Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಸರಣಿ ಅಪಘಾತಗಳಿಗೆ ಬ್ರೇಕ್: ರಸ್ತೆಗಿಳಿದ ಕರವೇ ಸ್ವಾಭಿಮಾನಿ ಸೇನೆ; ಕುಶಾಲನಗರ: ರಾಜ್ಯ ಹೆದ್ದಾರಿಯ ಹಂಪ್‌ಗಳಿಗೆ ಸ್ವತಃ ಬಣ್ಣ ಬಳಿದು ರಸ್ತೆ ಸುರಕ್ಷತೆಗೆ ಮುಂದಾದ ಕಾರ್ಯಕರ್ತರು*
  • *ಅಭಿಮನ್ಯುವಿಗೆ ಅಕ್ಷರ ತೇರಿನಲ್ಲಿ ಬೀಳ್ಕೊಡುಗೆ ಹಾಗೂ ಐತಿಚಂಡ ರಮೇಶ್ ಉತ್ತಪ್ಪ ಅವರ ಎರಡು ಕೃತಿಗಳ ಬಿಡುಗಡೆ*
  • *ಉಡೋತ್ ಮೊಟ್ಟೆಯಲ್ಲಿ ಕೈಲ್ ಪೊಳ್ದ್ ಸಂಭ್ರಮ*
  • *ಕಸ್ತೂರಿ ರಂಗನ್ ವರದಿ : ಜನವಸತಿ ಗ್ರಾಮಗಳನ್ನು ಸಂಪೂರ್ಣ ಹೊರಗಿಡಲು ಆಗ್ರಹ*
  • *ಭಾರತ್ ಜೋಡೋ : ಲಾಂಛನ ಅನಾವರಣ*
  • *ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿ ಪ್ರಕಟ*
  • *ರಾಷ್ಟ್ರೀಯ ಜೂನಿಯರ್ ಬಾಲಕಿಯರ ಹಾಕಿ ಪಂದ್ಯಾವಳಿ : ಹೈದರಾಬಾದ್ ವಲಯಕ್ಕೆ ರನ್ನರ್ ಅಪ್ ಪ್ರಶಸ್ತಿ*
  • *ಮಹಿಳೆಯರು ಸರ್ಕಾರಿ ಯೋಜನೆಗಳ ಸದುಪಯೋಗ ಪಡೆದು ಆರ್ಥಿಕವಾಗಿ ಸಬಲರಾಗಬೇಕು: ಶಾಸಕ ಡಾ. ಮಂತರ್ ಗೌಡ*
  • *ಒಂಟಿ ಸಲಗ ದಾಳಿ: ಕೂಲಿ ಕಾರ್ಮಿಕನಿಗೆ ಗಂಭೀರ ಗಾಯ*
  • *ಅಮೆರಿಕ ಪ್ರವಾಸದಲ್ಲಿದ್ದರೂ ಕಸ್ತೂರಿರಂಗನ್ ವರದಿ ಕುರಿತ ಸಭೆಯಲ್ಲಿ ಭಾಗವಹಿಸಲಿರುವ ಸಂಸದ ಯದುವೀರ್ ಒಡೆಯರ್; ಕೊಡಗು ಹಾಗೂ ಪಶ್ಚಿಮ ಘಟ್ಟಗಳ ಹಿತಾಸಕ್ತಿಗೆ ಬದ್ಧತೆ ಪುನರುಚ್ಚಾರ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಅಡ್ಕದ ಬಾಣೆಯಲ್ಲಿ ಗಮನ ಸೆಳೆದ ಗ್ರಾಮೀಣ ಕ್ರೀಡಾಕೂಟ : ಸಾಧಕರಿಗೆ ಸನ್ಮಾನ
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಅಡ್ಕದ ಬಾಣೆಯಲ್ಲಿ ಗಮನ ಸೆಳೆದ ಗ್ರಾಮೀಣ ಕ್ರೀಡಾಕೂಟ : ಸಾಧಕರಿಗೆ ಸನ್ಮಾನ

