Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಜಮೀನು ತೆರವು ಕಾರ್ಯಾಚರಣೆ : ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಮಸಗೋಡು ಗ್ರಾಮಸ್ಥರ ಅಸಮಾಧಾನ*
  • *ಎಸ್‌ಎಸ್‌ಎಲ್‌ಸಿ ಪರೀಕ್ಷೆ ಇಂದಿನಿಂದ ಶುರು: 8.65 ಲಕ್ಷ ವಿದ್ಯಾರ್ಥಿಗಳಿಗೆ ಅಗ್ನಿಪರೀಕ್ಷೆ; ಪರೀಕ್ಷಾ ಕೇಂದ್ರಗಳ ಸುತ್ತ 144 ನಿಷೇಧಾಜ್ಞೆ ಜಾರಿ!*
  • *ಕೊಡಗಿನಲ್ಲಿ ವನ್ಯಜೀವಿ ಉಪಟಳ : ಅರಣ್ಯ ಸಚಿವರಿಂದ ಮಹತ್ವದ ಸಭೆ : ಶಾಸಕದ್ವಯರು ಭಾಗಿ*
  • *ಏ.2 ರಂದು ಸೋಮವಾರಪೇಟೆ ತಾ.ಪಂ.ಕೆಡಿಪಿ ಸಭೆ*
  • *ವಿರಾಜಪೇಟೆಯ ಮಲೆ ಮಹದೇಶ್ವರ ದೇವಾಲಯದ ವಾರ್ಷಿಕ ಉತ್ಸವ*
  • *ಮಾ.15 ರಂದು ಮೂರ್ನಾಡು ಗೌಡ ಮಹಿಳಾ ಒಕ್ಕೂಟದಿಂದ ಮಹಿಳಾ ದಿನಾಚರಣೆ*
  • *ವಿರಾಜಪೇಟೆ ಶ್ರೀ ಮುತ್ತಪ್ಪ ದೇವಾಲಯದ ತೆರೆ ಮಹೋತ್ಸವಕ್ಕೆ ಚಾಲನೆ*
  • *ಫಾಸ್ಟ್ ಪುಡ್(ಚಾಟ್ಸ್ ಸೆಂಟರ್) ತಯಾರಿಕೆ ತರಬೇತಿಗೆ ಅರ್ಜಿ ಆಹ್ವಾನ*
  • *ಕೋಟ್ಪಾ ಕಾಯ್ದೆ ಉಲ್ಲಂಘನೆ : 1800 ರೂ.ದಂಡ*
  • *ಸ್ವ-ಉದ್ಯೋಗ ತರಬೇತಿಗೆ ಅರ್ಜಿ ಆಹ್ವಾನ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಡಿಜೆ ಬೇಕಾ ಡಿಜೆ… ಗರ್ಭದಲ್ಲಿರುವ ಮಗುವಿನ ಮೇಲೆ ಶಬ್ದದ ಪರಿಣಾಮ : ಡಾ.ಕೆ.ಬಿ.ಸೂರ್ಯಕುಮಾರ್*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಡಿಜೆ ಬೇಕಾ ಡಿಜೆ… ಗರ್ಭದಲ್ಲಿರುವ ಮಗುವಿನ ಮೇಲೆ ಶಬ್ದದ ಪರಿಣಾಮ : ಡಾ.ಕೆ.ಬಿ.ಸೂರ್ಯಕುಮಾರ್*

