
ಮಡಿಕೇರಿ ಜ.24 NEWS DESK : ತುರ್ತು ಸಂದರ್ಭಗಳಲ್ಲಿ ನಾಗರಿಕರ ಕರೆಗಳಿಗೆ ಶೀಘ್ರ ಸ್ಪಂದಿಸಲು ಜಿಲ್ಲೆಯ ವಿವಿಧೆಡೆ 112 ತುರ್ತು ಸ್ಪಂದನೆ ದ್ವಿಚಕ್ರ ವಾಹನಕ್ಕೆ ಚಾಲನೆ ದೊರೆಯಿತು. ಈಗಾಗಲೇ ಕಾರ್ಯಾಚರಿಸುತ್ತಿರುವ 112 ವಾಹನಗಳ ಜೊತೆಗೆ, ನಗರ ಪ್ರದೇಶಗಳಲ್ಲಿ ಇನ್ನೂ ಶೀಘ್ರವಾಗಿ ಸ್ಪಂದಿಸಲು ಅನುಕೂಲವಾಗುವಂತೆ ಜಿಲ್ಲೆಯ ಮಡಿಕೇರಿ, ವಿರಾಜಪೇಟೆ ಮತ್ತು ಕುಶಾಲನಗರ ಪಟ್ಟಣ ಠಾಣೆಗಳಲ್ಲಿ ದ್ವಿಚಕ್ರ ವಾಹನದ ಮೂಲಕವೂ 112 ತುರ್ತು ಸ್ಪಂದನೆ ಸೇವೆ ಲಭ್ಯವಾಗಲಿದೆ.