ಏಪ್ರಿಲ್ 18, 20252 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ ಏ.18 NEWS DESK : ಸ್ನೇಹಿತರ ಯುವಕ ಸಂಘದ 42ನೇ ವರ್ಷದ ವಾರ್ಷಿಕೋತ್ಸವ ಹಾಗೂ ಯುಗಾದಿ ಹಬ್ಬದ ಪ್ರಯುಕ್ತ ಗ್ರಾಮೀಣ ಕ್ರೀಡಾಕೂಟ ಗಾಳೀಬೀಡು ಗ್ರಾಮದ ಅಡ್ಕದ ಬಾಣೆಯಲ್ಲಿ ಯಶಸ್ವಿಯಾಗಿ ನಡೆಯಿತು. ನೆಹರು ಯುವ ಕೇಂದ್ರ ಮಡಿಕೇರಿ, ಕೊಡಗು ಯುವ ಸಬಲೀಕರಣ ಮತ್ತು ಕ್ರೀಡಾಇಲಾಖೆ, ಜಿಲ್ಲಾ ಮತ್ತು ತಾಲೂಕು ಯುವ ಒಕ್ಕೂಟ ಇದರ ಸಹಯೋಗದೊಂದಿಗೆ ಸ್ನೇಹಿತರ ಯುವಕ ಸಂಘದ ಅಧ್ಯಕ್ಷ ಕೋಳುಮುಡಿಯದ ಎ.ಮೋಹನ್ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭವನ್ನು ನಿವೃತ್ತ ಡಿವೈಎಸ್‍ಪಿ ಯಾಲದಾಳು ಕೇಶವಾನಂದ  ಉದ್ಧಾಟಿಸಿದರು. ಸಭಾಕಾರ್ಯಕ್ರಮದ ನಂತರ ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ವಿಭಾಗದಲ್ಲಿ ಮುಕ್ತ ಹಗ್ಗಜಗ್ಗಾಟ ನಡೆಯಿತು. ಅಲ್ಲದೇ, ಪುರುಷರಿಗೆ ವಾಲಿಬಾಲ್ ಪಂದ್ಯಾಟ, ಮಹಿಳೆಯರಿಗೆ ಥ್ರೋಬಾಲ್ ಪಂದ್ಯಾಟ ನಡೆಯಿತು. ಪುರುಷರಿಗೆ, ಮಹಿಳೆಯರಿಗೆ, ಹಿರಿಯ ಬಾಲಕ-ಬಾಲಕಿಯರಿಗೆ ಪ್ರತ್ಯೇಕ ವಿಭಾಗದಲ್ಲಿ ಓಟದ ಸ್ಪರ್ಧೆ ನಡೆಯಿತು. ಅಲ್ಲದೇ, ಬಾರದ ಕಲ್ಲು ಎಸೆತ, ಬಕೇಟ್‍ಗೆ ಚೆಂಡು ಹಾಕುವುದು, 1,500 ಮೀಟರ್ ಓಟ, 100*4 ರಿಲೆ ಓಟ, ವಯಸ್ಕರಿಗೆ ಓಟ, ಪಟ್ಟಣಕ್ಕೆ ಬಾಂಬ್, ಕೋಳಿ ಜಗಳ ಸೇರಿದಂತೆ ವಿವಿಧ ಕ್ರೀಡಾಕೂಟ ನಡೆಯಿತು. ಉದ್ಘಾಟನಾ ಕಾರ್ಯಕ್ರಮದಲ್ಲಿ ಗಾಳಿಬೀಡು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಯಾಲದಾಳು ರಾಜಶೇಖರ್, ಮಡಿಕೇರಿ ಶಿರಸ್ತೇದಾರ್ ಕರಕರನ ಮಧುಕರ್, ಗ್ರಾಮದ ಹಿರಿಯರಾದ ಕೆ.ಕೆ.