
ಸೋಮವಾರಪೇಟೆ ಸೆ.13 NEWS DESK : ಕೃಷಿ ಸಂಶೋಧನಾ ಅರ್ಹತಾ ಪರೀಕ್ಷೆಯಲ್ಲಿ ಸೋಮವಾರಪೇಟೆಯ ಬಿ.ಎಂ.ಸೃಜನ್ ದೇಶಕ್ಕೆ 34ನೇ ರ‍್ಯಾಂಕ್ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಪೈಕಿ 18ನೇ ರ‍್ಯಾಂಕ್ ಪಡೆದು ಸಾಧನೆ ತೋರಿದ್ದಾರೆ. ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾನಿಲಯಕ್ಕೆ ಒಳಪಡುವ ಮೈಸೂರು ತೋಟಗಾರಿಕಾ ಕಾಲೇಜಿನಲ್ಲಿ ಬಿ.ಎಸ್.ಸಿ (ಹಾನರ್ಸ)ವ್ಯಾಸಾಂಗ ಮಾಡಿದ್ದ ಶ್ರೇಯಸ್, ಕಳೆದ ಜುಲೈ ತಿಂಗಳಿನಲ್ಲಿ ನಡೆದ ಕೃಷಿ ಸಂಶೋದನಾ ಸ್ನಾತಕೋತ್ತರ ಅರ್ಹತಾ ಪರೀಕ್ಷೆಯಲ್ಲಿ ದೇಶದ ಒಟ್ಟು 42 ಸಾವಿರ ವಿದ್ಯಾರ್ಥಿಗಳ ಪೈಕಿ ಸೃಜನ್ 34ನೇ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಲ್ಲಿ 18ನೇ ರ‍್ಯಾಂಕ್ ಪಡೆಯುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಇವರು ಸೋಮವಾರಪೇಟೆ ಪಟ್ಟಣದ ಬಸ್ಸ್ ಚಾಲಕ ಮೋನಪ್ಪ ಹಾಗೂ ಶ್ರೇಯಾ ಬಟ್ಟೆ ಅಂಗಡಿ ಮಾಲೀಕರು ಹಾಗೂ ಸೋಮವಾರಪೇಟೆ ಮಂಡಲ ಬಿಜೆಪಿ ಕಾರ್ಯದರ್ಶಿ ಇಂದಿರಾ ದಂಪತಿಗಳ ಪುತ್ರ. ಸೃಜನ್ ಸ್ಥಳೀಯ ಸಾಂದೀಪನಿ ಶಾಲೆಯ ಹಳೆಯ ವಿದ್ಯಾರ್ಥಿಯಾಗಿದ್ದಾರೆ.









