
ಮಡಿಕೇರಿ NEWS DESK ಆ.16 : ವಿಶಿಷ್ಟ ಸಂಸ್ಕೃತಿಯ ಕೊಡಗು, ಸಾಂಸ್ಕೃತಿಕ ನಗರಿ ಮೈಸೂರು ಸೇರಿದಂತೆ ಮಂಡ್ಯ, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳನ್ನು “ಲಾಯಲ್ ಪ್ರವಾಸೋದ್ಯಮ ಕೇಂದ್ರ”ವನ್ನಾಗಿ ಪರಿವರ್ತಿಸಿ, ಪ್ರವಾಸೋದ್ಯಮದ ಬೆಳವಣಿಗೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಮಾಜಿ ಸಚಿವ ಅಡಗೂರು ಹೆಚ್.ವಿಶ್ವನಾಥ್ ಒತ್ತಾಯಿಸಿದ್ದಾರೆ. ಮಡಿಕೇರಿಯ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರವಾಸೋದ್ಯಮದ ಮೂಲಕ 6 ಜಿಲ್ಲೆಗಳಲ್ಲಿ ಆರ್ಥಿಕ ಚಟುವಟಿಕೆಗಳನ್ನು ಚುರುಕುಗೊಳಿಸಬೇಕು ಮತ್ತು ಉದ್ಯೋಗಾವಕಾಶವನ್ನು ಸೃಷ್ಟಿಸಬೇಕು ಎಂದರು. ಮೈಸೂರು ಅರಮನೆ ಮತ್ತು ಅಲ್ಲಿನ ಸಂಸ್ಕೃತಿ ಪರಂಪರೆಗಳು ವಿಶ್ವ ಪ್ರಸಿದ್ಧಿಯನ್ನು ಪಡೆದಿದೆ. ಅಂತಹ ಅರಮನೆ ಪ್ರಸ್ತುತ ಕೇವಲ ದಸರ ಉತ್ಸವಕ್ಕೆ ಮಾತ್ರ ಸೀಮಿತವಾಗಿರುವುದು ಬೇಸರದ ವಿಚಾರ. ಈ ಹಿನ್ನೆಲೆ ಸೂಚಿತ ಎಲ್ಲಾ ಜಿಲ್ಲೆಗಳನ್ನು ಒಳಗೊಂಡ ಲಾಯಲ್ ಪ್ರವಾಸೋದ್ಯಮ ಕೇಂದ್ರದ ಬಗ್ಗೆ 2013ರ ಆಯವ್ಯಯದಲ್ಲೆ ಪ್ರಸ್ತಾಪವಾಗಿತ್ತು. ಆದರೆ ಇದು ಇಲ್ಲಿಯವರೆಗೆ ಜಾರಿಗೆ ಬಂದಿಲ್ಲವೆAದು ಬೇಸರ ವ್ಯಕ್ತಪಡಿಸಿದರು. ಸುಂದರ ಪರಿಸರ, ಸಂಸ್ಕೃತಿಯನ್ನು ಹೊಂದಿರುವ ಕೊಡಗು ಜಿಲ್ಲೆಯನ್ನು ಒಳಗೊಂಡ 6 ಜಿಲ್ಲೆಗಳಲ್ಲಿನ ಪ್ರವಾಸೋದ್ಯಮದ ಬೆಳವಣಿಗೆಯನ್ನು ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಗಂಭೀರವಾಗಿ ಪರಿಗಣಿಸಬೇಕು. ಕೊಡಗಿನ ಶಾಸಕರಾದ ಎ.ಎಸ್.ಪೊನ್ನಣ್ಣ, ಡಾ.