
ಮಡಿಕೇರಿ ಏ.20 NEWS DESK : ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು ‘ಆಂಟಿಮೈಕ್ರೋಬಯಲ್ ರೆಸಿಸ್ಟೆನ್ಸ್: ಸ್ಟ್ರಾಟಜೀಸ್ ಫಾರ್ ಪ್ರಿವೆನ್ಸನ್ ಮತ್ತು ಅಲ್ಟಾರ್‍ನೇಟಿವ್ಸ್’ ವಿಷಯದ ಮೇಲೆ ಮೇ, 14 ರಿಂದ 16 ರವಗೆ ಮೂರು ದಿನಗಳ ರಾಷ್ಟ್ರೀಯ ಸಮ್ಮೇಳನವನ್ನು ಅಕಾಡೆಮಿಯ ಕಚೇರಿಯಲ್ಲಿ ಆಯೋಜಿಸಲಾಗಿದೆ. ಈ ಸಮ್ಮೇಳನದಲ್ಲಿ ವಿವಿಧ ಪ್ರತಿಷ್ಠಿತ ಸಂಸ್ಥೆಗಳ ಹೆಸರಾಂತ ವಿಜ್ಞಾನಿಗಳು ತಾಂತ್ರಿಕ ಉಪನ್ಯಾಸಗಳನ್ನು ನೀಡಲಿದ್ದಾರೆ. ಯುವ ವಿಜ್ಞಾನಿಗಳು ಮತ್ತು ಸಂಶೋಧನಾ ವಿದ್ಯಾರ್ಥಿಗಳು ರಿಸರ್ಚ್ ಪೇಪರ್ ಪ್ರೆಸೆಂಟೇಷನ್ ಮಂಡಿಸಲು ಅವಕಾಶ ಕಲ್ಪಿಸಲಾಗಿದ್ದು, ಆಯ್ಕೆಯಾದ ರಿಸರ್ಚ್ ಪೇಪರ್‍ಗಳಿಗೆ ನಗದು ಬಹುಮಾನವನ್ನು ನೀಡಲಾಗುವುದು. ಈ ಸಮ್ಮೇಳನದಲ್ಲಿ ಸ್ನಾತಕೋತ್ತರ ವಿಜ್ಞಾನ ವಿದ್ಯಾರ್ಥಿಗಳು, ಸಂಶೋಧನಾ ವಿದ್ಯಾರ್ಥಿಗಳು ಪ್ರಾಧ್ಯಾಪಕರು, ಯುವ ವಿಜ್ಞಾನಿಗಳು, ಶೈಕ್ಷಣಿಕ ತಜ್ಞರು, ಯುವ ಉದ್ಯಮದಾರರು ಭಾಗವಹಿಸಬಹುದಾಗಿದ್ದು. ಆಸಕ್ತ ಪತ್ರಿನಿಧಿಗಳು ಮೇ, 6 ರಳೊಗಾಗಿ Google from- https://forms.gle/nphLXewAESvuPP5Y8 ಮೂಲಕ ನೋಂದಾಯಿಸಿಕೊಳ್ಳಬಹುದು.
ಹೆಚ್ಚಿನ ಮಾಹಿತಿಗೆ ಅಕಾಡೆಮಿಯ ಅಧಿಕಾರಿಗಳನ್ನು (ಮೊ.9845258894, 9743084194 ಮತ್ತು 9686449019) ಸಂಪರ್ಕಿಸಬಹುದಾಗಿದೆ ಅಥವಾ ಅಕಾಡೆಮಿಯ ವೆಬ್‍ಸೈಟ್ https//:kstacademy.in ವೀಕ್ಪಿಸಬಹುದು ಎಂದು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ ಎ.ಎಂ. ರಮೇಶ್ ತಿಳಿಸಿದ್ದಾರೆ.









