ಮಡಿಕೇರಿ NEWS DESK ಸೆ.7 : ಮಡಿಕೇರಿ ನಗರದ ಕನ್ನಂಡಬಾಣೆ ಬಡಾವಣೆಯ ಶ್ರೀದೃಷ್ಟಿ ಗಣಪತಿ ದೇವಾಲಯದಲ್ಲಿ ಶ್ರೀಗಣೇಶ ಚತುರ್ಥಿ ಶ್ರದ್ಧಾಭಕ್ತಿಯಿಂದ ಜರುಗಿತು. ಹೋಮ ಹವನಾದಿ, ವಿವಿಧ ಧಾರ್ಮಿಕ ಕೈಂಕರ್ಯ, ಅಭಿಷೇಕ, ಅಲಂಕಾರ ಪೂಜೆ, ಅರ್ಚನೆ, ಮಹಾಪೂಜೆಗೆ ನೂರಾರು ಭಕ್ತರು ಸಾಕ್ಷಿಯಾದರು. ಭಕ್ತರಿಗೆ ಪ್ರಸಾದ ಹಾಗೂ ಅನ್ನಸಂತರ್ಪಣೆಯ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.
ಲೇಖಕ: admin
ಮಡಿಕೇರಿ NEWS DESK ಸೆ.7 : ಕೊಡವಾಮೆರ ಕೊಂಡಾಟ ಸಂಘಟನೆಯ ಬೇಡಿಕೆಯಂತೆ ಕೊಡಗು ಜಿಲ್ಲೆಗೆ ಪ್ರತ್ಯೇಕ ಅರಣ್ಯ ವಲಯ ಘೋಷಣೆ ಕುರಿತು ಬೆಂಗಳೂರಿನ ಅರಣ್ಯ ಭವನದಲ್ಲಿ ನಡೆದ ರಾಜ್ಯ ವನ್ಯಜೀವಿ ಮಂಡಳಿ ಸಭೆಯಲ್ಲಿ ಅನೌಪಚಾರಿಕವಾಗಿ ಮಂಡಿಸಲಾಗಿದೆ. ಮುಂದಿನವಾರ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಮತ್ತೊಂದು ಸಭೆ ನಡೆಯಲಿದೆ. ಅಲ್ಲಿ ಮತ್ತೊಮ್ಮೆ ವಿಚಾರವನ್ನು ವಿವರಿಸಿ, ಮುಂದಿನ ಒಂದು ವರ್ಷದ ಅವಧಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳುವ ಪ್ರಯತ್ನ ಮಾಡಲಾಗುವುದು ಎಂದು ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಮೇರಿಯಂಡ ಸಂಕೇತ್ ಪೂವಯ್ಯ ಅವರು ಹೇಳಿದರು. ಈ ಕುರಿತು ಮನವಿ ಮಾಡಿದ್ದ ಕೊಡವಾಮೆರ ಕೊಂಡಾಟ ಸಂಘಟನೆಯ ಪದಾಧಿಕಾರಿಗಳನ್ನು ಕರೆದು ಸಭೆ ನಡೆಸಿ ಹೆಚ್ಚಿನ ಮಾಹಿತಿ ಪಡೆದ ಅವರು, ಅರಣ್ಯ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ ಇದರ ಅನಿವಾರ್ಯತೆಯ ಬಗ್ಗೆ ಮನವರಿಕೆ ಮಾಡಲಾಗಿದೆ ಎಂದರು. ಮುಂದಿನವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಮತ್ತೆ ವಿಚಾರ ಮಂಡಿಸಲಾಗುವುದು. ಈ ಯೋಜನೆಯಿಂದ ಕೊಡಗಿನ ಅರಣ್ಯ ಗೊಂದಲ ನಿವಾರಣೆ, ಮಾನವ- ವನ್ಯಪ್ರಾಣಿ ಸಂಘರ್ಷವನ್ನೂ…
