ಮಡಿಕೇರಿ, NEWS DESK ಮಾ.5 : ಕೊಡಗು ಮುಸ್ಲಿಂ ಸ್ಟೋಟ್ಸ್ ಟ್ರಸ್ಟ್ ವತಿಯಿಂದ 21ನೇ ವರ್ಷದ ಕೊಡಗು ಮುಸ್ಲಿಂ ಕಪ್ ಕ್ರಿಕೆಟ್ ಪಂದ್ಯಾವಳಿಯನ್ನು ಮೇ 2ರಿಂದ 10 ರವರೆಗೆ ಆಯೋಜಿಸಲಾಗಿದೆ ಎಂದು ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಆದಂ ಎಸ್.ಕುಶಾಲನಗರ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕುಶಾಲನಗರದ ಗುಂಡುರಾವ್ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಾವಳಿ ಹಾಗೂ ಮೊದಲನೇ ವರ್ಷದ ಪುರುಷರ ಶೆಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ನಡೆಯಲಿದೆ ಎಂದರು.
ಈ ವರ್ಷದ ಕೊಡಗು ಮುಸ್ಲಿಂ ಕಪ್ ಕ್ರಿಕೆಟ್ ಪಂದ್ಯಾಟವನ್ನು ಕೊಡಗು ಮುಸ್ಲಿಂ ಸ್ಪೋಟ್ಸ್ ಟ್ರಸ್ಟ್ ವತಿಯಿಂದ ಆಯೋಜಿಸಲಾಗುತ್ತಿದೆ. ಕ್ರೀಡಾಕೂಟದಲ್ಲಿ ಸುಮಾರು 150 ತಂಡಗಳು ಭಾಗವಹಿಸುವ ನಿರೀಕ್ಷೆ ಇದೆ. ಕ್ರಿಕೆಟ್ ಪಂದ್ಯಾಟದ ಪ್ರಥಮ ನಗದು ಬಹುಮಾನ ರೂ.1,11,111/- ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ಬಹುಮಾನ 66,666/- ಹಾಗೂ ಆಕರ್ಷಕ ಟ್ರೋಫಿ, ತೃತೀಯ ಬಹುಮಾನ 33,333/-ಹಾಗೂ ಆಕರ್ಷಕ ಟ್ರೋಫಿ, ಚತುರ್ಥ ಬಹುಮಾನ 22,222/- ಹಾಗೂ ಆಕರ್ಷಕ ಟ್ರೋಫಿ ನೀಡಿ ಗೌರವಿಸಲಾಗುತ್ತದೆ.

ಪುರುಷರ ಶೆಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಸಿಂಗಲ್ಸ್ ವಿಭಾಗದಲ್ಲಿ ಪ್ರಥಮ ನಗದು ಬಹುಮಾನ 11,111/- ಹಾಗೂ ಆಕರ್ಷ ಟ್ರೋಫಿ, ದ್ವಿತೀಯ ನಗದು ಬಹುಮಾನ 6,666/- ಹಾಗೂ ಆಕರ್ಷಕ ಟ್ರೋಫಿ. ಡಬಲ್ಸ್ ವಿಭಾಗದಲ್ಲಿ ಪ್ರಥಮ ನಗದು ಬಹುಮಾನ 22,222/- ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ನಗದು ಬಹುಮಾನ 11,111/- ಹಾಗೂ ಆಕರ್ಷಕ ಟ್ರೋಫಿ ನೀಡಿ ಗೌರವಿಸಲಾಗುವುದು.
ಕ್ರಿಕೆಟ್ ಪಂದ್ಯಾಟದ ಪ್ರವೇಶ ಶುಲ್ಕ 3,000/-, ಶೆಡಲ್ ಬ್ಯಾಡ್ಮಿಂಟನ್ ಪಂದ್ಯಾಟದ ಸಿಂಗಲ್ಸ್ ಪ್ರವೇಶ ಶುಲ್ಕ – 800, ಡಬಲ್ಸ್ ಪ್ರವೇಶ ಶುಲ್ಕ 1,500 ಎಂದು ತಿಳಿಸಿದರು.
ಹೆಚ್ಚಿನ ಮಾಹಿತಿಗಾಗಿ 9448797644, 9740481273 ಮತ್ತು 9900900250 ನ್ನು ಸಂಪರ್ಕಿಸಬಹುದಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷ ಅಬ್ದುಲ್ ರಶೀದ್ ಎಡಪಾಲ, ಸಹ ಕಾರ್ಯದರ್ಶಿ ಎಂ.ಎA.ಹ್ಯಾರಿಸ್, ಉಪಾಧ್ಯಕ್ಷ ಅಬ್ದುಲ್ ರಜಾ಼ಕ್, ನಿರ್ದೇಶಕರುಗಳಾದ ಆತಿಫ್ ಮನ್ನಾ ಹಾಗೂ ಎಂ.ಎಸ್.ಬಾಷಾ ಉಪಸ್ಥಿತರಿದ್ದರು.
ಇದೇ ಸಂದರ್ಭ ಕೊಡಗು ಮುಸ್ಲಿಂ ಕಪ್ ಕ್ರಿಕೆಟ್ ಪಂದ್ಯಾವಳಿಯ ಧ್ವಜವನ್ನು ಬಿಡುಗಡೆಗೊಳಿಸಲಾಯಿತು.







