Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಕೊಡಗಿನಲ್ಲಿ ಮುಂಗಾರು ಮುಂಜಾಗ್ರತೆ : ಪೊಲೀಸ್ ಇಲಾಖೆಯಿಂದ ವಿಶೇಷ ಸಭೆ*
  • *ಭಾಗಮಂಡಲ : ಮೇ 11 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ*
  • *ಮೇ 10 ರಂದು ಮೂರ್ನಾಡು ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ*
  • *ಜಂಬೂರಿನಲ್ಲಿ ವ್ಯಕ್ತಿತ್ವ ವಿಕಸನ ಶಿಬಿರ : ಮಕ್ಕಳ ಮನಸ್ಸಿಗೆ ಮೌಲ್ಯಗಳ ಸ್ಪರ್ಶ ನೀಡಲು ಕರೆ*
  • *ಮುಂದುವರೆದ ವಸತಿ ರಹಿತರ ಅಹೋರಾತ್ರಿ ಧರಣಿ*
  • *ವಾಂಡರ‍್ಸ್ ಶಿಬಿರ ಸಮಾರೋಪ : ಮಕ್ಕಳು ದೇಶ ಭಕ್ತರಾಗಿ ಬಾಳಬೇಕು : ಕ್ಯಾ.ಕಿಮ್ಮುಡಿರ ಶಿವಪ್ರಕಾಶ್*
  • *ವಿರಾಜಪೇಟೆ ಸೆಂಟ್ ಆನ್ಸ್ ಪದವಿ ಕಾಲೇಜಿನಲ್ಲಿ ವಿಶ್ವ ರೆಡ್ ಕ್ರಾಸ್ ದಿನಾಚರಣೆ*
  • *ಹಾರಂಗಿಯಿಂದ 500 ಕ್ಯೂಸೆಕ್ ನೀರು ಹರಿಸಲು ಆದೇಶ*
  • *ಕೊಡವರಿಗೆ ಪ್ರತ್ಯೇಕ ವಿಧಾನಸಭೆ ಮತ್ತು ಲೋಕಸಭಾ ಕ್ಷೇತ್ರಕ್ಕೆ ಆಗ್ರಹ : ಸಿಎನ್‌ಸಿಯಿಂದ 48 ಗಂಟೆಗಳ ಅಹೋರಾತ್ರಿ ಸತ್ಯಾಗ್ರಹ*
  • *ಗೋಣಿಮರೂರು ಗ್ರಾಮದಲ್ಲಿ ಬಂಡಿಯಮ್ಮ ದೇವತಾ ಮೂರ್ತಿ ಪ್ರತಿಷ್ಠಾಪನೆ* 
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಕನ್ನಡ ಸ್ನೇಹ ಸಿರಿ ಬಳಗದಿಂದ ವಿಚಾರಸಂಕಿರಣ : ಸ್ವಾತಂತ್ರ್ಯ ಹೋರಾಟದಲ್ಲಿ ಮಹಿಳೆಯರ ಪಾತ್ರ ಸ್ಮರಣೀಯ : ಡಾ.ಕೂಡಕಂಡಿ ದಯಾನಂದ* 
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಕನ್ನಡ ಸ್ನೇಹ ಸಿರಿ ಬಳಗದಿಂದ ವಿಚಾರಸಂಕಿರಣ : ಸ್ವಾತಂತ್ರ್ಯ ಹೋರಾಟದಲ್ಲಿ ಮಹಿಳೆಯರ ಪಾತ್ರ ಸ್ಮರಣೀಯ : ಡಾ.ಕೂಡಕಂಡಿ ದಯಾನಂದ* 