ಸೋಮವಾರಪೇಟೆ NEWS DESK ಸೆ.7 : ತಾಲೂಕಿನ ಇತಿಹಾಸ ಪ್ರಸಿದ್ಧ ದೊಡ್ಡಮಳ್ತೆ ಹೊನ್ನಮ್ಮನ ಕೆರೆ ಜಾತ್ರೋತ್ಸವ ಹಾಗು ಬಾಗಿನ ಅರ್ಪಣಾ ಕಾರ್ಯಕ್ರಮ ಭಕ್ತಾದಿಗಳ ಸಮ್ಮುಖದಲ್ಲಿ ಶ್ರದ್ಧಾ-ಭಕ್ತಿಯಿಂದ ಶುಕ್ರವಾರ ನೆರವೇರಿತು. ಬೆಳಿಗ್ಗೆ 10 ಗಂಟೆಗೆ ಸಂಪ್ರದಾಯದಂತೆ, ಶ್ರೀ ಸಿದ್ದೇಶ್ವರ, ಬಸವೇಶ್ವರ, ಸ್ವರ್ಣಗೌರಿ ಹೊನ್ನಮ್ಮ ದೇವಾಲಯ ಸಮಿತಿ ಮತ್ತು ಹೊನ್ನಮ್ಮದೇವಿ ಕುಟುಂಬಸ್ಥರು ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಬಾಗಿನವನ್ನು ಬಂಗಾರದ ಕಲ್ಲಿನ ಮೇಲಿಟ್ಟು ಪೂಜಿಸಿ, ನಂತರ ಕೆರೆಯ ನೀರಿನಲ್ಲಿ ವಿಸರ್ಜಿಸಿದರು. ಗ್ರಾಮದ ಸಮೃದ್ಧಿಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ನಂತರ ಶಾಸಕ ಡಾ. ಮಂತರ್ ಗೌಡ, ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಗೋಪಾಲಕೃಷ್ಣ, ಮಾಜಿ ಎಂಎಲ್ಸಿ ಎಸ್.ಜಿ.ಮೇದಪ್ಪ, ಗೌಡಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್.ಆರ್. ಸುರೇಶ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಕೆ.ಪಿ. ಚಂದ್ರಕಲಾ, ತಾಲ್ಲೂಕು ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಅರುಣ್ ಕೊತ್ನಳ್ಳಿ, ದೇವಾಲಯ ಸಮಿತಿಯ ಅಧ್ಯಕ್ಷ ಡಿ.ಎ. ಉದಯ, ಉಪಾಧ್ಯಕ್ಷ ಡಿ.ಬಿ. ಲೋಕೇಶ್ ಬೆಳ್ಳಿಯಪ್ಪ, ಕಾರ್ಯದರ್ಶಿ ಡಿ.ಎನ್. ಕವನ್ ಬಾಗಿನ…
ಮಡಿಕೇರಿ NEWS DESK ಸೆ.7 : ಭಾರತ-ಪಾಕ್ ನಡುವಿನ 1965ರ ಯುದ್ಧದಲ್ಲಿ ಶತ್ರು ರಾಷ್ಟçದ ಯುದ್ಧ ವಿಮಾನವನ್ನು ಸಾಹಸಿಕ ಪ್ರಯತ್ನದ ಮೂಲಕ ಹೊಡೆದುರುಳಿಸಿ ಬಲಿದಾನಗೈದ ಕೊಡಗಿನ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಅವರ 59ನೇ ಪುಣ್ಯಸ್ಮರಣಾ ಕಾರ್ಯಕ್ರಮ ನಗರದ ಖಾಸಗಿ ಬಸ್ ನಿಲ್ದಾಣದ ವೀರಯೋಧನ ವೃತ್ತದಲ್ಲಿ ಪುಷ್ಪನಮನ ಸಲ್ಲಿಸುವ ಮೂಲಕ ಹೃದಯಸ್ಪರ್ಶಿಯಾಗಿ ನಡೆಯಿತು. ಕೊಡವ ಮಕ್ಕಡ ಕೂಟ, ಅಜ್ಜಮಾಡ ಒಕ್ಕ (ಕುಟುಂಬಸ್ಥರು) ಹಾಗೂ ಸ್ವಾ.