ಲೇಖಕ: admin

ಮಡಿಕೇರಿ ಜು 25 NEWS DESK : ಕೊಡಗಿನಲ್ಲಿ ನೂರಾರು ಪ್ರಾಚೀನ ಸ್ಮಾರಕಗಳಿದ್ದು ಇವುಗಳ ಸಂರಕ್ಷಣೆ ನಿಟ್ಟಿನಲ್ಲಿ ಸಾವ೯ಜನಿಕರೂ ಅಗತ್ಯ ಸಹಕಾರ ನೀಡಬೇಕೆಂದು ಜಿಲ್ಲಾ ಪ್ರಾಚ್ಯ ವಸ್ತು ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಕ್ಯೂರೇಟರ್ ಬಿ.ಪಿ.ರೇಖಾ ಕೋರಿದ್ದಾರೆ. ನಗರದ ರೋಟರಿ ಸಭಾಂಗಣದಲ್ಲಿ ರೋಟರಿ ಮಡಿಕೇರಿ ವುಡ್ಸ್ ವತಿಯಿಂದ ಆಯೋಜಿತ ಪ್ರಾಚೀನ ಸ್ಮಾರಕಗಳ ಮಹತ್ವದ ಕುರಿತ ಕಾಯ೯ಕ್ರಮದಲ್ಲಿ ಪಾಲ್ಗೊಂಡಿದ್ದ ಅವರು, ಕೊಡಗು ಜಿಲ್ಲೆಯಲ್ಲಿ ಈವರೆಗೆ ದೊರಕಿದ ಅನೇಕ ಪ್ರಾಚೀನ ಮಹತ್ವದ ಸ್ಮಾರಕಗಳ ಪ್ರಾತ್ಯಕ್ಷಿಕೆಯೊಂದಿಗೆ ಉಪನ್ಯಾಸ ನೀಡಿದರು. ಪ್ರಾಚೀನ ಸ್ಮಾರಕಗಳು ನಮ್ಮ ದೇಶದ ಭವ್ಯ ಇತಿಹಾಸದ ಮಹತ್ವವನ್ನು ಸಾರಿ ಹೇಳುತ್ತವೆ, ಇಂಥ ಸ್ಮಾರಕಗಳ ಸಂರಕ್ಷಣೆ ಭವಿಷ್ಯದ ದೃಷ್ಟಿಯಿಂದ ಅತ್ಯಂತ ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಸಂರಕ್ಷಣೆಗೆ ಸಾವ೯ಜನಿಕರೂ ಸಹಕಾರ ನೀಡುವಂತೆ ರೇಖಾ ಮನವಿ ಮಾಡಿದರು. ಕೊಡಗು ಜಿಲ್ಲೆಯಲ್ಲಿಯೂ ಐತಿಹಾಸಿಕ ಸ್ಮಾರಕಗಳನ್ನು ದತ್ತು ಪಡೆದು ನಿವ೯ಹಿಸಲು ಸಂಘಸಂಸ್ಥೆಗಳು ಸಿದ್ದರಿದ್ದರೆ ಅದಕ್ಕೆ ಕೂಡ ಅವಕಾಶ ಇದೆ ಎಂದೂ ಅವರು ಮಾಹಿತಿ ನೀಡಿದರು, ವೀರಗಲ್ಲು, ಮಾಸ್ತಿಗಲ್ಲು ಸೇರಿದಂತೆ ಪ್ರಾಚೀನ ದೇವಾಲಯಗಳು,…

