
ವಿರಾಜಪೇಟೆ ಆ.11 NEWS DESK : ಶ್ರೀ ಕ್ಷೇತ್ರ ಮಲೆತಿರಿಕೆ ಬೆಟ್ಟದ ಶ್ರೀ ಶನೇಶ್ವರ ದೇವಾಲಯದಲ್ಲಿ ವರ್ಷಂಪ್ರತಿ ಆಚರಿಸಿಕೊಂಡು ಬರಲಾಗುತ್ತಿರುವ ವಾರ್ಷಿಕ ಶ್ರಾವಣ ಮಹೋತ್ಸವವು ಆ.15 ರಿಂದ ಸೆ.5 ರವರೆಗೆ ಶ್ರದ್ಧಾಭಕ್ತಿಯಿಂದ ಜರುಗಲಿದೆ. ಬರುವ 4 ಪವಿತ್ರ ಶ್ರಾವಣ ಶನಿವಾರಗಳಂದು ಸಕಲ ಧಾರ್ಮಿಕ ಪೂಜಾ ವಿಧಿ-ವಿಧಾನಗಳೊಂದಿಗೆ ಮಹೋತ್ಸವವನ್ನು ಆಚರಿಸಲಾಗುವುದು. ಶ್ರಾವಣ ಮಾಸದ ಧಾರ್ಮಿಕ ಪೂಜಾ ಕಾರ್ಯಕ್ರಮಗಳ ಅಂಗವಾಗಿ ಆಗಸ್ಟ್ 14 ಶುಕ್ರವಾರದಂದು ಬೆಳಿಗ್ಗೆ 6 ಗಂಟೆಗೆ ಗಣಪತಿ ಹೋಮ ನಡೆಸಿ ಪೂಜಾ ಕೈಂಕರ್ಯಗಳಿಗೆ ಚಾಲನೆ ನೀಡಲಾಗುತ್ತದೆ. ರಾತ್ರಿ 7 ಗಂಟೆಗೆ ದುರ್ಗಾ ಪೂಜೆ ಹಾಗೂ ಪ್ರಸಾದ ವಿನಿಯೋಗ ನಡೆಯಲಿದೆ. ಪ್ರತಿ ಶ್ರಾವಣ ಶನಿವಾರ ವಿವಿಧ ಪೂಜಾ ಕೈಂಕರ್ಯಗಳು ನಡೆಯಲಿದ್ದು, ಆ.15 ಶನಿವಾರ ಬೆಳಿಗ್ಗೆ 5 ಗಂಟೆಗೆ ಶ್ರೀ ಶನೀಶ್ವರ ದೇವರಿಗೆ ಅಭಿಷೇಕ, 6 ಗಂಟೆಗೆ ಅಲಂಕಾರ ಪೂಜೆ, 8 ಗಂಟೆಗೆ ನವಗ್ರಹ ಪೂಜೆ, 11 ಗಂಟೆಗೆ ಶ್ರೀ ದೇವರ ದರ್ಶನ, ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ, ಪ್ರಸಾದ ವಿನಿಯೋಗ ಹಾಗೂ ಮಹಾ ಅನ್ನಸಂತರ್ಪಣೆ ನಡೆದು, ರಾತ್ರಿ 7 ಗಂಟೆಗೆ ಮಹಾಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಆ.22 ರಂದು ಎರಡನೇ ಶ್ರಾವಣ ಶನಿವಾರ ಬೆಳಿಗ್ಗೆ 8 ಗಂಟೆಗೆ ಶ್ರೀ ಕ್ಷೇತ್ರದಲ್ಲಿ ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆ ನಡೆಯಲಿದೆ. ಬಳಿಕ ವಿವಿಧ ಪೂಜೆಗಳು ಅನ್ನಸಂತರ್ಪಣೆ ನಡೆಯಲಿದೆ. ಆ.29ರಂದು ಮೂರನೇ ಶ್ರಾವಣ ಶನಿವಾರದ ಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ಸೆ.4 ಶುಕ್ರವಾರ ರಾತ್ರಿ 7 ಗಂಟೆಗೆ ದೀಪೋತ್ಸವ, ದುರ್ಗಾದೇವಿ ಪೂಜೆ ಹಾಗೂ ಅನ್ನಸಂತರ್ಪಣೆ, ಸೆಪ್ಟೆಂಬರ್ 5 ಶನಿವಾರ ನಾಲ್ಕನೇ ಶ್ರಾವಣ ಶನಿವಾರದ ವಿವಿಧ ಪೂಜಾ ಕೈಂಕರ್ಯಗಳು ನಡೆದು, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6 ಗಂಟೆಗೆ ಶ್ರೀ ದೇವರ ಉತ್ಸವ ಮೂರ್ತಿಯೊಂದಿಗೆ ವೈಭವದ ಪೇಟೆ ಮೆರವಣಿಗೆ ಹಾಗೂ ರಾತ್ರಿ 9 ಗಂಟೆಗೆ ದೇವಾಲಯದಲ್ಲಿ ಮಹಾಪೂಜೆ ಹಾಗೂ ಅನ್ನಸಂತರ್ಪಣೆ ನಡೆದು ವಾರ್ಷಿಕ ಶ್ರಾವಣ ಮಹೋತ್ಸವಕ್ಕೆ ತೆರೆ ಎಳೆಯಲಾಗುತ್ತದೆ. ಶ್ರಾವಣ ಮಾಸದ ಈ ಶುಭ ಸಂದರ್ಭದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಶ್ರೀ ದೇವರ ದರ್ಶನ ಪಡೆದು ತೀರ್ಥ-ಪ್ರಸಾದ ಸ್ವೀಕರಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕೆಂದು ಶ್ರೀ ಶನೇಶ್ವರ ಭಕ್ತ ಮಂಡಳಿಯ ಯುವರಾಜ್ ಕೃಷ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9686403101 ಸಂಪರ್ಕಿಸಬಹುದು.










