Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಮೂರ್ನಾಡಿನಲ್ಲಿ ಮಾದಕ ದ್ರವ್ಯ ಸೇವನೆಯ ದುಷ್ಪರಿಣಾಮ ಕುರಿತು ವಿದ್ಯಾರ್ಥಿಗಳಿಗೆ ಅರಿವು*
  • *ಆ.28 ರಂದು ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ*
  • *ಕರ್ನಾಟಕ ಬಾರ್ ಕೌನ್ಸಿಲ್ ನೂತನ ಸದಸ್ಯರಿಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಶಾಸಕ ಪೊನ್ನಣ್ಣ ಭೇಟಿ*
  • *ಕರ್ನಾಟಕ ಬಾರ್ ಕೌನ್ಸಿಲ್ ನೂತನ ಸದಸ್ಯರಿಂದ ಸಿಎಂ, ಶಾಸಕ ಪೊನ್ನಣ್ಣ ಭೇಟಿ*
  • *ದೊಡ್ಡಸ್ಥಿಕೆಯಿಂದ ಪದ್ಧತಿ–ಸಂಸ್ಕೃತಿಯ ಕಡೆಗಣನೆ ಸಲ್ಲದು : ಅಜ್ಜಿನಿಕಂಡ ಸಿ.ಮಹೇಶ್ ನಾಚಯ್ಯ*
  • *ಟೆಂಪೋ ಟ್ರಾವೆಲರ್ ಮೇಲೆ ಮಗುಚಿದ ಲಾರಿ : ನಾಲ್ವರಿಗೆ ಗಾಯ*
  • *ಯಾವುದೇ ಕಾರಣಕ್ಕೂ ಕೊಡಗಿನಲ್ಲಿ ಮೋಡ ಬಿತ್ತನೆ ಮಾಡಲ್ಲ*
  • *ಘಮ ಘಮಿಸಿದ ಆಟಿ ಹಬ್ಬದೂಟದ ಘಮಲು..! ಮಕ್ಕಂದೂರಿನಲ್ಲಿ ಗೌಡ ಮಹಿಳಾ ಒಕ್ಕೂಟದ ಆಟಿ ಜಂಬರ*
  • *ಸುಂಟಿಕೊಪ್ಪದಲ್ಲಿ ಸಂಭ್ರಮದ ಓಣಂ ಆಚರಣೆ*
  • *ಹಾಕತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ರೂ.46.86 ಲಕ್ಷ ನಿವ್ವಳ ಲಾಭ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಅರಣ್ಯಶಾಸ್ತ್ರ ಪದವಿ ಪರಿಗಣಿಸಲು ಒತ್ತಾಯ : ಮಡಿಕೇರಿಯಲ್ಲಿ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ಪ್ರತಿಭಟನೆ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಅರಣ್ಯಶಾಸ್ತ್ರ ಪದವಿ ಪರಿಗಣಿಸಲು ಒತ್ತಾಯ : ಮಡಿಕೇರಿಯಲ್ಲಿ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ಪ್ರತಿಭಟನೆ*

