Follow us Follow us
Share. WhatsApp Facebook Twitter Email Telegram Copy Link

Related Posts

ಮಡಿಕೇರಿ ದಸರಾದಲ್ಲಿ ಕಾಫಿ ಘಮ: 54 ಮಳಿಗೆಗಳಲ್ಲಿ ಕಾಫಿ ಲೋಕ ಅನಾವರಣ

ಅಕ್ಟೋಬರ್ 12, 2026

ವಿರಾಜಪೇಟೆ ಕಾವೇರಿ ಕಾಲೇಜಿನ ಬಾಲಕರ ತಂಡಕ್ಕೆ ರನ್ನರ್ಸ್ ಟ್ರೋಫಿ

ಅಕ್ಟೋಬರ್ 12, 2026

ಎಸ್‌ಐಆರ್ ವಿರುದ್ಧ ಕೊಡಗು ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ; ಚುನಾವಣಾ ಆಯುಕ್ತರ ರಾಜೀನಾಮೆಗೆ ಆಗ್ರಹಿಸಿ ರಸ್ತೆ ತಡೆ

ಅಕ್ಟೋಬರ್ 12, 2026

ವಿರಾಜಪೇಟೆ ಕಾವೇರಿ ಕಾಲೇಜಿನ ಬಾಲಕರ ತಂಡಕ್ಕೆ ರನ್ನರ್ಸ್ ಟ್ರೋಫಿ

ಅಕ್ಟೋಬರ್ 12, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ವಿರಾಜಪೇಟೆ, NEWS DESK ಅ.12: ಗೋಣಿಕೊಪ್ಪಲಿನ ಕಾವೇರಿ ಪದವಿ ಪೂರ್ವ ಕಾಲೇಜಿನಲ್ಲಿ ಸಂತ ಅನ್ನಮ್ಮ ಕಾಲೇಜು, ವಿರಾಜಪೇಟೆ ಇವರ ವತಿಯಿಂದ…

ಎಸ್‌ಐಆರ್ ವಿರುದ್ಧ ಕೊಡಗು ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ; ಚುನಾವಣಾ ಆಯುಕ್ತರ ರಾಜೀನಾಮೆಗೆ ಆಗ್ರಹಿಸಿ ರಸ್ತೆ ತಡೆ

ಅಕ್ಟೋಬರ್ 12, 2026

ಬೆಂಗಳೂರಿನಿಂದ ಮೈಸೂರಿಗೆ ದಕ್ಷಿಣ ಕರ್ನಾಟಕ ಅಂಚೆ ವಲಯದ ಪ್ರಧಾನ ಕಚೇರಿ ಸ್ಥಳಾಂತರಕ್ಕೆ ತಾತ್ವಿಕ ಒಪ್ಪಿಗೆ

ಅಕ್ಟೋಬರ್ 12, 2026

ಸೋಮೇಶ್ವರ ದೇವಾಲಯದಲ್ಲಿ 21ನೇ ವರ್ಷದ ಶರನ್ನವರಾತ್ರಿ ಉತ್ಸವಕ್ಕೆ ಚಾಲನೆ

ಅಕ್ಟೋಬರ್ 12, 2026

ಹಿರಿಯ ಹಾಕಿ ಆಟಗಾರ್ತಿ ದೇವರಾಜಮ್ಮ ಅವರಿಗೆ ನಾಡೋಜ ಕಮಲ ಹಂಪನಾ ರಾಜ್ಯಪ್ರಶಸ್ತಿ

ಅಕ್ಟೋಬರ್ 12, 2026

ಕುಂಜಿಲ ಸರ್ಕಾರಿ ಶಾಲೆಗೆ ಹೆಮ್ಮೆಯ ದುಬೈ ಕನ್ನಡ ಸಂಘದಿಂದ ಆಟೋಪಕರಣ, ಪೀಠೋಪಕರಣಗಳ ಕೊಡುಗೆ; ಸರ್ಕಾರಿ ಶಾಲೆ ಉಳಿಸಿ ಅಭಿಯಾನದಡಿ ವಿದ್ಯಾರ್ಥಿಗಳಿಗೆ ಸೌಲಭ್ಯಗಳ ಹಸ್ತಾಂತರ

ಅಕ್ಟೋಬರ್ 12, 2026

ಮಡಿಕೇರಿ ದಸರಾ ವಿದ್ಯುತ್ ದೀಪಾಲಂಕಾರ ಅಸಮರ್ಪಕ: ಶ್ರೀ ಕೋಟೆ ಮಹಾಗಣಪತಿ ದಸರಾ ಮಂಟಪ ಸಮಿತಿ ಆಕ್ಷೇಪ

ಅಕ್ಟೋಬರ್ 12, 2026

ಸುವರ್ಣ ಮಹೋತ್ಸವ ಸಂಭ್ರಮ: ಶ್ರೀ ಕೋಟೆ ಮಹಾಗಣಪತಿಗೆ 108 ಎಳನೀರು, ಪಂಚಾಮೃತ ಅಭಿಷೇಕ

ಅಕ್ಟೋಬರ್ 12, 2026

ಗಣೇಶೋತ್ಸವ ಸ್ವಾತಂತ್ರ್ಯ ಸಂಗ್ರಾಮದ ಪ್ರತೀಕ : ಸಂಸದ ಯದುವೀರ್ ಒಡೆಯರ್

ಅಕ್ಟೋಬರ್ 11, 2026

ಮಳೆ ಕೊರತೆ ನೀಗಿ ನಾಡಿನಲ್ಲಿ ಸಮೃದ್ಧಿ ನೆಲೆಸಲಿ : ಸಚಿವ ಪಿ.ಎಂ.ನರೇಂದ್ರ ಸ್ವಾಮಿ

ಅಕ್ಟೋಬರ್ 11, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.