ಮಡಿಕೇರಿ ಆ..21 – ಕಡಗದಾಳು ಸಕಾ೯ರಿ ಪ್ರೌಡಶಾಲೆಯಲ್ಲಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಹಿರಿಯ ನಾಗರಿಕರ ದಿನಾಚರಣೆ ಆಯೋಜಿತವಾಗಿತ್ತು.
ಗ್ರಾಮದ ಹಿರಿಯರಾದ, ಶಾಲೆಯ ಹಳೇ ವಿದ್ಯಾಥಿ೯ಗಳೂ ಆಗಿದ್ದ ಸುಮಿತ್ರಾ ಮತ್ತು ತಂಗಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾಯ೯ಕ್ರಮದಲ್ಲಿ ಮಾತನಾಡಿದ ರೋಟರಿ ಮಿಸ್ಟಿ ಹಿಲ್ಸ್ ನಿದೇ೯ಶಕ ಪ್ರಸಾದ್ ಗೌಡ, ಮಕ್ಕಳು ಹಿರಿಯರನ್ನು ಮನೆಯಲ್ಲಿ ಮತ್ತು ಸಮಾಜದಲ್ಲಿ ಗೌರವ ಭಾವನೆಯಿಂದ ಕಾಣಬೇಕು. ಹಿರಿಯರಿಗೆ ಗೌರವ ನೀಡುವ ಮೂಲಕ ಶ್ರೇಷ್ಟವಾದ ಮೌಲ್ಯವನ್ನು ಜೀವನದಲ್ಲಿ ವಿದ್ಯಾಥಿ೯ಗಳು ಅಳವಡಿಸಿಕೊಂಡಂತಾಗುತ್ತದೆ ಎಂದರು. ರೋಟರಿ ಮಿಸ್ಟಿ ಹಿಲ್ಸ್ ಜಿಲ್ಲೆಯಾದ್ಯಂತಲಿನ 26 ಶಾಲೆಗಳಲ್ಲಿ ವಿಶ್ವಹಿರಿಯ ನಾಗರಿಕರ ದಿನದ ಪ್ರಯುಕ್ತ 85 ಹಿರಿಯಜೀವಿಗಳನ್ನು ಗೌರವಿಸುವ ಕಾಯ೯ಕ್ಕೆ ಮುಂದಾಗಿದೆ ಎಂದೂ ಪ್ರಸಾದ್ ಗೌಡ ಮಾಹಿತಿ ನೀಡಿದರು.
ಶಾಲಾ ಮುಖ್ಯಶಿಕ್ಷಕಿ ಡೈಸಿ ಮಾತನಾಡಿ, ಹಿರಿಯರನ್ನು ಗೌರವಿಸುವುದು ವಿದ್ಯಾಥಿ೯ಗಳ ಜೀವನದಲ್ಲಿ ಆದ್ಯತೆಯಾಗಬೇಕೆಂದು ಕರೆ ನೀಡಿದರು.
ಶಾಲಾ ಶಿಕ್ಷಕಿ ಪಿ.ಕೆ. ಪವಿತ್ರ ವಂದಿಸಿದ ಕಾಯ೯ಕ್ರಮವನ್ನು ಮಿಸ್ಟಿ ಹಿಲ್ಸ್ ನಿದೇ೯ಶಕ ಮೋಹನ್ ಪ್ರಭು ನಿವ೯ಹಿಸಿದರು. ಶಿಕ್ಷಕಿಯರಾದ ನಮಿತಾ ಮತ್ತು ಪವಿತ್ರ ಸನ್ಮಾನಿತ ಹಿರಿಯರನ್ನು ಪರಿಚಯಿಸಿದರು. ವಿದ್ಯಾಥಿ೯ಗಳಾದ ರೇಷ್ಮ ಮತ್ತು ರಾಘವಿ ಹಿರಿಯರ ಮಹತ್ವವನ್ನು ಸಭೆಗೆ ಹೇಳಿದರು. ಶಿಕ್ಷಕಿ ಭಾರತಿ ನಿರೂಪಿಸಿದರು. ಇನ್ನರ್ ವೀಲ್ ನಿದೇ೯ಶಕಿ ಶಮ್ಮಿ ಪ್ರಭು, ಶಾಲಾ ಶಿಕ್ಷಕಿಯರು ಹಾಜರಿದ್ದರು.







