
ನಾಪೋಕ್ಲು ಸೆ.13 NEWS DESK : ಸುನ್ನೀ ಮುಹಿಯದ್ದೀನ್ ಜುಮಾ ಮಸೀದಿ ವತಿಯಿಂದ ಇಂದಿನಿಂದ ಮೂರು ದಿನ ಆಯೋಜಿಸಿರುವ “ಮದದೇ ಮದೀನ” ಮಿಲಾದ್ ಬೃಹತ್ ಸಮಾವೇಶ ಕಾರ್ಯಕ್ರಮದ ಧ್ವಜಾರೋಹಣವನ್ನು ಮಸೀದಿ ಆವರಣದಲ್ಲಿ ನೆರವೇರಿಸಲಾಯಿತು. ಜುಮುಅ ನಮಾಜ್ ನಂತರ ಜಮಾಯತ್ ಅಧ್ಯಕ್ಷರಾದ ಎಂ.ಹೆಚ್.ಅಬ್ದುಲ್ ರಹಮಾನ್ ಅವರು ಧ್ವಜಾರೋಹನವನ್ನು ನೆರವೇರಿಸಿ, ಖತೀಬ್ ರದ ಹಾಫಿಳ್ ಶೌಕತಲಿ ಪ್ರಾರ್ಥನೆಯನ್ನು ನೆರವೇರಿಸಿದರು. ಈ ಸಂದರ್ಭ ಕೆ.ಎ.ಇಸ್ಮಾಯಿಲ್, ಪಿ.ಎ.ಮನ್ಸೂರ್ ಆಲಿ, ಪಿ.ಎಂ.ಯುನಸ್, ಅಬ್ದುಲ್ ಅಜೀಜ್ ಪಿ.ಎಂ.ಇಸ್ಮಾಯಿಲ್ ಸಖಾಫಿ ಕುಂಡಂಗೇರಿ, ಸಲೀಂ ಹ್ಯಾರಿಸ್, ಶಂಸು ಕಾರೆಕಾಡು, ಅರಫತ್ ಪಿ.ಎಂ, ಹುಸೇನಾರು ತಿರೋವತ್, ಹಮೀದ್ ಸಿ.ಹೆಚ್, ಜಬ್ಬರ್, ಆಸಿಫ್ ಆಲಿ, ಫಾರೂಕ್, ನೌಫಲ್, ಅಬೂಬಕರ್ ಎಂ.ಎಂ, ಅಶ್ರಫ್ ಅಲಿ, ಪಿ.ಎಂ.ಬಜರುದ್ದೀನ್ ಸೇರಿದಂತೆ ಇನ್ನಿತರ ಉಪಸ್ಥಿತರಿದ್ದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಮಾತನಾಡಿದರು. ಮೌಲಿದ್ ಬುರ್ದು, ದಫ್ ಮತ್ತು ಧಾರ್ಮಿಕ ಪ್ರಭಾಷಣ ಸಮಾರಂಭ ಮೀಲಾದ್ ಸಮಿತಿಯ ಅಧ್ಯಕ್ಷರಾದ ಅರಫತ್ ಪಿ.ಎಂ. ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಖತೀಬ್ ಖಲೀಲ್ ಸಖಾಫಿ ಪ್ರಾರ್ಥನೆ ನೆರವೇರಿಸಿದರು. ಕಾರ್ಯಕ್ರಮದ ಉದ್ಘಾಟನೆ ಹಾಗೂ ಪ್ರಭಾಷಣವನ್ನು ಖತೀಬ್ ರದ ಹಾಫಿಳ್ ಶೌಕತಲಿ ಸಖಾಫಿ ನೆರವೇರಿಸಿ ದುಅ ಮಜ್ಜೀಸ್ ನೇತೃತ್ವವನ್ನು ಸೈಯದ್ ಶಿಹಾಬುದ್ದೀನ್ ಅಲ್ ಅಹ್ಹಲ್ ಮುತನೂರ್ ತಂಗಳ್ ವಹಿಸಿದ್ದು ಪ್ರಮುಖ ಗಣ್ಯರು ಉಪಸ್ಥಿತರಿದ್ದರು. ಜಮಾಯತ್ ಅಧ್ಯಕ್ಷರಾದ ಎಂ.ಹೆಚ್.ಅಬ್ದುಲ್ ರಹಮಾನ್ ಅವರ ಅಧ್ಯಕ್ಷತೆಯಲ್ಲಿ ಮದ್ರಸ ಮಕ್ಕಳ ಸಂಸ್ಕೃತಿಕ ಹಾಗೂ ಇನ್ನಿತರ ಕಾರ್ಯಕ್ರಮಗಳು ಜರುಗಲಿದ್ದು, ಭಾನುವಾರ (ಸೆ.14) ಸರ್ವ ಧರ್ಮ ಸಂಗಮ ಸೇರಿದಂತೆ ವಿವಿಧ ಕಾರ್ಯಕ್ರಮಗಳೊಂದಿಗೆ ಮುಕ್ತಾಯಗೊಳ್ಳಲಿದೆ.
ವರದಿ : ದುಗ್ಗಳ ಸದಾನಂದ.









