
ಸೋಮವಾರಪೇಟೆ ಸೆ.16 NEWS DESK : ಶ್ರೀ ನಾರಾಯಣ ಗುರು ಸೇವಾ ಸಮಿತಿ, ಸೋಮವಾರಪೇಟೆ ತುಳುನಾಡು ಬಿಲ್ಲವ ಮಹಿಳಾ ಸಂಘ ಸಂಯುಕ್ತ ಆಶ್ರಯದಲ್ಲಿ 10ನೇ ವರ್ಷದ ಆಟಿ ಸಂಭ್ರಮೋತ್ಸವ ಹಾಗೂ ವಿದ್ಯಾರ್ಥಿಗಳಿಗೆ ವಿವಿಧ ಕ್ರೀಡಾಕೂಟ ಪ್ರೋತ್ಸಾಹ ಧನ ವಿತರಣಾ ಕಾರ್ಯಕ್ರಮ ನಡೆಯಿತು. ಸೋಮವಾರಪೇಟೆ ಮಾನಸ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಉದ್ಘಾಟಿಸಿ, ಮಾತನಾಡಿ ಜನಾಂಗದ ಮಕ್ಕಳು ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಬೇಕಿದೆ. ಪೋಷಕರು ಮಕ್ಕಳ ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಅದ್ಯತೆ ನೀಡಬೇಕು ಎಂದು ಹೇಳಿದರು. ಶ್ರೀನಾರಾಯಣ ಗುರು ಒಬ್ಬ ತತ್ವಜ್ಞಾನಿ, ಸಮಾಜ ಸುಧಾರಕರಾಗಿದ್ದರು. ಸೋಮವಾರಪೇಟೆಯಲ್ಲಿ ಶ್ರೀ ನಾರಾಯಣ ಗುರು ಸೇವಾ ಸಮಿತಿ ಕಟ್ಟಡೆ ನಿರ್ಮಾಣಕ್ಕೆ 5ಲಕ್ಷ ರೂ.ಗಳ ಅನುದಾನ ಕಲ್ಪಿಸುವುದಾಗಿ ಭರವಸೆ ನೀಡಿದರು. ಮಾಜಿ ಸಚಿವ ಅಪ್ಪಚ್ಚು ರಂಜನ್ ಮಾತನಾಡಿ, ಒಂದು ಜಾತಿ, ಒಂದು ಧರ್ಮ, ಎಲ್ಲಾ ಮಾನವರಿಗೆ ಒಂದೇ ದೇವರು ಎಂದು ಬೋಧನೆ ಮಾಡಿದರು. ಶಿಕ್ಷಣ ಮತ್ತು ಕೃಷಿಯನ್ನು ಪ್ರೋತ್ಸಾಹಿಸಿದರು ಎಂದು ಹೇಳಿದರು. ಕುದ್ರೋಳಿ ಗೋಕರ್ಣನಾಥೆಶ್ವರ ದೇವಾಲಯದ ಕೋಶಾಧಿಕಾರಿ ಪದ್ಮರಾಜ್ ಪೂಜಾರಿ ಮಾತನಾಡಿ, ನಾರಾಯಣ ಗುರುಗಳ ತತ್ವ ಸಿದ್ದಂತಾಗಳನ್ನು ನಾವು ಪಾಲಿಸಬೇಕು, ವಿದ್ಯೆಯಿಂದ ಮಾತ್ರ ನಾವು ಉನ್ನತ ಸಾಧನೆ ಮಾಡಲು ಸಾಧ್ಯ, ಸಂಘಟನೆಯನ್ನು ಬಳಪಡಿಸಲು ಎಲ್ಲರ ಸಹಕಾರ ಅತ್ಯವಶ್ಯಕ, ಇಂದು ನಾರಾಯಣ ಗುರು ಸೇವಾ ಸಮಿತಿಯ ಅನೇಕರು