ಫೆಬ್ರವರಿ 16, 20242 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಫೆ.16 NEWS DESK : ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ವಲಯ ಅರಣ್ಯಾಧಿಕಾರಿ ಮತ್ತು ಉಪ ವಲಯ ಅರಣ್ಯಾಧಿಕಾರಿ ಹುದ್ದೆಯ ನೇಮಕಾತಿಯಲ್ಲಿ ಬಿ.ಎಸ್ಸಿ ಅರಣ್ಯ ಶಾಸ್ತ್ರ ಪದವಿಯನ್ನೆ ಕನಿಷ್ಠ ವಿದ್ಯಾರ್ಹತೆಯನ್ನಾಗಿ ಮಾಡುವಂತೆ ಕರ್ನಾಟಕ ಅರಣ್ಯ ಪದವೀಧರರು ಮತ್ತು ವಿದ್ಯಾರ್ಥಿಗಳ ಸಂಘ ಒತ್ತಾಯಿಸಿದೆ.
ಕಳೆದ ಏಳು ದಿನಗಳಿಂದ ತರಗತಿ ಬಹಿಷ್ಕರಿಸಿರುವ ಪೊನ್ನಂಪೇಟೆ ಮಹಾವಿದ್ಯಾಲಯದ ವಿದ್ಯಾರ್ಥಿಗಳು, ನಗರದ ಹಳೆಯ ಖಾಸಗಿ ಬಸ್‍ನಿಲ್ದಾಣದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಮೆರವಣಿಗೆ ಮೂಲಕ ಸಾಗಿ ಬೇಡಿಕೆಗಳ ಈಡೇರಿಗೆ ಆಗ್ರಹಿಸಿದರು.
ನಗರದ ಜನರಲ್ ತಿಮ್ಮಯ್ಯ ವೃತ್ತದ ಬಳಿ ಮಾನವ ಸರಪಳಿ ರಚಿಸಿ, ಅಸಮಾಧಾನ ವ್ಯಕ್ತಪಡಿಸಿದರಲ್ಲದೇ, ಬೀದಿ ನಾಟಕದ ಮೂಲಕ ಅರಣ್ಯ ಶಿಕ್ಷಣದ ಮಹತ್ವ ಸಾರಿದರು.
ಟಿ.ಎಮ್.ವಿಜಯ ಭಾಸ್ಕರ್ ಅವರು ಸಲ್ಲಿಸಿರುವ 6ನೇಯ ಆಡಳಿತ ಸುಧಾರಣೆ ವರದಿಯ ಅಧ್ಯಾಯ 4ರ ಅಧಿಸೂಚನೆ ಸಂಖ್ಯೆ 81ನ್ನು ಕೈಬಿಡುವಂತೆ ಒತ್ತಾಯಿಸಿದರು, ಅಣುಕು ಪ್ರದರ್ಶನದ ಮೂಲಕ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ವೃತ್ತಿಪರ (ಅರಣ್ಯಶಾಸ್ತ್ರ) ಪದವೀಧರರ ಸಾಮಥ್ರ್ಯ ಮತ್ತು ಅಗತ್ಯವನ್ನು ಅರಿತುಕೊಂಡ ಕರ್ನಾಟಕ ಸರ್ಕಾರವು 2003ರಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ವಲಯ ಅರಣ್ಯಾಧಿಕಾರಿ ಹುದ್ದೆಗೆ ಶೇಕಡ 50 ರಷ್ಟು ಮೀಸಲಾತಿ ಒದಗಿಸಿತು ಮತ್ತು ಅದನ್ನು 2012 ರಲ್ಲಿ ವಲಯ ಅರಣ್ಯಾಧಿಕಾರಿ ಹುದ್ದೆಗೆ ಶೇಕಡ 75 ರಷ್ಟು ಹೆಚ್ಚಿಸಲಾಯಿತು. ಕರ್ನಾಟಕ ಅರಣ್ಯ ಇಲಾಖೆಯ ಸೇವೆಗಳ (ನೇಮಕಾತಿ) ತಿದ್ದುಪಡಿ ನಿಯಮಗಳ ಅಡಿಯಲ್ಲಿ, 2018 ರಲ್ಲಿ ಪ್ರಸ್ತಾಪಿಸಲಾದ ಹೊಸ ಕರಡು ನಿಯಮಗಳು, ಬಿ.