Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada
Home»ಇತ್ತೀಚಿನ ಸುದ್ದಿಗಳು»ಉಳುವಂಗಡ ಕಾವೇರಿಗೆ ಕನ್ನಡ ಬಹುಭಾಷಾ ಸಾಹಿತ್ಯ ಸಿರಿ ಪ್ರಶಸ್ತಿ ಪ್ರದಾನ
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಉಳುವಂಗಡ ಕಾವೇರಿಗೆ ಕನ್ನಡ ಬಹುಭಾಷಾ ಸಾಹಿತ್ಯ ಸಿರಿ ಪ್ರಶಸ್ತಿ ಪ್ರದಾನ

ಏಪ್ರಿಲ್ 20, 20252 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement

ಮಡಿಕೇರಿ ಏ.20 NEWS DESK : ಕೊಡಗಿನ ಸಾಹಿತಿ ಟಿ.ಶೆಟ್ಟಿಗೇರಿಯ ಉಳುವಂಗಡ ಕಾವೇರಿ ಉದಯ ಅವರಿಗೆ ದಾವಣಗೆರೆಯಲ್ಲಿ ಕನ್ನಡ ಬಹುಭಾಷಾ ಸಾಹಿತ್ಯ ಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಿದ್ಯಾಧರ ಕನ್ನಡ ಪ್ರತಿಷ್ಠಾನ, ದಾವಣಗೆರೆ ಕನ್ನಡ ಸಾಹಿತ್ಯ ಪರಿಷತ್, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್, ಸ್ಫೂರ್ತಿ ಪ್ರಕಾಶನ ತೆಲಿಗಿ, ಜ್ಞಾನ ಪ್ರಕಾಶನ ಮತ್ತು ಜ್ಞಾನ ಪ್ರಕಾಶನ ಸಂಸ್ಥೆಯ ವತಿಯಿಂದ ಮಾತೋಶ್ರೀ ಜಾನಕಿಬಾಯಿ ರಂಗರಾವ ಮುತಾಲಿಕ ದೇಸಾಯಿ ಸಂಸ್ಮರಣೆಯ ಅಂಗವಾಗಿ ದಾವಣಗೆರೆಯ ವಿದ್ಯಾನಗರದ ಕುವೆಂಪು ಕನ್ನಡ ಭವನದಲ್ಲಿ ನಡೆದ ಕನ್ನಡ ನುಡಿತೇರು ಕಾರ್ಯಕ್ರಮದಲ್ಲಿ ವಿದ್ಯಾಧರ ಕನ್ನಡ ಪ್ರತಿಷ್ಠಾನದ ಅಧ್ಯಕ್ಷ ವಿದ್ಯಾಧರ ಮುತಾಲಿಕ ದೇಸಾಯಿ ಅವರು ಉಳುವಂಗಡ ಕಾವೇರಿ ಉದಯ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ದಾವಣಗೆರೆಯ ಸ್ಫೂರ್ತಿ ಪ್ರಕಾಶನದ ಅಧ್ಯಕ್ಷ ಎಂ.ಬಸವರಾಜ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ವಾಮದೇವಪ್ಪ ಉದ್ಘಾಟಿಸಿದರು.
