
ನಾಪೋಕ್ಲು ಸೆ.18 NEWS DESK : ನಾಲ್ಕುನಾಡ್ ವ್ಯಾಪ್ತಿಯ ನಾಪೋಕ್ಲು ಮುಸ್ಲಿಂ ಜಮಾಅತ್ ಅಧೀನದಲ್ಲಿ ಆಯೋಜಿಸಲಾಗಿದ್ದ ಮದದೇ ಮದೀನ ಮಿಲಾದ್ ಬೃಹತ್ ಸಮಾವೇಶ ರ‍್ಯಾಲಿಯಲ್ಲಿ ಕುಂಜಿಲ-ಪಯ್‍ನರಿ ಯುವಕರ ದಫ್ ತಂಡವು ಅತ್ಯುತ್ತಮ ದಫ್ ಪ್ರದರ್ಶನ ನೀಡಿ ಪ್ರಥಮ ಸ್ಥಾನವನ್ನು ತಮ್ಮದಾಗಿಸಿಕೊಂಡಿದೆ. ಈ ಬಹುಮಾನವನ್ನು ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಶಾಸಕರಾದ ಎ.ಎಸ್.ಪೊನ್ನಣ್ಣ ಅವರಿಂದ ಪಡೆದುಕೊಂಡರು. ಕಾರ್ಯಕ್ರಮದಲ್ಲಿ ತಂಡದ ತರಬೇತುದಾರ ಪಯ್ಯಡಿ ರಶೀದ್ ಉಸ್ತಾದ್, ನಾಯಕ ರಝಕ್ ಅಲಿ (ಜಜ್ಜು) ಮತ್ತು ಪಯ್‍ನರಿ ಸುನ್ನಿ ಮುಸ್ಲಿಂ ಜಮಾಅತ್ತಿನ ಅಧ್ಯಕ್ಷರಾದ ಸೌಕತ್ ಅಲಿ ಮಕ್ಕಿ, ಖಲೀಲ್ ಮತ್ತು ಅಝರುದ್ದೀನ್ ಉಪಸ್ಥಿತರಿದ್ದರು.
ವರದಿ : ದುಗ್ಗಳ ಸದಾನಂದ.









