ಮಡಿಕೇರಿ ಆ.1 NEWS DESK : ಕರ್ನಾಟಕ ಟೆಕ್ವಾಂಡೊ ಅಸೋಸಿಯೇಷನ್ ವತಿಯಿಂದ ಬೆಂಗಳೂರಿನ ಬಸವೇಶ್ವರ ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಮಟ್ಟದ ಮುಕ್ತ ಟೆಕ್ವಾಂಡೊ ಚಾಂಪಿಯನ್‌ಶಿಪ್‌ನಲ್ಲಿ ಮಡಿಕೇರಿಯ ಕೂರ್ಗ್ ಟೆಕ್ವಾಂಡೊ ತರಬೇತಿ ಕೇಂದ್ರದ ವಿದ್ಯಾರ್ಥಿಗಳು ಚಿನ್ನ ಮತ್ತು ಬೆಳ್ಳಿ ಗೆದ್ದಿದ್ದಾರೆ. ಕೇಂದ್ರೀಯ ವಿದ್ಯಾಲಯದ 8ನೇ ತರಗತಿ ವಿದ್ಯಾರ್ಥಿ ಎಂ.ವೈ.ಗೌರವ್ 2 ಚಿನ್ನ, 1ನೇ ತರಗತಿ ವಿದ್ಯಾರ್ಥಿ ಎಂ.ವೈ.ಚುನೇಹ, 5ನೇ ತರಗತಿ ವಿದ್ಯಾರ್ಥಿ ದೃಪದ್ ಪಿ.ಮನಿಕೊತ್, 4ನೇ ತರಗತಿ ವಿದ್ಯಾರ್ಥಿ ಐಡೆನ್ ಜೆ.ತರಕಾನ್, 6ನೇ ತರಗತಿ ವಿದ್ಯಾರ್ಥಿ ಗುತ್ತಿಮುಂಡನ ಸಮರ್ಥ್, ಜನರಲ್ ತಿಮ್ಮಯ್ಯ ಪಬ್ಲಿಕ್ ಸ್ಕೂಲ್‌ನ 3ನೇ ತರಗತಿ ವಿದ್ಯಾರ್ಥಿ ತೇಜಸ್ ರಾಜು ವಿ. ತಲಾ 1 ಚಿನ್ನ ಹಾಗೂ 1 ಬೆಳ್ಳಿಯ ಪದಕವನ್ನು ಗೆದ್ದುಕೊಂಡಿದ್ದಾರೆ. ಕೂರ್ಗ್ ಟೆಕ್ವಾಂಡೊ ತರಬೇತಿ ಸಂಸ್ಥೆಯ ತರಬೇತುದಾರ ಬಿ.ಜಿ.ಲೋಕೇಶ್ ರೈ ಅವರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು.
ಲೇಖಕ: admin
ಮಡಿಕೇರಿ ಆ.1 NEWS DESK : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿಯ ಜಿಲ್ಲಾ ಘಟಕ, ಕುಶಾಲನಗರ ಪ್ರಸ್ ಕ್ಲಬ್ ಟ್ರಸ್ಟ್ ವತಿಯಿಂದ ಸಂಗಮ ಟಿ.ವಿ.ನ್ಯೂಸ್ ಚಾನಲ್ ಹಾಗೂ ವಂಶಿ ನ್ಯೂಸ್ ಬಳಗದ ಆಶ್ರಯದಲ್ಲಿ ಕುಶಾಲನಗರ ಪಟ್ಟಣದ ಗಾಯತ್ರಿ ಕಲ್ಯಾಣ ಮಂದಿರದಲ್ಲಿ ಪತ್ರಿಕಾ ದಿನಾಚರಣೆ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಸಮಾಜದಲ್ಲಿ ವಿವಿಧ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ 15 ಮಂದಿಗೆ ‘ಕಾವೇರಿ ರತ್ನ’ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಮಾಜಿ ಸಚಿವ ಎಂ.ಪಿ.ಅಪ್ಪಚ್ಚುರ0ಜನ್ ಮಾತನಾಡಿ, ಸಂವಿಧಾನದ ನಾಲ್ಕನೇ ಅಂಗವಾದ ಪತ್ರಿಕಾ ರಂಗವು ಇಂದು ಕ್ರಿಯಾಶೀಲವಾಗಿ ಹಾಗೂ ಪ್ರಭಾವಿ ಮಾಧ್ಯಮವಾಗಿ ಬೆಳೆದಿದ್ದು, ರಾಜಕಾರಣಿಗಳು ಮತ್ತು ಅಧಿಕಾರಿ ವರ್ಗ ಸಮಾಜದ ಒಳಿತಿಗಾಗಿ ಕಾರ್ಯನಿರ್ವಹಿಸುವ ರೀತಿಯಲ್ಲಿ ತಪ್ಪುಗಳಿದ್ದಲ್ಲಿ ಅದನ್ನು ತಿದ್ದುವ ಮೂಲಕ ಸಕಾರಾತ್ಮಕ ವಿಮರ್ಶೆಗಳನ್ನು ಮಾಡುವ ಮೂಲಕ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು. ಸಮಾಜದಲ್ಲಿ ಉತ್ತಮ ಸೇವಾ ಕಾರ್ಯ ಮಾಡಿದವರನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಅವರ ಸೇವೆಗೆ ಮತ್ತಷ್ಟು ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ರಂಜನ್ ಹೇಳಿದರು. ಮುಖ್ಯ ಭಾಷಣ ಮಾಡಿದ…
ಮಡಿಕೇರಿ ಆ.1 NEWS DESK : ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆ.2 ರಂದು ಮಧ್ಯಾಹ್ನ 2.30 ಗಂಟೆಗೆ ಕೊಡಗು ಜಿಲ್ಲೆಗೆ ಭೇಟಿ ನೀಡಲಿದ್ದು, ಎಲ್ಲಾ ಘಟಕ ಮುಂಚೂಣಿ ನಾಯಕರು, ಕಾರ್ಯಕರ್ತರು ಕೊಪ್ಪ ಗೇಟ್ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕೊಡಗು ಜಿಲ್ಲಾ ಜೆಡಿಎಸ್ ಕೋರಿದೆ.