Read More

ವಿರಾಜಪೇಟೆ ಜು.25 NEWS DESK : ಮೈಸೂರಿನ ಸಚ್ಚಿದಾನಂದ ಆಶ್ರಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಸುವರ್ಣ ಕರ್ನಾಟಕ ಕಾರ್ಮಿಕರ ವೇದಿಕೆ ವತಿಯಿಂದ ಆಯೋಜಿಸಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ ಸಮಾರಂಭದಲ್ಲಿ ವಿರಾಜಪೇಟೆಯ ನಾಟ್ಯ ಮಯೂರಿ ನೃತ್ಯ ಟ್ರಸ್ಟ್ ನ ವಿದ್ಯಾರ್ಥಿಗಳಿಗೆ ಗಾನ ನಾಟ್ಯ ಕಲಾ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಸಂಸ್ಥೆಯ ವಿದ್ಯಾರ್ಥಿಗಳಾದ ಲಿಪಿತ, ತನುಗೋಪಿ, ಧೃತಿ, ರೋಶನಿ, ಶಿವಾನಿ, ಮಿಲನ್ಯ ಇವರುಗಳು ಪ್ರಶಸ್ತಿಯನ್ನು ಪಡೆದುಕೊಂಡರು. ಈ ವಿದ್ಯಾರ್ಥಿಗಳು ವಿದುಷಿ ಪ್ರೇಮಾಂಜಲಿ ಆಚಾರ್ಯ ಅವರ ಬಳಿ ನೃತ್ಯ ಅಭ್ಯಾಸ ಮಾಡುತ್ತಿದ್ದಾರೆ.

Read More

ಮಡಿಕೇರಿ ಜು.25 NEWS DESK : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೊಡಗು, ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮ, ಬೆಂಗಳೂರು ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆ, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಮಡಿಕೇರಿ ಬೋಧಕ ಆಸ್ಪತ್ರೆಯ  ಸಹಯೋಗದಲ್ಲಿ ವಿಶ್ವ ಮೆದುಳು ದಿನವನ್ನು ಆಚರಿಸಲಾಯಿತು. “ಮೆದುಳು ಆರೋಗ್ಯ ಹಾಗೂ ತಡೆಗಟ್ಟುವಿಕೆ” ಘೋಷ ವಾಕ್ಯದೊಂದಿಗೆ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಬೋಧಕ ಆಸ್ಪತ್ರೆಯ ಸಾಮಾನ್ಯ ವೈದ್ಯ ಶಾಸ್ತ್ರ ವಿಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಮಾನ್ಯ ಮೆದುಳಿನ ಕಾಯಿಲೆಗಳ ಗುರುತಿಸುವಿಕೆ, ತಲೆ ನೋವು, ಮೂರ್ಛೆ ರೋಗ, ಪಾರ್ಶ್ವಾವಾಯು, ಮರೆವಿನ ಕಾಯಿಲೆಗಳ ಬಗ್ಗೆ ಮಾಹಿತಿಯನ್ನು ಒದಗಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ.ಸತೀಶ್ ಕುಮಾರ್, ಪ್ರಸ್ತುತ ಮಾನವನ ಆರೋಗ್ಯಕ್ಕೆ ಮೆದುಳಿನ ಆರೋಗ್ಯವು ಎಷ್ಟು ಪ್ರಮುಖವಾಗಿ ಬೇಕಾಗಿದೆ ಹಾಗೂ ಮೆದುಳನ್ನು ಆರೋಗ್ಯಕರವಾಗಿ ಇಟ್ಟುಕೊಳ್ಳಲು ಪ್ರತಿನಿತ್ಯ ಏನು ಮಾಡಬೇಕು ಎಂದು ಮಾಹಿತಿ ನೀಡಿದರು. ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕ…

Read More

ಮಡಿಕೇರಿ ಜು.25 NEWS DESK : ಹರಿಯಾಣದಲ್ಲಿ ಜು.28ರವರೆಗೆ ನಡೆಯಲಿರುವ 42ನೇ ಅವೃತ್ತಿಯ ರಾಷ್ಟ್ರೀಯ ಸೀನಿಯರ್ ನೆಟ್ ಬಾಲ್ ಚಾಂಪಿಯನ್ ಶಿಪ್‌ಗೆ ಎಂ.ವಿ.ಮುತ್ತಮ್ಮ (ಸಂಜನಾ) ಕರ್ನಾಟಕ ತಂಡದಿಂದ ಸ್ಪರ್ಧಿಸಿದ್ದಾರೆ. ಇವರು ಬೆಂಗಳೂರು ಡಾ.ಎನ್.ಎಸ್.ಎ.ಎಂ.ಫಸ್ಟ್ ಗ್ರೇಡ್ ಕಾಲೇಜಿನಲ್ಲಿ ದೈಹಿಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಪೊನ್ನಂಪೇಟೆ ತಾಲೂಕಿನ ಪೊರಾಡು ಗ್ರಾಮದ ಮೀದೇರಿರ ವಸಂತ ಮತ್ತು ಕವಿತಾ ದಂಪತಿಯ ಪುತ್ರಿ.

