Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada
Home»ಇತ್ತೀಚಿನ ಸುದ್ದಿಗಳು»ಗೋಣಿಕೊಪ್ಪಲಿನಲ್ಲಿ ಕೇಸರಿ ಹವಾ : ವಿಜಯ ಸಂಕಲ್ಪ ಯಾತ್ರೆಗೆ ಸಾಕ್ಷಿಯಾದ ಸಾವಿರಾರು ಕಾರ್ಯಕರ್ತರು : ಬಿಜೆಪಿ ಜಾತಿವಾದಿ ಪಕ್ಷವಲ್ಲ : ಈಶ್ವರಪ್ಪ ಗುಡುಗು
ಇತ್ತೀಚಿನ ಸುದ್ದಿಗಳು ಕರ್ನಾಟಕ ಕೊಡಗು ಜಿಲ್ಲೆ

ಗೋಣಿಕೊಪ್ಪಲಿನಲ್ಲಿ ಕೇಸರಿ ಹವಾ : ವಿಜಯ ಸಂಕಲ್ಪ ಯಾತ್ರೆಗೆ ಸಾಕ್ಷಿಯಾದ ಸಾವಿರಾರು ಕಾರ್ಯಕರ್ತರು : ಬಿಜೆಪಿ ಜಾತಿವಾದಿ ಪಕ್ಷವಲ್ಲ : ಈಶ್ವರಪ್ಪ ಗುಡುಗು

