
ಸುಂಟಿಕೊಪ್ಪ ಏ.23 NEWS DESK : ಸುಂಟಿಕೊಪ್ಪ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ಮೈಸೂರು-ಕೊಡಗು ಲೋಕಸಭಾ ಅಭ್ಯರ್ಥಿ ಯದುವೀರ್ ಪರ ಮತಯಾಚನೆ ನಡೆಸಿದರು.
ಬಿಜೆಪಿ ನಗರಾಧ್ಯಕ್ಷ ಧನುಕಾವೇರಪ್ಪ ಅವರ ನೇತೃತ್ವದಲ್ಲಿ ಪಟ್ಟಣದ ಮನೆ, ಅಂಗಡಿಗಳಿಗೆ ತೆರಳಿ ಯದುವೀರ್ ಅವರನ್ನು ಗೆಲ್ಲಿಸಿ ಮತ್ತೊಮ್ಮೆ ನರೇಂದ್ರ ಮೋದಿ ಅವರನ್ನು ಪ್ರಧಾನಿ ಮಾಡುವಂತೆ ಮತದಾರರಲ್ಲಿ ಮನವಿ ಮಾಡಿಕೊಂಡರು.
ಮತಯಾಚನೆ ಮಾಡುವುದಕ್ಕೂ ಮೊದಲು ಪ್ರಧಾನಿ ನರೇಂದ್ರ ಮೋದಿ, ನಾಯಕರುಗಳಾದ ಅಮೀತ್ ಶಾ, ಯಡಿಯೂರಪ್ಪ,ಅಭ್ಯರ್ಥಿ ಯದುವೀರ್, ಸ್ಥಳೀಯ ನಾಯಕರು ಮತ್ತು ಪಕ್ಷದ ಪರ ಘೋಷಣೆ ಕೂಗಿದರು.
ನಂತರ ಕಾಲ್ನನಡಿಗೆ ಮೂಲಕ ಗದ್ದೆಹಳ್ಳದಿಂದ ಪಟ್ಟಣದವರೆಗೆ ನೂರಾರು ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಭಿತ್ತಿ ಪತ್ರ ವಿತರಿಸಿ ಮತಯಾಚನೆ ಮಾಡಿದರು. ಮುಖಂಡರಾದ ಪಿ.ಆರ್.ಸುನಿಲ್ ಕುಮಾರ್, ವಿಘ್ನೇಶ್, ಬಿ.ಕೆ.ಮೋಹನ್, ಈಶ್ವರ, ವಸಂತಿ,ಸಿಸಿ.ಸುನಿಲ್, ಓಡಿಯಪ್ಪನ ಸುದೇಶ್, ಅನಿಲ್, ರಾಜ, ಸಹದೇವನ್, ಬಿ.ಕೆ.ಪ್ರಶಾಂತ್, ಶಾಂತಿ ಸೇರಿದಂತೆ ಕಾರ್ಯಕರ್ತರು ಇದ್ದರು.









