Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಮಡಿಕೇರಿ ತಾಲ್ಲೂಕು ಮಟ್ಟದ ಬಾಲಕಾರ್ಮಿಕ ನಿರ್ಮೂಲನೆ ಮತ್ತು ಪುನರ್ವಸತಿ ಸಮಿತಿ ಸಭೆ*
  • *ನಾಪೋಕ್ಲುವಿನಲ್ಲಿ ಜಾಗೃತಿಗಾಗಿ ಪೊಲೀಸರ ಪಥ ಸಂಚಲನ*
  • *ಮಡಿಕೇರಿ : ಗ್ಯಾರಂಟಿ ಯೋಜನೆ ಮತ್ತಷ್ಟು ಪ್ರಗತಿ ಸಾಧಿಸಿ : ಮಂದ್ರೀರ ಮೋಹನ್ ದಾಸ್*
  • ಮಡಿಕೇರಿ : ರಾಜಾಸೀಟು ಉದ್ಯಾನವನಕ್ಕೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್  ಭೇಟಿ : ಪರಿಶೀಲನೆ 
  • *ಎಲ್ಲರನ್ನೂ ಎಲ್ಲರ ಮನಸ್ಸನ್ನು ಒಗ್ಗೂಡಿಸುವ ಕೆಲಸ ಮಾಡುವುದು ರಂಗಭೂಮಿ : ಮಂಜಪ್ಪ ಮಾಲ್ದಾರೆ ಅಭಿಮತ*
  • *ಬಿ.ಎನ್.ಚರಿಷ್ಮಾಗೆ 5ನೇ ರ‍್ಯಾಂಕ್*
  • *ಕೂಡಿಗೆ : ವೃತ್ತಿಪರ ಮಾರ್ಗದರ್ಶನ ಪಡೆಯಲು ಪ್ರಾಂಶುಪಾಲ ರಾಮಚಂದ್ರರಾಜೇ ಅರಸ್ ಕರೆ*
  • *ರಂಗಭೂಮಿಯು ಸಮಾಜದ ಜೀವಂತ ದರ್ಪಣ : ಕುಲಪತಿ ಪ್ರೊ.ಅಶೋಕ ಸಂಗಪ್ಪ ಆಲೂರ ಅಭಿಪ್ರಾಯ*
  • *ಕತ್ತಲೆಕಾಡುವಿನಲ್ಲಿ ಮನಸೂರೆಗೊಂಡ ಶ್ರೀ ರಾಮನವಮಿ : ರಾಮ, ಸೀತೆಯಾಗಿ ಕಂಗೊಳಿಸಿದ ಪುಟಾಣಿಗಳು*
  • *ಗೋಣಿಕೊಪ್ಪ : ಶ್ರೀ ಉಮಾಮಹೇಶ್ವರಿ ದೇವಾಲಯದಲ್ಲಿ ರಾಮನವಮಿ ಆಚರಣೆ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಏ.13 ರಂದು ಖ್ಯಾತ ಚಲನಚಿತ್ರ ನಿರ್ದೇಶಕ ಆಪಾಡಂಡ ಟಿ.ರಘು ಅವರಿಗೆ ಶ್ರದ್ಧಾಂಜಲಿ ಸಭೆ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಏ.13 ರಂದು ಖ್ಯಾತ ಚಲನಚಿತ್ರ ನಿರ್ದೇಶಕ ಆಪಾಡಂಡ ಟಿ.ರಘು ಅವರಿಗೆ ಶ್ರದ್ಧಾಂಜಲಿ ಸಭೆ*