Read More

ಕಾರ್ಕಳ ಜು.25 NEWS DESK : ಕಾರ್ಕಳದ ಕ್ರಿಯೇಟಿವ್ ಪಿಯು ಕಾಲೇಜಿನ ‘ ಸಪ್ತಸ್ವರ ‘ ವೇದಿಕೆಯಲ್ಲಿ ಜು.24ರಂದು ವಿದ್ಯಾರ್ಥಿಗಳ ಸಮ್ಮುಖದಲ್ಲಿ “ಕಾನೂನು ಅರಿವು” ಮಾಹಿತಿ ಕಾರ್ಯಕ್ರಮ ಜರುಗಿತು. ಮಾಹಿತಿ ಕಾರ್ಯಾಗಾರಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಕಾರ್ಕಳದ ಪೊಲೀಸ್ ಉಪನಿರೀಕ್ಷಕ ಹೆಚ್.ಸುಬ್ರಹ್ಮಣ್ಯ ಮಾತನಾಡಿ, ಶಿಕ್ಷಣ ಪಡೆದಾಗ ಜ್ಞಾನ ಮೂಡುತ್ತದೆ. ಆಗ ಸಮಾಜದಲ್ಲಿ ಶಾಂತಿ ಹಾಗೂ ಸಹಬಾಳ್ವೆಯಿಂದ ಬದುಕಲು ಸಾಧ್ಯ’ ಎಂದರು. ಪೊಲೀಸ್ ಇಲಾಖೆಯ ಕಾನ್ಸ್ಟೇಬಲ್ ಸಂತೋಷ್ ಮಾತನಾಡಿ ‘ ವಿದ್ಯಾರ್ಥಿಗಳು ತಮ್ಮ ಓದಿನ ಜೊತೆಗೆ ತಮ್ಮ ಹಕ್ಕುಗಳು ಮತ್ತು ಕಾನೂನು ಅರಿವು ಹೊಂದುವುದು ಅತ್ಯಗತ್ಯವಾಗಿದೆ ‘ ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲರಾದ ವಿದ್ವಾನ್ ಗಣಪತಿ ಭಟ್, ಜೀವಿಸಲು ಗಾಳಿ, ನೀರು, ಆಹಾರ ಎಷ್ಟು ಅಗತ್ಯವೋ ಸಮಾಜದಲ್ಲಿ ಬದುಕಬೇಕಾದರೆ ಕಾನೂನಿನ ಅರಿವು ಅಷ್ಟೇ ಅವಶ್ಯಕವಾಗಿದೆ ‘ ಎಂದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪೊಲೀಸ್ ಇಲಾಖೆಯ ರವೀಂದ್ರ ಹಾಗೂ ಘನಶ್ಯಾಮ್  ಉಪಸ್ಥಿತರಿದ್ದರು. ‘ಕಾನೂನು ಅರಿವು’ ಮಾಹಿತಿ ಕಾರ್ಯಕ್ರಮದಲ್ಲಿ ಉಪನ್ಯಾಸಕ ವರ್ಗದವರು, ವಸತಿ ನಿಲಯ…

