
ನಾಪೋಕ್ಲು ಆ.29 NEWS DESK : ಹಳೆ ತಾಲೂಕು ಅಂಕುರ್ ಪಬ್ಲಿಕ್ ಶಾಲೆಯ ಸೈನ್ಸ್ ಕ್ಲಬ್ ವತಿಯಿಂದ ಭತ್ತದ ನಾಟಿ (ನೇಡುವ) ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಅಂಕುರ್ ಪಬ್ಲಿಕ್ ಶಾಲೆಯ ಅಧ್ಯಕ್ಷ ಕೊಳಕೇರಿ ಗ್ರಾಮದ ಕೆಟೋಳಿರ ರಾಜಾ ಚರ್ಮಣ ಅವರ ಗದ್ದೆಯಲ್ಲಿ ಶಾಲೆಯ 9ನೇ ತರಗತಿಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳು ಕೆಸರು ಗದ್ದೆಯಲ್ಲಿ ಇಳಿದು ನಾಟಿ ನೇಡುವುದರ ಮೂಲಕ ಭತ್ತದ ಬೇಸಾಯದ ಬಗ್ಗೆ ಹೆಚ್ಚಿನ ಮಾಹಿತಿ ಹಾಗೂ ತಮ್ಮ ಹೊಸ ಅನುಭವವನ್ನು ಹಂಚಿಕೊಂಡರು ಕಾರ್ಯಕ್ರಮದಲ್ಲಿ ಶಾಲೆಯ ಕಾರ್ಯದರ್ಶಿಗಳಾದ ರತ್ನಾ ಚರ್ಮಣ ಮಕ್ಕಳ ಜೊತೆಗೆ ಪಾಲ್ಗೊಂಡು ಹೇಗೆ ಭತ್ತದ ಸಸಿ (ಅಗೆ) ತೆಗೆಯುವುದು ನಾಟಿ ಮಾಡುವುದು, ಕಳೆ ಕೀಳುವುದು, ಭತ್ತ ಬೆಳೆಯುವುದು ಎಂಬುದರ ಬಗ್ಗೆ ಗದ್ದೆಯಲ್ಲಿ ಪ್ರಾತ್ಯಕ್ಷತೆಯನ್ನು ಮಾಡಿ ವಿದ್ಯಾರ್ಥಿಗಳಲ್ಲಿ ಭತ್ತದ ಬೇಸಾಯದ ಬಗ್ಗೆ ಆಸಕ್ತಿ ಮೂಡಿಸಿದರು. ಭೂಮಿಯನ್ನು ಬೇಸಾಯ ಮಾಡದೆ ಬಂಜರು ಬಿಡಬಾರದು ಎಂದು ಮನಮುಟ್ಟುವಂತೆ ಸಮಗ್ರ ಮಾಹಿತಿಯನ್ನು ನೀಡಿದರು. ಶಿಕ್ಷಕಿಯರಾದ ಶೈಲಾ ನರೇಶ್ ಮತ್ತು ಶೃತಿ ಭತ್ತದ ನಾಟಿಯ ಬಗ್ಗೆ ಮಾರ್ಗದರ್ಶನ ಮಾಡಿ ಮಕ್ಕಳಿಗೆ ಕಿವಿ ಮಾತು ಹೇಳಿದರು. .
ವರದಿ : ದುಗ್ಗಳ ಸದಾನಂದ.









