ಮಡಿಕೇರಿ NEWS DESK ಅ.21 : ಐತಿಹಾಸಿಕ ಮಡಿಕೇರಿ ದಸರಾ ಜನೋತ್ಸವದಲ್ಲಿ ದಶಮಂಟಪಗಳ ಸಂಭ್ರಮ ಮುಗಿಲು ಮುಟ್ಟಿದೆ. ಸಂಪ್ರದಾಯದಂತೆ ಪೇಟೆ ಶ್ರೀ ರಾಮ ಮಂದಿರದ ಮಂಟಪ ಮೆರವಣಿಗೆ ಆರಂಭಿಸಿದ ನಂತರ ಉಳಿದ ಮಂಟಪಗಳು ಶೋಭಾಯಾತ್ರೆಗೆ ಸಜ್ಜಾಗಿವೆ. ಪೇಟೆ ಶ್ರೀ ರಾಮ ಮಂದಿರದ ಮಂಟಪದಲ್ಲಿ ಶ್ರೀ ಲಕ್ಷ್ಮೀ ನರಸಿಂಹನ ಮೂರ್ತಿ ಆಕರ್ಷಿಸುತ್ತಿದೆ. ಮಂಟಪದ ಮೆರವಣಿಗೆ ಆರಂಭಿಸಿದ ತಕ್ಷಣ ಮಳೆಯಾಗಿದ್ದು, ಭಕ್ತರು ಹರ್ಷ ವ್ಯಕ್ತಪಡಿಸಿದರು. ಬಹುಮಾನಕ್ಕಾಗಿ ದಶಮಂಟಪಗಳು ತೀವ್ರ ಪೈಪೋಟಿಯನ್ನು ನೀಡುತ್ತಿವೆ. ಡಿಜೆ ಶಬ್ಧಕ್ಕೆ ಜನ ಸಾಗರವೇ ಕುಣಿದು ಕುಪ್ಪಳಿಸುತ್ತಿದೆ. ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.





































