
ಮಡಿಕೇರಿ ಸೆ.11 NEWS DESK : ಕರ್ನಾಟಕ ಸರಕಾರದ ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣ ಅವರು ಕರ್ನಾಟಕ ವಿಧಾನ ಪರಿಷತ್ ನ ನೂತನ ನಾಮನಿರ್ದೇಶಿತ ಸದಸ್ಯರಾಗಿ ನೇಮಕಗೊಂಡಿದ್ದಾರೆ. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಮಾಣವಚನ ಸ್ವೀಕರಿಸಿರುವ ಡಾ.ಆರತಿ ಕೃಷ್ಣ ಅವರಿಗೆ ಮಾದಾಪುರದ ಜೇನ್ ಕಾಡು ‘ಎ’ ಎಸ್ಟೇಟ್ ನ ವರದನ್ ಅರುಣ್ ಕುಮಾರ್ ಮತ್ತು ಮನೆಯವರು, ಹಾಕತ್ತೂರಿನ ಬಿಳಿಗೇರಿ ಗ್ರಾಮದ ಹೊಸಬಾಣೆ ಎಸ್ಟೇಟ್ ನ ದಂಬೆಕೋಡಿ ಲವಕುಮಾರ್ ಮತ್ತು ಮನೆಯವರು ಹಾಗೂ ಮಕ್ಕಂದೂರು ಗ್ರೈನ್ ಬ್ಯಾಂಕ್ ನ ಅಧ್ಯಕ್ಷರು ಹಾಗೂ ಮಕ್ಕಂದೂರು ವಿಎಸ್‍ಎಸ್‍ಎನ್ ಬ್ಯಾಂಕ್ ನ ಮಾಜಿ ಅಧ್ಯಕ್ಷರಾದ ಕುಂಭಗೌಡನ ಟಿ.ಪ್ರಸನ್ನ ಅವರು ಶುಭಕೋರಿದ್ದಾರೆ.
ತಮ್ಮ ಅಧಿಕಾರವಧಿಯಲ್ಲಿ ಉತ್ತಮ ಜನಪರ ಕಾರ್ಯಗಳನ್ನು ಮಾಡಲಿ, ಇದಕ್ಕೆ ಎಲ್ಲಾ ದೇವತೆಗಳ ಆಶೀರ್ವಾದ ಇರಲಿ ಎಂದು ಹಾರೈಸಿದ್ದಾರೆ.









