Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada
Home»ಇತ್ತೀಚಿನ ಸುದ್ದಿಗಳು»ಬಾಳೆಯಡ ಕ್ರಿಕೆಟ್ ಹಬ್ಬಕ್ಕೆ ವರ್ಣರಂಜಿತ ತೆರೆ* 
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಬಾಳೆಯಡ ಕ್ರಿಕೆಟ್ ಹಬ್ಬಕ್ಕೆ ವರ್ಣರಂಜಿತ ತೆರೆ* 

ಮೇ 21, 20232 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link
ನಾಪೋಕ್ಲು ಮೇ 21 :   ಇಂದು ನಾಪೋಕ್ಲಿನಲ್ಲಿ 21ನೇ ಕೌಟುಂಬಿಕ ಕ್ರಿಕೆಟ್ ಹಬ್ಬವು ಮುಕ್ತಾಯವಾಯಿತು. ಈ ವರ್ಣರಂಜಿತ ಕ್ರಿಕೆಟ್ ಫೈನಲ್ ನಲ್ಲಿ ಹಲವು ದಾಖಲೆಗಳು ನಿರ್ಮಾಣವಾದವು. ಹಾಕಿಯ ನಕ್ಷತ್ರಗಳಾದ 1975ನೇ ಹಾಕಿ ವಿಶ್ವಕಪ್ ನ ಚಿನ್ನ ಗೆದ್ದ ಅಸ್ಲಾಂ ಶೇರ್ ಖಾನ್, ಅರ್ಚರಣ್ ಸಿಂಗ್, ವಿ.ಜೆ.ಫಿಲಿಪ್ಸ್, ಗೋವಿಂದ, ಕಾಳಯ್ಯ ಹಾಗೂ ಒಲಂಪಿಯನ್ ಎಂ.ಎಂ.ಸೋಮಯ್ಯ ಅವರ ಸಮ್ಮುಖದಲ್ಲಿ ಇಂದೆಂದೂ ಕಂಡು-ಕೇಳರಿಯದ ಬಹಳ ಉತ್ತಮ ಮಟ್ಟದ ಪಂದ್ಯಾವಳಿಯು ನಡೆಯಿತು. ಬಹಳಷ್ಟು ಕ್ರೀಡಾ ಪ್ರೇಮಿಗಳು ಹಾಕಿ ದಿಗ್ಗಜರನ್ನು ನೋಡಲು ತುದಿಗಾಲಿನಲ್ಲಿ ನಿಂತಿದ್ದರು. ಅವರೊಂದಿಗೆ ಸೆಲ್ಫಿ ಹಾಗೂ ಫೋಟೋ ತೆಗೆಯಲು ಕಾತರರಾಗಿದ್ದರು. ಅದ್ಭುತವಾದ ತಾಂತ್ರಿಕ ಸಮಿತಿ, ಒಳ್ಳೆಯ ವೀಕ್ಷಕ ವಿವರಣೆ ಹಾಗೂ ವೇದಿಕೆ ತುಂಬಿದ ಟ್ರೋಫಿಗಳು ನೋಡುವವರ ಕಣ್ಣು ಕುಕ್ಕುವಂತಿತ್ತು. ಇದೆಲ್ಲವೂ ಬಾಳೆಯಡ ಕುಟುಂಬದಲ್ಲಿ ಇಂದು ನಡೆಯಿತು.     ಯಾವುದಕ್ಕೂ ಕಪ್ಪು ಚುಕ್ಕೆ  ಬಾರದಂತೆ ಸಂಘಟನೆಗಾರರು ಶಿಸ್ತು ಬದ್ಧರಾಗಿದ್ದರು. ಪ್ರತಿಯೊಬ್ಬರಿಗೂ ಕಿರು ಕಾಣಿಕೆಯನ್ನು ಕೊಟ್ಟು ತಮ್ಮ ಗೌರವವನ್ನು ವ್ಯಕ್ತಪಡಿಸಿದರು. ಕ್ರಿಕೆಟ್ ಹಬ್ಬದಲ್ಲಿ ಮುಖ್ಯ ಅತಿಥಿಗಳು ಎಲ್ಲರ ಮನ ಗೆದ್ದರು.