
ವಿರಾಜಪೇಟೆ ಸೆ.13 NEWS DESK : ಕರ್ನಾಟಕ ರಾಜ್ಯ ಅನುಮತಿ ಪಡೆದ ಗುತ್ತಿಗೆದಾರರ ಸಂಘ ಬೆಂಗಳೂರು, ಕೇಂದ್ರ ಸಮಿತಿ ವತಿಯಿಂದ ವಿರಾಜಪೇಟೆಯ ಸದಸ್ಯರಾದ ಎಂ.ಡಿ.ರಫೀಕ್ ಅವರಿಗೆ ಅನಾರೋಗ್ಯಗೊಂಡ ಕಾರಣಕ್ಕೆ 10, 000 ರೂ ಮೊತ್ತದ ಆರ್ಥಿಕ ನೆರವು ನೀಡಲಾಯಿತು. ಜಿಲ್ಲಾ ಸಮಿತಿಯ ಮೂಲಕ ಚೆಕ್ಕನ್ನು ನೀಡಲಾಗಿದ್ದು, ತಾಲ್ಲೂಕು ಸಮಿತಿ ವತಿಯಿಂದ ವಿರಾಜಪೇಟೆಯ ಸಮಿತಿಯ ಕಚೇರಿಯಲ್ಲಿ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯರಾದ ಬಿ.ಎಂ.ಗಣೇಶ್ ಹಾಗೂತಾಲ್ಲೂಕು ಸಮಿತಿ ಅಧ್ಯಕ್ಷರಾದ ಬಿ.ಸಿ. ಭರತ್ ಅವರ ಮೂಲಕ ಎಂ.ಡಿ ರಫೀಕ್ ಅವರಿಗೆ ಚೆಕ್ಕನ್ನು ಹಸ್ತಾಂತರ ಮಾಡಿದರು. ಈ ಸಂದರ್ಭ ವಿರಾಜಪೇಟೆ ಸಮಿತಿಯ ಕಾರ್ಯದರ್ಶಿ ಚಂದ್ರಶೇಖರ್, ಸಂಘಟನಾ ಕಾರ್ಯದರ್ಶಿ ಬಿ.ಎನ್.ರಮೇಶ್ ಹಾಗೂ ಸದಸ್ಯರಾದ ಮನು, ಬಿ.ಸಿ.ಕಿರಣ್, ಇಮ್ರಾನ್ ಉಪಸ್ಥಿತರಿದ್ದರು.