ಮಾರ್ಚ್ 10, 20232 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement

ಮಡಿಕೇರಿ ಮಾ.10 : ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ರಾಜ್ಯವ್ಯಾಪಿ ಬಿಜೆಪಿ ಹಮ್ಮಿಕೊಂಡಿರುವ ವಿಜಯ ಸಂಕಲ್ಪ ಯಾತ್ರೆ ಇಂದು ಕೊಡಗು ಜಿಲ್ಲೆಯನ್ನು ಪ್ರವೇಶಿಸಿತು. ಕೇಸರಿಮಯವಾದ ಗೋಣಿಕೊಪ್ಪಲಿನಲ್ಲಿ ನಡೆದ ಕಾರ್ಯಕ್ರಮಕ್ಕೆ ಸಾವಿರಾರು ಕಾರ್ಯಕರ್ತರು ಸಾಕ್ಷಿಯಾದರು.
ಜಯಘೋಷಗಳೊಂದಿಗೆ ಮುಖ್ಯ ರಸ್ತೆಯಲ್ಲಿ ಯಾತ್ರೆ ಸಾಗಿತು. ಸಾವಿರಾರು ಕಾರ್ಯಕರ್ತರು ಬಿಜೆಪಿ ಹಾಗೂ ಪ್ರಧಾನಿ ನರೇಂದ್ರಮೋದಿ ಅವರಿಗೆ ಜಯಕಾರ ಹಾಕಿದರು.
ನಂತರ ನಡೆದ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಶಾಸಕ ಹಾಗೂ ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಭಾರತೀಯ ಜನತಾ ಪಾರ್ಟಿ ಜಾತಿವಾದಿ ಪಕ್ಷವಲ್ಲ ರಾಷ್ಟ್ರವಾದಿ ಪಕ್ಷ, ಬಿಜೆಪಿಗೆ ಕೋಮುವಾದಿ ಪಟ್ಟ ಕಟ್ಟಿದವರೇ ಜಾತಿವಾದಿಗಳು ಎಂದು ಗುಡುಗಿದರು.
ಸಿದ್ದರಾಮಯ್ಯ ಅವರು ಕುರುಬರೆಲ್ಲ ನನ್ನ ಹಿಂದೆ ಬನ್ನಿ ಎಂದರೆ, ಡಿ.ಕೆ.ಶಿವಕುಮಾರ್ ಅವರು ಒಕ್ಕಲಿಗರೆಲ್ಲ ನನ್ನ ಹಿಂದೆ ಬನ್ನಿ ಎಂದು ಕರೆ ನೀಡುತ್ತಿದ್ದಾರೆ. ಇದರಲ್ಲೇ ಅರ್ಥವಾಗುತ್ತದೆ ಜಾತಿಯ ವಾದಿಗಳು ಯಾರೆಂದು. ಸಿದ್ದರಾಮಯ್ಯ ಅವರಿಗೆ ಕುರುಬರು, ದಲಿತರು, ಇತರ ಜನಾಂಗಗಳ ಬೆಂಬಲ ಇಲ್ಲ ಎನ್ನುವುದು ಖಾತ್ರಿಯಾಗಿ ಅಲ್ಪಸಂಖ್ಯಾತರು ಹೆಚ್ಚು ಸಂಖ್ಯೆಯಲ್ಲಿರುವ ಕ್ಷೇತ್ರವನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಬಿಜೆಪಿ ಸರ್ಕಾರ ದೇಶವನ್ನು ಭಯೋತ್ಪಾದಕ ಮುಕ್ತ ಮಾಡಬೇಕೆಂದು ಸಂಕಲ್ಪ ತೊಟ್ಟಿದೆ, ಆದರೆ ಕಾಂಗ್ರೆಸ್ಸಿಗರು ದೇಶದ್ರೋಹಿಗಳನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಸಿದ್ದರಾಮಯ್ಯ ಅವರು ಕೊಡಗು ಜಿಲ್ಲೆಗೆ ಬಂದಾಗ ರಾಷ್ಟ್ರೀಯವಾದಿ ಕೊಡಗಿನ ಜನ ಗೋ ಬ್ಯಾಕ್ ಸಿದ್ದರಾಮಯ್ಯ ಎಂದು ಮೊಟ್ಟೆ ಎಸೆದರು. ಮತ್ತೆ ಬರುತ್ತೇನೆ ಎಂದು ತೊಡೆ ತಟ್ಟಿದ ಸಿದ್ದರಾಮಯ್ಯ ಮರಳಿ ಯಾಕೆ ಬರಲಿಲ್ಲ ಎಂದು ಈಶ್ವರಪ್ಪ ಪ್ರಶ್ನಿಸಿದರು.
ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಗೋಹತ್ಯೆ ನಿಷೇಧ ಕಾಯ್ದೆ ಮತ್ತು ಬಲವಂತದ ಮತಾಂತರದ ವಿರುದ್ಧದ ಕಾಯ್ದೆಯನ್ನು ಸಿದ್ದರಾಮಯ್ಯ ಅವರಂತಹ ನೂರು ಜನ ಬಂದರೂ ತೆಗೆದು ಹಾಕಲು ಸಾಧ್ಯವಿಲ್ಲ ಎಂದರು.
ಬಿಜೆಪಿಯಲ್ಲಿ ಅಭ್ಯರ್ಥಿ ಯಾರೇ ಆಗಿರಲಿ ಇಡೀ ವಿಶ್ವವೇ ಮೆಚ್ಚಿದ ನಾಯಕ ಪ್ರಧಾನಿ ನರೇಂದ್ರಮೋದಿ ಹಾಗೂ ತಾವರೆ ಗುರುತು ಮಾತ್ರ ನಮ್ಮ ಕಣ್ಣ ಮುಂದೆ ಬರಬೇಕು ಎಂದು ಈಶ್ವರಪ್ಪ ಹೇಳಿದರು.
ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಮಾತನಾಡಿ 120 ದೇಶಗಳಿಗೆ ಕೋವಿಡ್ ನಿರೋಧಕ ಲಸಿಕೆ ನೀಡಿದ ಖ್ಯಾತಿ ಭಾರತದ್ದು, ವಿಶ್ವದಲ್ಲಿಯೇ ಈಗ ಭಾರತವನ್ನು ಅಗ್ರಗಣ್ಯ ದೇಶವನ್ನಾಗಿ ಗುರುತಿಸಲ್ಪಡುತ್ತಿರುವುದಕ್ಕೆ ಬಿಜೆಪಿ ಮತ್ತು ಪ್ರಧಾನಿ ನರೇಂದ್ರಮೋದಿ ಅವರ ನಾಯಕತ್ವವೇ ಕಾರಣವೆಂದು ಹೇಳಿದರು.
ಕೇಂದ್ರದಲ್ಲಿ ಭ್ರಷ್ಟಾಚಾರ ರಹಿತ ಆಡಳಿತ ನಡೆಯುತ್ತಿದೆ, ಕಳೆದ 9 ವರ್ಷಗಳಲ್ಲಿ ಯಾವುದೇ ಭ್ರಷ್ಟಾಚಾರ ಆರೋಪಗಳು ಬಂದಿಲ್ಲ. ಈ ದೇಶಕ್ಕೆ ಬೇಕಾಗಿರುವುದು ಉತ್ತಮ ಆಡಳಿತ, ಅದನ್ನು ಮೋದಿ ಅವರ ನಾಯಕತ್ವದ ಸರ್ಕಾರ ನೀಡಿದೆ. ಬೆಂಗಳೂರು – ಮೈಸೂರು ದಶಪಥ ಹೆದ್ದಾರಿ ಬಿಜೆಪಿ ಸರ್ಕಾರದ ಕೊಡುಗೆಯಾಗಿದೆ. ಮೈಸೂರು- ಕುಶಾಲನಗರಕ್ಕೆ ಚತುಷ್ಟಥ ರಸ್ತೆಯಾಗಲಿದೆ. ಸಿದ್ದರಾಮಯ್ಯ, ಕುಮಾರಸ್ವಾಮಿ ಅವರೇ ನೀವು ನೀಡಿದ ಯಾವ ಭರವಸೆ ಈಡೇರಿಸಿದ್ದೀರಿ ಹೇಳಿ ಎಂದು ಪ್ರಶ್ನಿಸಿದ ಸದಾನಂದಗೌಡ, ಸಾಧನೆಗಳ ಆಧಾರದಲ್ಲಿ ಈ ಬಾರಿಯ ಚುನಾವಣೆಯನ್ನು ಬಿಜೆಪಿ ಸಮರ್ಥವಾಗಿ ಎದುರಿಸಲಿದೆ ಎಂದರು.
ರಾಜ್ಯದಲ್ಲಿ ಬಿಜೆಪಿ 150 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ, ಕಾಂಗ್ರೆಸ್ ಮತ್ತು ಜೆಡಿಎಸ್ ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಹಾಗೂ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಮಾತನಾಡಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೊಡಗು ಜಿಲ್ಲೆಗೆ ಅತ್ಯಧಿಕ ಅನುದಾನ ಬಂದಿದೆ ಎಂದರು.
ಪ್ರಧಾನಮಂತ್ರಿ ನರೇಂದ್ರಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ರಾಜ್ಯ ಸರ್ಕಾರದ ಕಾರ್ಯ ವೈಖರಿಯನ್ನು ಕೊಂಡಾಡಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಬಿನ್ ದೇವಯ್ಯ, ಕೊಡಗು ಉಸ್ತುವಾರಿ ಪ್ರತಾಪ್ ಸಿಂಹ ನಾಯಕ್, ಎಂ.ಎಲ್.ಸಿ. ಸುಜಾಕುಶಾಲಪ್ಪ, ಪ್ರಮುಖರಾದ ರವಿಕುಶಾಲಪ್ಪ, ರೀನಾ ಪ್ರಕಾಶ್, ನೆಲ್ಲೀರ ಚಲನ್, ಸಿ.ಕೆ.ಬೋಪಣ್ಣ, ಕಿಲನ್ ಗಣಪತಿ, ಬಿ.ಎನ್.ಪ್ರಕಾಶ್, ರಾಜೇಂದ್ರ, ಮನುಮುತ್ತಪ್ಪ, ಸುನೀಲ್ ಸುಬ್ರಹ್ಮಣಿ, ತಿಮ್ಮಪ್ಪ ಶೆಟ್ಟಿ, ಬಿ.ಬಿ.ಭಾರತೀಶ್, ತಳೂರು ಕಿಶೋರ್ ಕುಮಾರ್, ಸತೀಶ್, ದತ್ತಾತ್ರಿ, ಕಿಶೋರ್, ಮಾದಪ್ಪ, ಅರುಣ್ ಕುಮಾರ್, ವಾಟೇರಿರ ಬೋಪಣ್ಣ, ಪ್ರಸನ್ನ ಸೇರಿದಂತೆ ಅಧಿಕ ಸಂಖ್ಯೆಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