Read More

ಗೋಣಿಕೊಪ್ಪ ಜು.25 NEWS DESK  : ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಕೊಡಗು ಪ್ರೆಸ್‌ಕ್ಲಬ್ ಸಹಯೋಗದಲ್ಲಿ ನಲ್ಲೂರು ಗ್ರಾಮದ ಪ್ರಗತಿಪರ ಕೃಷಿಕ ಸೋಮೇಂಗಡ ಗಣೇಶ್ ತಿಮ್ಮಯ್ಯ ಅವರ ಗದ್ದೆಯಲ್ಲಿ ಆಯೋಜಿಸಿದ್ದ ಪತ್ರಕರ್ತರ ಕೆಸರು ಗದ್ದೆ ಕ್ರೀಡಾಕೂಟದಲ್ಲಿ ಜಿಲ್ಲೆಯ ಪತ್ರಕರ್ತರು ಕೆಸರಿನಲ್ಲಿ ವಿವಿಧ ಕ್ರೀಡೆಗಳಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಹ್ಯಾಂಡ್‌ಬಾಲ್, ಹಗ್ಗಜಗ್ಗಾಟ, ಓಟ, ಏಡಿ ಹಿಡಿಯುವ ಸ್ಪರ್ಧೆ, ಮಹಿಳೆಯರಿಗೆ ಆಯೋಜಿಸಿದ್ದ ಲೆಮೆನ್ ವಿತ್ ಸ್ಪೂನ್ ನಡಿಗೆ ಸ್ಪರ್ಧೆಯಲ್ಲು ಸುಮಾರು 70ಕ್ಕೂ ಹೆಚ್ಚು ಪತ್ರಕರ್ತರು ಮಿಂದೆದ್ದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಭವಾನಿಸಿಂಗ್ ಠಾಕೂರ್ ಕ್ರೀಡಾಕೂಟವನ್ನು ಗೋಲ್ ಪೋಸ್ಟೆ÷್ಗ ಚೆಂಡು ಎಸೆಯುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಉತ್ತರ ಕರ್ನಾಟಕ ಭಾಗದಲ್ಲಿ ನಾವು ಕೆಸರು ಎಂಬ ಅನುಭವನ್ನೇ ಇನ್ನೂ ಅನುಭವಿಸಿಲ್ಲ. ಮಳೆ, ಚಳಿ, ಗಾಳಿಯ ನಡುವೆ ಭತ್ತದ ಗದ್ದೆಯಲ್ಲಿ ಹೊತ್ತು ಕಳೆಯುವುದೇ ಸವಾಲು. ಇದರ ನಡುವೆ ಗದ್ದೆಯಲ್ಲಿ ಕ್ರೀಡೆಯಲ್ಲಿ ಪಾಲ್ಗೊಳ್ಳುವುದು ದೈಹಿಕ ಮತ್ತು ಮಾನಸಿಕ ಸಮಪತೋಲನದ…

Read More

ನಾಪೋಕ್ಲು ಜು.25 NEWS DESK : ಮರ೦ದೋಡ ಗ್ರಾಮದ ಕೆರೆತಟ್ಟು , ಬಿದ್ದಂಡ ತಟ್ಟು ಹಾಗೂ ಯವಕಪಾಡಿಯ ಅಡಿಯರ ಕಾಲೋನಿಗೆ ವಿಪರೀತ ಗಾಳಿ ಮಳೆಯಿಂದಾಗಿ ಸುಮಾರು 15 ದಿನದಿಂದ ವಿದ್ಯುತ್ ಸಂರ‍್ಕ ಕಡಿತಗೊಂಡು ಸಮಸ್ಯೆ ಉಂಟಾಗಿತ್ತು. ಗ್ರಾಮ ಪಂಚಾಯಿತಿ ಸದಸ್ಯ ಚೋಯ ಮಾದಂಡ ಹರೀಶ್ ಮೊಣ್ಣಪ್ಪ ನೇತೃತ್ವದಲ್ಲಿ ಕೆ ಇ ಬಿ. ಅಜರ್ ರ‍್ಗ್ರಾಮಸ್ಥರು ಜೊತೆಗೂಡಿ ವಿದ್ಯುತ್ ಸಂರ‍್ಕ ಕಲ್ಪಿಸುವಲ್ಲಿ ಸತತ ಪ್ರಯತ್ನ ಪಟ್ಟು ಗ್ರಾಮಕ್ಕೆ ವಿದ್ಯುತ್ ಸಂರ‍್ಕ ಕಲ್ಪಿಸಿದರು. ಚೆಸ್ಕಾಂ ಸಿಬ್ಬಂದಿಗಳ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು. ವರದಿ : ದುಗ್ಗಳ ಸದಾನಂದ.