ಏಪ್ರಿಲ್ 9, 20252 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಏ.9 NEWS DESK : ಕೊಡಗು ಜಿಲ್ಲಾ ಕಲಾವಿದರ ಸಂಘದ ವತಿಯಿಂದ ಏ.13 ರಂದು ಖ್ಯಾತ ಚಲನಚಿತ್ರ ನಿರ್ದೇಶಕ, ನಿರ್ಮಾಪಕ ಹಾಗೂ ಕಲಾವಿದ ಆಪಾಡಂಡ ಟಿ.ರಘು ಅವರಿಗೆ ಶ್ರದ್ಧಾಂಜಲಿ ಸಭೆ ನಡೆಯಲಿದೆ ಎಂದು ಹಿರಿಯ ಕಲಾವಿದ ನೆರವಂಡ ಉಮೇಶ್ ಅವರು ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿರಾಜಪೇಟೆಯ ಕೆ.ಕೆ.ಗ್ರೂಪ್ ಕಾಂಪ್ಲೆಕ್ಸ್‍ನ ಸಭಾಂಗಣದಲ್ಲಿ ಬೆಳಿಗ್ಗೆ 10.30 ಗಂಟೆಗೆ ಶ್ರದ್ಧಾಂಜಲಿ ಸಭೆ ನಡೆಯಲಿದ್ದು, ಕಲಾವಿದರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು. ಹಿರಿಯ ಕಲಾವಿದ ವಾಂಚಿರ ವಿಠಲ್ ನಾಣಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ, ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಂ.ಪಿ.ಕೇಶವ ಕಾಮತ್, ಬ್ರಹ್ಮಗಿರಿ ಪತ್ರಿಕೆಯ ಸಂಪಾದಕ ಉಳ್ಳಿಯಡ ಎಂ.ಪೂವಯ್ಯ, ಜಾನಪದ ಪರಿಷತ್ ಕೊಡಗು ಜಿಲ್ಲಾಧ್ಯಕ್ಷ ಬಿ.ಜಿ.ಅನಂತಶಯನ, ಕೆ.ಕೆ.ಗ್ರೂಪ್‍ನ ಮಾಲೀಕ ಜಗತ್, ದಾನಿ ಕೊಟ್ರಮಾಡ ಲಾಲ ಪೂಣಚ್ಚ ಪಾಲ್ಗೊಳ್ಳಲಿದ್ದಾರೆ ಎಂದರು.ಕನ್ನಡ ಚಿತ್ರರಂಗದಲ್ಲಿ ಎ.ಟಿ.ರಘು ಎಂದೇ ಖ್ಯಾತರಾಗಿದ್ದ ಆಪಾಡಂಡ ಟಿ.ರಘು ಅವರು ರೆಬಲ್ ಸ್ಟಾರ್ ಅಂಬರೀಶ್ ಅವರ ನಾಯಕತ್ವದದಲ್ಲಿ ಅನೇಕ ಚಿತ್ರಗಳನ್ನು ನಿರ್ದೇಶಿಸಿರುವುದಲ್ಲದೆ ಹಲವು ಖ್ಯಾತ ನಟರ ಚಿತ್ರಗಳನ್ನೂ ನಿರ್ದೇಶನ ಮಾಡಿದ್ದಾರೆ. ಕೊಡವ ಭಾಷೆಯಲ್ಲಿ ಐನ್‍ಮನೆ, ತಾಮನೆ, ಪೊಂಬಳ್ಚ, ಗೆಜ್ಜೆತಂಡ್, ಜಮ್ಮಾಭೂಮಿ, ನಂಗ ಕೊಡವ ಧಾರಾವಾಹಿಗಳನ್ನು ಮನೋಜ್ಞವಾಗಿ ನಿರ್ದೇಶಿಸಿ ಹಲವು ಕಲಾವಿದರನ್ನು ಕಿರುತೆರೆಗೆ ಪರಿಚಯಿಸಿ ಪ್ರೋತ್ಸಾಹಿಸಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಕೊಡಗಿವರಾದ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ಹಾಗೂ ಯಶೋಧ ಪ್ರಕಾಶ್ ದಂಪತಿಗಳು ಹಲವು ಕೊಡವ-ಕನ್ನಡ ಚಲಚಿತ್ರಗಳನ್ನು ನಿರ್ಮಾಣ ಮಾಡಿ ದೇಶ ವಿದೇಶದಲ್ಲಿ ಖ್ಯಾತಿ ಗಳಿಸಿದ್ದಾರೆ. ಹಲವು ಉತ್ತಮ ನಿರ್ದೇಶಕರನ್ನು ಕೊಡುಗೆಯಾಗಿ ನೀಡಿರುವ ಆಪಾಡಂಡ ಟಿ.ರಘು ಅವರಿಗೆ ಪ್ರತಿಷ್ಠಿತ ಪ್ರಶಸ್ತಿ, ಪುರಸ್ಕಾರ ಲಭ್ಯವಾಗದಿರುವುದು ಬೇಸರ ತಂದಿದೆ ಎಂದು ನೆರವಂಡ ಉಮೇಶ್ ತಿಳಿಸಿದರು. ಕಲಾವಿದ ವಾಂಚಿರ ವಿಠಲ್ ನಾಣಯ್ಯ ಅವರು ಮಾತನಾಡಿ, ಸೂಪರ್ ಸ್ಟಾರ್ ರಜಿನಿಕಾಂತ್ ಅವರ ಚಿತ್ರವನ್ನು ಕೂಡ ನಿರ್ದೇಶನ ಮಾಡಿದ ಹೆಗ್ಗಳಿಕೆ ಎ.ಟಿ.ರಘು ಅವರದ್ದಾಗಿದೆ. ಇಂತಹ ಸಾಧಕ ಕಲಾವಿದರಿಗೆ ಗೌರವ ಸಲ್ಲಿಸುವುದು ಕಲಾವಿದರ ಜವಾಬ್ದಾರಿಯಾಗಿದೆ. ಆದ್ದರಿಂದ ಕೊಡಗಿನ ಎಲ್ಲಾ ಕಲಾವಿದರು ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಕೊಡಗು ಜಿಲ್ಲಾ ಕಲಾವಿದರ ಸಂಘದ ಅಧ್ಯಕ್ಷ ಹಾಗೂ ನಿರ್ಮಾಪಕ, ನಿರ್ದೇಶಕ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ, ನಿರ್ದೇಶಕ ಆಚೆಯಡ ಗಗನ್ ಗಣಪತಿ, ಕಲಾವಿದ ಬಿದ್ದಂಡ ಉತ್ತಮ್ ಉಪಸ್ಥಿತರಿದ್ದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಮಡಿಕೇರಿ ತಾಲ್ಲೂಕು ಮಟ್ಟದ ಬಾಲಕಾರ್ಮಿಕ ನಿರ್ಮೂಲನೆ ಮತ್ತು ಪುನರ್ವಸತಿ ಸಮಿತಿ ಸಭೆ*