ಲೀ.ಅಜ್ಜಮಾಡ ದೇವಯ್ಯ ಟ್ರಸ್ಟ್ನ ಸಂಯುಕ್ತಾಶ್ರಯದಲ್ಲಿ ಇಲ್ಲಿನ ಖಾಸಗಿ ಬಸ್ ನಿಲ್ದಾಣದ ವೃತ್ತದಲ್ಲಿ ಆಯೋಜಿತ ಕಾರ್ಯಕ್ರಮದಲ್ಲಿ ವೀರ ಯೋಧನ ಭಾವ ಚಿತ್ರಕ್ಕೆ ಅಜ್ಜಮಾಡ ಕುಟುಂಬಸ್ಥರು ಸೇರಿದಂತೆ, ಮಾಜಿ ಯೋಧರು, ಗಣ್ಯರು ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಿದರು. :: ‘ರಾಷ್ಟ್ರೀಯ ಪುಣ್ಯದಿನ’ವನ್ನಾಗಿ ಘೋಷಿಸಿ :: ಸ್ವಾ.ಲೀ.ಅಜ್ಜಮಾಡ ದೇವಯ್ಯ ಟ್ರಸ್ಟ್ನ ಅಧ್ಯಕ್ಷರಾದ ಅಜ್ಜಮಾಡ ಕಟ್ಟಿಮಂದಯ್ಯ ವೀರ ಯೋಧನಿಗೆ ಗೌರವ ನಮನ ಸಲ್ಲಿಸಿ ಮಾತನಾಡಿ, ಭಾರತ-ಪಾಕ್ ಯುದ್ಧದ ಸಂದರ್ಭ ಶತ್ರು ರಾಷ್ಟçದ ವಿಮಾನವನ್ನು ಹೊಡೆದುರುಳಿಸುವ ಮೂಲಕ ಕೆಚ್ಚೆದೆಯ ಸಾಹಸ ಮೆರೆದು…
ಮಡಿಕೇರಿ NEWS DESK ಸೆ.6 : ಪ್ರತಿ ವರ್ಷ ವಿಭಿನ್ನ ಪ್ರಯತ್ನಗಳ ಮೂಲಕವೇ ಗಣೇಶೋತ್ಸವದ ಆಕರ್ಷಣೆಯನ್ನು ಹೆಚ್ಚಿಸುತ್ತಿರುವ ಮಡಿಕೇರಿ ನಗರದ ಶಾಂತಿನಿಕೇತನ ಯುವಕ ಸಂಘ, ಪ್ರಸ್ತುತ ಅಯೋಧ್ಯೆಯ ಶ್ರೀರಾಮ ಮಂದಿರದ ಒಳಾಂಗಣದ ಮಾದರಿಯನ್ನು ಸೃಷ್ಟಿಸಿದೆ. ಈ ಮಾದರಿಯಲ್ಲಿ ವಿಘ್ನ ನಿವಾರಕ ಗಣಪ ಶ್ರೀರಾಮನ ರೂಪದಲ್ಲಿ ಪ್ರತಿಷ್ಠಾಪಿಸಲ್ಪಡುತ್ತಿದ್ದಾನೆ. ಶಾಂತಿನಿಕೇತನ ಯುವಕ ಸಂಘ 46 ನೇ ವರ್ಷದ ಅದ್ದೂರಿಯ ಗಣೇಶೋತ್ಸವದ ಸಂಭ್ರಮದಲ್ಲಿದೆ. ಜನವರಿ ತಿಂಗಳಿನಲ್ಲಿ ಅಯೋಧ್ಯೆಯಲ್ಲಿ ನಡೆದ ಶ್ರೀರಾಮಲಲ್ಲಾನ ಪ್ರತಿಷ್ಠಾಪನೆಯ ಕ್ಷಣವನ್ನು ಇಡೀ ಭಾರತ ಸೇರಿ ವಿಶ್ವ ಸಂಭ್ರಮಿಸಿತ್ತು. ಶ್ರೀರಾಮನಿರುವ ಪವಿತ್ರ ಮಂದಿರವನ್ನೇ ಮುಖ್ಯ ಆಕರ್ಷಣೆ ಮಾಡುವ ಸಲುವಾಗಿ ಈ ಬಾರಿ ಶಾಂತಿನಿಕೇತನದಲ್ಲಿ ಅಯೋಧ್ಯೆ ರಾಮನ ಮಾದರಿಯಲ್ಲಿ ಗಣೇಶನ ಮೂರ್ತಿ ಹಾಗೂ ರಾಮ ಮಂದಿರದ ಒಳಾಂಗಣವನ್ನು ಹೋಲುವ ಮಾದರಿಯನ್ನು ಸುಂದರವಾಗಿ ವಿನ್ಯಾಸ ಮಾಡಲಾಗಿದೆ. ಶಾಂತಿನಿಕೇತನ ಯುವಕ ಸಂಘದ ಸದಸ್ಯರೂ ಆಗಿರುವ ಕಲಾವಿದ ಪಿ.