ಸೆಪ್ಟೆಂಬರ್ 17, 20252 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮಡಿಕೇರಿ NEWS DESK ಸೆ.17 : ಮಹಾಭಾರತದಲ್ಲಿ ಶ್ರೀಕೃಷ್ಣ ತನ್ನ ತಂಗಿ ಸುಭದ್ರೆಗೆ ಯುದ್ಧದಲ್ಲಿನ ಅಭೇದ್ಯವ್ಯೂಹಗಳ ಭೇದನೆಯನ್ನು ವಿವರಿಸುವಾಗ ಗರ್ಭದಲ್ಲಿದ್ದ ಅಭಿಮನ್ಯು ಅದನ್ನು ಕೇಳಿ ತಿಳಿದು, ಮುಂದೆ ಧನುರ್ವಿದ್ಯಾಪಾರಂಗತನಾದ.  ವೈಜ್ಞಾನಿಕ ಸಂಶೋಧನೆಯ ಪ್ರಗತಿಯಿಂದ ಗರ್ಭಾಶಯವು ಶಬ್ದರಹಿತವಲ್ಲ ಎಂಬುದು ತಿಳಿದುಬಂದಿದೆ. ಗರ್ಭದೊಳಗಿನ ಮಗುವಿಗೆ ಹೊರ ಜಗತ್ತಿನಿಂದ ಬರುವ ಜೋರಾದ ಶಬ್ದಗಳು ಗರ್ಭರಸದ ( ಅಮ್ನಿಯೋಟಿಕ್ ಫ್ಲೂಯಿಡ್) ಮೂಲಕ ತಲುಪಬಹುದು ಮತ್ತು ನೇರವಾಗಿ ಹಾನಿಕರ ಪರಿಣಾಮ ಬೀರಬಹುದು ಎಂಬುದು ಸಾಬೀತಾಗಿದೆ.  ಗರ್ಭದಲ್ಲಿ ಮಗು ಶಬ್ದವನ್ನು ಹೇಗೆ ಕೇಳುತ್ತದೆ?…  ಮಗುವಿನ ಶ್ರವಣ ಶಕ್ತಿಯು ಗರ್ಭಾವಸ್ಥೆಯ ಆರಂಭದಲ್ಲಿಯೇ ಬೆಳವಣಿಗೆಯಾಗಲು ಪ್ರಾರಂಭವಾಗುತ್ತದೆ. ಸುಮಾರು ಹದಿನೆಂಟು ವಾರಗಳಲ್ಲಿ,  ತಾಯಿಯ ದೇಹದ ಒಳಗಿನ ಶಬ್ದಗಳಾದ ಹೃದಯ ಬಡಿತ, ಜೀರ್ಣಕ್ರಿಯೆಯ ಶಬ್ದ ಮತ್ತು ತಾಯಿಯ ಧ್ವನಿಯನ್ನು ಕೇಳುವಷ್ಟು  ಕಿವಿಯ ರಚನೆಯು ಬೆಳೆದಿರುತ್ತದೆ. ಮೂರನೇ ತ್ರೈಮಾಸಿಕದ ವೇಳೆಗೆ, ಮಗುವು ಹೊರಗಿನ ಜಗತ್ತಿನಿಂದ ಬರುವ ಶಬ್ದಗಳಾದ ಸಂಗೀತ ಮತ್ತು ಧ್ವನಿಗಳನ್ನು ಗುರುತಿಸಬಹುದು ಮತ್ತು ಅವುಗಳಿಗೆ ಪ್ರತಿಕ್ರಿಯಿಸಬಹುದು. *ಜೋರಾದ ಶಬ್ದದಿಂದ ಉಂಟಾಗುವ ಅಪಾಯಗಳು…* ತಾಯಿಯ ದೇಹದ ಹೊದಿಕೆಗಳಾದ ಹೊಟ್ಟೆಯ ಗೋಡೆ ಮತ್ತು ಗರ್ಭರಸವು ಮಗುವಿಗೆ ಕೆಲವು ರಕ್ಷಣೆಯನ್ನು ಒದಗಿಸಿದರೂ, ಇದು ಸಂಪೂರ್ಣವಲ್ಲ. ಭಾರೀ ಸಂಚಾರದ ಶಬ್ದ, ಮಿಕ್ಸರ್, ಡಿ ಜೇ ಗಳಂತಹ  85 ಡೆಸಿಬಲ್‌ಗಿಂತ ಹೆಚ್ಚಿನ ಧ್ವನಿಯು ಗರ್ಭದಲ್ಲಿನ ಮಗುವಿನವರೆಗೆ ತಲುಪಿ ಅದರ ಕಿವಿಯ ಒಳಗಿನ  ಕೂದಲಿನಂತಹ ಸೂಕ್ಷ್ಮ ಜೀವಕೋಶಗಳಿಗೆ ಹಾನಿಯುಂಟು ಮಾಡಬಹುದು. ಸಂಶೋಧನೆಗಳ ಪ್ರಕಾರ, ದೀರ್ಘಕಾಲದವರೆಗೆ ಅಥವಾ ಪದೇ ಪದೇ ಈ ರೀತಿಯ ಶಬ್ದಕ್ಕೆ ಒಡ್ಡಿಕೊಳ್ಳುವುದು ನವಜಾತ ಶಿಶುಗಳಲ್ಲಿ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು: – ಕಿವುಡತನದ ಅಪಾಯ: ಗರ್ಭದ ಮಗುವಿನ ಸೂಕ್ಷ್ಮ ಶ್ರವಣ ವ್ಯವಸ್ಥೆಯು ಇನ್ನೂ ಬೆಳವಣಿಗೆಯಲ್ಲಿರುವುದರಿಂದ, ಜೋರಾದ ಶಬ್ದವು ಶಾಶ್ವತ ಕಿವುಡತನಕ್ಕೆ ಕಾರಣವಾಗಬಹುದು. ಇದು ವಯಸ್ಕರಿಗೆ ಶಬ್ದದಿಂದ ಉಂಟಾಗುವ ಹಾನಿಯಂತೆಯೇ ಗಂಭೀರವಾಗಿದೆ. – ಕಡಿಮೆ ತೂಕದ ಜನನ ಮತ್ತು ಅಕಾಲಿಕ ಜನನ: ಕೆಲವು ಸನ್ನಿವೇಶಗಳಲ್ಲಿ ತಾಯಿಯು ಜೋರಾದ ಶಬ್ದಕ್ಕೆ ಒಡ್ಡಿಕೊಂಡರೆ, ಕಡಿಮೆ ತೂಕದ ಮಗು ಮತ್ತು ಅಕಾಲಿಕ ಜನನದ ಅಪಾಯ ಹೆಚ್ಚಾಗುತ್ತದೆ. – ಒತ್ತಡದ ಹೆಚ್ಚಳ: ಜೋರಾದ ಶಬ್ದವು ತಾಯಿಯಲ್ಲಿ ಒತ್ತಡದ ಪ್ರತಿಕ್ರಿಯೆಯನ್ನು ಉಂಟುಮಾಡಿ  ಕಾರ್ಟಿಸಾಲ್‌ನಂತಹ ಒತ್ತಡದ ಹಾರ್ಮೋನ್‌ಗಳು ಬಿಡುಗಡೆಯಾಗುತ್ತವೆ. ಈ ಹಾರ್ಮೋನ್‌ಗಳು ಗರ್ಭಕೋಶದ ಮೂಲಕ ಮಗುವಿನ ಬೆಳವಣಿಗೆಯ ಮೇಲೆ ಪರಿಣಾಮ ಬೀರಬಹುದು. ಟಿನಿಟಸ್: ಮಗುವಿಕೆ ಮುಂದೆ ಕಿವಿಯಲ್ಲಿ ಜಿಣ್‌ಜಿಣ್, ಗುಂಞಿಗುಡುವಿಕೆ, ಅಥವಾ ಶಿಳ್ಳೆಯಂತಹ ಶಬ್ದ ಕೇಳಿಸುತ್ತದೆ. ಇದು ನಿದ್ರೆಗೆ, ಗಮನಕ್ಕೆ, ಮತ್ತು ದೈನಂದಿನ ಕೆಲಸಕ್ಕೆ ತೊಂದರೆ ಉಂಟುಮಾಡುತ್ತದೆ. *ಗರ್ಭದಲ್ಲಿರುವ ಮಗುವನ್ನು ಹೇಗೆ ರಕ್ಷಿಸುವುದು?* ಗರ್ಭಾವಸ್ಥೆಯ ಎರಡನೇ ಮತ್ತು ಮೂರನೇ ತ್ರೈಮಾಸಿಕದಲ್ಲಿ ಮಗುವು ಅತ್ಯಂತ ಸೂಕ್ಷ್ಮವಾಗಿರುವುದರಿಂದ, ತಾಯಿಯು ತನ್ನ ಸುತ್ತಮುತ್ತಲಿನ ಶಬ್ದದ ಪರಿಸರದ ಬಗ್ಗೆ ಎಚ್ಚರಿಕೆಯಿಂದಿರಬೇಕು. ಸಂಪೂರ್ಣ ಮೌನದಲ್ಲಿ ಬದುಕುವ ಅಗತ್ಯವಿಲ್ಲವಾದರೂ, ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದು ಕೊಳ್ಳುವುದು ಬುದ್ದಿವಂತಿಕೆಯ ಲಕ್ಷಣಗಳು. *ಅತಿಯಾದ ಶಬ್ದದ ವಾತಾವರಣವನ್ನು ತಪ್ಪಿಸಿ..