Read More

ವಿರಾಜಪೇಟೆ ಜು.25 NEWS DESK : ಗ್ರಾಮದ ರಸ್ತೆ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಸರಿಪಡಿಸುವಂತೆ ಆಗ್ರಹಿಸಿ ವಿರಾಜಪೇಟೆ ಸಮೀಪದ ಕೆದಮುಳ್ಳೂರು, ತೆರ್ಮೆಮೊಟ್ಟೆ, ಬಾರಿಕಾಡು ಸೇರಿದಂತೆ ಪಾಲಂಗಾಲ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ರಸ್ತೆ ಕುಸಿದು ಒಂದು ತಿಂಗಳಾದರೂ ಬದಲಿ ರಸ್ತೆಯನ್ನು ವ್ಯವಸ್ಥೆ ಮಾಡದ ತಾಲೂಕು ಆಡಳಿತ ಕಾರ್ಯವೈಖರಿಗೆ ಬೇಸತ್ತು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಶೀಘ್ರದಲ್ಲೇ ಬದಲಿ ರಸ್ತೆ ವ್ಯವಸ್ಥೆ ಮಾಡದಿದ್ದರೆ ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿ ಬೀಗ ಜಡಿದು ಪ್ರತಿಭಟನೆ ಮಾಡುತ್ತೇವೆ. ವಿರಾಜಪೇಟೆ ತಾಲ್ಲೂಕು ತಹಸೀಲ್ದಾರ್ ಇಲ್ಲಿ ಬಂದು ರಸ್ತೆಗೆ ಪ್ಲಾಸ್ಟಿಕ್ ಹೊದಿಕೆ ಹಾಕಿ ಸಂಚಾರ ಬಂದ್ ಮಾಡಿ ಹೋದರು ಅಷ್ಟೇ ಪ್ರಾಕೃತಿಕ ವಿಕೋಪ ಪರಿಹಾರದಡಿಯಲ್ಲಿ ಅನುದಾನ ಬಳಸಿ ನಮಗೆ ಒಡಾಡಲು ರಸ್ತೆ ಮಾಡಿಕೊಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು. ಪ್ರತಿಭಟನೆಯ ಸಂದರ್ಭ ಮಾತನಾಡಿದ ಕೆದಮುಳ್ಳೂರು ಗ್ರಾ.ಪಂ ಉಪಾಧ್ಯಕ್ಷ ಎಂ.ಎ. ಪರಮೇಶ್ವರ್ ಅವರು, ಮಳೆಯಿಂದಾಗಿ ಕಳೆದ ಕೆಲವು ದಿನಗಳ ಹಿಂದೆ ಗ್ರಾಮದಿಂದ ಕರಡ ಗ್ರಾಮವನ್ನು ಸಂಪರ್ಕಿಸುವ ಕಾಂಕ್ರೀಟ್ ರಸ್ತೆಯಲ್ಲಿ ನಡುವಿನ ಸೀಳು ದೊಡ್ಡದಾಗಿ ರಸ್ತೆ…

Read More

ಸೋಮವಾರಪೇಟೆ ಜು.24 NEWS DESK : ಸೋಮವಾರಪೇಟೆ ತಾಲ್ಲೂಕಿನಲ್ಲಿ ಬಿರುಗಾಳಿ ಸಹಿತ ಮಳೆ ಸುರಿಯುತ್ತಿದ್ದು, ಅಲ್ಲಲ್ಲಿ ಮರ ಬಿದ್ದು ಹಾನಿ ಸಂಭವಿಸಿದೆ. ಕಾರೇಕೊಪ್ಪ ಗ್ರಾಮದ ಬಳಿಯಲ್ಲಿ ರಾಜ್ಯಹೆದ್ದಾರಿಗೆ ಬೆಳಿಗ್ಗೆ ಅಡ್ಡಲಾಗಿ ಮರಬಿದ್ದು ಸಂಚಾರಕ್ಕೆ ಸಮಸ್ಯೆಯಾಗಿತ್ತು. ಆಗ್ನಿಶಾಮಕದಳ ಸಿಬ್ಬಂದಿಗಳು ಮರವನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಶಿರಂಗಳ್ಳಿ ಗ್ರಾಮದಲ್ಲಿ ವಿದ್ಯುತ್ ತಂತಿಯ ಮೇಲೆ ಮರಬಿದ್ದು ವಿದ್ಯುತ್ ಸಂಪರ್ಕ ಕಡಿತವಾಗಿದೆ. ನೇರುಗಳಲೆ ಗ್ರಾಮದ ವೃದ್ದ ದಂಪತಿ ಗೌರಿ ಮತ್ತು ಪುಟ್ಟ ಅವರ ಮನೆಯ ಗೋಡೆ ಕುಸಿದು ಬಿದ್ದಿದೆ. ಶನಿವಾರಸಂತೆ ಪಶುಆಸ್ಪತ್ರೆ ಮೇಲೆ ಮರಬಿದ್ದು ಹಾನಿಯಾಗಿದೆ. ಬಿದರೂರು ಗ್ರಾಮದ ನೀತುಚಂದ್ರ ಅವರ ಮನೆ ಮೇಲೆ ಮರಬಿದ್ದು ಹಾನಿಯಾಗಿದೆ.

