ರಾಜ್ಯ ಮಟ್ಟದ ಟೆಕ್ವಾಂಡೋ : ಕೂರ್ಗ್ ಟೆಕ್ವಾಂಡೋ ತರಬೇತಿ ಕೇಂದ್ರದ ನಾಲ್ವರಿಗೆ ಪದಕ

24/01/2023

ಮಡಿಕೇರಿ ಜ.24 : ಕರ್ನಾಟಕ ಟೆಕ್ವಾಂಡೋ ಸಂಸ್ಥೆಯ ವತಿಯಿಂದ ದೊಡ್ಡಬಳ್ಳಾಪುರದ ಆರ್.ಎಲ್.ಜಾಲಪ್ಪ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಮಟ್ಟದ ಸಬ್ ಜೂನಿಯರ್, ಜೂನಿಯರ್ ಮತ್ತು ಸೀನಿಯರ್ ಪುರುಷ, ಮಹಿಳಾ ವಿಭಾಗದಲ್ಲಿ ಮಡಿಕೇರಿಯ ಕೂರ್ಗ್ ಟೆಕ್ವಾಂಡೋ ತರಬೇತಿ ಕೇಂದ್ರದ ನಾಲ್ವರು ಕ್ರೀಡಾಪಟುಗಳು ಕಂಚಿನ ಪದಕ ಗೆದ್ದಿದ್ದಾರೆ.
ಸಬ್ ಜೂನಿಯರ್ 12 ವರ್ಷದೊಳಗಿನ ವಿಭಾಗದಲ್ಲಿ ಬಿ.ಎಲ್.ಭಾವನಾ ರೈ (ಐಶ್ವರ್ಯ ರೈ), ಬಾರನ ಬಿಂಬಿತ್ ಗೌಡ, ಲೋಹಿತ್ ಆರ್. ಹಾಗೂ ಕೋಚನ ಲಾಸ್ಯ ಚೇತನ್ ಕಂಚಿನ ಪದಕ ಗೆದ್ದುಕೊಂಡರು. ಇವರುಗಳು ಕೂರ್ಗ್ ಟೆಕ್ವಾಂಡೋ ತರಬೇತಿ ಕೇಂದ್ರದ ತರಬೇತುದಾರ ಬಿ.ಜಿ.ಲೋಕೇಶ್ ರೈ ಅವರ ಬಳಿ ತರಬೇತಿ ಪಡೆಯುತ್ತಿದ್ದಾರೆ.
ದೊಡ್ಡಬಳ್ಳಾಪುರದಲ್ಲಿ ನಡೆದ ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಭಾಗಗಳ ಸುಮಾರು 1300 ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದರು.