ಮಡಿಕೇರಿ NEWS DESK ನ.1 : ಕೊಡಗು ಗೌಡ ನಿವೃತ್ತ ನೌಕರರ ಸಂಘದ ಮಹಾಸಭೆಯು ನ.5 ರಂದು ಸಂಘದ ಅಧ್ಯಕ್ಷ ಕೋರನ ಸಿ.ವಿಶ್ವನಾಥ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಮಡಿಕೇರಿಯ ಕೊಡಗು ಗೌಡ ಸಮಾಜದ ಸಭಾಂಗಣದಲ್ಲಿ ಪೂರ್ವಾಹ್ನ 10 ಗಂಟೆಗೆ ನಡೆಯಲಿರುವ ಸಭೆಗೆ ಮುಖ್ಯ ಅತಿಥಿಗಳಾಗಿ ವಿಶಿಷ್ಟ ಸೇವಾ ಮೆಡಲ್ (Indian Navy) ನಿವೃತ್ತ ಬೆಂಗಳೂರು. ಕಮೋಡೋರ್ ಕೆದಂಬಾಡಿ ಸತೀಶ್ ಅಯ್ಯಪ್ಪ ಪಾಲ್ಗೊಳ್ಳಲಿದ್ದಾರೆ. ಸಭೆಯಲ್ಲಿ ಸಂಘದ ಹಿರಿಯ ಸದಸ್ಯರಾದ ನಿವೃತ್ತ ಮುಖ್ಯೋಪಾಧ್ಯಾಯಿನಿ ಚೆರಿಯಮನೆ ಕಮಲ ಬೋಪಯ್ಯ ಅವರನ್ನು ಸನ್ಮಾನಿಸಲಾಗುವುದು.







