Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಮಹಿಳೋದಯ ಮಹಿಳಾ ಒಕ್ಕೂಟದಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ : ಹೆಣ್ಣು ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ನೀಡಿ : 1ನೇ ಅಪರ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶ ಜಿ.ಸುರೇಂದ್ರ*
  • *ತೊರೆನೂರಿನಲ್ಲಿ ಸಂಜೀವಿನಿ ಸಂತೆ ಮೇಳ : ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಸಂತೆ ಮೇಳ ಸಹಕಾರಿ : ರೂಪ ಮಹೇಶ್*
  • *ಅಂತರಾಷ್ಟ್ರೀಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ : ಐಮುಡಿಯಂಡ ಶೈಲಾ ಕುಶಾಲಪ್ಪಗೆ ಚಿನ್ನ*
  • *ಸಂಸದ ಯದುವೀರ್ ಒಡೆಯರ್ ಜನ್ಮದಿನಾಚರಣೆ : ಕೊಡಗು ಜಿಲ್ಲಾ ಬಿಜೆಪಿಯಿಂದ ವಿಶೇಷ ಪೂಜೆ*
  • *ಸಿದ್ದಗಂಗಾ ಮಠದಲ್ಲಿ ವಿದ್ಯಾರ್ಥಿಗಳ ಸಾಮೂಹಿಕ ಪ್ರಾರ್ಥನೆ : ನೀರನ್ನು ಮಿತವಾಗಿ ಬಳಸಲು ಶ್ರೀ ಸಿದ್ದಲಿಂಗ ಮಹಾ ಸ್ವಾಮೀಜಿ ಸಲಹೆ*
  • *ಶ್ರೀಕೋದಂಡ ರಾಮೋತ್ಸವ ಸಮಿತಿಯಿಂದ ಮಾ.26 ಮತ್ತು 27 ರಂದು 37ನೇ ವರ್ಷದ ಶ್ರೀ ರಾಮೋತ್ಸವ ಹಾಗೂ ದ್ವಿತೀಯ ವರ್ಷದ ಪುನರ್ ಪ್ರತಿಷ್ಠಾಪನಾ ಮಹೋತ್ಸವ*
  • *ಹಾತೂರಿನಲ್ಲಿ ಹೊಲಿಗೆ ತರಬೇತಿ ಕಾರ್ಯಕ್ರಮದ ಸಮಾರೋಪ : ಪ್ರಮಾಣಪತ್ರ ವಿತರಣೆ* 
  • *ಶೈಕ್ಷಣಿಕ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಕ್ರೈಸ್ತ ಮಿಷನರಿಗಳ ಕೊಡುಗೆ ಅಪಾರ : ಅರುಣ್ ಮಾಚಯ್ಯ*
  • *ಪೊನ್ನಂಪೇಟೆ ಮತ್ತು ಶ್ರೀಮಂಗಲ : ಮಾ.26 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ*
  • *ಮಾ.27 ರಂದು ಕೂಡಿಗೆಯಲ್ಲಿ ವೃತ್ತಿ ಶಿಕ್ಷಣ ಪ್ರದರ್ಶನ, ವೃತ್ತಿ ಮಾರ್ಗದರ್ಶನ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಅಳಿಯುವ ಅಂಚಿನೆಡೆಗೆ ಸಾಗುತ್ತಿದೆಯ ಪ್ರತಿಕೋದ್ಯಮ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಅಳಿಯುವ ಅಂಚಿನೆಡೆಗೆ ಸಾಗುತ್ತಿದೆಯ ಪ್ರತಿಕೋದ್ಯಮ*