ಎಸ್ಸಿ ಅರಣ್ಯ ಶಾಸ್ತ್ರ ಪದವೀಧರರಿಗೆ ವಲಯ ಅರಣ್ಯ ಅಧಿಕಾರಿ ಹುದ್ದೆಯ ನೇರ ನೇಮಕಾತಿಯಲ್ಲಿ ಮೊದಲೇ ಶೇಕಡ 75 ರಷ್ಟಿದ್ದ ಮೀಸಲಾತಿಯನ್ನು ಶೇ.50ಕ್ಕೆ ಕಡಿಮೆಗೊಳಿಸಿರುತ್ತದೆ.
ಅರಣ್ಯ ಇಲಾಖೆಯಲ್ಲಿ ವಿವಿಧ ಹುದ್ದೆಗಳಾದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ವಲಯ ಅರಣ್ಯಾಧಿಕಾರಿ ಮತ್ತು ಉಪ ವಲಯ ಅರಣ್ಯಾಧಿಕಾರಿ ಹುದ್ದೆಗಳಿಗೆ ಬಿ.ಎಸ್ಸಿ ಅರಣ್ಯ ಶಾಸ್ತ್ರ ಪದವೀಧರರನ್ನೇ ನೇರ ನೇಮಕಾತಿ ಮಾಡುವುದರ ಮೂಲಕ (ಅರಣ್ಯಶಾಸ್ತ್ರ)ದಲ್ಲಿ ವಿಷೇಶ ಪರಿಣತಿ ಹೊಂದಿರುವ ಪದವೀಧರರ ಜ್ಞಾನ ಮತ್ತು ಅನುಭವವನ್ನು ರಚನಾತ್ಮಕವಾಗಿ ಬಳಸಿಕೊಳ್ಳಬೇಕೆಂದು ವಿದ್ಯಾರ್ಥಿಗಳು ಒತ್ತಾಯಿಸಿದರು.
ಪದವೀಧರರನ್ನ ತಮ್ಮ ತಮ್ಮ ಇಲಾಖೆಗಳಲ್ಲಿನ ಹುದ್ದೆಗಳಗೆ ನೇಮಿಸುತ್ತಿವೆ. ಆದರೆ ಬಿ.ಎಸ್ಸಿ (ಅರಣ್ಯಶಾಸ್ತ್ರ) ಪದವೀಧರರನ್ನು ಅರಣ್ಯ ಇಲಾಖೆಯು ತನ್ನ ಹುದ್ದೆಗಳಿಗೆ ಶೇ.100ರಷ್ಟನ್ನು ಪರಿಗಣಿಸುತ್ತಿಲ್ಲ. ಆಙಖಈಔ ಹುದ್ದೆಗಳಿಗೆ ಹಾಲಿ ಇರುವ ನೇರ ನೇಮಕಾತಿಯನ್ನು ರದ್ದು ಗೊಳಿಸಿದರೆ ಬಿ.ಎಸ್ಸಿ (ಅರಣ್ಯಶಾಸ್ತ್ರ) ಮತ್ತು ಇತರೆ ವಿಜ್ಞಾನ ಪದವೀಧರರಿಗೆ ಅನ್ಯಾಯವಾಗುತ್ತದೆ ಎಂದರು.
ಈ ಎಲ್ಲಾ ಕಾರಣಗಳ ಹಿನ್ನೆಲೆಯಲ್ಲಿ ವಿಜಯ ಭಾಸ್ಕರ್ ಅವರು ಸಲ್ಲಿಸಿದ ವರದಿಯ ಅಧ್ಯಾಯ ನಾಲ್ಕರ ಕ್ರಮ ಸಂಖ್ಯೆ 81 ನ್ನು ಕೈಬಿಡುವಂತೆ ಒತ್ತಾಯಿಸುತ್ತಿರುವುದಾಗಿ ವಿದ್ಯಾರ್ಥಿಗಳು ತಿಳಿಸಿದರು.
ಅರಣ್ಯ ವಿದ್ಯಾಲಯದ ವಿದ್ಯಾರ್ಥಿಗಳಾದ ಸೌಮ್ಯ, ಸುಹಾಸ್, ಕೀರ್ತನಾ, ನವನೀತ್, ಆಕಾಶ್, ಆನಂದ್, ಮನೋಜ್, ಚೇತನ್ ಮತ್ತಿತರ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಮೂರ್ನಾಡಿನಲ್ಲಿ ಮಾದಕ ದ್ರವ್ಯ ಸೇವನೆಯ ದುಷ್ಪರಿಣಾಮ ಕುರಿತು ವಿದ್ಯಾರ್ಥಿಗಳಿಗೆ ಅರಿವು*

ಆಗಷ್ಟ್ 26, 2026

*ಆ.28 ರಂದು ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ*

ಆಗಷ್ಟ್ 26, 2026

*ಕರ್ನಾಟಕ ಬಾರ್ ಕೌನ್ಸಿಲ್ ನೂತನ ಸದಸ್ಯರಿಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಶಾಸಕ ಪೊನ್ನಣ್ಣ ಭೇಟಿ*

ಆಗಷ್ಟ್ 26, 2026

*ಆ.28 ರಂದು ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ*

ಆಗಷ್ಟ್ 26, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ ಆ.26 NEWS DESK : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇವರ ಸಹಯೋಗದೊಂದಿಗೆ ಬ್ರಹ್ಮಶ್ರೀ…

*ಕರ್ನಾಟಕ ಬಾರ್ ಕೌನ್ಸಿಲ್ ನೂತನ ಸದಸ್ಯರಿಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಶಾಸಕ ಪೊನ್ನಣ್ಣ ಭೇಟಿ*

ಆಗಷ್ಟ್ 26, 2026

*ಕರ್ನಾಟಕ ಬಾರ್ ಕೌನ್ಸಿಲ್ ನೂತನ ಸದಸ್ಯರಿಂದ ಸಿಎಂ, ಶಾಸಕ ಪೊನ್ನಣ್ಣ ಭೇಟಿ*

ಆಗಷ್ಟ್ 26, 2026

*ದೊಡ್ಡಸ್ಥಿಕೆಯಿಂದ ಪದ್ಧತಿ–ಸಂಸ್ಕೃತಿಯ ಕಡೆಗಣನೆ ಸಲ್ಲದು : ಅಜ್ಜಿನಿಕಂಡ ಸಿ.ಮಹೇಶ್ ನಾಚಯ್ಯ*

ಆಗಷ್ಟ್ 26, 2026

*ಟೆಂಪೋ ಟ್ರಾವೆಲರ್ ಮೇಲೆ ಮಗುಚಿದ ಲಾರಿ : ನಾಲ್ವರಿಗೆ ಗಾಯ*

ಆಗಷ್ಟ್ 26, 2026

*ಯಾವುದೇ ಕಾರಣಕ್ಕೂ ಕೊಡಗಿನಲ್ಲಿ ಮೋಡ ಬಿತ್ತನೆ ಮಾಡಲ್ಲ*

ಆಗಷ್ಟ್ 26, 2026

*ಘಮ ಘಮಿಸಿದ ಆಟಿ ಹಬ್ಬದೂಟದ ಘಮಲು..! ಮಕ್ಕಂದೂರಿನಲ್ಲಿ ಗೌಡ ಮಹಿಳಾ ಒಕ್ಕೂಟದ ಆಟಿ ಜಂಬರ*

ಆಗಷ್ಟ್ 26, 2026

*ಸುಂಟಿಕೊಪ್ಪದಲ್ಲಿ ಸಂಭ್ರಮದ ಓಣಂ ಆಚರಣೆ*

ಆಗಷ್ಟ್ 26, 2026

*ಹಾಕತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ರೂ.46.86 ಲಕ್ಷ ನಿವ್ವಳ ಲಾಭ*

ಆಗಷ್ಟ್ 26, 2026

*ಕಸ್ತೂರಿ ರಂಗನ್ ವರದಿಯಿಂದ 53 ಗ್ರಾಮಗಳನ್ನು ಕೈಬಿಡಲು ಆಗ್ರಹ : ಸೆ.11ರಂದು ಬೃಹತ್ ಪ್ರತಿಭಟನೆ*

ಆಗಷ್ಟ್ 26, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.