* ಜೋರಾದ ಸಂಗೀತ ಕಚೇರಿಗಳು, ಡಿ ಜೇ ಇರುವ ಸ್ಥಳಗಳು, ನೈಟ್‌ಕ್ಲಬ್‌ಗಳು ಮತ್ತು ಕಟ್ಟದ ನಿರ್ಮಾಣ ಸ್ಥಳಗಳಂತಹ ದೀರ್ಘಕಾಲದ ಜೋರಾದ ಶಬ್ದದ ಸ್ಥಳಗಳಿಂದ ದೂರವಿರಿ.  ದೈನಂದಿನ ಚಟುವಟಿಕೆಗಳಲ್ಲಿ ಎಚ್ಚರಿಕೆ.. ಹೆಡ್‌ಫೋನ್‌ಗಳು, ಟೆಲಿವಿಷನ್‌ ಮತ್ತು ಸ್ಪೀಕರ್‌ಗಳ ಧ್ವನಿಯನ್ನು ಕಡಿಮೆ ಮಾಡಿ.  ನಿಮ್ಮ ಕೆಲಸದ ಸ್ಥಳವು ಶಬ್ದಮಯವಾಗಿದ್ದರೆ, ಶಬ್ದದ ಒಡ್ಡಿಕೊಳ್ಳುವಿಕೆಯನ್ನು ಕಡಿಮೆ ಮಾಡಲು ಸೂಕ್ತ ವ್ಯವಸ್ಥೆಗಳನ್ನು ಮಾಡಿಕೊಳ್ಳಿ. ಶಾಂತ ಮತ್ತು ಸೌಮ್ಯವಾದ ವಾತಾವರಣವನ್ನು ಆಯ್ಕೆ ಮಾಡಿಕೊಂಡು ವಿಶ್ರಾಂತಿ ಪಡೆಯಿರಿ. ಇದು ತಾಯಿಯ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಒಳ್ಳೆಯದು ಮತ್ತು ಮಗುವಿಗೆ ಶಾಂತಿಯುತ ವಾತಾವರಣವನ್ನು ಒದಗಿಸುತ್ತದೆ. ಆದುದರಿಂದ ಸಾರ್ವಜನಿಕರಲ್ಲಿ  ನನ್ನ ಒಂದು ಕಳಕಳಿಯ ಮನವಿ. ಆಸ್ಪತ್ರೆಗಳಿರುವ ಸ್ಥಳಗಳಲ್ಲಿ, ಅದರಲ್ಲೂ ಹೆರಿಗೆ ಆಸ್ಪತ್ರೆಯ ಹತ್ತಿರದಲ್ಲಿ ಅತಿಯಾದ ಡಿಜೆ ಶಬ್ದಗಳನ್ನು ಬಳಸಿ ಇನ್ನೂ ಪ್ರಪಂಚವನ್ನೇ ಕಾಣದಿರುವ ಮುಗ್ದ ಮಕ್ಕಳಿಗೆ ಘೋರ ಅನ್ಯಾಯ ಮಾಡದಿರಿ. ಡಿಜೆ ಸಂಗೀತವು ಕೆಲವರಿಗೆ ಮನರಂಜನೆಯಾದರೂ, ಅದರಿಂದ ಆಗುವ ಆರೋಗ್ಯದ ಹಾನಿಯನ್ನು ನಾವು ನಿರ್ಲಕ್ಷಿಸಬಾರದು. ಇದರಿಂದಾಗುವ ಕಿವಿ ಕೇಳುವ ( ಶ್ರವಣ ) ಶಕ್ತಿಯ ನಷ್ಟ, ಹೃದಯದ ಮೇಲೆ ಒತ್ತಡ, ಮತ್ತು ಮಾನಸಿಕ ತೊಂದರೆಗಳು ದೀರ್ಘಕಾಲೀನವಾಗಿರ ಬಹುದು. ಆದ್ದರಿಂದ ಎಲ್ಲರೂ ಒಟ್ಟಾಗಿ, ಧ್ವನಿಯ ಮಾಲಿನ್ಯವನ್ನು ಕಡಿಮೆ ಮಾಡುವ ಮೂಲಕ ಆರೋಗ್ಯಕರ ಸಮಾಜವನ್ನು ಕಾಪಾಡಿಕೊಳ್ಳಬೇಕು. ಕ್ಷಣಿಕ ಮನರಂಜನೆಗಿಂತ ದೀರ್ಘಕಾಲದ  ಆರೋಗ್ಯವೇ ಮುಖ್ಯ ಎಂಬುದನ್ನು ಎಲ್ಲರೂ ನೆನಪಿನಲ್ಲಿಟ್ಟುಕೊಳ್ಳಬೇಕು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಜಮೀನು ತೆರವು ಕಾರ್ಯಾಚರಣೆ : ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಮಸಗೋಡು ಗ್ರಾಮಸ್ಥರ ಅಸಮಾಧಾನ*

