
ಸೋಮವಾರಪೇಟೆ NEWS DESK ಜ.19 : ಚಲಿಸುತಿದ್ದ ಬೈಕ್ ಮೇಲೆ ಒಣಗಿದ ಚಿಕ್ಕ ಮರ ಬಿದ್ದು ಸವಾರ ಗಾಯಗೊಂಡಿರುವ ಘಟನೆ ತೋಳುರುಶೆಟ್ಟಳ್ಳಿಯಲ್ಲಿ ನಡೆದಿದೆ. ಸಮೀಪದ ಹರಪಳ್ಳಿ ಗ್ರಾಮದ ಎಚ್.ಜೆ. ಸಂಕೀತ್ ಎಂದಿನಂತೆ ಸೋಮವಾರಪೇಟೆಯ ತಾಲೂಕು ಕಚೇರಿಯಲ್ಲಿ ಕೆಲಸಕ್ಕೆಂದು ತೆರಳುವ ಸಂದರ್ಭ ರಸ್ತೆಯ ಪಕ್ಕದ ಒಣಗಿದ ಮರ ಅವರ ಮೇಲೆ ಬಿದ್ದಿದೆ. ತಲೆ ಭಾಗಕ್ಕೆ ಗಾಯವಾಗಿದ್ದು, ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

















