Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada
Home»ಇತ್ತೀಚಿನ ಸುದ್ದಿಗಳು»ದ್ವಿತೀಯ ಪಿಯುಸಿ ಫಲಿತಾಂಶ : ಸುಂಟಿಕೊಪ್ಪ ವಿದ್ಯಾರ್ಥಿಗಳ ಸಾಧನೆ
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ದ್ವಿತೀಯ ಪಿಯುಸಿ ಫಲಿತಾಂಶ : ಸುಂಟಿಕೊಪ್ಪ ವಿದ್ಯಾರ್ಥಿಗಳ ಸಾಧನೆ

ಏಪ್ರಿಲ್ 9, 20252 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement

ಸುಂಟಿಕೊಪ್ಪ ಏ.8 NEWS DESK : ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಸಂತ ಮೇರಿ ಆಂಗ್ಲ ಮಾದ್ಯಮ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಡಿಂಪಲ್ ತಮ್ಮಯ್ಯ ವಾಣಿಜ್ಯ ವಿಭಾಗದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ಸುಂಟಿಕೊಪ್ಪಕ್ಕೆ ಕೀರ್ತೀ ತಂದಿದ್ದಾರೆ. ಕಳೆದ ಬಾರಿಯಂತೆ ಈ ಬಾರಿಯು ಸುಂಟಿಕೊಪ್ಪ ವ್ಯಾಪ್ತಿಯಲ್ಲಿನ ಸರಕಾರಿ ಮತ್ತು ಖಾಸಗಿ ಪದವಿ ಪೂರ್ವ ಕಾಲೇಜುಗಳು ಉತ್ತಮ ಸಾಧನೆ ಮಾಡಿರುವುದು ಪೋಷಕರಲ್ಲಿ ಮತ್ತು ಕಾಲೇಜಿನ ಉಪನ್ಯಾಸಕರಲ್ಲಿ ಹರ್ಷ ಉಂಟು ಮಾಡಿದೆ. ಸುಂಟಿಕೊಪ್ಪ ಸಂತ ಮೇರಿ ಆಂಗ್ಲ ಸಂಯುಕ್ತ ಪದವಿ ಪೂರ್ವ ಕಾಲೇಜಿಗೆ ಶೇ.95.74 ಫಲಿತಾಂಶ ಪಡೆದುಕೊಂಡಿದೆ. ಪರೀಕ್ಷೆಗೆ ಹಾಜರಾದ 47 ವಿದ್ಯಾರ್ಥಿಗಳ ಪೈಕಿ 7 ಮಂದಿ ಉನ್ನತ ಶ್ರೇಣಿ, 29 ಮಂದಿಗೆ ಪ್ರಥಮ ಶ್ರೇಣಿ, 6 ದ್ವಿತೀಯ ಶ್ರೇಣಿ ಹಾಗೂ 3 ಮಂದಿ ಸಾಮಾನ್ಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಆ ಪೈಕಿ ಡಿಂಪಲ್ ತಮ್ಮಯ್ಯ ಸಿ.ಎನ್.591 ಅಂಕಗಳನ್ನು ಗಳಿಸಿ ಶೇ.98.5 ಸಾಧನೆ ಮಾಡಿದ್ದಾರೆ. ಡಿ.ಡಿ.ಸೃಜನ 587 ಅಂಕಗಳನ್ನು ಪಡೆದಿದ್ದು ಶೇ.97.83 ಸಾಧನೆ ತೋರಿದ್ದಾರೆ. ಸಂಸ್ಥೆಯ ವ್ಯವಸ್ಥಾಪಕರಾದ ರೆ.ಫಾ.