ಧರ್ಮಾವತಿ, ಮಾಜಿ ಸೈನಿಕರಾದ ಕೋಚನ ಮನುಕುಮಾರ್ ಇತರರಿದ್ದರು. ಸ್ನೇಹಿತರ ಯುವಕ ಸಂಘದ ಸ್ಥಾಪಕ ಅಧ್ಯಕ್ಷ ಕೋಳುಮುಡಿಯನ ಅನಂತಕುಮಾರ್ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಿತು. ಕಾರ್ಯಕ್ರಮದಲ್ಲಿ ನೃತ್ಯಕಲಾವಿದೆ ವಿಧುಷಿ ಕಾವ್ಯಶ್ರೀ ಕಪಿಲ್ ದುಗ್ಗಳ, ಗೌರವ ಡಾಕ್ಟರೇಟ್ ಪದವಿದರೆ ಟಿಶೋನಿ ಸಬೀನ್, ನಿವೃತ್ತ ಅಂಗನವಾಡಿ ಶಿಕ್ಷಕಿ ಕೋಳುಮುಡಿಯನ ಪ್ರೇಮಾವತಿ, ನಿವೃತ್ತ ಮಾಜಿ ಸೈನಿಕ ಪುದಿಯೊಕ್ಕಡ ಸುಜಯ್ ಅವರನ್ನು ಸನ್ಮಾನಿಸಲಾಯಿತು. ಅಲ್ಲದೇ, 10ನೇ ತರಗತಿಯಲ್ಲಿ ಅತ್ಯದಿಕ ಅಂಕ ಪಡೆದ ಗಾಳಿಬೀಡು ಗ್ರಾಮದ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಸಂಘದ ವತಿಯಿಂದ ಪ್ರೋತ್ಸಾಹಧನ ನೀಡಿ ಗೌರವಿಸಲಾಯಿತು. ನಂತರ ಗ್ರಾಮದ ಮಕ್ಕಳಿಂದ ಭರತನಾಟ್ಯ, ಗ್ರೂಪ್ ನೃತ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರ ಗಮನ ಸೆಳೆಯಿತು. ಇದೇ ಸಂದರ್ಭದಲ್ಲಿ ಗ್ರಾಮೀಣ ಕ್ರೀಡಾಕೂಟದ ವಿಜೇತರಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಸಮಾರೋಪ ಸಮಾರಂಭದಲ್ಲಿ ಗಾಳಿಬೀಡು ಗ್ರಾಮ ಪಂಚಾಯಿತಿ ಪಿಡಿಒ ಶಶಿಕಿರಣ್, ಜಿಲ್ಲಾ ಯುವ ಒಕ್ಕೂಟ ಅಧ್ಯಕ್ಷ ಪಿ.ಪಿ.ಸುಕುಮಾರ್, ಮಡಿಕೇರಿ ತಾಲೂಕು ಅಧ್ಯಕ್ಷ ಬಾಳಾಡಿ ಎಂ.ದಿಲೀಪ್, ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ಕೋಚನ ಹರಿಪ್ರಸಾದ್ ಇತರರು ವೇದಿಕೆಯಲ್ಲಿದ್ದರು. ಗ್ರಾಮದ ಹಿರಿಯರು, ಕಿರಿಯರು ಸೇರಿದಂತೆ ವಿವಿಧ ಸಂಘಸಂಸ್ಥೆಗಳ ಸದಸ್ಯರು, ಪದಾಧಿಕಾರಿಗಳು ಪಾಲ್ಗೊಂಡು ಕ್ರೀಡಾಕೂಟದ ಯಶಸ್ವಿಗೊಳಿಸಿದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಸರಣಿ ಅಪಘಾತಗಳಿಗೆ ಬ್ರೇಕ್: ರಸ್ತೆಗಿಳಿದ ಕರವೇ ಸ್ವಾಭಿಮಾನಿ ಸೇನೆ; ಕುಶಾಲನಗರ: ರಾಜ್ಯ ಹೆದ್ದಾರಿಯ ಹಂಪ್‌ಗಳಿಗೆ ಸ್ವತಃ ಬಣ್ಣ ಬಳಿದು ರಸ್ತೆ ಸುರಕ್ಷತೆಗೆ ಮುಂದಾದ ಕಾರ್ಯಕರ್ತರು*

