Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada
Home»ಇತ್ತೀಚಿನ ಸುದ್ದಿಗಳು»ಶರಣ ಕೃಷಿ ದಂಪತಿಗಳಿಗೆ ಸನ್ಮಾನ : ಬಸವಾದಿ ಶರಣರ ಮೂಲಮಂತ್ರವೇ ಸತ್ಯ ಶುದ್ಧ ಕಾಯಕ : ಹೆಚ್.ವಿ.ಶಿವಪ್ಪ
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಶರಣ ಕೃಷಿ ದಂಪತಿಗಳಿಗೆ ಸನ್ಮಾನ : ಬಸವಾದಿ ಶರಣರ ಮೂಲಮಂತ್ರವೇ ಸತ್ಯ ಶುದ್ಧ ಕಾಯಕ : ಹೆಚ್.ವಿ.ಶಿವಪ್ಪ

ಜನವರಿ 13, 20252 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement

ಕುಶಾಲನಗರ ಜ.13 NEWS DESK  : ಹನ್ನೆರಡನೇ ಶತಮಾನದ ಶರಣರು‌ ಸತ್ಯ ಶುದ್ಧವಾದ ಕಾಯಕಕ್ಕೆ ಹೆಚ್ಚಿನ ಮನ್ನಣೆ ನೀಡಿದ್ದರು. ನುಡಿದಂತೆ ನಡೆದು ಪ್ರಾತಃಸ್ಮರಣೀಯವಾಗುಳಿದರು. ಶರಣರ ಈ ನಡೆ ಮನುಕುಲಕ್ಕೆ ಎಲ್ಲಾ ಕಾಲಕ್ಕೂ ನಿತ್ಯನೂತನ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಕೊಡಗು ಜಿಲ್ಲಾಧ್ಯಕ್ಷ ಹೆಚ್.ವಿ.ಶಿವಪ್ಪ ಹೇಳಿದರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಚಿಕ್ಕಹೊಸೂರಿನ ಕೃಷಿಕರಾದ ಜಗದೀಶ್ ಹಾಗೂ ಶೈಲಜಾ ಶರಣ ದಂಪತಿಗಳನ್ನು ಸನ್ಮಾನಿಸಿ ಮಾತನಾಡಿದ ಅವರು, ಯಾವ ಕಾಯಕವೇ ಆಗಲೀ ಸತ್ಯವಾಗಿರಬೇಕು ಹಾಗೂ ಶುದ್ಧವಾಗಿರಬೇಕು. ಕಾರ್ಮಿಕರ ಅಲಭ್ಯದ ಇಂದಿನ ದಿನಗಳಲ್ಲಿ ಶರಣ ದಂಪತಿಗಳಾದ ಜಗದೀಶ್ ಹಾಗೂ ಶೈಲಾ ದಂಪತಿಗಳ ಕೃಷಿ ಸೇವೆಯನ್ನು ಶಿವಪ್ಪ ಶ್ಲಾಘಿಸಿದರು. ಸತತ ಅಧ್ಯಯನ ಹಾಗೂ ನಿರಂತರ ಕಲಿಕೆಯೊಂದಿಗೆ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ತೋರುವ ಮೂಲಕ ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ನಿಯುಕ್ತಿಗೊಂಡ ಶರಣ ದಂಪತಿಗಳ ಪುತ್ರ ಡಾ.ತೇಜಸ್ವಿ ಕುಮಾರ್ ಅವರನ್ನು ಇದೇ ಸಂದರ್ಭ ಸನ್ಮಾನಿಸಿ ಗೌರವಿಸಲಾಯಿತು. ಬಳಿಕ ಮಾತನಾಡಿದ ಡಾ.ತೇಜಸ್ವಿ ಕುಮಾರ್, ವಿದ್ಯೆ ಯಾರೊಬ್ಬರ ಸ್ವತ್ತಲ್ಲ. ಏಕಾಗ್ರತೆ, ನಿರಂತರ ಅಧ್ಯಯನದ ಮೂಲಕ ಡಾಕ್ಟರೇಟ್ ಗಳಿಸಿ ಅತ್ಯುತ್ತಮ ದರ್ಜೆಯಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿಗಳನ್ನು ಗಳಿಸಿದ್ದರ ಫಲವಾಗಿ ಸರ್ಕಾರ ಪರಿಗಣಿಸಿ ಸಹಾಯಕ ಪ್ರಾಧ್ಯಾಪಕರಾಗಿ ನೇಮಿಸಿತು. ಇಂದಿನ ವಿದ್ಯಾರ್ಥಿಗಳು ಮೊಬೈಲ್ ದಾಸರಾಗದೇ ಒಳಿತಿಗಷ್ಟೇ ಬಳಸಿ ಜ್ಞಾನವಂತರಾಗಬೇಕು. ಹೆತ್ತವರ ಸಾಹಸ, ಶ್ರಮ ಹಾಗೂ ತ್ಯಾಗವನ್ನು ಮನಗಂಡು ಪ್ರಾಮಾಣಿಕವಾಗಿ ತೊಡಗಿಸಿಕೊಂಡಲ್ಲಿ ಯಾವ ಸಾಧನೆಯೂ ದೊಡ್ಡದಲ್ಲ. ವಿದ್ಯಾರ್ಥಿ ಹಂತದಿಂದಲೇ ಸನ್ನಡತೆ, ಸಂಸ್ಕಾರ, ಸದಾಚಾರಗಳನ್ನು ಅಳವಡಿಸಿಕೊಳ್ಳಬೇಕೆಂದು ಡಾ.ತೇಜಸ್ವಿ ಕುಮಾರ್ ಕರೆಕೊಟ್ಟರು. ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ನಟರಾಜು, ಕೊಡಗು ಜಿಲ್ಲಾ ವೀರಶೈವ ಮಹಿಳಾ ಘಟಕದ ಅಧ್ಯಕ್ಷೆ ದೀಪಾಕರುಣ್, ಕುಶಾಲನಗರ ತಾಲ್ಲೂಕು ಕದಳಿ ವೇದಿಕೆ ಅಧ್ಯಕ್ಷೆ ಹೇಮಲತಾ, ಕೊಡಗು ಜಿಲ್ಲಾ ವೀರಶೈವ ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ನಂದೀಶ್, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಗಣೇಶ್, ಬೆಟ್ಟದಪುರ ಹೋಬಳಿ ಶಸಾಪ ಅಧ್ಯಕ್ಷ ಕೂರ್ಗಲ್ಲು ಶಿವಕುಮಾರಸ್ವಾಮಿ, ಚನ್ನಪಟ್ಟಣನಗರಸಭೆ ಸಹಾಯಕ ಅಭಿಯಂತರ ಕಾರ್ತಿಕ್, ಪ್ರಗತಿಪರ ಕೃಷಿಕ ಸುರಗಳ್ಳಿ ವಿದ್ಯಾಶಂಕರ್, ಮಂಜುನಾಥ್, ಬೆಟ್ಟದಪುರ ರುದ್ರೇಶ್, ಕೊಪ್ಪಾ ಗ್ರಾಪಂ ಸದಸ್ಯ ಸಿ.ಎಸ್. ರೇಣುಕಾ, ಶಿಕ್ಷಕ ಶಿವಲಿಂಗ, ವಿರೂಪಾಕ್ಷ, ಮಹದೇವಪ್ಪ ಹಾಗೂ ಅಜಿತ್ ಇದ್ದರು.

