
ಸೋಮವಾರಪೇಟೆ ಏ.30 NEWS DESK : ಪಿಕ್‍ಅಪ್ ವಾಹನ ಹಾಗೂ ಸ್ಕೂಟರ್ ನಡುವೆ ಡಿಕ್ಕಿಯಾದ ಪರಿಣಾಮ, ಸ್ಕೂಟರ್ ನಜ್ಜುಗುಜ್ಜಾಗಿದ್ದು, ಸವಾರ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಸೋಮವಾರಪೇಟೆ ತಾಲ್ಲೂಕಿನ ಅಲೇಕಟ್ಟೆ ರಸ್ತೆಯಲ್ಲಿ ನಡೆದಿದೆ.
ಕಡಬ ಸತ್ತಾರ್ ಎಂಬವರು ಚಾಲಿಸುತ್ತಿದ್ದ ಪಿಕ್‍ಅಪ್ ವಾಹನ ಬಲಭಾಗಕ್ಕೆ ತಿರುವು ತೆಗೆದುಕೊಳ್ಳುತ್ತಿದ್ದ ಸಂದರ್ಭ, ಹಿಂಬದಿಯಿಂದ ಆಗಮಿಸಿದ ಸ್ಕೂಟರ್ ಡಿಕ್ಕಿಯಾಗಿದೆ.
ದ್ವಿಚಕ್ರ ವಾಹನ ಚಾಲಕ ಹಾನಗಲ್ಲು ಬಾಣೆ ಗ್ರಾಮದ ದಿವಾಕರ ಎಂಬುವರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.