ಸೆಪ್ಟೆಂಬರ್ 5, 2026

*ಅಭಿಮನ್ಯುವಿಗೆ ಅಕ್ಷರ ತೇರಿನಲ್ಲಿ ಬೀಳ್ಕೊಡುಗೆ ಹಾಗೂ ಐತಿಚಂಡ ರಮೇಶ್ ಉತ್ತಪ್ಪ ಅವರ ಎರಡು ಕೃತಿಗಳ ಬಿಡುಗಡೆ*

ಸೆಪ್ಟೆಂಬರ್ 5, 2026

*ಉಡೋತ್ ಮೊಟ್ಟೆಯಲ್ಲಿ ಕೈಲ್ ಪೊಳ್ದ್ ಸಂಭ್ರಮ*

ಸೆಪ್ಟೆಂಬರ್ 4, 2026

*ಅಭಿಮನ್ಯುವಿಗೆ ಅಕ್ಷರ ತೇರಿನಲ್ಲಿ ಬೀಳ್ಕೊಡುಗೆ ಹಾಗೂ ಐತಿಚಂಡ ರಮೇಶ್ ಉತ್ತಪ್ಪ ಅವರ ಎರಡು ಕೃತಿಗಳ ಬಿಡುಗಡೆ*

ಸೆಪ್ಟೆಂಬರ್ 5, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮೈಸೂರು, NEWS DESK ಸೆ.05: ಅಂಬಾರಿ ಆನೆ ಅಭಿಮನ್ಯುವಿಗೆ 60 ವರ್ಷ ತುಂಬಿದ ಹಿನ್ನೆಲೆಯಲ್ಲಿ ಆತನಿಗೆ ಅಕ್ಷರ ತೇರಿನಲ್ಲಿ ಭಾವ…

*ಉಡೋತ್ ಮೊಟ್ಟೆಯಲ್ಲಿ ಕೈಲ್ ಪೊಳ್ದ್ ಸಂಭ್ರಮ*

ಸೆಪ್ಟೆಂಬರ್ 4, 2026

*ಕಸ್ತೂರಿ ರಂಗನ್ ವರದಿ : ಜನವಸತಿ ಗ್ರಾಮಗಳನ್ನು ಸಂಪೂರ್ಣ ಹೊರಗಿಡಲು ಆಗ್ರಹ*

ಸೆಪ್ಟೆಂಬರ್ 4, 2026

*ಭಾರತ್ ಜೋಡೋ : ಲಾಂಛನ ಅನಾವರಣ*

ಸೆಪ್ಟೆಂಬರ್ 4, 2026

*ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿ ಪ್ರಕಟ*

ಸೆಪ್ಟೆಂಬರ್ 4, 2026

*ರಾಷ್ಟ್ರೀಯ ಜೂನಿಯರ್ ಬಾಲಕಿಯರ ಹಾಕಿ ಪಂದ್ಯಾವಳಿ : ಹೈದರಾಬಾದ್ ವಲಯಕ್ಕೆ ರನ್ನರ್ ಅಪ್ ಪ್ರಶಸ್ತಿ*

ಸೆಪ್ಟೆಂಬರ್ 4, 2026

*ಮಹಿಳೆಯರು ಸರ್ಕಾರಿ ಯೋಜನೆಗಳ ಸದುಪಯೋಗ ಪಡೆದು ಆರ್ಥಿಕವಾಗಿ ಸಬಲರಾಗಬೇಕು: ಶಾಸಕ ಡಾ. ಮಂತರ್ ಗೌಡ*

ಸೆಪ್ಟೆಂಬರ್ 4, 2026

*ಒಂಟಿ ಸಲಗ ದಾಳಿ: ಕೂಲಿ ಕಾರ್ಮಿಕನಿಗೆ ಗಂಭೀರ ಗಾಯ*

ಸೆಪ್ಟೆಂಬರ್ 4, 2026

*ಅಮೆರಿಕ ಪ್ರವಾಸದಲ್ಲಿದ್ದರೂ ಕಸ್ತೂರಿರಂಗನ್ ವರದಿ ಕುರಿತ ಸಭೆಯಲ್ಲಿ ಭಾಗವಹಿಸಲಿರುವ ಸಂಸದ ಯದುವೀರ್ ಒಡೆಯರ್; ಕೊಡಗು ಹಾಗೂ ಪಶ್ಚಿಮ ಘಟ್ಟಗಳ ಹಿತಾಸಕ್ತಿಗೆ ಬದ್ಧತೆ ಪುನರುಚ್ಚಾರ*

ಸೆಪ್ಟೆಂಬರ್ 4, 2026

*ಕ.ಸಾ.ಪ. ವತಿಯಿಂದ ಸೆ.8ರಂದು ಕುಶಾಲನಗರದಲ್ಲಿ ಸಾಹಿತಿ ದಿ. ವಿ.ಎಸ್. ರಾಮಕೃಷ್ಣ ದತ್ತಿ ಕಾರ್ಯಕ್ರಮ*

ಸೆಪ್ಟೆಂಬರ್ 4, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.