ಉನ್ನತ ಸಾಧನೆ ಮಾಡುತ್ತಿದ್ದಾರೆ ಇವರನ್ನು ನಾವು ಪ್ರೋತ್ಸಾಹಿಸಿ ಬೆಳೆಸಬೇಕು ಎಂದರು. ರಾಜ್ಯ ಶ್ರೀ ನಾರಾಯಣ ಗುರು ವಿಚಾರಣ ವೇದಿಕೆ ರಾಜ್ಯ ಅಧ್ಯಕ್ಷ ಸತ್ಯಜಿತ್ ಸುರತ್ಕಲ್ ಮಾತನಾಡಿ ಶಿಕ್ಷಣ ಪಡೆದು ಸಾಧನೆ ಮಾಡಿ ನಮ್ಮ ಜನಾಂಗದ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ, ಸರ್ವ ಜನಾಂಗವು ಒಂದೇ ಜಾತಿ ಮಾತ ಭೇದ ಎಂದು ಕಚ್ಚಡದಿರಿ, ಇಂದು ಅನೇಕ ಸರ್ಕಾರದ ಸೌಲಭ್ಯ ಪಡೆಯಲು ನಮ್ಮ ಸಂಘಟನೆ ಪರೀತಫೀಸುತಿದ್ದ ಇದಕ್ಕೆ ಕಾರಣ ನಾವು ಸಂಘಟಕಾರಗದೆ ಇರುವುದು, ಶ್ರೀ ನಾರಾಯಣ ಗುರು ಸೇವಾ ಸಮಿತಿಯ ಎಲ್ಲಾ ಬೇರೆಬೇರೆ ಸಂಘಟಕರು ಒಂದಾಗಿ ಕೆಲವೊಂದು ಸೌಲಭ್ಯ ಪಡೆಯಲು ಹೋರಾಟ ಮಾಡಬೇಕಿದೆ, ಸಂಘಟನೆ ಬೇರೆ ಇರಬಹುದು ಆದರೆ ಈ ಎಲ್ಲಾ ಸಂಘಟನೆಯ ತತ್ವ ಸಿದ್ದಂತ ಒಂದೇ ಆಗಿದೆ ಎಂದರು. ಕೊಡಗು ಜಿಲ್ಲಾ ಬಿಲ್ಲವ ಸಂಘದ ಅಧ್ಯಕ್ಷ ಲಿಂಗಪ್ಪ ಪೂಜಾರಿ, ಸಾಮಾಜಿಕ ಕಾರ್ಯಕರ್ತ ಪದ್ಮನಾಭ, ಸಮಿತಿಯ ತಾಲ್ಲೂಕು ಅಧ್ಯಕ್ಷರಾದ ಬಿ. ಆರ್. ಚಂದ್ರಹಾಸ, ತುಳುನಾಡ ಬಿಲ್ಲವ ಮಹಿಳಾ ಸಂಘದ ತಾಲೂಕು ಅಧ್ಯಕ್ಷೆ ಬೇಬಿ ಚಂದ್ರಹಾಸ, ಪ್ರಮುಖರಾದ ಬಿ.ಎಸ್.ಶ್ರೀಧರ್, ಸುಧೀರ್, ಮಣಿ ಮುಖೇಶ್, ಪ್ರದೀಪ್, ಇಂದಿರಾ ಮೊಣಪ್ಪ ಇದ್ದರು. ಶೈಕ್ಷಣಿಕ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು. ಇದೆ ಸಂದರ್ಭ ವಿವಿಧ ಕ್ರೀಡಾಕೂಟ ನಡೆಯಿತು. ಶೈಕ್ಷಣಿಕ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು. ವಿಶ್ವ ಕುಂಬೂರು ಹಾಗೂ ದಿನೇಶ್ ಮಾಲಂಬಿ ಕಾರ್ಯಕ್ರಮ ನಿರ್ವಹಿಸಿದರು.