ಮೇ 6, 20244 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಮೇ 6 NEWS DESK : ಮೊದಲು ಮುದ್ರಣಗೊಂಡು ಮಾರಾಟವಾಗುತ್ತಿತ್ತು. ಈಗ ಮಾರಾಟಗೊಂಡು ಮುದ್ರಣವಾಗುತ್ತದೆ. ಇತೀಚೆಗೆ ವಾಟ್ಸ್ ಆಪ್ ನಲ್ಲಿ ಹರಿದಾಡುತ್ತಿಡ್ಡ ಒಂದು ಸಂದೇಶವನ್ನು ಓದಿದಾಗ ಮನದಲ್ಲಿ ಒಂದು ರೀತಿಯ ಗೊಂದಲ ಮೂಡಿತು. ಇದು ವಾಸ್ತವ ಕೂಡ, ನಗ್ನ ಸತ್ಯ ಕೂಡ. ಸುಮಾರು 3 ರಿಂದ 4 ತಿಂಗಳ ಹಿಂದೆ ಪತ್ರಿಕೆಯಲ್ಲಿ ಓದಿದ ನೆನಪು. ಕನ್ನಡ ದಿನಪತ್ರಿಕೆಯ ಮಹಿಳಾ ಪ್ರಕಾಶಕರೊಬ್ಬರು ಅವರ ಹೆಸರು ಮರೆತು ಹೋಗಿದೆ ಅವರು ಸಮಾರಂಭವೊಂದರಲ್ಲಿ ಬಹಿರಂಗವಾಗಿ ತಮ್ಮ ಅಳಲನ್ನು ತೋಡಿಕೊಂಡಿದ್ದರು. ನ್ಯಾಯಮಾರ್ಗದಲ್ಲಿ ಪತ್ರಿಕೆ ನಡೆಸಲು ಸಾಧ್ಯವಿಲ್ಲವೆಂದು. ಹೌದು ಇದು ವಾಸ್ತವ. ಭಾರತದಲ್ಲಿ ಮೂರು ಅಂಗಗಳು ಶಾಸಕಾಂಗ, ಆಡಳಿತಾಂಗ, ನ್ಯಾಯಾಂಗ. ಅದರೊಂದಿಗೆ ಪತ್ರಿಕಾಂಗ ಸೇರಿಕೊಂಡಿದೆ. ಈ ನಾಲಕ್ಕು ಅಂಗಗಳು ಆಧಾರ ಕಂಬಗಳು ಪ್ರಜಾಪ್ರಭುತ್ವದಲ್ಲಿ. ಅವುಗಳಲ್ಲಿ ನ್ಯಾಯಾಂಗ ಇನ್ನು ಸ್ವಲ್ಪ ಮಟ್ಟಿಗೆ ಗೌರವ ಉಳಿಸಿಕೊಂಡಿತು. ಆದರೆ ಇತೀಚೆಗೆ ಸುಮಾರು 600ಕ್ಕು ಹೆಚ್ಚಿನ ಸುಪ್ರೀಂಕೋರ್ಟ್‍ನ ವಕೀಲರು ನ್ಯಾಯಾಂಗದ ವ್ಯವಸ್ಥೆ ಹದಗೆಡುತ್ತಿರುವ ಬಗ್ಗೆ ಸುಪ್ರೀಂಕೋರ್ಟ್‍ನ ಮುಖ್ಯ ನ್ಯಾಯಾಧೀಶರಿಗೆ ಪತ್ರ ಬರೆದು ಕಳವಳ ವ್ಯಕ್ತಪಡಿಸಿದರು. ಇದು ಕೂಡ ಆತಂಕಕಾರಿ ವಿಷಯ. ಪ್ರಜಾಪ್ರಭುತ್ವ ವ್ಯವಸ್ಥೆ ಆಡಳಿತ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಅದೇ ರೀತಿಯಲ್ಲಿ ವಾಟ್ಸಪ್‍ನಲ್ಲಿ ವಾಜಪೇಯಿ ಮತ್ತು ಅಡ್ವಾನಿ ಅವರ ಮತ್ತು ಭಾರತೀಯ ಜನತಾ ಪಕ್ಷದ ಮಾಧ್ಯಮ ಸಲಹೆಗಾರರಾಗಿದ್ದ ಸಂದೀಪ್ ಕುಲಕರ್ಣಿ ಅವರ ಸಂದರ್ಶನವೊಂದನ್ನು ಕೇಳಿದೆ. ಅವರೇ ಹೇಳುವಂತೆಮಾಧ್ಯಮ ಹಿಂದಿನಂತಿಲ್ಲ. ನೂರಾರು ಕೋಟಿ ಹಣ ಇರುವವರು ಒಂದಷ್ಟು ಬಂಡವಾಳ ಹಾಕಿ ಪತ್ರಿಕೋದ್ಯಮ ಅಥವ ಪ್ರಸಾರ ಮಾಧ್ಯಮ ಆರಂಭಿಸಿ ದಿನ ರಾತ್ರಿ ಹಣ ಇರುವವರನ್ನು, ಆಡಳಿತ ಪಕ್ಷವನ್ನು ಹೊಗಳುವುದು, ಕಷ್ಟಪಟ್ಟು ಸತ್ಯವನ್ನು ಸಮಾಜಕ್ಕೆ ಹೇಳದೇ ಇರುವುದೇ ಇಂದಿನ ಪತ್ರಿಕಾರಂಗ. ಅವರು ಹೇಳುವಂತೆ ಪತ್ರಕರ್ತರು ಸಮಾಜವನ್ನು ಕಾಯುವ Watch dog ಆಗಬೇಕು. ಇಂದು ಆಡಳಿತ ಪಕ್ಷಗಳ ಹಣ ಹಣವಂತರ, ಉದ್ಯಮಿಗಳ, Lap Dog ಆಗಿ ಕಾರ್ಯನಿರ್ವಹಿಸುತ್ತಿರುವುದು ದುರಂತ. ಇದರಿಂದ ಅನೇಕ ಪತ್ರಕರ್ತರು ಸತ್ಯ ಹೇಳಲಾಗದೇ ಮುಖ್ಯವಾಹಿನಿಯಿಂದ ಹೊರ ಬಂದರು. ಇನ್ನು ಕೆಲವರು ಸತ್ಯ ಹೇಳಲು ಹೋಗಿ ಕೆಲಸ ಕಳೆದು ಕೊಂಡರು. ಇಂದು ಅವರೆಲ್ಲ ಸಾಮಾಜಿಕ ಜಾಲತಾಣ ಹಾಗೂ ಯು ಟ್ಯೂಬ್‍ನಲ್ಲಿ ಕೆಲಸ ಮಾಡುತಿದ್ದಾರೆ. ಇಂತಹ ಬೆಳವಣಿಗೆಯಿಂದ ಪ್ರಜಾಪ್ರಭುತ್ವ ಗಂಡಾಂತರದಲ್ಲಿ ಇದೆ. ಪತ್ರಿಕಾರಂಗ ಆತಂಕದಲ್ಲಿ ಇದೆ ಎನ್ನಲಾಗುತಿದೆ.