Follow us Follow us
Share. WhatsApp Facebook Twitter Email Telegram Copy Link

Related Posts

ಅ.27ರಂದು 24ನೇ ಕೊಡಗಿನ ಗೌರಮ್ಮ ದತ್ತಿ ಪ್ರಶಸ್ತಿ ಪ್ರದಾನ; ಡಾ. ಲಲಿತ ಕೆ.ಪಿ. ಅವರ ‘ಕೊಡಗಿನ ಜಾನಪದ ಕಥೆಗಳು’ ಕೃತಿಗೆ ಪ್ರಶಸ್ತಿ

ಅಕ್ಟೋಬರ್ 25, 2026

ವಿರಾಜಪೇಟೆಯಲ್ಲಿ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ; ಸ್ವಾವಲಂಬಿ ಬದುಕಿಗೆ ಶಿಕ್ಷಣ ಮತ್ತು ಆರ್ಥಿಕ ಸ್ವಾತಂತ್ರ್ಯ ಮುಖ್ಯ: ಆನಂದ ಸುವರ್ಣ

ಅಕ್ಟೋಬರ್ 25, 2026

48ನೇ ಗೋಣಿಕೊಪ್ಪ ದಸರಾ ಜನೋತ್ಸವದಲ್ಲಿ ಭರತನಾಟ್ಯ ಮತ್ತು ಸಂಗೀತ ಪ್ರದರ್ಶನ

ಅಕ್ಟೋಬರ್ 25, 2026

ವಿರಾಜಪೇಟೆಯಲ್ಲಿ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ; ಸ್ವಾವಲಂಬಿ ಬದುಕಿಗೆ ಶಿಕ್ಷಣ ಮತ್ತು ಆರ್ಥಿಕ ಸ್ವಾತಂತ್ರ್ಯ ಮುಖ್ಯ: ಆನಂದ ಸುವರ್ಣ

