
ಮಡಿಕೇರಿ NEWS DESK ನ.15 : ಮೈಸೂರು-ಕೊಡಗು ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಇಂದು ಮಕ್ಕಂದೂರಿನಲ್ಲಿ ಬಿಜೆಪಿ ಸಂಘಟನಾ ಪರ್ವ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮಡಿಕೇರಿ ಗ್ರಾಮಾಂತರ ಮಂಡಲ ಬಿಜೆಪಿ ವತಿಯಿಂದ ಏರ್ಪಡಿಸಿದ್ದ ಭಾಜಪಾ ಸಂಘಟನಾ ಪರ್ವ ಕಾರ್ಯಕ್ರಮಕ್ಕೆ ಗೋ ಪೂಜೆ ಮಾಡುವ ಮೂಲಕ ಚಾಲನೆ ನೀಡಿದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ಮಕ್ಕಂದೂರು ಬಿಜೆಪಿ ಪ್ರಮುಖರು ಮತ್ತಿತರರು ಹಾಜರಿದ್ದರು.









