
ನಾಪೋಕ್ಲು ಏ.24 NEWS DESK : ಕೆಪಿಎಸ್ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಚೀಯಕಪೂವಂಡ ಕುಟುಂಬ ಆಯೋಜಿತ 5ನೇ ವರ್ಷದ ಕೊಡವ ಕೌಟುಂಬಿಕ ಕೇರ್ ಬಲಿ ನಮ್ಮೆ(ಹಗ್ಗಜಗ್ಗಾಟ) ಯ ಎರಡನೇ ದಿನದ ಪಂದ್ಯಾಟದಲ್ಲಿ ಪುರುಷರ ವಿಭಾಗದಲ್ಲಿ 89 ತಂಡಗಳು ಹಾಗೂ ಮಹಿಳಾ ವಿಭಾಗದಲ್ಲಿ 31 ತಂಡಗಳು ಮುಂದಿನ ಸುತ್ತಿಗೆ ಪ್ರವೇಶ ಪಡೆದಿದೆ. ಪಂದ್ಯದ ವೀಕ್ಷಕ ವಿವರಣೆಗಾರರಾಗಿ ಬಾಳೆಯಡ ದಿವ್ಯ ಮಂದಪ್ಪ, ತೀರ್ಪುಗಾರರಾಗಿ ಕೊಡವ ಟಗ್ ಆಫ್ ವಾರ್ ಅಕಾಡೆಮಿಯ ಸದಸ್ಯರು ಕಾರ್ಯನಿರ್ವಹಿಸಿದರು. ಪಂದ್ಯಾಟ ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ನೆರೆದಿದ್ದರು. ಗುಡುಗು ಸಿಡಿಲಿನ ಅಬ್ಬರ ಜೋರಾಗಿದ್ದಿದರಿಂದ ಎಲ್ಲರೂ ಮಳೆಯ ನಿರೀಕ್ಷೆಯಲ್ಲಿದ್ದರು. ಆದರೆ, ಮಳೆ ಬಾರದ ಹಿನ್ನೆಲೆಯಲ್ಲಿ ಎಲ್ಲಾ ಪಂದ್ಯಗಳು ಸುಗಮವಾಗಿ ನಡೆಯುವಂತಾಯಿತು. ಚೀಯಕಪೂವಂಡ ಕೇರ್ ಬಲಿ ನಮ್ಮೆ ಕುಟುಂಬದ ಹಾಡನ್ನು ಹಾಡಿದ ಮಚ್ಚಂಡ ಶರಣ್ ಪರವಾಗಿ ಅವರ ಪೋಷಕರನ್ನು ಚೀಯಕಪೂವಂಡ ಸ್ಪೋಟ್ಸ್ ಅಧ್ಯಕ್ಷ ಸಿ.ಕೆ ಬೋಪಣ್ಣ ಹಾಗೂ ಸಿ.ಕೆ ಅಪ್ಪಚ್ಚು, ಟಗ್ ಆಪ್ ವಾರ್ ಅಕಾಡೆಮಿ ಅಧ್ಯಕ್ಷ ಪೊನ್ನಾಲ್ ತಂಡ ಕಿರಣ್ ಪೊನ್ನಪ್ಪ ಸನ್ಮಾನಿಸಿದರು.