ಪತ್ರಿಕಾರಂಗವು ಹಾದಿ ತಪ್ಪಲು ಅನೇಕ ಕಾರಣಗಳು. ಅದರಲ್ಲಿ ಮುಖ್ಯವಾದದ್ದು ಓದುಗರ ಸಂಖ್ಯೆ ಗಣನಿಯವಾಗಿ ಇಳಿಕೆಯಾದದ್ದು. ಅದು ಅಲ್ಲದೇ ಪ್ರಕಾಶಕರ ಸಂಖ್ಯೆ ಹೆಚ್ಚಾಗಿ ಅವರುಗಳ ನಡುವೆ ಪೈಪೋಟಿ ಓದುಗರಿಗಿಂತ ಪತ್ರಿಕೆಗಳ ನಡುವೆ ಜಾಸ್ತಿ ಆಯಿತು. ಬೆಲೆಯಲ್ಲಿ ಪೈಪೋಟಿ ಶುರುವಾದ ಒಡನೆ ದರಗಳು ಇಳಿಕೆ ಆಯಿತು. ಅಲ್ಲಿಗೆ ಅನೇಕ ಸವಾಲುಗಳು ಹುಟ್ಟಿಕೊಂಡವು. ಸಮಾಜದಲ್ಲಿ ಪ್ರೆಸ್ ಎಂಬ ಪದವನ್ನು ದುರುಪಯೋಗ ಪಡಿಸಿಕೊಳ್ಳಲು ಸಿಕ್ಕ ಸಿಕ್ಕವವರು ಪತ್ರಿಕೆ ಆರಂಭಿಸಿದರು. ಒಂದು ಕಾಲದಲ್ಲಿ ಭೂಗತ ದೊರೆಗಳು ಪ್ರಕಾಶಕರಾದರು, ವರದಿಗಾರರಾದರು. ಹೀಗೆ ಅನಾರೋಗ್ಯಕರ ಬೆಳವಣಿಗೆ ಪ್ರಾರಂಭವಾಯಿತೊ ಅಲ್ಲಿಗೆ ಪತ್ರಿಕಾರಂಗ ಅಡ್ಡ ದಾರಿ ಹಿಡಿಯಿತು. ಅದರೊಡನೆ ಯಾವಾಗ ದೃಶ್ಯ ಮಾಧ್ಯಮ ಆರಂಭವಾಯಿತೋ ಅಲ್ಲಿಗೆ ಪತ್ರಿಕಾರಂಗ ಸಂಪೂರ್ಣವಾಗಿ ದಾರಿ ತಪ್ಪಿತು. ಎಲ್ಲಾ ರಾಜಕೀಯ ಪಕ್ಷಗಳು ಒಂದೊಂದು ಪತ್ರಿಕೆಯನ್ನು ಪೋಷಿಸಲು ಆರಂಭಿಸಿತು. ಕೆಲವು ಪಕ್ಷಗಳು ತಮ್ಮದೇ ಚಾನಲ್‍ಗಳನ್ನು ಆರಂಭಿಸಿದವು. ಅವುಗಳ ಕೆಲಸ ಆ ಪಕ್ಷದ ಮುಖವಾಣಿ ಆಗಿ ಕೆಲಸ ಮಾಡುವುದು ಅವರ ದ್ಯೇಯವಾಯಿತು. ಹೀಗೆ ಅನಾರೋಗ್ಯಕರ ಬೆಳವಣಿಗೆಯಿಂದ ಬಹುತೇಕ ಮಾಧ್ಯಮಗಳು ಮಾರಾಟಗೊಂಡು ಮುದ್ರಣವಾಗ ತೊಡಗಿಸಿಕೊಂಡರೆ ಮಾಧ್ಯಮಗಳು ಮಾರಾಟಗೊಂಡು ಪ್ರಸಾರವಾಗತೊಡಗಿತು. ಇದರಿಂದ ಅಧಿಕಾರಶಾಹಿ ಹಿಡಿತದಲ್ಲಿ ಮಾಧ್ಯಮ ಸಿಲುಕಿ ನಲುಗಿತು.