ಎ.ರವಿ ಹಾಗೂ ಸಂಗಡಿಗರು ಈ ವಿಶೇಷ ವಿನ್ಯಾಸವನ್ನು ಆಕರ್ಷಕವಾಗಿ ರಚಿಸಿದ್ದಾರೆ. ಪ್ರತಿವರ್ಷ ವಿಶಿಷ್ಟ ಪ್ರಯತ್ನಗಳಿಗೆ ಪ್ರೇರಣೆ ನೀಡುತ್ತಾ ಬಂದಿರುವ ನಾಡಿನ ಭಕ್ತರು…
ಮಡಿಕೇರಿ ಸೆ.6 NEWS DESK : ಕಾಫಿ ಮಂಡಳಿ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಒಟ್ಟಾರೆ ಕಾಫಿ ತೋಟ ಅಭಿವೃದ್ಧಿಪಡಿಸುವ ಉದ್ದೇಶದಿಂದ ವಿವಿಧ ಕಾರ್ಯಚಟುವಟಿಗೆ ಸಹಾಯಧನಕ್ಕೆ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಕಾಫಿ ಮರುನಾಟಿ, ನೀರಾವರಿ ಯೋಜನೆಯಡಿ-ಕೆರೆ/ ತೆರೆದಬಾವಿ/ ರಿಂಗ್ ಬಾವಿ/ ತುಂತುರು/ ಹನಿ ನೀರಾವರಿ, ಕಾಫಿ ಗೋಡೌನ್/ ಕಾಫಿ ಕಣ/ ಪಲ್ಪರ್ ಯುನಿಟ್/ ಮೆಕಾನಿಕಲ್ ಡ್ರೈಯರ್/ ಸೋಲಾರ್ ಟನೆಲ್ ಡ್ರೈಯರ್, ಕಾಫಿ ತೋಟದಲ್ಲಿ ಬಳಸಬಹುದಾದ ಯಂತ್ರೋಪಕರಣಗಳು ಮತ್ತಿತರಕ್ಕೆಸಹಾಯಧನ ಕಲ್ಪಿಸಲಾಗುತ್ತದೆ. ಈ ಎಲ್ಲಾ ಚಟುವಟಿಕೆಗಳನ್ನು ತಮ್ಮ ತೋಟದಲ್ಲಿ ಅಬಿವೃದ್ಧಿ ಪಡಿಸಲು ಇಚ್ಚಿಸುವ ಅರ್ಹ ಕಾಫಿ ಬೆಳೆಗಾರರಿಂದ ಅರ್ಜಿ ಸ್ವೀಕರಿಸಲಾಗುತ್ತಿದೆ. ಅರ್ಜಿ ಸಲ್ಲಿಸಲು ಸೆಪ್ಟೆಂಬರ್, 30 ಕೊನೆಯ ದಿನವಾಗಿದೆ. 25 ಹೆಕ್ಟೇರ್ (62 ಎಕರೆ) ವರೆಗಿನ ಕಾಫಿ ತೋಟ ಹೊಂದಿರುವ ಎಲ್ಲಾ ಬೆಳೆಗಾರರು ಅರ್ಜಿ ಸಲ್ಲಿಸಬಹುದು. ದಾಖಲಾತಿಗಳ ವಿವರ: ಅರ್ಜಿದಾರರ ಫೋಟೋ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್. 2024-25 ನೇ ಸಾಲಿನ ಪಹಣಿಗಳು/ ಆರ್‍ಟಿಸಿ, ತೋಟದ ಅಂದಾಜು ನಕ್ಷೆ, ಕ್ವೇಟೇಷನ್/ ಪ್ಲಾನ್ ಮತ್ತು…