ಅಕ್ಟೋಬರ್ 30, 20242 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ NEWS DESK ಅ.30 : ಕರ್ನಾಟಕ ಏಕೀಕರಣ ಮತ್ತು ಸ್ವಾತಂತ್ರö್ಯ ಹೋರಾಟದಲ್ಲಿ ಕರ್ನಾಟಕದ ಮಹಿಳೆಯರ ಪಾತ್ರ ಸ್ಮರಣೀಯವಾದುದೆಂದು ವೀರಾಜಪೇಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಕೂಡಕಂಡಿ ದಯಾನಂದ ಹೇಳಿದರು. ಕರ್ನಾಟಕ ಸುವರ್ಣ ಸಂಭ್ರಮ ಅಂಗವಾಗಿ ಕನ್ನಡ ಸಿರಿ ಸ್ನೇಹ ಬಳಗದ ವತಿಯಿಂದ ಮಡಿಕೇರಿಯ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಳೆಜಿನ ಸಹಯೋಗದೊಂದಿಗೆ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಕರ್ನಾಟಕದ ಏಕೀಕರಣ ಮತ್ತು ಸ್ವಾತಂತ್ರ್ಯ ಚಳವಳಿಯಲ್ಲಿ ಕರ್ನಾಟಕದ ಮಹಿಳೆಯರು ಎಂಬ ವಿಷಯದಡಿ ಏರ್ಪಡಿಸಲಾಗಿದ್ದ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಉಪನ್ಯಾಸ ನೀಡಿದರು. ಏಕೀಕರಣ ಹಾಗೂ ಸ್ವಾತಂತ್ರ್ಯ ಹೋರಾಟದಲ್ಲಿ ಎರಡು ಬಗೆಯ ಚಳವಳಿ ನಡೆದಿದೆ. ಒಂದು ರಾಜ್ಯದೊಳಗಡೆ ಆದರೆ ಮತ್ತೊಂದು ರಾಷ್ಟ್ರ ಮಟ್ಟದಲ್ಲಿ ಆಗಿರುವಂತಹ ಚಳವಳಿ. ಎರಡರಲ್ಲೂ ಕರ್ನಾಟಕದ ಮಹಿಳೆಯರ ಪಾತ್ರ ಹಿರಿದಾದುದು. ತಮ್ಮ ಬದುಕು, ಬವಣೆಯನ್ನು ಬದಿಗಿಟ್ಟು ಬ್ರಟಿಷರ ವಿರುದ್ಧ ಹೋರಾಟ ಮಾಡಿ ಜೈಲುವಾಸ ಅನುಭವಿಸಿದವರೂ ಇದ್ದಾರೆ. ಜಯಶ್ರೀ ದೇವಿ ಲಿಗಾಡೆ, ಕಿತ್ತೂರು ಚೆನ್ನಮ್ಮ, ಯಶೋಧರಮ್ಮ ದಾಸಪ್ಪ, ರಾಣಿ ಅಬ್ಬಕ್ಕ, ಬಳ್ಳಾರಿಯ ರುದ್ರಮ್ಮ, ನಾಗಮ್ಮ ಪಾಟೀಲ,ಶಕುಂತಲಾ, ಸೇರಿದಂತೆ ಕೊಡಗಿನ ಗೌರಮ್ಮ ಅವರುಗಳ ಸ್ವಾತಂತ್ರ್ಯ ಹೋರಾಟಗಳ ಬಗ್ಗೆ ಸುಧೀರ್ಘವಾಗಿ ವಿದ್ಯಾರ್ಥಿನಿಯರಿಗೆ ಮಾಹಿತಿ ನೀಡಿದರು. ಮಹಿಳೆಯರ ಹೋರಾಟ- ತ್ಯಾಗದ ಬಗ್ಗೆ ಸವಿವರವಾಗಿ ತೆರೆದಿಟ್ಟರು. ಪ್ರಾಸ್ತಾವಿಕವಾಗಿ ಮಾತನಾಡಿದ ಸ್ನೇಹ ಸಿರಿ ಬಳಗದ ಅಧ್ಯಕ್ಷ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ನಿಕಟಪೂರ್ವ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್; ಇತಿಹಾಸದಲ್ಲಿ ದಾಖಲಾಗಿರುವ ಮಹಿಳೆಯರ ಸಾಧನೆಗಳ ಬಗ್ಗೆ ಯುವ ಪೀಳಿಗೆಗೆ ತಲಪಿಸುವಲ್ಲಿ ವಿಫಲವಾಗಿರುವದರಿಂದ ಹಲವಷ್ಟು ಮಹಿಳೆಯರ ಹೋರಾಟ ಹಾಗೂ ತ್ಯಾಗದ ಬಗ್ಗೆ ಯಾರಿಗೂ ತಿಳಿದಿಲ್ಲ. ಅಂತಹವರನ್ನು ಗುರುತಿಸುವ ಹಾಗೂ ಸ್ಮರಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವದಾಗಿ ಹೇಳಿದರು. ಸುವರ್ಣ ಕರ್ನಾಟಕ ಸಂಭ್ರಮಾಚರಣೆ ಅಂಗವಾಗಿ ಬಳಗದ ಮೂಲಕ ವರ್ಷದಲ್ಲಿ 50 ಕಾರ್ಯಗಳನ್ನು ಹಮ್ಮಿಕೊಳ್ಳುವ ಉದ್ದೇಶ ಹೊಂದಿದ್ದು, ಇದು ಬಳಗದ 39ನೇ ಕಾರ್ಯಕ್ರಮವಾಗಿದೆ.  ನಾಡು, ನುಡಿ, ಸಂಸ್ಕೃತಿಯನ್ನು ಬಲಪಡಿಸುವನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವದಾಗಿ ಹೇಳಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶಕ್ತಿ ದಿನ ಪತ್ರಿಕೆ ಉಪ ಸಂ ಪಾದಕ ಹಾಗೂ ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಕುಡೆಕಲ್ ಸಂತೋಷ್ ಮಾತನಾಡಿ ವಿದ್ಯಾರ್ಥಿನಿಯರಿಗಾಗಿ ಸರಕಾರ ಪ್ರತ್ಯೇಕ ಮಹಿಳಾ ಕಾಲೇಜನ್ನು ಸ್ಥಾಪಿಸಿ ಉತತೇಜನ ನೀಡುತ್ತಿದೆ, ಇದರಿಂದಾಗಿ ವಿದ್ಯಾರ್ಥಿನಿಯರಿಗೆ ಯಾವದೇ ಅಡೆ, ತಡೆ ಇಲ್ಲದೆ ಸ್ವತಂತ್ರವಾಗಿ ವಿದ್ಯಾರ್ಜನೆ ಮಾಡಲು ಸಾಧ್ಯವಾಗುತ್ತದೆ. ವಿದ್ಯಾರ್ಥಿನಿಯರು ಸಾಮಾಜಿಕ ಜಾಲತಾಣಗಳಲ್ಲಿ ಕಾಲ ಕಳೆಯುತ್ತಾ ಆಮಿಷಗಳಿಗೆ ಬಲಿಯಾಗಿ ಭವಿಷ್ಯ ಹಾಳುಮಾಡಿಕೊಳ್ಳದೆ, ಉತ್ತಮ ಭವಿಷ್ಯ ರೂಪಿಸಿಕೊಳ್ಳುವಂತಾಗಬೇಕು. ಇಂತಹ ಕಾರ್ಯಕ್ರಮಗಳಲ್ಲಿ ಸಂಪನ್ಮೂಲ ವ್ಯಕ್ತಿಗಳು ನೀಡುವಂತಹ ಉಪನ್ಯಾಸದ ಬಗ್ಗೆ ಗಮನ ಹರಿಸಿ ಉತ್ತಮವಾದುವುಗಳನ್ನು ಅಭ್ಯಸಿಸಬೇಕೆಂದು ಕಿವಿ ಮಾತು ಹೇಳಿದರು. ಮತತೋರ್ವ ಅತಿಥಿ ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿ ಸಂಚಾಲಕ ತೆನ್ನೀರ ಮೈನಾ ಮಾತನಾಡಿ; ಕೊಡಗಿನ ಇತಿಹಾಸ ಮತ್ತು ಸ್ವಾತಂತ್ರ್ಯ ಹೋರಾಟದ ಬಗ್ಗೆ ಹೇಳಿದರು. ವಿದ್ಯಾರ್ಥಿನಿಯರು ಸಿನಿಮಾ ನಟರ ಅಭಿಮಾನಿಗಳಾಗಿ ಸಿನಿಮಾದಲ್ಲಿನ ಪಾತ್ರಗಳನ್ನು ನೆನಪಿನಲ್ಲಿಟ್ಟುಕೊಳ್ಳುವಂತೆ ನಾಡಿಗಾಗಿ ಹೋರಾಡಿದ ಮೇಧಾವಿಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಇತಿಹಾಸದ ಬಗ್ಗೆ ಯುವ ಪೀಳಿಗೆಗೆ ತಿಳಿ ಹೇಳುವಲ್ಲು ನಾವೂ ಸೇರಿದಂತೆ ನಮ್ಮ ಹಿರಿಯರು ಕೂಡ ಎಡವಿರುವದರಿಂದ ಇಂದು ಇತಿಹಾಸಕಾರರನ್ನು ಮರೆಯವಂತಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಡಾ. ಕೋರನ ಸರಸ್ವತಿ ಪ್ರಕಾಶ್ ಮಾತನಾಡಿ; ಹರಿದು ಹಂಚಿ ಹೋಗಿದ್ದ ಕನ್ನಡ ನಾಡು ಭಾಷಾವಾರು ಪ್ರಾಂತ್ಯಗಳ ವರ್ಗೀಕರಣದಿಂದ ಕರ್ನಾಟಕವಾಯಿತು. ಸುವರ್ಣ ಸಂಭ್ರಮದ ಈ ಹೊತ್ತಿನಲ್ಲಿ ನಮ್ಮೆಲ್ಲರ ಜವಾಬ್ದಾರಿ ಹೆಚ್ಚಿದೆ. ಭಾಷೆಯನ್ನು ಗೌರವಿಸುತ್ತಾ ಕನ್ನಡ ನಾಡಿನ ಏಳಿಗೆಗೆ ನಾವೆಲ್ಲ ಜೊತೆಯಾಗಬೇಕು. ಕನ್ನಡದ ಹೆಣ್ಣು ಮಕ್ಕಳು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿರುವದು ನಮ್ಮ ಹೆಮ್ಮೆ. ಅವರ ಬದುಕು ನಮಗೆ ದಾರಿ ದೀಪವಾಗಲಿ ಎಂದು ಆಶಿಸಿದರು. ಕಾಲೇಜಿನ ಸಹ ಪ್ರಾಧ್ಯಾಪಕ ಎನ್.ಪಿ.ಸತೀಶ್ ಹಿಂದೆ ಭಾರತೀಯ ಸೇನೆಯಲ್ಲಿ ಮಹಿಳೆಯರದ್ದೇ ರೆಜಿಮೆಂಟ್ ಇದ್ದ ಬಗ್ಗೆ ವಿದ್ಯಾರ್ಥಿನಿಯರಿಗೆ ಮಾಹಿತಿ ನೀಡಿದರು. ವಿದ್ಯಾರ್ಥಿನಿಯರಾದ ಗಾಯನ ಮತ್ತು ತಂಡದವರು ಬಾರಿಸು ಕನ್ನಡ ಡಿಂಡಿಮವ ಗೀತೆಯನ್ನು ಹಾಡಿದರೆ, ಪ್ರಿಯಾ ಸ್ವಾಗತಿಸಿದರು.  ರಾಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕಿ ನಿರ್ಮಲ ಪೂವಯ್ಯ ನಿರೂಪಿಸಿದರೆ, ವಿದ್ಯಾಶ್ರೀ ವಂದಿಸಿದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಕೊಡಗಿನಲ್ಲಿ ಮುಂಗಾರು ಮುಂಜಾಗ್ರತೆ : ಪೊಲೀಸ್ ಇಲಾಖೆಯಿಂದ ವಿಶೇಷ ಸಭೆ*