ಹಿಂದೆ ಪತ್ರಿಕೆ ಅಂದರೆ ಜನರಿಗೆ ಒಂದು ಕುತೂಹಲ ಇತ್ತು. ಬೆಳಿಗ್ಗೆ ಪೇಪರ್ ಕಾಯುತ್ತಿರುವ ಜನರೇಷ್ಟು. 5 ನಿಮಿಷ ಪೇಪರ್ ಬರುವುದು ತಡವಾದರೆ ಚಡಪಡಿಕೆ. ಒಂದು ದಿನ ಪೇಪರ್ ಬರದೇ ಹೋದರೆ ಆ ದಿನ ಏನು ಕಳೆದು ಕೊಂಡಂತೆ. ಇಂದು ಆ ಜಾಗವನ್ನು ಮೊಬೈಲ್ ಫೋನ್ ಆಕ್ರಮಿಸಿದೆ. ಪತ್ರಿಕೆಯಲ್ಲಿ ಹೆಸರು ಬರುವುದು. ಆದರೆ ಏನೋ ಸಾಧನೆ ಮಾಡಿದ ಹಾಗೆ. ಇನ್ನು ಕೆಟ್ಟ ಕೆಲಸ ಮಾಡಿ ಏನಾದ್ರು ಪತ್ರಿಕೆಯಲ್ಲಿ ಹೆಸರು ಬಂದರೆ ಅವನ ಕಥೆ ಮುಗಿತು. ಸಮಾಜ ಅವನನ್ನು ತಿರಸ್ಕರಿಸಿ ಬಿಡುತಿತ್ತು. ನಾವು ಸಣ್ಣದಿರುವಾಗ ಹಾಕಿ ಆಡುವಾಗ ಪಂದ್ಯಾಟಗಳಲ್ಲಿ ಗೋಲು ಹೊಡೆದ ಮಾರನೇ ದಿನ ಪೇಪರ್‍ಲ್ಲಿ ಹೆಸರು ಬಂದಿದ್ದರೆ ನೊಬೆಲ್ ಪ್ರಶಸ್ತಿ ಬಂದಷ್ಟು ಖುಷಿ. ನಮ್ಮ ಸಾಮಾಜಿಕ ಜೀವನದ ಆರಂಭ ದಿನಗಳಲ್ಲಿ, ಸಭೆ ಸಮಾರಂಭಗಳಲ್ಲಿ, ಹೋರಾಟಗಳಲ್ಲಿ ಪತ್ರಿಕೆಯ ವರದಿಗಾರರ ಮುಂದೆ ಸುಳಿದಾಡುವುದು. ನಮ್ಮನ್ನು ಗುರುತಿಸಿ ಪತ್ರಿಕೆಯಲ್ಲಿ ಫೋಟೊ ಹೆಸರು ಬರಲಿ ಅಂತ. ಇಂದು ಮಾಧ್ಯಮಗಳು ಎಲ್ಲಾ ರಂಗದಂತೆ ಅದು ಕೂಡ ವ್ಯಾಪಾರೀಕರಣವಾಗಿದೆ. ಸುಳ್ಳು ಸುದ್ದಿಗಳು, ಚಾನಲ್‍ಗಳ ರೇಟಿಂಗ್‍ಗಾಗಿ ಸುದ್ದಿಗಳ ವೈಭವಿಕರಣದಿಂದಾಗಿ ಯಾರು ಅವುಗಳನ್ನು ನಂಬದ ಪರಿಸ್ಥಿತಿಗೇ ತಲುಪಿದೆ.
ಇನ್ನು ವರದಿಗಾರರು ತುಂಬಾ ಒತ್ತಡ ಹಾಗೂ ಒಂದು ಪರಿಮಿತಿ ಒಳಗೆ ಕಾರ್ಯನಿರ್ವಹಿಸಬೇಕು. ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ಯಾರಾದ್ರೂ ಸಮಾಜದ ಹುಳುಕನ್ನು ತೋರಿಸಿದರೆ ಅಧಿಕಾರಶಾಹಿ ಅವರನ್ನು ಮುಗಿಸಿಬಿಡುತದೆ. ಇನ್ನು ಅನೇಕ ಪತ್ರಿಕೆಗಳ ದೃಶ್ಯ ಮಾಧ್ಯಮಗಳು ಕೆಲವು ರಾಜಕೀಯ ಪಕ್ಷಗಳ ಮುಖವಾಣಿಯಂತೆ ಕಾರ್ಯನಿರ್ವಹಿಸುತ್ತಿರುವುದು ಬಹಿರಂಗ ಸತ್ಯ. ಅನೇಕ ದೃಶ್ಯ ಮಾಧ್ಯಮಗಳ ಪಾಲುದಾರರು ರಾಜಕೀಯ ಪಕ್ಷಗಳು