ವಿಜಯ್‍ಕುಮಾರ್ ಮತ್ತು ಕಾಲೇಜು ಪ್ರಾಂಶುಪಾಲರಾದ ಸೆಲ್ವರಾಜ್ ಮಕ್ಕಳ ಸಾಧನೆಯನ್ನು ಪ್ರಶಂಸಿದ್ದಾರೆ. ಸುಂಟಿಕೊಪ್ಪ ಸರಕಾರಿ ಪದವಿಪೂರ್ವ ಕಾಲೇಜಿನ 48 ವಿದ್ಯಾರ್ಥಿಗಳಲ್ಲಿ ಕಲಾ ವಿಭಾಗದಲ್ಲಿ 87.5 ಸಾಧನೆ ವಾಣಿಜ್ಯ ವಿಭಾಗದಲ್ಲಿ 81.48% ಹಾಗೂ ವಿಜ್ಞಾನ ವಿಭಾಗದಲ್ಲಿ 75 ಸಾಧನೆ ಮಾಡಿದ್ದಾರೆ. ಪ್ರಥಮ ದರ್ಜೆಯಲ್ಲಿ 32 ದ್ವಿತೀಯ ದರ್ಜೆಯಲ್ಲಿ 8 ಮತ್ತು ಸಾಮಾನ್ಯ ಶ್ರೇಣಿಯಲ್ಲಿ 6 ಮಂದಿ ಉತ್ತೀರ್ಣರಾಗಿದ್ದು, ಕಾಲೇಜಿನ ವಿದ್ಯಾರ್ಥಿನಿ ಪಿ.ಎನ್.ನಾಜಿಯ ಕಲಾವಿಭಾಗದಲ್ಲಿ 527 ಅಂಕಗಳನ್ನು ಗಳಿಸಿ ಕಾಲೇಜಿಗೆ ಮೊದಲಿಗರಾಗಿ ಹೊರಹೊಮ್ಮಿದ್ದರೆ, ಟಿ.ಆರ್. ದನ್ಯಶ್ರೀ ಕಲಾ ವಿಭಾಗದಲ್ಲಿ 516 ಅಂಕಗಳನ್ನು ಪಡೆದಿದ್ದಾರೆ ಕಾಲೇಜು ಒಟ್ಟಾರೆಯಾಗಿ ಶೇಕಡ 81.35 ಸಾಧನೆಯನ್ನು ಮಾಡಿದೆ ಎಂದು ಕಾಲೇಜಿ ಪ್ರಾಚಾರ್ಯ ಶ್ರೀಲತಾ ಮಾಹಿತಿ ನೀಡಿದ್ದಾರೆ. ಕಾಲೇಜಿನ ಅಭಿವೃದ್ಧಿ ಸಮಿತಿ, ಪ್ರಾಂಶುಪಾಲರು ಹಾಗೂ ಉಪನ್ಯಾಸಕ ವೃಂದವು ಮಕ್ಕಳ ಸಾಧನೆಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು. ಮಾದಾಪುರ ಡಿ.ಚೆನ್ನಮ್ಮ ಪದವಿ ಪೂರ್ವಕಾಲೇಜು ಶೇಕಡ 80.03 ಫಲಿತಾಂಶ ಪಡೆದಿದ್ದು ಅತ್ಯುನ್ನತ ಶ್ರೇಣಿಯಲ್ಲಿ 6 ಮಂದಿ ಉತ್ತೀರ್ಣರಾಗಿದ್ದಾರೆ. ಕಾಲೇಜಿನ 67 ವಿದ್ಯಾರ್ಥಿಗಳ ಪೈಕಿ 54 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 80.03 ಸಾಧನೆ ಮಾಡಿದೆ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಎ.ಕೆ.ಸರಸ್ವತಿ 554 ಅಂಕಗಳನ್ನು ಗಳಿಸುವ ಮೂಲಕ ಕಾಲೇಜಿಗೆ ಮೊದಲಿಗರಾಗಿದ್ದಾರೆ. ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಮಕ್ಕಳ ಸಾಧನೆಯನ್ನು ಶ್ಲಾಘಿಸಿದ್ದಾರೆ. ಗರಗಂದೂರಿನಲ್ಲಿರುವ ಮೊರಾಜಿ ದೇಸಾಯಿ ಪದವಿಪೂರ್ವ ಕಾಲೇಜಿನ 78 ಮಕ್ಕಳು ಪರೀಕ್ಷೆಯನ್ನು ಎದುರಿಸಿದ್ದು, ಶೇಕಡ 97.04 ಫಲಿತಾಂಶವನ್ನು ಪಡೆದಿದೆ. ಉನ್ನತ ಶ್ರೇಣಿಯಲ್ಲಿ 17 ಮಂದಿ 58 ಮಂದಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು ಓರ್ವ ವಿದ್ಯಾರ್ಥಿ ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಮಕ್ಕಳ ಸಾಧನೆಯನ್ನು ಕಾಲೇಜಿನ ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಅಭಿನಂದಿಸಿದ್ದಾರೆ.

Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Follow us Follow us
Share. WhatsApp Facebook Twitter Email Telegram Copy Link

Related Posts

ಕರ್ತವ್ಯದ ವೇಳೆ ಹುತಾತ್ಮರಾದ ಪೊಲೀಸರಿಗೆ ಗೌರವ ನಮನ : ಮಡಿಕೇರಿಯಲ್ಲಿ ಪೊಲೀಸ್ ಹುತಾತ್ಮರ ದಿನಾಚರಣೆ* 

ಅಕ್ಟೋಬರ್ 21, 2026

ಮಡಿಕೇರಿ ದಸರಾ ಜನೋತ್ಸವದಲ್ಲಿ ದಶಮಂಟಪಗಳ ಸಂಭ್ರಮ : ಡಿಜೆಗೆ ಕುಣಿದು ಕುಪ್ಪಳಿಸುತ್ತಿರುವ ಜನ ಸಾಗರ

ಅಕ್ಟೋಬರ್ 21, 2026

ಅ.26ರಂದು ನಾಪೋಕ್ ನಲ್ಲಿ ಸಿಎನ್‌ಸಿಯ 7ನೇ ಶಾಂತಿಯುತ ಮಾನವ ಸರಪಳಿ ಕಾರ್ಯಕ್ರಮ

ಅಕ್ಟೋಬರ್ 21, 2026

ಮಡಿಕೇರಿ ದಸರಾ ಜನೋತ್ಸವದಲ್ಲಿ ದಶಮಂಟಪಗಳ ಸಂಭ್ರಮ : ಡಿಜೆಗೆ ಕುಣಿದು ಕುಪ್ಪಳಿಸುತ್ತಿರುವ ಜನ ಸಾಗರ

ಅಕ್ಟೋಬರ್ 21, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ NEWS DESK ಅ.21 : ಐತಿಹಾಸಿಕ ಮಡಿಕೇರಿ ದಸರಾ ಜನೋತ್ಸವದಲ್ಲಿ ದಶಮಂಟಪಗಳ ಸಂಭ್ರಮ ಮುಗಿಲು ಮುಟ್ಟಿದೆ. ಸಂಪ್ರದಾಯದಂತೆ ಪೇಟೆ…

ಅ.26ರಂದು ನಾಪೋಕ್ ನಲ್ಲಿ ಸಿಎನ್‌ಸಿಯ 7ನೇ ಶಾಂತಿಯುತ ಮಾನವ ಸರಪಳಿ ಕಾರ್ಯಕ್ರಮ

ಅಕ್ಟೋಬರ್ 21, 2026

ಕಾರು ಕೆರೆಗೆ ಬಿದ್ದು ಮಗು ಸೇರಿ ಮೂವರ ಸಾವು

ಅಕ್ಟೋಬರ್ 21, 2026

31 ವರ್ಷಗಳಿಂದ ಮನೆಮನೆಗೆ ಕಾವೇರಿ ತೀರ್ಥ ವಿತರಣೆ: ಕೊಡಗು ಹಕ್ಕು ಸಂರಕ್ಷಣಾ ಸಮಿತಿಯ ಧಾರ್ಮಿಕ ಸೇವೆ

ಅಕ್ಟೋಬರ್ 20, 2026

ಮೈಸೂರು ಕೊಡಗು ಗೌಡ ಸಮಾಜದಿಂದ ಭಕ್ತಿಭಾವದ ಕಾವೇರಿ ತೀರ್ಥ ವಿತರಣೆ

ಅಕ್ಟೋಬರ್ 20, 2026

ವಿರಾಜಪೇಟೆ : ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಶಾರದಾ, ಲಕ್ಷ್ಮಿ ಪೂಜೆ

ಅಕ್ಟೋಬರ್ 19, 2026

ವಿರಾಜಪೇಟೆ ಮಹಿಳಾ ಸಹಕಾರ ಸಂಘದಿಂದ ಶಾರದಾ ಪೂಜೆ

ಅಕ್ಟೋಬರ್ 19, 2026

ಗೋಣಿಕೊಪ್ಪ ದಸರಾದಲ್ಲಿ ಗಮನ ಸೆಳೆದ ಗೀತೆಗಳ ಗಾನಸುಧೆ, ಮಕ್ಕಳ ನೃತ್ಯ ವೈಭವ

ಅಕ್ಟೋಬರ್ 19, 2026

ಟಿ. ಶೆಟ್ಟಿಗೇರಿಯಲ್ಲಿ ₹10 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ಆಟೋ ತಂಗುದಾಣ ಲೋಕಾರ್ಪಣೆ

ಅಕ್ಟೋಬರ್ 19, 2026

ಮಾದಾಪುರದ ಸರ್ಕಾರಿ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರಕ್ಕೆ ಮಾಜಿ ಸಚಿವ ಅಪ್ಪಚ್ಚು ರಂಜನ್ ಚಾಲನೆ

ಅಕ್ಟೋಬರ್ 19, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.