ಮಡಿಕೇರಿ ಸೆ.6 NEWS DESK : ಸೋಮವಾರಪೇಟೆ ತಾಲ್ಲೂಕಿನ ದೊಡ್ಡಮಳ್ತೆ ಗ್ರಾಮದ ಪುಣ್ಯಕ್ಷೇತ್ರ ಹೊನ್ನಮ್ಮನ ಕೆರೆಗೆ ಗೌರಿ ಹಬ್ಬ ಪ್ರಯುಕ್ತ ಬಾಗಿನ ಅರ್ಪಿಸಿಸಲಾಯಿತು. ಶ್ರೀ ಸಿದ್ದೇಶ್ವರ ಮತ್ತು ಬಸವೇಶ್ವರ ಹಾಗೂ ತಾಯಿ ಹೊನ್ನಮ್ಮ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಶಾಸಕ ಡಾ.ಮಂತರ್ ಗೌಡ ಬಾಗಿನ ಅರ್ಪಿಸಿದರು. ಬಳಿಕ ಮಾತನಾಡಿದ ಶಾಸಕರು ಶ್ರೀ ಸಿದ್ದೇಶ್ವರ ಮತ್ತು ಶ್ರೀ ಬಸವೇಶ್ವರ ದೇವಾಲಯಕ್ಕೆ ಪೂಜೆ ಸಲ್ಲಿಸಲು ಹಾಗೂ ತಾಯಿ ಹೊನ್ನಮ್ಮ ಕೆರೆಗೆ ಬಾಗಿನ ಸಮರ್ಪಿಸಲು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸುತ್ತಾರೆ ಎಂದು ತಿಳಿಸಿದರು. ಸುಮಾರು ಇನ್ನೂರು-ಮುನ್ನೂರು ವರ್ಷಗಳಿಂದ ತಾಯಿ ಹೊನ್ನಮ್ಮನ ಕೆರೆಗೆ ನವ ದಂಪತಿಗಳು ಆಗಮಿಸಿ ವಿಶೇಷ ಪೂಜೆ ಸಲ್ಲಿಸಿಕೊಂಡು ಬರುತ್ತಾರೆ. ಗೌರಿ ಹಬ್ಬ ಆಚರಣೆಯಿಂದ ಕುಟುಂಬದವರೆಲ್ಲರೂ ಒಂದೆಡೆ ಸೇರುವುದು ವಿಶೇಷವಾಗಿದೆ ಎಂದರು. ಈ ಬಾರಿ ಒಳ್ಳೆಯ ಮಳೆಯಾಗಿದ್ದು, ಉತ್ತಮ ಬೆಳೆಯಾಗಲಿದೆ. ಹೆಚ್ಚಿನ ಮಳೆಯಿಂದಾಗಿ ಕೆಲವು ಕಡೆ ತೊಂದರೆಯೂ ಸಹ ಆಗಿದೆ. ಆ ನಿಟ್ಟಿನಲ್ಲಿ ಎಲ್ಲರಿಗೂ ಒಳಿತಾಗಲಿ ಎಂದು ಶಾಸಕರು ನುಡಿದರು. ಗ್ಯಾರಂಟಿ ಯೋಜನೆಗಳಿಗೂ…
ಮಡಿಕೇರಿ ಸೆ.6 NEWS DESK : ಎನ್‍ಸಿಸಿ ತರಬೇತಿ ಪಡೆದವರು ಹಾಗೂ ಸೈನಿಕರು ನಿರಂತರವಾಗಿ ದೇಶಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ತಮ್ಮ ಹಕ್ಕುಗಳಿಗಿಂತ ಕರ್ತವ್ಯಕ್ಕೆ ಪ್ರಥಮ ಪ್ರಾಶಸ್ತ್ಯ ನೀಡಿ “ಡ್ಯೂಟಿ ಫಸ್ಟ್ ರೈಟ್ಸ್ ಲೇಟರ್” ಎನ್ನುವ ರೀತಿಯಲ್ಲಿ ತಮ್ಮ ಸೇವೆಯನ್ನು ಪೂರ್ಣಗೊಳಿಸಿ ಸಾರ್ಥಕ ಜೀವನ ಸಾಗಿಸುತ್ತಾರೆ ಎಂದು 19ನೇ ಕರ್ನಾಟಕ ಬೆಟಾಲಿಯನ್ ಎನ್‍ಸಿಸಿ ಕಮಾಂಡಿಂಗ್ ಅಧಿಕಾರಿ ಕರ್ನಲ್ ರಾಜು ಮುಕಂದನ್ ತಿಳಿಸಿದ್ದಾರೆ. ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜ್ ನಲ್ಲಿ 2024-25ನೇ ಸಾಲಿನ ಎನ್‍ಸಿಸಿಗೆ ಕೆಡೆಟ್‍ಗಳ ಆಯ್ಕೆ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಎನ್‍ಸಿಸಿ ಶಿಸ್ತು, ಏಕತೆ, ನಾಯಕತ್ವದ ಗುಣ, ಕ್ರೀಡಾಸ್ಫೂರ್ತಿ, ಜಾತ್ಯಾತೀತ ಮನೋಭಾವ, ನಿಸ್ವಾರ್ಥ ಸೇವೆ, ದೇಶ ಸೇವೆ ಹಾಗೂ ಸಮಾಜದಲ್ಲಿ ಬೆರೆಯುವುದನ್ನು ವಿದ್ಯಾರ್ಥಿಗಳಿಗೆ ಕಲಿಸಿಕೊಡುವುದಲ್ಲದೆ ಸೈನ್ಯದ ಅವಶ್ಯಕತೆಗಳಿಗೆ ಅನುಗುಣವಾಗಿ ತರಬೇತಿಯನ್ನು ನೀಡುತ್ತದೆ ಎಂದರು. ಭಾರತ ದೇಶವು ಭಾಗಹಿಸಿದ ಯುದ್ಧಗಳಲ್ಲಿ (ಇಂಡೋ-ಪಾಕ್ ಯುದ್ಧ) ಎನ್‍ಸಿಸಿ ಯು ಸೈನ್ಯಕ್ಕೆ ಸಹಕಾರಿಯಾಗಿ ಕೆಲಸ ನಿರ್ವಹಿಸಿದೆ. ಭಾರತದ ಸೈನಿಕ ಪಡೆಯು ಪ್ರಪಂಚದ ಮೂರನೇ ಅತೀ ದೊಡ್ಡ…
ಕುಶಾಲನಗರ ಸೆ.6 NEWS DESK : ಕೊಡಗು ಶಾಲಾ ಶಿಕ್ಷಣ ಇಲಾಖೆ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕೊಡಗು ಪ್ರಾದೇಶಿಕ ಕಛೇರಿ, ಮಡಿಕೇರಿ, ಭಾರತ್ ಸ್ಕೌಟ್ಸ್, ಗೈಡ್ಸ್ ನ ಕೊಡಗು ಜಿಲ್ಲಾ ಸಂಸ್ಥೆ ಯ ವತಿಯಿಂದ ಕುಶಾಲನಗರ ಪಟ್ಟಣದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲೆಯ ಕಾವೇರಿ ಇಕೋ ಕ್ಲಬ್ ಹಾಗೂ ಪಿ.ಎಂ.ಶ್ರೀ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಇಕೋ ಕ್ಲಬ್ ಹಾಗೂ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಎನ್.ಎಸ್.ಎಸ್.ಘಟಕದ ಸಂಯುಕ್ತಾಶ್ರಯದಲ್ಲಿ ಗೋ ಗ್ರೀನ್ ಅಭಿಯಾನದಡಿ ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿ ಬಳಕೆಗೆ ಕುರಿತು ಜನಜಾಗೃತಿ ನಡೆಯಿತು. ಪರಿಸರ ಸ್ನೇಹಿ ಗಣೇಶೋತ್ಸವ ಆಚರಣೆಯ ಮಹತ್ವ ಕುರಿತು ಮಾಹಿತಿ ನೀಡಿದ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಹಾಗೂ ಪರಿಸರ ಕಾರ್ಯಕ್ರಮಗಳ ಸಂಘಟಕ ಟಿ.