ಅವರ ಅಡ್ಮಿನ್‍ಗಳು ಆಗಿರುತ್ತಾರೆ. ಇಂತಹ ಮಾಧ್ಯಮಗಳಿಂದ ಸತ್ಯದ ಪರಿಚಯ ಆಗುವುದಿಲ್ಲ. ಒಂದು ಕಾಲದಲ್ಲಿ ಜನ ಸುಧಾ, ಪ್ರಜಾಮತ, ಮಯೂರ, ತುಸರಗಳಿಗೆ ಮಹಿಳೆಯರು, ಇಂಡಿಯಾ ಟುಡೇ, ಕಂಪೇಟೆಟಿವ್ ಸಕ್ಸಸ್ ನಂತಹ ಪತ್ರಿಕೆ ವಿದ್ಯಾರ್ಥಿಗಳಿಗೆ, ಸಾಮಾನ್ಯ ಜ್ಞಾನ ತಿಳಿಯಲು ಮಕ್ಕಳಿಗೇ ಚಂದಮಾಮ, ಬಾಲ ಮಿತ್ರ ವಾರ ಪತ್ರಿಕೆಗಳಿಗೆ ಜಾತಕಪಕ್ಷಿಯಂತೆ ಕಾಯುತ್ತಿದ್ದರೆ, ಪುರುಷರು ಲಂಕೇಶ್‍ರವರ ಲಂಕೇಶ್ ವಾರ ಪತ್ರಿಕೆ, ಪ್ರತಿ ಗುರುವಾರ ರವಿಬೆಳಗೆರೆ ಅವರ ಹಾಯ್ ಬೆಂಗಳೂರು ವಾರ ಪತ್ರಿಕೆಗಳನ್ನು ಜನ ಮುಗ್ಗಿ ಬಿದ್ದು ಓದುತ್ತಾ ಇದ್ದರು. ಕನ್ನಡ ಪ್ರತಿಕಾರಂಗದಲ್ಲಿ ಒಂದು ಹೊಸ ತನವನ್ನು ಈ ಪತ್ರಿಕೆಗಳು ಹೊಸ ಇತಿಹಾಸ ನಿರ್ಮಾಣವಾಯಿತು. ಪತ್ರಿಕೋದ್ಯಮದಲ್ಲಿ ನಂತರದ ದಿನಗಳಲ್ಲಿ ಅಂತದೇ ಅನೇಕ ಪತ್ರಿಕೆಗಳು ಹುಟ್ಟಿಕೊಂಡವು. ಅಲ್ಲಿಗೆ ಮೊದಲ ಎರಡು ವಾರ ಪತ್ರಿಕೆ ನಿಧಾನವಾಗಿ ಮೂಲೆ ಗುಂಪಾಯಿತು. ಕೆಲವು ಪತ್ರಿಕೆಗಳು ಬೆಂಗಳೂರಿನ ಭೂಗತ ಜಗತ್ತಿನೊಡನೆ ಸಂಬಂಧ ಹೊಂದಿದ್ದು ಜಗತ್ ಜಾಹೀರಾತು ಆ ರೀತಿಯ ಪತ್ರಿಕೆಗಳು ಬ್ಲಾಕ್‍ಮೇಲ್ ತಂತ್ರವನ್ನು ಅಳವಡಿಸಿಕೊಂಡಿದೆ ಎಂಬ ಆರೋಪ ಕೇಳಿ ಬರುತಿತ್ತು. ಅಂದು ಪಿ.ಲಂಕೇಶ್ ಹಾಗೂ ರವಿಬೆಳಗೆರೆ ಅವರು ಅನೇಕ ಹಗರಣಗಳನ್ನು ಬಯಲಿಗೆ ಎಳೆದಿದ್ದರು. ಸಾಧಾರಣವಾಗಿ ಬಹುತೇಕ ರಾಜಕಾರಣಿಗಳ ಜನ್ಮ ಜಾಲಾಡಿದ್ದಾರೆ. ಈಗ ಅಂತಹ ಪರಿಸ್ಥಿತಿ ಇಲ್ಲ. ಓರ್ವ ವರದಿಗಾರನಿಗೆ ಧೈರ್ಯ ಬೇಕು. ಅದಕ್ಕಿಂತ ಮುಖ್ಯವಾಗಿ ಸಂಪಾದಕರ ಪ್ರಕಾಶಕರ ನೈತಿಕ ಬೆಂಬಲ ಬೇಕು. ಆದರೆ ಅಂತಹ ಪರಿಸ್ಥಿತಿ ಇಲ್ಲ ಅಥವಾ ಅಂತಹ ಪೂರ್ವಕವಾದ ವಾತಾವರಣವು ಇಲ್ಲ. ಯಾರಾದರೂ ಇಂದು ಅಧಿಕಾರಶಾಹಿಗಳ ವಿರುದ್ಧ ಧ್ವನಿ ಎತ್ತಿದರೆ ವ್ಯವಸ್ಥಿತವಾಗಿ ಅಂತವರನ್ನು ಮುಗಿಸುವ ಕೆಲಸವಾಗುತ್ತೆ. ಅಂತಹ ಅನೇಕ ಉದಾಹರಣೆಗಳನ್ನು ಸಮಾಜದಲ್ಲಿ ನಾವು ಕಾಣುತ್ತೇವೆ.
