
ವಿರಾಜಪೇಟೆ ಆ.13 NEWS DESK : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಸ್ಕೃತಿ ಮತ್ತು ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾ ಘಟಕದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ 11 ಸಾಧಕರಿಗೆ ‘ಆದರ್ಶ ಸೇವಾ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ರಾಜ್ಯ ಉಪಾಧ್ಯಕ್ಷ ಗಣೇಶ್ ನಿಲವಾಗಿಲು ತಿಳಿಸಿದ್ದಾರೆ. ಆ.16 ರಂದು ವಿರಾಜಪೇಟೆಯ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಸಂಘಟನಾ, ಸಾಹಿತ್ಯ, ಮಾಧ್ಯಮ, ಸಮಾಜ ಸೇವೆ, ಕಲೆ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರನ್ನು ಗೌರವಿಸಲಾಗುವುದು. ಸಂಘಟನಾ ಕ್ಷೇತ್ರದಲ್ಲಿ ದೇವರಾಜ್ ಬಿ.ಟಿ., ಸಾಹಿತ್ಯ ಕ್ಷೇತ್ರದಲ್ಲಿ ಕುಮಾರಿ ಮನ ಕೆ.ಆರ್., ಮಾಧ್ಯಮ ಕ್ಷೇತ್ರದಲ್ಲಿ ಶಶಿ ಅಚ್ಚಪ್ಪ ಹಾಗೂ ಶಾಂತಿ ಭೂಷಣ್, ಸಮಾಜ ಸೇವಾ ಕ್ಷೇತ್ರದಲ್ಲಿ ಎಂ. ಸಾದಿಕ್ ಅಹಮ್ಮದ್, ಪೂಜಾ ರವೀಂದ್ ಹಾಗೂ ಕುಂಞ್ಞಂಡ ಮಹೇಶ್ ಅಪ್ಪಯ್ಯ, ಕಲಾ ಕ್ಷೇತ್ರದಲ್ಲಿ ಮೀನಾಕ್ಷಿ ಹಾಗೂ ಪ್ರೇಮಾಂಜಲಿ ಆಚಾರ್ಯ ಎಸ್., ಶಿಕ್ಷಣ ಕ್ಷೇತ್ರದಲ್ಲಿ ಕೆ.ಆರ್. ವಿಶಾಲಾಕ್ಷಮ್ಮ ಹಾಗೂ ಟಿ.ವಿ. ಭಾಗ್ಯವತಿ ಅಣ್ಣಪ್ಪ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ರಾಜ್ಯ ಸಂಘದ ಮಹಾಪೋಷಕರಾದ ಮಲ್ಲಿಕಾರ್ಜುನ ತೊದಲಬಾಗಿ ಹಾಗೂ ವಿರಾಜಪೇಟೆ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕರು ಮತ್ತು ಸಾಹಿತಿಗಳಾದ ಡಾ. ಬಸವರಾಜು ಕೆ. ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಡಾ. ರಘುನಾಥ್ ಬಿ.ಎನ್., ಎಲ್.ಐ. ಲಕ್ಕಮ್ಮನವರ್, ಪರ್ವೀನ್ ಬಾನು, ಕಮಲಮ್ಮ ಸೇರಿದಂತೆ ಕೊಡಗು ಜಿಲ್ಲಾ ಹಾಗೂ ರಾಜ್ಯ ಸಂಘದ ಪದಾಧಿಕಾರಿಗಳು ಉಪಸ್ಥಿತರಿರುವರು. ಇದೇ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನೂ ಆಯೋಜಿಸಲಾಗಿದೆ ಎಂದು ಗಣೇಶ್ ನಿಲವಾಗಿಲು ತಿಳಿಸಿದ್ದಾರೆ.