ಅವರು  ಮಾತನಾಡುವಾಗ ಭಾವುಕರಾದರು. ಕೊಡಗಿನ ಕ್ರೀಡೆಯ ಬಗ್ಗೆ ಹೇಳುತ್ತಲೇ,  ಕ್ರೀಡಾ ಹಬ್ಬವನ್ನು ಹೇಗೆ ನಡೆಸಬೇಕು, ಎಂಬ ನೀತಿ ಪಾಠವನ್ನು ಮಾಡಿದಂತಿತ್ತು. ಎಲ್ಲರಿಗೂ ಪಂದ್ಯಾವಳಿ ನೋಡಿ ಆನಂದಿಸಲು ಅವಕಾಶ ಸಿಕ್ಕಿತು. ಬಹುಮಾನ ವಿತರಣೆಯ ನಂತರ ಕೊಡವರ ಸಾಂಪ್ರದಾಯಿಕ ವಾಲಗಕ್ಕೆ, ಅತಿಥಿಗಳು ಸೇರಿ ಹೆಜ್ಜೆ ಹಾಕಿ ಸಂತಸ ವ್ಯಕ್ತಪಡಿಸಿದರು. ಕ್ರೀಡೆಗೆ ಅಡ್ಡಿಯಾಗದಂತೆ ಮಳೆರಾಯ ಕೂಡ ದೂರ ಸರಿದನು.
ಬೈತೂರು ದೇವಾಲಯಕ್ಕೆ ಸುಮಾರು ಅಂದಾಜು 50,000 ರೂಪಾಯಿ ದೇಣಿಗೆಯನ್ನು ಸಂಗ್ರಹಿಸಲಾಯಿತು. ಪಾಲಿಬೆಟ್ಟದ ಚೆಸೈರ್ ಹೋಂ ನಲ್ಲಿರುವ ವಿಶೇಷ ಚೇತನ ಬಾಲಕ-ಬಾಲಕಿಯರನ್ನು ಕರೆದು ಮುಖ್ಯ ಅತಿಥಿಗಳ ಮುಂದೆ ನೃತ್ಯ ಪ್ರದರ್ಶನ ಮಾಡಲಾಯಿತು. ಆಗ ವೇದಿಕೆಯಲ್ಲಿದ್ದ ಅತಿಥಿಗಳು ಹಾಗೂ ಕ್ರೀಡಾಭಿಮಾನಿಗಳು ಚಪ್ಪಾಳೆಯ ಮೂಲಕ ಅವರ ಪ್ರೋತ್ಸಾಹಿಸಿದರು. ಇದರಲ್ಲೂ ಕೂಡ ಬಾಳೆಯಡ ಕುಟುಂಬಸ್ಥರು ಮಾನವಿಯತೆ ಮೆರೆದರು. ಪಂದ್ಯಾವಳಿಯಲ್ಲಿ ಪ್ರತಿಭೆ ಇರುವ ಉತ್ತಮ ಆಟಗಾರರನ್ನು ಆರಿಸಿ, ಅಂತಹ ಪ್ರತಿಭಾವಂತ ಆಟಗಾರರಿಗೆ ಟ್ರೋಫಿ ನೀಡಿ ಉತ್ತೇಜನ ನೀಡಲಾಯಿತು.
ಬ್ರಿಗೇಡಿಯರ್ ಅರ್ಚರಣ್ ಸಿಂಗ್ 1975ರ ಚಿನ್ನ ಗೆದ್ದಂತಹ ಆಟಗಾರ ಹಾಗೂ ವಿಶ್ವದಲ್ಲೇ ಏಕೈಕ ವಿಶಿಷ್ಟ ಸೇವಾ ಪದಕ ಗೆದ್ದವರು. ಅವರು ಇಂದು ಮಾತನಾಡುತ್ತಲೇ ಕೊಡಗು ಹಾಗೂ ಪಂಜಾಬ್ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದರು. ಕ್ರೀಡೆ, ಸೈನ್ಯ, ಸಂಸ್ಕೃತಿ ಹಾಗೂ ಎಲ್ಲಾ ಚಟುವಟಿಕೆಗಳು ಒಂದೇ ಎಂದರು. ನಾನು ಇಲ್ಲಿಗೆ ಬಂದದ್ದು ಸಾರ್ಥಕವಾಯಿತು ಎಂದು ನುಡಿದರು.
ಬಾನಿನಲ್ಲಿ ಚಂದ್ರನ ಮೇಲೆ ಕಪ್ಪುಚುಕ್ಕೆ ಇದೆ. ಆದರೆ ಇಂದು ಬಾಳೆಯಡ ಕುಟುಂಬಸ್ಥರು ಆಯೋಜಿಸಿದ ಕ್ರಿಕೆಟ್ ಅಬ್ಬದಲ್ಲಿ ಯಾವ ಕೊರತೆಯೂ ಕಾಣಲಿಲ್ಲ. ಶಿಸ್ತಿಗೆ ಆದ್ಯತೆ ನೀಡಿದರು. ಸ್ವಚ್ಛತೆಯನ್ನು ಕಾಪಾಡಿದರು. ಕೊಡವರ ಸಾಂಪ್ರದಾಯವನ್ನು ಉಳಿಸಿಕೊಂಡರು. ಎಲ್ಲರ ಕೈಯಲ್ಲಿ ಶಹಬ್ಬಾಶ್ ಎನಿಸಿಕೊಂಡರು. ಇದೆ ಬಾಳೆಯಡ ಹಬ್ಬದ ವಿಶೇಷತೆ. (ಕ್ರೀಡಾ ವಿಶ್ಲೇಷಣೆ : ಚೆಪ್ಪುಡೀರ ಕಾರ್ಯಪ್ಪ)     
 