ಇಂದು ಹಲವಾರು ಪತ್ರಿಕೆಗಳು, ದೃಶ್ಯಮಾಧ್ಯಮಗಳು ಸಮಾಜದಲ್ಲಿ ಕಾರ್ಯ ನಿರ್ವಹಿಸುತ್ತಿರುವುದು ನಮಗೆ ಕಂಡುಬರುತ್ತಿದೆ. ಅದು ಯಾವುದು ಸಮಾಜದ ಮುಖವಾಣಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಅವುಗಳ ಅಧಿಕಾರಶಾಹಿಯ ಹಂಗಿನಡಿಯಲ್ಲಿ ಕೆಲಸ ಮಾಡಬೇಕಾದ ಪರಿಸ್ಥಿತಿ. ಏಕೆಂದರೆ ಯಾವುದೇ ಒಂದು ವ್ಯವಸ್ಥೆ ನಡೆಯಬೇಕಾದರೆ ಬಂಡವಾಳ ಮುಖ್ಯ. ಇಂದು ಪತ್ರಿಕೆ ಉಧ್ಯಮವಾಗಿದೆ. ಬಂಡವಾಳ ಹೂಡುವವರು ಮಾಧ್ಯಮದ ಮೇಲೆ ಹಿಡಿತ ಇಟ್ಟುಕೊಂಡು ತಮಗೆ ಬೇಕಾದ ಹಾಗೇ ಸುದ್ದಿಗಳನ್ನು ಪ್ರಸಾರಮಾಡಿಸುತ್ತಿದ್ದಾರೆ. ಇದು ಸಮಾಜದ ದುರಂತ. ಸಮಾಜದ ಎಲ್ಲಾ ಹೋರಾಟಗಳಲ್ಲಿ ಪತ್ರಿಕಾಂಗದ ಪಾತ್ರ ಬಹಳ ದೊಡ್ಡದು. ಸ್ವನಂತಾರೆ ರೈತರ ಹೋರಾಟ, ಕಾರ್ಮಿಕ ಹೋರಾಟ, ರಾಜಕೀಯ ಹೋರಾಟ ಇಂತಹ ಯಾವುದೇ ಸಾಮಾಜಿಕ ಹೋರಾಟಗಳಲ್ಲಿ ಪತ್ರಕರ್ತರ ಪಾತ್ರ ಬಹು ದೊಡ್ಡದು. ಅನೇಕ ಸುದ್ದಿಗಳು, ಲೇಖನಗಳು ಸಾಮಾಜಿಕ ಕ್ರಾಂತಿ ಉಂಟು ಮಾಡುತ್ತಿತ್ತು. ಅಂದು ಮೊಳೆ ಅಚ್ಚು ಜೋಡಿಸಿ ಮುದ್ರಣ ಮಾಡಬೇಕಿತ್ತು. ಪ್ರಕಾಶಕರೇ ಮುದ್ರಕರಾಗಿ, ಸಂಪಾದಕರಾಗಿ, ವರದಿಗಾರರಾಗಿ ಕೊನೆಗೆ ವಿತರಕರಾಗಿ ಕಾರ್ಯನಿರ್ವಹಿಸಿದ ಅನೇಕ ಉದಾಹರಣೆಗಳಿವೆ. ಅಂತಹ ಕಷ್ಟ ಕಾಲದಲ್ಲೂ ಪತ್ರಿಕೆಗಳು ತಮ್ಮನ್ನು ತಾವು ಮಾರಿಕೊಳ್ಳಲಿಲ್ಲ. ಇಂದು ಸಣ್ಣ ಸಣ್ಣ ಪತ್ರಿಕೆಗಳು ಸಮಾಜದಲ್ಲಿ ಕಾಣೆ ಆಗಿದೆ. ಮುಂದೆ ಪತ್ರಿಕೆಗಳು ಇತಿಹಾಸ ಪುಟಗಳಲ್ಲಿ ಸೇರಿ ಹೋಗದೇ ಇರಲಿ ಎಂಬುದೇ ಈ ಬರವಣಿಗೆ ಆಶಯ. ಏಕೆಂದರೆ ಏನೇ ತಂತ್ರಾಂಶ ಬಂದು ಡಿಜಿಟಲ್ ಪತ್ರಿಕೆ ಬಂದರೂ ಪತ್ರಿಕೆ ಓದಿದವರಿಗೆ ಗೊತ್ತು ಅದರ ಸೊಗಸು. ಪತ್ರಿಕೆ ಉಳಿಸಿದರೆ ನಮ್ಮ ಭಾಷೆ, ಸಂಸ್ಕೃತಿ ನೆಲ ಉಳಿಯುತ್ತದೆ.