ಮಾರ್ಚ್ 27, 2026

*ನಾಪೋಕ್ಲುವಿನಲ್ಲಿ ಜಾಗೃತಿಗಾಗಿ ಪೊಲೀಸರ ಪಥ ಸಂಚಲನ*

ಮಾರ್ಚ್ 27, 2026

*ಮಡಿಕೇರಿ : ಗ್ಯಾರಂಟಿ ಯೋಜನೆ ಮತ್ತಷ್ಟು ಪ್ರಗತಿ ಸಾಧಿಸಿ : ಮಂದ್ರೀರ ಮೋಹನ್ ದಾಸ್*

ಮಾರ್ಚ್ 27, 2026

*ನಾಪೋಕ್ಲುವಿನಲ್ಲಿ ಜಾಗೃತಿಗಾಗಿ ಪೊಲೀಸರ ಪಥ ಸಂಚಲನ*

ಮಾರ್ಚ್ 27, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ ಪೊಲೀಸ್ ನ್ಯೂಸ್

ಮಡಿಕೇರಿ ಮಾ.27 NEWS DESK : ಕಾನೂನು ಸುವ್ಯವಸ್ಥೆ ಕಾಪಾಡುವ ಹಾಗೂ ನಾಗರಿಕರಲ್ಲಿ ಭಯಮುಕ್ತ ವಾತಾವರಣ ಮೂಡಿಸುವ ಸಲುವಾಗಿ  ನಾಪೋಕ್ಲು…

*ಮಡಿಕೇರಿ : ಗ್ಯಾರಂಟಿ ಯೋಜನೆ ಮತ್ತಷ್ಟು ಪ್ರಗತಿ ಸಾಧಿಸಿ : ಮಂದ್ರೀರ ಮೋಹನ್ ದಾಸ್*

ಮಾರ್ಚ್ 27, 2026

ಮಡಿಕೇರಿ : ರಾಜಾಸೀಟು ಉದ್ಯಾನವನಕ್ಕೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್  ಭೇಟಿ : ಪರಿಶೀಲನೆ 

ಮಾರ್ಚ್ 27, 2026

*ಎಲ್ಲರನ್ನೂ ಎಲ್ಲರ ಮನಸ್ಸನ್ನು ಒಗ್ಗೂಡಿಸುವ ಕೆಲಸ ಮಾಡುವುದು ರಂಗಭೂಮಿ : ಮಂಜಪ್ಪ ಮಾಲ್ದಾರೆ ಅಭಿಮತ*

ಮಾರ್ಚ್ 27, 2026

*ಬಿ.ಎನ್.ಚರಿಷ್ಮಾಗೆ 5ನೇ ರ‍್ಯಾಂಕ್*

ಮಾರ್ಚ್ 27, 2026

*ಕೂಡಿಗೆ : ವೃತ್ತಿಪರ ಮಾರ್ಗದರ್ಶನ ಪಡೆಯಲು ಪ್ರಾಂಶುಪಾಲ ರಾಮಚಂದ್ರರಾಜೇ ಅರಸ್ ಕರೆ*

ಮಾರ್ಚ್ 27, 2026

*ರಂಗಭೂಮಿಯು ಸಮಾಜದ ಜೀವಂತ ದರ್ಪಣ : ಕುಲಪತಿ ಪ್ರೊ.ಅಶೋಕ ಸಂಗಪ್ಪ ಆಲೂರ ಅಭಿಪ್ರಾಯ*

ಮಾರ್ಚ್ 27, 2026

*ಕತ್ತಲೆಕಾಡುವಿನಲ್ಲಿ ಮನಸೂರೆಗೊಂಡ ಶ್ರೀ ರಾಮನವಮಿ : ರಾಮ, ಸೀತೆಯಾಗಿ ಕಂಗೊಳಿಸಿದ ಪುಟಾಣಿಗಳು*

ಮಾರ್ಚ್ 27, 2026

*ಗೋಣಿಕೊಪ್ಪ : ಶ್ರೀ ಉಮಾಮಹೇಶ್ವರಿ ದೇವಾಲಯದಲ್ಲಿ ರಾಮನವಮಿ ಆಚರಣೆ*

ಮಾರ್ಚ್ 27, 2026

*ಕಣಿವೆ ಶ್ರೀ ರಾಮಲಿಂಗೇಶ್ವರನ ವೈಭವದ ಬ್ರಹ್ಮ ರಥೋತ್ಸವ*

ಮಾರ್ಚ್ 27, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.