*ಉಳುವಂಗಡ ಕಾವೇರಿ ಉದಯ*
*ಕಿರುಪರಿಚಯ*
ಟಿ.ಶೆಟ್ಟಿಗೇರಿ ನಿವಾಸಿ ಚಂಗುಲಂಡ ಸಿ ಮಾದಪ್ಪ ಸರಸ್ವತಿ ದಂಪತಿಗಳ ಪುತ್ರಿಯಾಗಿ 18/5/1969ರಲ್ಲಿ ಜನಿಸಿ ಪುತ್ತೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿ 29/11/1990 ರಲ್ಲಿ ಉಳುವಂಗಡ ಯು. ಉದಯ ಅವರನ್ನು ವಿವಾಹವಾದ ಇವರಿಗೆ ಲಿಖಿತ್, ಅಮಿತ್ ಎಂಬ ಇಬ್ಬರು ಪುತ್ರರು ಮತ್ತು ಪೂಜಿತ, ಗಾಯನ ಎಂಬ ಇಬ್ಬರು ಸೊಸೆ ಇರುವರು. ಬಹುಭಾಷಾ ಸಾಹಿತಿ, ಕವಯಿತ್ರಿಯಾಗಿರುವ ಇವರು ಹವ್ಯಾಸಿ ರಂಗ ಕಲಾವಿದೆ ಮತ್ತು ಚಿತ್ರಕಲಾವಿದೆಯು ಆಗಿರುವರು. ಕನ್ನಡ, ಕೊಡವ, ಇಂಗ್ಲಿಷ್,  ಹಿಂದಿ ಮತ್ತು ಮಲಯಾಳ ಈ ಐದು ಭಾಷೆಯಲ್ಲಿ, ಕಥೆ, ಕವನ, ಕಾದಂಬರಿ, ಮುಕ್ತಕ, ಜೀವನ ಚರಿತ್ರೆ, ಭಕ್ತಿ ಪ್ರಧಾನ, ಲಲಿತ ಪ್ರಬಂಧ, ನಾಟಕ ಹೀಗೆ ಇವರು ಬರೆದ ಒಟ್ಟು 32 ಕೃತಿಗಳು ಲೋಕಾರ್ಪಣೆಗೊಂಡಿವೆ. ಆರು ಭಾಷೆಯಲ್ಲಿ ಕವನ ವಾಚನ ಮಾಡಿರುವರು.
ಕನ್ನಡ ಸಾಹಿತ್ಯ ಪರಿಷತ್ತು ಶ್ರೀಮಂಗಲ ಹೋಬಳಿಯ ಅಧ್ಯಕ್ಷೆ, ಸಿರಿಗನ್ನಡ ವೇದಿಕೆ ಕೊಡಗು ಜಿಲ್ಲೆಯ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ , ಗುರುಕುಲ ಕಲಾ ಪ್ರತಿಷ್ಠಾನ ಕೊಡಗು ಜಿಲ್ಲಾ ಘಟಕದ ಗೌರವಾಧ್ಯಕ್ಷೆ , ಹಾಗು ಕರ್ನಾಟಕ ಲೇಖಕಿಯರ ಸಂಘ ಕೊಡಗು ಶಾಖೆಯ ಉಪಾಧ್ಯಕ್ಷೆ ಆಗಿರುವರು.
ಇವರು ಬರೆದ ಕಾದಂಬರಿ ಕೊಡವ ಸಿನಿಮಾ ಆಗಿದೆ. ಹಾಗು ಸಣ್ಣ ಕಥೆ ಕಿರುಸಿನೆಮ ಆಗಿದೆ. ಇವರು ಬರೆದ ಹಾಡುಗಳನ್ನು ಹಲವಾರು ಗಾಯಕರು ಹಾಡಿರುವರು. ಮಡಿಕೇರಿ ಆಕಾಶವಾಣಿಯ ಸುಪ್ರಭಾತದಲ್ಲಿ ಇವರು ಬರೆದ ಹಾಡು ನಿರಂತರ ಪ್ರಸಾರವಾಗುತ್ತಿದೆ.
ಮೈಸೂರು ದಸರಾ ಕವಿಗೋಷ್ಟಿಯಲ್ಲಿ ಕೊಡವ ಮತ್ತು ಕನ್ನಡ ಹೀಗೆ ಎರಡು ಬಾರಿ ಕವನ ವಾಚನ ಮಾಡಿರುವರು. ಹಲವಾರು ಕವಿಗೋಷ್ಟಿಯ ಅಧ್ಯಕ್ಷತೆ ವಹಿಸಿರುವರು. ವಿವಿಧ ಕಾರ್ಯಕ್ರಮಗಳಲ್ಲಿ ವಿಚಾರ ಮಂಡನೆ ಮಾಡಿರುವರು. ಪೌರಾಣಿಕ , ಸಾಮಾಜಿಕ ನಾಟಕಗಳನ್ನು ಬರೆದು ಮಹಿಳೆಯರಿಗೆ ನಾಟಕ ನಿರ್ದೇಶನ ಮಾಡಿ, ಮುಖ್ಯ ಪಾತ್ರವಹಿಸಿ ಹಲವಾರು ಕಾರ್ಯಕ್ರಮಗಳಲ್ಲಿ ಪ್ರದರ್ಶನಗಳನ್ನು ನೀಡಿರುವರು. 2022 ನೆ ಸಾಲಿನ ಕರ್ನಾಟಕ ಸರ್ಕಾರದ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ, ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ ಮಕ್ಕಳ ಚಂದಿರ ಪುಸ್ತಕ ಪ್ರಶಸ್ತಿ, ಗುರುಕುಲ ಕಲಾಪ್ರತಿಷ್ಠಾನದಿಂದ ಗುರುಕುಲ ಶಿರೋಮಣಿ ಪ್ರಶಸ್ತಿ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯಿಂದ ಪುಸ್ತಕ ಪ್ರಶಸ್ತಿ, ನಾಡಿನ ಸಮಾಚಾರ ದಿನಪತ್ರಿಕೆಯಿಂದ ಸಾಹಿತ್ಯ ರತ್ನ ಮತ್ತು ಸಾಹಿತ್ಯ ತಪಸ್ವಿ ಪ್ರಶಸ್ತಿ, ಮೈಸೂರು ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದಿಂದ ಬಹುಭಾಷಾ ಸಾಹಿತ್ಯ ಚೇತನ ಪ್ರಶಸ್ತಿ, ವಿದ್ಯಾಧರ ಕನ್ನಡ ಪ್ರತಿಷ್ಠಾನದಿಂದ ಕನ್ನಡ ಬಹುಭಾಷಾ ಸಾಹಿತ್ಯ ಸಿರಿ ಪ್ರಶಸ್ತಿ, ಇಂಟನ್ರ್ಯಾಷನಲ್ ಕಲ್ಚರ್ ರಿಸರ್ಚ್ ಯುನಿವರ್ಸಿಟಿಯಿಂದ ಗೌರವ ಡಾಕ್ಟರೇಟ್ ಹೀಗೆ ಒಟ್ಟು ಒಂಬತ್ತು ಪ್ರಶಸ್ತಿ ಪಡೆದಿರುವರು. ಸಾಹಿತ್ಯ ಸೇವೆಗಾಗಿ ಇದುವರೆಗೆ ಇವರಿಗೆ 23 ಸಂಘ ಸಂಸ್ಥೆಗಳು ಸನ್ಮಾನ ಮಾಡಿವೆ.
*ಇವರ ವಿಳಾಸ*
ಉಳುವಂಗಡ ಕಾವೇರಿ ಉದಯ
ಟಿ.ಶೆಟ್ಟಿಗೇರಿ ಗ್ರಾಮ ಅಂಚೆ
ಪೊನ್ನಂಪೇಟೆ ತಾಲೂಕು
ಕೊಡಗು ಜಿಲ್ಲೆ 571249
ಮೊ: 9591366296

Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Follow us Follow us
Share. WhatsApp Facebook Twitter Email Telegram Copy Link

Related Posts

ಕಾರು ಕೆರೆಗೆ ಬಿದ್ದು ಮಗು ಸೇರಿ ಮೂವರ ಸಾವು

ಅಕ್ಟೋಬರ್ 21, 2026

31 ವರ್ಷಗಳಿಂದ ಮನೆಮನೆಗೆ ಕಾವೇರಿ ತೀರ್ಥ ವಿತರಣೆ: ಕೊಡಗು ಹಕ್ಕು ಸಂರಕ್ಷಣಾ ಸಮಿತಿಯ ಧಾರ್ಮಿಕ ಸೇವೆ

ಅಕ್ಟೋಬರ್ 20, 2026

ಮೈಸೂರು ಕೊಡಗು ಗೌಡ ಸಮಾಜದಿಂದ ಭಕ್ತಿಭಾವದ ಕಾವೇರಿ ತೀರ್ಥ ವಿತರಣೆ

ಅಕ್ಟೋಬರ್ 20, 2026

31 ವರ್ಷಗಳಿಂದ ಮನೆಮನೆಗೆ ಕಾವೇರಿ ತೀರ್ಥ ವಿತರಣೆ: ಕೊಡಗು ಹಕ್ಕು ಸಂರಕ್ಷಣಾ ಸಮಿತಿಯ ಧಾರ್ಮಿಕ ಸೇವೆ

ಅಕ್ಟೋಬರ್ 20, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ನಾಪೋಕ್ಲು, NEWS DESK ಅ.20: ಪವಿತ್ರ ಶ್ರೀ ಕಾವೇರಿ ಮಾತೆಯ ತೀರ್ಥವನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಧಾರ್ಮಿಕ ಸೇವೆಯನ್ನು…

ಮೈಸೂರು ಕೊಡಗು ಗೌಡ ಸಮಾಜದಿಂದ ಭಕ್ತಿಭಾವದ ಕಾವೇರಿ ತೀರ್ಥ ವಿತರಣೆ

ಅಕ್ಟೋಬರ್ 20, 2026

ವಿರಾಜಪೇಟೆ : ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಶಾರದಾ, ಲಕ್ಷ್ಮಿ ಪೂಜೆ

ಅಕ್ಟೋಬರ್ 19, 2026

ವಿರಾಜಪೇಟೆ ಮಹಿಳಾ ಸಹಕಾರ ಸಂಘದಿಂದ ಶಾರದಾ ಪೂಜೆ

ಅಕ್ಟೋಬರ್ 19, 2026

ಗೋಣಿಕೊಪ್ಪ ದಸರಾದಲ್ಲಿ ಗಮನ ಸೆಳೆದ ಗೀತೆಗಳ ಗಾನಸುಧೆ, ಮಕ್ಕಳ ನೃತ್ಯ ವೈಭವ

ಅಕ್ಟೋಬರ್ 19, 2026

ಟಿ. ಶೆಟ್ಟಿಗೇರಿಯಲ್ಲಿ ₹10 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ಆಟೋ ತಂಗುದಾಣ ಲೋಕಾರ್ಪಣೆ

ಅಕ್ಟೋಬರ್ 19, 2026

ಮಾದಾಪುರದ ಸರ್ಕಾರಿ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರಕ್ಕೆ ಮಾಜಿ ಸಚಿವ ಅಪ್ಪಚ್ಚು ರಂಜನ್ ಚಾಲನೆ

ಅಕ್ಟೋಬರ್ 19, 2026

ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಗಳನ್ನು ಹೊರ ತರಲು ಪ್ರತಿಭಾ ದಿನಾಚರಣೆಯು ವೇದಿಕೆ

ಅಕ್ಟೋಬರ್ 19, 2026

ಮಡಿಕೇರಿಯಲ್ಲಿ ಸಂಭ್ರಮದ 9ನೇ ವರ್ಷದ ಮಹಿಳಾ ದಸರಾ; ಮಹಿಳೆಯರ ಸಾಧನೆಗೆ ಶಿಕ್ಷಣ ಅತ್ಯವಶ್ಯ: ವಿಜಯಲಕ್ಷ್ಮಿ ಸಿಂಗ್

ಅಕ್ಟೋಬರ್ 19, 2026

ಕಾವೇರಿ ತುಲಾ ಸಂಕ್ರಮಣದ ಹಿನ್ನೆಲೆ : ದೇವಟ್ ಪರಂಬ್ ನಲ್ಲಿ ಬೊತ್ತ್ ಬಳ್ಳಿ ಸುತ್ತಿದ ಕೋಲಿನ ಮೇಲೆ ದೋಸೆ ಮತ್ತು ಪುಟ್ಟ್ ಇಟ್ಟು ಸಿಎನ್‌ಸಿ ಸ್ಮರಣೆ

ಅಕ್ಟೋಬರ್ 19, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.