            

Follow us Follow us
Share. WhatsApp Facebook Twitter Email Telegram Copy Link

Related Posts

ಸೋಮವಾರಪೇಟೆಯಲ್ಲಿ ಆರ್‌ಎಸ್‌ಎಸ್ ವಿಜಯದಶಮಿ ಪಥಸಂಚಲನ

ಅಕ್ಟೋಬರ್ 26, 2026

ದೇವರಾಜ ಅರಸು ನಿಗಮದ ಪಟ್ಟಿಯಿಂದ ತಿಯನ್ ಜಾತಿ ಕೈಬಿಟ್ಟಿರುವುದಕ್ಕೆ ಮಡಿಕೇರಿ ತಾಲ್ಲೂಕು ತಿಯನ್ ಸಂಘ ಆಕ್ಷೇಪ : ಪ್ರತಿಭಟನೆಯ ಎಚ್ಚರಿಕೆ

ಅಕ್ಟೋಬರ್ 26, 2026

ಖರ್ಗೆ ಹೇಳಿಕೆಗೆ ಸೋಮವಾರಪೇಟೆ ಬಿಜೆಪಿ ಮಂಡಲ ಖಂಡನೆ

ಅಕ್ಟೋಬರ್ 26, 2026

ದೇವರಾಜ ಅರಸು ನಿಗಮದ ಪಟ್ಟಿಯಿಂದ ತಿಯನ್ ಜಾತಿ ಕೈಬಿಟ್ಟಿರುವುದಕ್ಕೆ ಮಡಿಕೇರಿ ತಾಲ್ಲೂಕು ತಿಯನ್ ಸಂಘ ಆಕ್ಷೇಪ : ಪ್ರತಿಭಟನೆಯ ಎಚ್ಚರಿಕೆ

ಅಕ್ಟೋಬರ್ 26, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ NEWS DESK ಅ.26 : 2026-27ನೇ ಸಾಲಿನಲ್ಲಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಪಟ್ಟಿಯಲ್ಲಿ ತಿಯನ್…

ಖರ್ಗೆ ಹೇಳಿಕೆಗೆ ಸೋಮವಾರಪೇಟೆ ಬಿಜೆಪಿ ಮಂಡಲ ಖಂಡನೆ

ಅಕ್ಟೋಬರ್ 26, 2026

ಅ.27ರಂದು 24ನೇ ಕೊಡಗಿನ ಗೌರಮ್ಮ ದತ್ತಿ ಪ್ರಶಸ್ತಿ ಪ್ರದಾನ; ಡಾ. ಲಲಿತ ಕೆ.ಪಿ. ಅವರ ‘ಕೊಡಗಿನ ಜಾನಪದ ಕಥೆಗಳು’ ಕೃತಿಗೆ ಪ್ರಶಸ್ತಿ