ಮಾರ್ಚ್ 18, 2026

*ಎಸ್‌ಎಸ್‌ಎಲ್‌ಸಿ ಪರೀಕ್ಷೆ ಇಂದಿನಿಂದ ಶುರು: 8.65 ಲಕ್ಷ ವಿದ್ಯಾರ್ಥಿಗಳಿಗೆ ಅಗ್ನಿಪರೀಕ್ಷೆ; ಪರೀಕ್ಷಾ ಕೇಂದ್ರಗಳ ಸುತ್ತ 144 ನಿಷೇಧಾಜ್ಞೆ ಜಾರಿ!*

ಮಾರ್ಚ್ 18, 2026

*ಕೊಡಗಿನಲ್ಲಿ ವನ್ಯಜೀವಿ ಉಪಟಳ : ಅರಣ್ಯ ಸಚಿವರಿಂದ ಮಹತ್ವದ ಸಭೆ : ಶಾಸಕದ್ವಯರು ಭಾಗಿ*

ಮಾರ್ಚ್ 18, 2026

*ಎಸ್‌ಎಸ್‌ಎಲ್‌ಸಿ ಪರೀಕ್ಷೆ ಇಂದಿನಿಂದ ಶುರು: 8.65 ಲಕ್ಷ ವಿದ್ಯಾರ್ಥಿಗಳಿಗೆ ಅಗ್ನಿಪರೀಕ್ಷೆ; ಪರೀಕ್ಷಾ ಕೇಂದ್ರಗಳ ಸುತ್ತ 144 ನಿಷೇಧಾಜ್ಞೆ ಜಾರಿ!*

ಮಾರ್ಚ್ 18, 2026 ಇತ್ತೀಚಿನ ಸುದ್ದಿಗಳು ಕರ್ನಾಟಕ

ಬೆಂಗಳೂರು, ಮಾರ್ಚ್ 18, 2026: ಕರ್ನಾಟಕದ ಶೈಕ್ಷಣಿಕ ಇತಿಹಾಸದ ಪ್ರಮುಖ ಘಟ್ಟವಾದ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಇಂದು ಬುಧವಾರದಿಂದ ಆರಂಭವಾಗಿವೆ. ಏಪ್ರಿಲ್…

*ಕೊಡಗಿನಲ್ಲಿ ವನ್ಯಜೀವಿ ಉಪಟಳ : ಅರಣ್ಯ ಸಚಿವರಿಂದ ಮಹತ್ವದ ಸಭೆ : ಶಾಸಕದ್ವಯರು ಭಾಗಿ*

ಮಾರ್ಚ್ 18, 2026

*ಏ.2 ರಂದು ಸೋಮವಾರಪೇಟೆ ತಾ.ಪಂ.ಕೆಡಿಪಿ ಸಭೆ*

ಮಾರ್ಚ್ 17, 2026

*ವಿರಾಜಪೇಟೆಯ ಮಲೆ ಮಹದೇಶ್ವರ ದೇವಾಲಯದ ವಾರ್ಷಿಕ ಉತ್ಸವ*

ಮಾರ್ಚ್ 17, 2026

*ಮಾ.15 ರಂದು ಮೂರ್ನಾಡು ಗೌಡ ಮಹಿಳಾ ಒಕ್ಕೂಟದಿಂದ ಮಹಿಳಾ ದಿನಾಚರಣೆ*

ಮಾರ್ಚ್ 17, 2026

*ವಿರಾಜಪೇಟೆ ಶ್ರೀ ಮುತ್ತಪ್ಪ ದೇವಾಲಯದ ತೆರೆ ಮಹೋತ್ಸವಕ್ಕೆ ಚಾಲನೆ*

ಮಾರ್ಚ್ 17, 2026

*ಫಾಸ್ಟ್ ಪುಡ್(ಚಾಟ್ಸ್ ಸೆಂಟರ್) ತಯಾರಿಕೆ ತರಬೇತಿಗೆ ಅರ್ಜಿ ಆಹ್ವಾನ*

ಮಾರ್ಚ್ 17, 2026

*ಕೋಟ್ಪಾ ಕಾಯ್ದೆ ಉಲ್ಲಂಘನೆ : 1800 ರೂ.ದಂಡ*

ಮಾರ್ಚ್ 17, 2026

*ಸ್ವ-ಉದ್ಯೋಗ ತರಬೇತಿಗೆ ಅರ್ಜಿ ಆಹ್ವಾನ*

ಮಾರ್ಚ್ 17, 2026

*ಅಡುಗೆ ಅನಿಲದ ಕೊರತೆ : ಕೇಂದ್ರ ವಿರುದ್ಧ ಕುಶಾಲನಗರದಲ್ಲಿ ಪ್ರತಿಭಟನೆ*

ಮಾರ್ಚ್ 17, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.