Read More

ಸುಂಟಿಕೊಪ್ಪ ಜು.24 NEWS DESK  : ಸೋಮವಾರಪೇಟೆ, ಕುಶಾಲನಗರ ವ್ಯಾಪ್ತಿಯಲ್ಲಿ ಅಧಿಕ ಮಳೆಯ ಕಾರಣದಿಂದ‌ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು ಬುಧವಾರ ಬೆಳಿಗ್ಗೆ ದಿಢೀರ್ ರಜೆ ಘೋಷಣೆ ಮಾಢಿದರು. ವಿಷಯ ತಿಳಿಯದ ಗ್ರಾಮೀಣ ವಿದ್ಯಾರ್ಥಿಗಳು ಶಾಲೆಗೆ ಆಗಮಿಸಿ ಗೊಂದಲಕ್ಕೆ ಒಳಗಾದ ದೃಶ್ಯ ಇಂದು ಕಂಡುಬಂತು. ಮಂಗಳವಾರ ಸಂಜೆಯಿಂದ ಬಿರುಸಿನ ಮಳೆಯಾಗುತ್ತಿದ್ದ ಹಿನ್ನೆಲೆ ಇಂದು ಬೆಳಿಗ್ಗೆ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ಆದರೆ ರಜೆಯ ಅರಿವಿಲ್ಲದೆ ಶಾಲೆಗೆ ಬಂದ ವಿದ್ಯಾರ್ಥಿಗಳು ಶಾಲೆಯ ಆವರಣದಲ್ಲೇ ಮಳೆ, ಚಳಿಗೆ ಕಾಲ ಕಳೆಯುವಂತ್ತಾಯಿತು.  ಹೆಚ್ಚಿನ  ಮಕ್ಕಳು ಬಸ್ ನಿಲ್ಧಾಣದಲ್ಲಿ, ಮೈದಾನದಲ್ಲಿ ಕಾಲ ಕಳೆದರು. ಹನಿ ಮಳೆಯ ನಡುವೆ ಮಕ್ಕಳು ಮೈದಾನದಲ್ಲಿ ಸೈಕಲ್ ಓಡಿಸಿದರು, ಕ್ರಿಕೆಟ್ ಆಟವಾಡಿದರು. ಈ ರೀತಿಯ ರಜೆ ಘೋಷಣೆಯಿಂದ ಮಕ್ಕಳ ಸುರಕ್ಷತೆ ಸಾಧ್ಯವೇ ? ಹವಾಮಾನ ಇಲಾಖೆಯಿಂದ ಜಿಲ್ಲಾಡಳಿತಕ್ಕೆ ಮಳೆಯ ಮುನ್ಸೂಚನೆ ದೊರೆಯುತ್ತಿಲ್ಲವೇ ?  ಬೆಳಿಗ್ಗೆ ರಜೆ ಘೋಷಣೆ ಮಾಡಿದರೆ ಮಕ್ಕಳು, ಪೋಷಕರು ಏನು ಮಾಡಬೇಕು ? ಎನ್ನುವುದು ಪೋಷಕರ ಅಸಮಾಧಾನದ ಪ್ರಶ್ನೆಯಾಗಿದೆ.

Read More