ಅಕ್ಟೋಬರ್ 25, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ವಿರಾಜಪೇಟೆ, NEWS DESK ಅ.25: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ವತಿಯಿಂದ ಜ್ಞಾನವಿಕಾಸ ಕಾರ್ಯಕ್ರಮದಡಿ ವಿರಾಜಪೇಟೆಯ…

48ನೇ ಗೋಣಿಕೊಪ್ಪ ದಸರಾ ಜನೋತ್ಸವದಲ್ಲಿ ಭರತನಾಟ್ಯ ಮತ್ತು ಸಂಗೀತ ಪ್ರದರ್ಶನ

ಅಕ್ಟೋಬರ್ 25, 2026

ಕಿವುಡ ಕ್ರೀಡಾಪಟುಗಳಿಗೆ ಪ್ರಾಯೋಜಕತ್ವದ ನೆರವಿಗೆ ಕೊಡಗು ಜಿಲ್ಲಾ ಕಿವುಡರ ಸಂಘದ ಮನವಿ; ರಾಜ್ಯಮಟ್ಟದ ಕ್ರಿಕೆಟ್, ವಾಲಿಬಾಲ್ ಪಂದ್ಯಾವಳಿಗಳಲ್ಲಿ ಭಾಗವಹಿಸಲು ಸಜ್ಜು; ದಾನಿಗಳ ಸಹಕಾರಕ್ಕೆ ಅಧ್ಯಕ್ಷ ಸ್ಯಾಮ್ ಜೋಸೆಫ್ ಮನವಿ

ಅಕ್ಟೋಬರ್ 25, 2026

ನ. 2–3ರಂದು ರಾಜ್ಯಮಟ್ಟದ ಪತ್ರಕರ್ತರ ಕ್ರಿಕೆಟ್ ಪಂದ್ಯಾವಳಿ; 23 ಜಿಲ್ಲೆಗಳ ಪತ್ರಕರ್ತರ ತಂಡಗಳು ಭಾಗಿ; ಮಡಿಕೇರಿಯಲ್ಲಿ ಆಯೋಜನೆ

ಅಕ್ಟೋಬರ್ 25, 2026

ಮಾದಕ ದ್ರವ್ಯಗಳಿಂದ ದೂರವಿದ್ದು ವ್ಯಸನಮುಕ್ತ ಭಾರತ ನಿರ್ಮಾಣಕ್ಕೆ ಪಣ ತೊಡಿ: ಎ.ಎಸ್.ಐ. ಸುಮತಿ; ಮಾದಾಪುರದ ಸರ್ಕಾರಿ ಪ್ರೌಢಶಾಲೆಯಲ್ಲಿ ಎನ್ನೆಸ್ಸೆಸ್ ಶಿಬಿರ

ಅಕ್ಟೋಬರ್ 25, 2026

ಕೊಡಗಿನಲ್ಲಿ ಶೀಘ್ರ ಸಚಿವ ಸಂಪುಟ ಸಭೆ ನಡೆಸಲು ತೇಲಪಂಡ ಶಿವಕುಮಾರ್ ನಾಣಯ್ಯ ಒತ್ತಾಯ

ಅಕ್ಟೋಬರ್ 25, 2026

ಮಂಗಳೂರು ವಲಯದ ಅಂಡರ್-15 ಮಹಿಳಾ ಕ್ರಿಕೆಟ್ ತಂಡಕ್ಕೆ ಪ್ರಗತಿ ಶಾಲೆಯ ಮೂವರು ವಿದ್ಯಾರ್ಥಿನಿಯರು ಆಯ್ಕೆ

ಅಕ್ಟೋಬರ್ 24, 2026

ಕುಶಾಲನಗರ : ಮಳೆಯಿಂದ ಮನೆಗಳಿಗೆ ಹಾನಿ

ಅಕ್ಟೋಬರ್ 24, 2026

ಮಳೆಯಿಂದ ಕೊಡಗಿನ ವಿವಿಧೆಡೆ ಹಾನಿ : ಕುಸಿದು ಬಿದ್ದ ಮನೆಗಳ ಗೋಡೆ, ಮೇಲ್ಛಾವಣಿ, ಕೊಟ್ಟಿಗೆ

ಅಕ್ಟೋಬರ್ 24, 2026

ಮಡಿಕೇರಿಯಲ್ಲಿ ಆರ್‌ಎಸ್‌ಎಸ್ ವಿಜಯದಶಮಿ ಪಥಸಂಚಲನ

ಅಕ್ಟೋಬರ್ 24, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.