ಅಕ್ಟೋಬರ್ 25, 2026

ವಿರಾಜಪೇಟೆಯಲ್ಲಿ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ; ಸ್ವಾವಲಂಬಿ ಬದುಕಿಗೆ ಶಿಕ್ಷಣ ಮತ್ತು ಆರ್ಥಿಕ ಸ್ವಾತಂತ್ರ್ಯ ಮುಖ್ಯ: ಆನಂದ ಸುವರ್ಣ

ಅಕ್ಟೋಬರ್ 25, 2026

48ನೇ ಗೋಣಿಕೊಪ್ಪ ದಸರಾ ಜನೋತ್ಸವದಲ್ಲಿ ಭರತನಾಟ್ಯ ಮತ್ತು ಸಂಗೀತ ಪ್ರದರ್ಶನ

ಅಕ್ಟೋಬರ್ 25, 2026

ಕಿವುಡ ಕ್ರೀಡಾಪಟುಗಳಿಗೆ ಪ್ರಾಯೋಜಕತ್ವದ ನೆರವಿಗೆ ಕೊಡಗು ಜಿಲ್ಲಾ ಕಿವುಡರ ಸಂಘದ ಮನವಿ; ರಾಜ್ಯಮಟ್ಟದ ಕ್ರಿಕೆಟ್, ವಾಲಿಬಾಲ್ ಪಂದ್ಯಾವಳಿಗಳಲ್ಲಿ ಭಾಗವಹಿಸಲು ಸಜ್ಜು; ದಾನಿಗಳ ಸಹಕಾರಕ್ಕೆ ಅಧ್ಯಕ್ಷ ಸ್ಯಾಮ್ ಜೋಸೆಫ್ ಮನವಿ

ಅಕ್ಟೋಬರ್ 25, 2026

ನ. 2–3ರಂದು ರಾಜ್ಯಮಟ್ಟದ ಪತ್ರಕರ್ತರ ಕ್ರಿಕೆಟ್ ಪಂದ್ಯಾವಳಿ; 23 ಜಿಲ್ಲೆಗಳ ಪತ್ರಕರ್ತರ ತಂಡಗಳು ಭಾಗಿ; ಮಡಿಕೇರಿಯಲ್ಲಿ ಆಯೋಜನೆ

ಅಕ್ಟೋಬರ್ 25, 2026

ಮಾದಕ ದ್ರವ್ಯಗಳಿಂದ ದೂರವಿದ್ದು ವ್ಯಸನಮುಕ್ತ ಭಾರತ ನಿರ್ಮಾಣಕ್ಕೆ ಪಣ ತೊಡಿ: ಎ.ಎಸ್.ಐ. ಸುಮತಿ; ಮಾದಾಪುರದ ಸರ್ಕಾರಿ ಪ್ರೌಢಶಾಲೆಯಲ್ಲಿ ಎನ್ನೆಸ್ಸೆಸ್ ಶಿಬಿರ

ಅಕ್ಟೋಬರ್ 25, 2026

ಕೊಡಗಿನಲ್ಲಿ ಶೀಘ್ರ ಸಚಿವ ಸಂಪುಟ ಸಭೆ ನಡೆಸಲು ತೇಲಪಂಡ ಶಿವಕುಮಾರ್ ನಾಣಯ್ಯ ಒತ್ತಾಯ

ಅಕ್ಟೋಬರ್ 25, 2026

ಮಂಗಳೂರು ವಲಯದ ಅಂಡರ್-15 ಮಹಿಳಾ ಕ್ರಿಕೆಟ್ ತಂಡಕ್ಕೆ ಪ್ರಗತಿ ಶಾಲೆಯ ಮೂವರು ವಿದ್ಯಾರ್ಥಿನಿಯರು ಆಯ್ಕೆ

ಅಕ್ಟೋಬರ್ 24, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.