ಮೇ 8, 2026

*ಭಾಗಮಂಡಲ : ಮೇ 11 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ*

ಮೇ 8, 2026

*ಮೇ 10 ರಂದು ಮೂರ್ನಾಡು ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ*

ಮೇ 8, 2026

*ಭಾಗಮಂಡಲ : ಮೇ 11 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ*

ಮೇ 8, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ ಮೇ 8 NEWS DESK : 66/11ಕೆ.ವಿ ವಿದ್ಯುತ್ ಉಪಕೇಂದ್ರದಿಂದ ಹೊರಹೊಮ್ಮುವ ಎಫ್6 ಭಾಗಮಂಡಲ ಫೀಡರ್‍ನಲ್ಲಿ ಮೇ, 11…

*ಮೇ 10 ರಂದು ಮೂರ್ನಾಡು ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ*

ಮೇ 8, 2026

*ಜಂಬೂರಿನಲ್ಲಿ ವ್ಯಕ್ತಿತ್ವ ವಿಕಸನ ಶಿಬಿರ : ಮಕ್ಕಳ ಮನಸ್ಸಿಗೆ ಮೌಲ್ಯಗಳ ಸ್ಪರ್ಶ ನೀಡಲು ಕರೆ*

ಮೇ 8, 2026

*ಮುಂದುವರೆದ ವಸತಿ ರಹಿತರ ಅಹೋರಾತ್ರಿ ಧರಣಿ*

ಮೇ 8, 2026

*ವಾಂಡರ‍್ಸ್ ಶಿಬಿರ ಸಮಾರೋಪ : ಮಕ್ಕಳು ದೇಶ ಭಕ್ತರಾಗಿ ಬಾಳಬೇಕು : ಕ್ಯಾ.ಕಿಮ್ಮುಡಿರ ಶಿವಪ್ರಕಾಶ್*

ಮೇ 8, 2026

*ವಿರಾಜಪೇಟೆ ಸೆಂಟ್ ಆನ್ಸ್ ಪದವಿ ಕಾಲೇಜಿನಲ್ಲಿ ವಿಶ್ವ ರೆಡ್ ಕ್ರಾಸ್ ದಿನಾಚರಣೆ*

ಮೇ 8, 2026

*ಹಾರಂಗಿಯಿಂದ 500 ಕ್ಯೂಸೆಕ್ ನೀರು ಹರಿಸಲು ಆದೇಶ*

ಮೇ 8, 2026

*ಕೊಡವರಿಗೆ ಪ್ರತ್ಯೇಕ ವಿಧಾನಸಭೆ ಮತ್ತು ಲೋಕಸಭಾ ಕ್ಷೇತ್ರಕ್ಕೆ ಆಗ್ರಹ : ಸಿಎನ್‌ಸಿಯಿಂದ 48 ಗಂಟೆಗಳ ಅಹೋರಾತ್ರಿ ಸತ್ಯಾಗ್ರಹ*

ಮೇ 8, 2026

*ಗೋಣಿಮರೂರು ಗ್ರಾಮದಲ್ಲಿ ಬಂಡಿಯಮ್ಮ ದೇವತಾ ಮೂರ್ತಿ ಪ್ರತಿಷ್ಠಾಪನೆ* 

ಮೇ 8, 2026

*ಕೋರಗಲ್ಲು ಬಸವೇಶ್ವರ ಸ್ವಾಮಿ ವಿಗ್ರಹ ಪುನರ್  ಪ್ರತಿಷ್ಠಾಪನೆ* 

ಮೇ 8, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.