ಮಂತರ್ ಗೌಡ, ಸ್ಥಳೀಯ ಚೇಂಬರ್ ಆಫ್ ಕಾಮರ್ಸ್, ಹೊಟೇಲ್ ಮಾಲೀಕರುಗಳು ಹಾಗೂ ವಾಣಿಜ್ಯೋದ್ಯಮಿಗಳು ಗಮನ ಸೆಳೆೆದು ಕಾರ್ಯನಿರ್ವಹಿಸುವ ಅಗತ್ಯವಿದೆ ಎಂದರು. ಕೊಡಗು ಜಿಲ್ಲೆ ಪ್ರವಾಸೋದ್ಯಮ ಕೇಂದ್ರವೇ ಆಗಿದೆ, ಹಲವಾರು ದೇಶಗಳ ಆರ್ಥಿಕತೆ ಪ್ರವಾಸೋದ್ಯಮವನ್ನೇ ಅವಲಂಬಿಸಿದೆ. ಈ ಹಿನ್ನೆಲೆಯಲ್ಲಿ ಇಲ್ಲಿನ ಪ್ರವಾಸೋದ್ಯಮ ಸಾಧ್ಯತೆಗಳಿಗೆ ಹೆಚ್ಚಿನÀ ಒತ್ತು ನೀಡಿ ಅಭಿವೃದ್ಧಿ ಪಡಿಸುವತ್ತ ಸರಕಾರ ಆಸಕ್ತವಾಗಬೇಕೆಂದು ಹೆಚ್.ವಿಶ್ವನಾಥ್ ತಿಳಿಸಿದರು. *ಮನೆ ಕಟ್ಟಿದ ಡಿಕೆಶಿ* ರಾಜ್ಯದ ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸಮಸ್ಯೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವ ಮುಖ್ಯಮಂತ್ರಿಗಳಾಗಿದ್ದಾರೆ. ಹಿಂದೆ ಇದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು “ಕಟ್ಟಿದ ಮನೆಗೆ ಬಂದು ಸೇರಿದವರಾದರೆ, ಡಿ.ಕೆ.ಶಿವಕುಮಾರ್ ಅವರು ಮನೆ ಕಟ್ಟಿ ಬಂದವರೆoದು” ಹೇಳಿದರು. ರಾಜಕೀಯ ಪಕ್ಷವನ್ನು ಕಾರ್ಯಕರ್ತರು ಕಟ್ಟಿ ಬೆಳೆÉಸಿ ಅಧಿಕಾರಕ್ಕೆ ತರುತ್ತಾರೆ, ಅಧಿಕಾರ ಪಡೆದ ಪಕ್ಷದ ಮುಖಂಡರು ಕಾಯಕರ್ತರ ಶ್ರಮವನ್ನು ಮೀರಿ ಪಕ್ಷವನ್ನು ಹಾಳು ಮಾಡುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು. ಇನ್ನು ಮುಂದೆ ನಾನು ಚುನಾವಣಾ ರಾಜಕೀಯಕ್ಕೆ ಬರುವುದಿಲ್ಲ, ಚುನಾವಣೆಯಲ್ಲಿ ಸ್ಪರ್ಧಿಸಬೇಕಾದರೆ ಕನಿಷ್ಠ 25 ರಿಂದ 30 ಕೋಟಿ ರೂ. ಬೇಕಾಗುತ್ತದೆ. ಇಡೀ ನನ್ನ ಆಸ್ತಿ ಮಾರಾಟ ಮಾಡಿದರೂ ಇಷ್ಟು ದೊಡ್ಡ ಮೊತ್ತವನ್ನು ಸಂಗ್ರಹಿಸಲು ಸಾಧ್ಯವಿಲ್ಲ. ಆದ್ದರಿಂದ ಚುನಾವಣಾ ರಾಜಕೀಯದಿಂದ ದೂರು ಉಳಿದುಕೊಂಡೇ ರಾಜಕಾರಣ ಮಾಡುವೆ ಎಂದು ಹೆಚ್.ವಿಶ್ವನಾಥ್ ಸ್ಪಷ್ಟಪಡಿಸಿದರು. ಸುದ್ದಿಗೋಷ್ಠಿಯಲ್ಲಿ ವಿಶ್ವನಾಥ್ ಅವರ ಬೆಂಬಲಿಗ, ಕೊಡಗಿನ ರಾಜಕಾರಣಿ ಕೆ.ಎಂ.ಗಣೇಶ್ ಉಪಸ್ಥಿತರಿದ್ದರು.