ಜಿ.ಪ್ರೇಮಕುಮಾರ್ , ಈ ಗಣೇಶೋತ್ಸವದಲ್ಲಿ ಬಣ್ಣದ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸುವ ಮೂಲಕ ನಾವು ಪರಿಸರ ಮಾಲಿನ್ಯಕ್ಕೆ ನೇರವಾಗಿ ಕಾರಣರಾಗುತ್ತಿದ್ದೇವೆ. ಆಧುನಿಕತೆಯ ಭರಾಟೆ ನಡುವೆ ಮಾಲಿನ್ಯಕಾರಿ ಪಿಓಪಿ ಹಾಗೂ ರಾಸಾಯನಿಕ ಬಣ್ದ…
ಮಡಿಕೇರಿ ಸೆ.6 NEWS DESK : ಭಾಗಮಂಡಲ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇದ್ದು, ರೋಗಿಗಳು ಚಿಕಿತ್ಸೆಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ತಕ್ಷಣ ನುರಿತ ವೈದ್ಯರನ್ನು ನೇಮಕ ಮಾಡದಿದ್ದಲ್ಲಿ ಗ್ರಾಮಸ್ಥರ ಸಹಕಾರದೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷ ಪ್ರತಿಭಟನೆ ನಡೆಸಲಿದೆ ಎಂದು ಪಕ್ಷದ ಅಯ್ಯಂಗೇರಿ ಘಟಕ ಎಚ್ಚರಿಕೆ ನೀಡಿದೆ. ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅಯ್ಯಂಗೇರಿ ಘಟಕದ ಅಧ್ಯಕ್ಷ ಮುನೀರ್ ಭಾಗಮಂಡಲ ಆಸ್ಪತ್ರೆಯನ್ನು ವೈದ್ಯರು ಮತ್ತು ಮೂಲಭೂತ ಸೌಲಭ್ಯಗಳ ಕೊರತೆ ಕಾಡುತ್ತಿದೆ. ಭಾಗಮಂಡಲ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನತೆ ಇದೇ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಅಲಂಭಿಸಿದ್ದು, ಕಳೆದ 2 ವರ್ಷಗಳಿಂದ ವೈದ್ಯರಿಲ್ಲದೆ ರೋಗಿಗಳು ಕಷ್ಟ ಅನುಭವಿಸುತ್ತಿದ್ದಾರೆ. ತುರ್ತು ಚಿಕಿತ್ಸಾ ವಿಭಾಗವನ್ನು ಇಬ್ಬರು ಶುಶ್ರೂಷಕಿಯರು ನಿಭಾಯಿಸುತ್ತಿದ್ದಾರೆ. ವೈದ್ಯರ ಕೊರತೆ ಬಗ್ಗೆ ಶಾಸಕ ಎ.ಎಸ್.ಪೊನ್ನಣ್ಣ ಅವರಿಗೆ ಮನವಿ ಸಲ್ಲಿಸಿದರೂ ಯಾವುದೇ ಸ್ಪಂದನೆ ದೊರೆತ್ತಿಲ್ಲ ಎಂದು ಆರೋಪಿಸಿದರು. ಭಾಗಮಂಡಲ ಪುಣ್ಯ ಕ್ಷೇತ್ರವಾಗಿದ್ದು, ದೇಶದ ವಿವಿಧ ಕಡೆಗಳಿಂದ ಭಕ್ತರು ಹಾಗೂ ಪ್ರವಾಸಿಗರು…