ಕಿಶನ್ ಪೂವಯ್ಯ
ವಕೀಲರು ಮತ್ತು ನೋಟರಿ
ಮಡಿಕೇರಿ  

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಮಹಿಳೋದಯ ಮಹಿಳಾ ಒಕ್ಕೂಟದಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ : ಹೆಣ್ಣು ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ನೀಡಿ : 1ನೇ ಅಪರ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶ ಜಿ.ಸುರೇಂದ್ರ*

ಮಾರ್ಚ್ 24, 2026

*ತೊರೆನೂರಿನಲ್ಲಿ ಸಂಜೀವಿನಿ ಸಂತೆ ಮೇಳ : ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಸಂತೆ ಮೇಳ ಸಹಕಾರಿ : ರೂಪ ಮಹೇಶ್*

ಮಾರ್ಚ್ 24, 2026

*ಅಂತರಾಷ್ಟ್ರೀಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ : ಐಮುಡಿಯಂಡ ಶೈಲಾ ಕುಶಾಲಪ್ಪಗೆ ಚಿನ್ನ*

ಮಾರ್ಚ್ 24, 2026

*ತೊರೆನೂರಿನಲ್ಲಿ ಸಂಜೀವಿನಿ ಸಂತೆ ಮೇಳ : ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಸಂತೆ ಮೇಳ ಸಹಕಾರಿ : ರೂಪ ಮಹೇಶ್*

ಮಾರ್ಚ್ 24, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಕುಶಾಲನಗರ ಮಾ.24 NEWS DESK : ತೊರೆನೂರು ಸಂಜೀವಿನಿ ಒಕ್ಕೂಟ ವತಿಯಿಂದ  ತೊರೆನೂರು ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಸಂಜೀವಿನಿ ಸಂತೆ…

*ಅಂತರಾಷ್ಟ್ರೀಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ : ಐಮುಡಿಯಂಡ ಶೈಲಾ ಕುಶಾಲಪ್ಪಗೆ ಚಿನ್ನ*

ಮಾರ್ಚ್ 24, 2026

*ಸಂಸದ ಯದುವೀರ್ ಒಡೆಯರ್ ಜನ್ಮದಿನಾಚರಣೆ : ಕೊಡಗು ಜಿಲ್ಲಾ ಬಿಜೆಪಿಯಿಂದ ವಿಶೇಷ ಪೂಜೆ*

ಮಾರ್ಚ್ 24, 2026

*ಸಿದ್ದಗಂಗಾ ಮಠದಲ್ಲಿ ವಿದ್ಯಾರ್ಥಿಗಳ ಸಾಮೂಹಿಕ ಪ್ರಾರ್ಥನೆ : ನೀರನ್ನು ಮಿತವಾಗಿ ಬಳಸಲು ಶ್ರೀ ಸಿದ್ದಲಿಂಗ ಮಹಾ ಸ್ವಾಮೀಜಿ ಸಲಹೆ*

ಮಾರ್ಚ್ 24, 2026

*ಶ್ರೀಕೋದಂಡ ರಾಮೋತ್ಸವ ಸಮಿತಿಯಿಂದ ಮಾ.26 ಮತ್ತು 27 ರಂದು 37ನೇ ವರ್ಷದ ಶ್ರೀ ರಾಮೋತ್ಸವ ಹಾಗೂ ದ್ವಿತೀಯ ವರ್ಷದ ಪುನರ್ ಪ್ರತಿಷ್ಠಾಪನಾ ಮಹೋತ್ಸವ*

ಮಾರ್ಚ್ 24, 2026

*ಹಾತೂರಿನಲ್ಲಿ ಹೊಲಿಗೆ ತರಬೇತಿ ಕಾರ್ಯಕ್ರಮದ ಸಮಾರೋಪ : ಪ್ರಮಾಣಪತ್ರ ವಿತರಣೆ* 

ಮಾರ್ಚ್ 23, 2026

*ಶೈಕ್ಷಣಿಕ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಕ್ರೈಸ್ತ ಮಿಷನರಿಗಳ ಕೊಡುಗೆ ಅಪಾರ : ಅರುಣ್ ಮಾಚಯ್ಯ*

ಮಾರ್ಚ್ 23, 2026

*ಪೊನ್ನಂಪೇಟೆ ಮತ್ತು ಶ್ರೀಮಂಗಲ : ಮಾ.26 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ*

ಮಾರ್ಚ್ 23, 2026

*ಮಾ.27 ರಂದು ಕೂಡಿಗೆಯಲ್ಲಿ ವೃತ್ತಿ ಶಿಕ್ಷಣ ಪ್ರದರ್ಶನ, ವೃತ್ತಿ ಮಾರ್ಗದರ್ಶನ*

ಮಾರ್ಚ್ 23, 2026

*ಏ.7 ರಿಂದ 30 ರವರೆಗೆ ಬೇಸಿಗೆ ತರಬೇತಿ ಶಿಬಿರ*

ಮಾರ್ಚ್ 23, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.