
ನಾಪೋಕ್ಲು NEWS DESK : ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 75ನೇ ಜನ್ಮದಿನದ ಪ್ರಯುಕ್ತ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಶ್ರಮದಾನ ಮಾಡಲಾಯಿತು. ನಾಪೋಕ್ಲು ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖರು ಹಾಗೂ ಸದಸ್ಯರು ಹಿಂದೂ ರುದ್ರಭೂಮಿಯ ಆವರಣದಲ್ಲಿದ್ದ ಕಾಡು ಗಿಡ ಗಂಟಿಗಳನ್ನು ಕಡಿದು ತೆರವುಗೊಳಿಸುವುದರ ಮೂಲಕ ಸ್ವಚ್ಚತಾ ಕಾರ್ಯ ನಡೆಸಿ ಶ್ರಮದಾನ ಮಾಡಲಾಯಿತು. ಈ ಸಂದರ್ಭ ನಾಪೋಕ್ಲು ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖ ಅಂಬಿ ಕಾರ್ಯಪ್ಪ ಸಹ ಪ್ರಮುಖರು, ಬೂತ್ ಅಧ್ಯಕ್ಷರುಗಳು, ಕಾರ್ಯಕರ್ತರುಗಳಿಗೆ ಹಣ್ಣು ಹಂಪಲು ಹಾಗೂ ಜ್ಯೂಸ್ ವಿತರಿಸುವ ಮೂಲಕ ನರೇಂದ್ರ ಮೋದಿಯವರ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಿದರು. ಗ್ರಾಮ ಪಂಚಾಯಿತಿ ಸದಸ್ಯ ಬಿ.ಎಂ.ಪ್ರತೀಪ, ಪ್ರವೀಣ ಬಿ.ಎಸ್, ಲೋಹಿತ್ ಕೆ.ಎಸ್., ಸಂದೇಶ್, ಜೀವನ್, ಶಾಜೇಶ್, ಜಗದೀಶ್ ಕೆ.ವಿ, ನವೀನ್, ಗಿರೀಶ್ ಬಿ.ಎಸ್, ಗಿರೀಶ್ ಬಿ.ಜಿ.ಕಿರಣ, ದರ್ಶನ್, ಮಹೇಶ್, ಶೇಕರ ಹಾಗೂ ಇತರ ಕಾರ್ಯಕರ್ತರಿದ್ದರು.
ವರದಿ : ದುಗ್ಗಳ ಸದಾನಂದ.








