
ಮಡಿಕೇರಿ ಏ.18 NEWS DESK : ಬೆಳ್ಳಿ ಹಬ್ಬದ ಸಂಭ್ರಮದಲ್ಲಿರುವ ಕೊಡವ ಹಾಕಿ ಪಂದ್ಯಾವಳಿಯ 25 ವಷ೯ಗಳ ಇತಿಹಾಸವನ್ನು ದಾಖಲಿಸುವ ಸ್ಟಿಕ್ ವಕ್೯ ಮ್ಯಾಜಿಕ್ – ಸಾಗಾ ಆಫ್ ಕೊಡವ ಫ್ಯಾಮಿಲಿ ಹಾಕಿ ಹೆಸರಿನ ಇಂಗ್ಲೀಷ್ ಕೃತಿಯು ಏ.22 ರಂದು ಲೋಕಾಪ೯ಣೆಯಾಗಲಿದೆ. ಹಿರಿಯ ಪತ್ರಕತ೯, ಲೇಖಕ ಕೊಟ್ಟಿಯಂಡ ಜೀವನ್ ಚಿಣ್ಣಪ್ಪ ರಚಿಸಿರುವ ಈ ಪುಸ್ತಕವನ್ನು ಮಡಿಕೇರಿಯ ವಾತಾ೯ ಕಮ್ಯೂನಿಕೇಷನ್ಸ್ ಪ್ರಕಾಶನದಲ್ಲಿ ಹೊರತರಲಾಗುತ್ತಿದೆ. 25 ವಷ೯ಗಳ ಕೊಡವ ಹಾಕಿ ಪಂದ್ಯಾವಳಿಯ ಇತಿಹಾಸದ ದಾಖಲೆಯ ಲೇಖನಗಳು, ಛಾಯಾಚಿತ್ರಗಳನ್ನು ಹೊಂದಿರುವ ಪುಸ್ತಕದಲ್ಲಿ ಕೊಡಗಿನ ಹಾಕಿ ಇತಿಹಾಸದ ಮೆಲಕು ಕೂಡ ಇದೆ. ಏ.22 ರಂದು ಮಂಗಳವಾರ ಸಂಜೆ 6 ಗಂಟೆಗೆ ಮಡಿಕೇರಿಯ ಪತ್ರಿಕಾಭವನ ಸಭಾಂಗಣದಲ್ಲಿ ಸ್ಟಿಕ್ ವಕ್೯ ಮ್ಯಾಜಿಕ್ – ಸಾಗಾ ಆಫ್ ಕೊಡವ ಫ್ಯಾಮಿಲಿ ಹಾಕಿ ಕೖತಿಯನ್ನು ಮಾಜಿ ಕಾನೂನು ಸಚಿವ ಮೇರಿಯಂಡ ಸಿ. ನಾಣಯ್ಯ ಲೋಕಾಪ೯ಣೆ ಮಾಡಲಿದ್ದು, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ಶಾಸಕ .ಎ.ಎಸ್. ಪೊನ್ನಣ್ಣ, ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂಥರ್ ಗೌಡ, ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡಂಡ ಬೋಪಣ್ಣ, ಮುದ್ದಂಡ ಹಾಕಿ ಪಂದ್ಯಾವಳಿಯ ಸಂಚಾಲಕ ಮದ್ದಂಡ ರಶಿನ್ ಸುಬ್ಬಯ್ಯ, ಕಾಯ೯ಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ವಾತಾ೯ ಕಮ್ಯೂನಿಕೇಷನ್ಸ್ ವ್ಯವಸ್ಥಾಪಕ ನಿದೇ೯ಶಕ, ಪತ್ರಕತ೯ ಅನಿಲ್ ಹೆಚ್.ಟಿ. ತಿಳಿಸಿದ್ದಾರೆ. ಕೃತಿಯ ಲೇಖಕ ಕೊಟ್ಟಿಯಂಡ ಜೀವನ್ ಚಿಣ್ಣಪ್ಪ ದಿ ಹಿಂದೂ ಪತ್ರಿಕೆಯ ಹಿರಿಯ ವರದಿಗಾರರಾಗಿ , ಕನಾ೯ಟಕ ಬ್ಯೂರೋ ಮುಖ್ಯಸ್ಥರಾಗಿ ಕಾಯ೯ನಿವ೯ಹಿಸಿ, ನಂತರ ಸ್ವಯಂ ನಿವೖತ್ತಿ ಪಡೆದು , ವಿರಾಜಪೇಟೆಯಲ್ಲಿ ನೆಲಸಿದ್ದಾರೆ. ಕೊಡಗು ಜಿಲ್ಲೆಯ ಏಕೈಕ ಅಂತರರಾಷ್ಟೀಯ ಹಾಕಿ ವೀಕ್ಷಕ ವಿವರಣೆಗಾರ ಎಂಬ ಹಿರಿಮೆ ಹೊಂದಿರುವ ಜೀವನ್ ಹತ್ತಾರು ಅಂತರರಾಷ್ಟ್ರೀಯ ಮತ್ತು ರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ವೀಕ್ಷಕ ವಿವರಣೆ ಮಾಡಿರುವ ಖ್ಯಾತಿ ಪಡೆದಿದ್ದಾರೆ.