Follow us Follow us
Share. WhatsApp Facebook Twitter Email Telegram Copy Link

Related Posts

ಮೂನಾಡ್ ನಲ್ಲಿ ಸಿಎನ್‌ಸಿ ಕೊಡವ ಜನಜಾಗೃತಿ ಮಾನವ ಸರಪಳಿ : 100 ವರ್ಷಗಳಾದರೂ ಕೊಡವ ಲ್ಯಾಂಡ್ ಸಾಧಿಸಲು ಬದ್ಧರಾಗಿದ್ದೇವೆ : ಎನ್.ಯು.ನಾಚಪ್ಪ ಪ್ರತಿಪಾದನೆ

ಅಕ್ಟೋಬರ್ 15, 2026

ಅ.16ರಂದು ಮಕ್ಕಳ ದಸರಾ ಸಂಭ್ರಮ – ಮಕ್ಕಳಿಂದ ವೈವಿಧ್ಯಮಯ ಸ್ಪರ್ಧೆಗಳು

ಅಕ್ಟೋಬರ್ 15, 2026

ಕೊಡ್ಲಿಪೇಟೆಯಲ್ಲಿ ಅ.17ರಂದು ಕಾವೇರಿ ಆರತಿ, ಬಾಗಿನ ಅರ್ಪಣೆ

ಅಕ್ಟೋಬರ್ 15, 2026

ಅ.16ರಂದು ಮಕ್ಕಳ ದಸರಾ ಸಂಭ್ರಮ – ಮಕ್ಕಳಿಂದ ವೈವಿಧ್ಯಮಯ ಸ್ಪರ್ಧೆಗಳು

ಅಕ್ಟೋಬರ್ 15, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ, NEWS DESK ಅ.15: ಮಡಿಕೇರಿ ಜನೋತ್ಸವದ ಪ್ರಯುಕ್ತ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಅಕ್ಟೋಬರ್ 16ರಂದು ನಗರದ ಗಾಂಧಿ…

ಕೊಡ್ಲಿಪೇಟೆಯಲ್ಲಿ ಅ.17ರಂದು ಕಾವೇರಿ ಆರತಿ, ಬಾಗಿನ ಅರ್ಪಣೆ

ಅಕ್ಟೋಬರ್ 15, 2026

ಕುಶಾಲನಗರದಲ್ಲಿ ಅದ್ದೂರಿ ಹನುಮ ಜಯಂತಿ ಆಚರಣೆಗೆ ಪೂರ್ವಸಿದ್ಧತೆ; ಡಿಸೆಂಬರ್ 22ರಂದು ಹನುಮ ಜಯಂತಿ ಆಚರಣೆ; ದಶಮಂಟಪಗಳ ಸಮಿತಿಯಿಂದ ಸಿದ್ಧತೆ

ಅಕ್ಟೋಬರ್ 15, 2026

ನಾಪೋಕ್ಲುವಿನಲ್ಲಿ ಅ. 20ರಂದು 34ನೇ ವರ್ಷದ ಅದ್ಧೂರಿ ಆಯುಧ ಪೂಜೆ; ಅಲಂಕೃತ ವಾಹನಗಳ ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮ; ನಿವೃತ್ತ ವೈದ್ಯ ಡಾ. ಹೆಚ್.ವಿ. ದೇವದಾಸ್ ಅವರಿಗೆ ಸನ್ಮಾನ

ಅಕ್ಟೋಬರ್ 15, 2026

ಮಡಿಕೇರಿ ದಸರಾ ದೀಪಾಲಂಕಾರ : ಅಲಂಕಾರ ಸಮಿತಿಗೆ ಪೂರ್ಣ ಜವಾಬ್ದಾರಿ ನೀಡಿಲ್ಲ : ಮುನೀರ್ ಮಾಚಾರ್ ಸ್ಪಷ್ಟನೆ : ಮುಂದಿನ ದಸರಾ ಟೆಂಡರ್ ಪ್ರಕ್ರಿಯೆಯಲ್ಲಿ ಎಲ್ಲಾ ಸಮಿತಿಗಳ ಅಭಿಪ್ರಾಯ ಪಡೆಯಲು ಒತ್ತಾಯ

ಅಕ್ಟೋಬರ್ 15, 2026

ರಜನಿ ರೈ ಅವರಿಗೆ ಡಾಕ್ಟರೇಟ್ ಪದವಿ

ಅಕ್ಟೋಬರ್ 14, 2026

ಬಾಳೆಲೆಯಲ್ಲಿ ಬಾಂಗ್ಲಾದೇಶದ ನಾಲ್ವರು ಅಕ್ರಮ ವಲಸಿಗರು ಪತ್ತೆ; ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್. ಬಿಂದುಮಣಿ ಮಾಹಿತಿ

ಅಕ್ಟೋಬರ್ 14, 2026

ಮಡಿಕೇರಿಯಲ್ಲಿ ಅ.16 ಮತ್ತು 17ರಂದು ಸೂರ್ಯ ಘರ್ ಯೋಜನೆಯ ವಿಶೇಷ ಅಭಿಯಾನ

ಅಕ್ಟೋಬರ್ 14, 2026

ಬಾಳೆಲೆಯಲ್ಲಿ ನಾಲ್ವರು ಬಾಂಗ್ಲಾದೇಶಿ ವಲಸಿಗರು ಪತ್ತೆ; ಅಕ್ರಮ ವಲಸಿಗರ ವಿರುದ್ಧ ಕಠಿಣ ಕ್ರಮಕ್ಕೆ ಹಿಂದೂ ಜಾಗರಣಾ ವೇದಿಕೆ ಆಗ್ರಹ

ಅಕ್ಟೋಬರ್ 14, 2026

ಮಡಿಕೇರಿ : ಅ.15 ರಂದು ವಿದ್ಯುತ್ ವ್ಯತ್ಯಯ

ಅಕ್ಟೋಬರ್ 14, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.