ಮಡಿಕೇರಿ ಆ.1 NEWS DESK : ಕಳೆದ ಒಂದು ತಿಂಗಳಿನಿಂದ ಸುರಿಯುತ್ತಿರುವ ಗಾಳಿ ಸಹಿತ ಮಹಾಮಳೆಗೆ ಕೊಡಗು ಜಿಲ್ಲೆ ನಲುಗಿ ಹೋಗಿದ್ದು, ಅಪಾರ ನಷ್ಟ ಅನುಭವಿಸಿದೆ. ರಾಜ್ಯ ಸರ್ಕಾರ ತಕ್ಷಣ ಮಳೆಹಾನಿ ಪರಿಹಾರವಾಗಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಭಾರತೀಯ ಜನತಾ ಪಾರ್ಟಿಯ ವಿರಾಜಪೇಟೆ ಮಂಡಲ ಒತ್ತಾಯಿಸಿದೆ. ಪತ್ರಿಕಾ ಪ್ರಕಟಣೆ ನೀಡಿರುವ ಬಿಜೆಪಿಯ ವಿರಾಜಪೇಟೆ ವಕ್ತಾರ ಚೆಪ್ಪುಡಿರ ರಾಕೇಶ್ ದೇವಯ್ಯ ಅಧಿಕ ಮಳೆಯಿಂದ ಬೆಳೆ ಮತ್ತು ಮನೆಗಳು ವ್ಯಾಪಕವಾಗಿ ಹಾನಿಗೀಡಾಗಿದ್ದು, ಸರ್ಕಾರ ತುರ್ತು ಪರಿಹಾರ ಘೋಷಿಸುವ ಅಗತ್ಯವಿದೆ ಎಂದು ತಿಳಿಸಿದ್ದಾರೆ. ಜಿಲ್ಲೆಯ ವಿವಿಧೆಡೆ ನೂರಾರು ಬಡವರ ಮನೆಗಳು ನೆಲಸಮವಾಗಿವೆ. ಅನೇಕ ಮನೆಗಳು ವಾಸಕ್ಕೆ ಯೋಗ್ಯವಿಲ್ಲದಂತೆ ಹಾನಿಗೀಡಾಗಿವೆ. ಹಲವು ಕುಟುಂಬಗಳು ಆಶ್ರಯವಿಲ್ಲದೆ ಅತಂತ್ರ ಪರಿಸ್ಥಿತಿಯಲ್ಲಿವೆ. ಆದರೆ ಸರ್ಕಾರ ಇಲ್ಲಿಯವರೆಗೆ ಎಷ್ಟು ಹಾನಿಗೆ ಎಷ್ಟು ಪ್ರಮಾಣದ ಪರಿಹಾರ ಎನ್ನುವುದನ್ನು ಘೋಷಿಸಿಲ್ಲ. ಈ ಹಿಂದೆ ಇದ್ದ ಬಿಜೆಪಿ ಸರ್ಕಾರ ಮನೆ ಸಂಪೂರ್ಣ ಹಾನಿಯಾದರೆ 5ಲಕ್ಷ ರೂ. ಪರಿಹಾರ ನೀಡುತ್ತಿತ್ತು. ಈಗಿನ ಕಾಂಗ್ರೆಸ್ ಸರ್ಕಾರ ಶೇ.70 ಕ್ಕಿಂತ…
ಪ್ಯಾರಿಸ್ (ಫ್ರಾನ್ಸ್) ಆ.1 NEWS DESK : ಭಾರತದ ಶೂಟರ್ ಸ್ವಪ್ನಿಲ್ ಕುಸಾಲೆ 50 ಮೀಟರ್ ಏರ್ ರೈಫಲ್ 3 ಪೊಸಿಶನ್ ಫೈನಲ್ ಪಂದ್ಯದಲ್ಲಿ ಗೆಲುವು ಸಾಧಿಸಿದ್ದಾರೆ. ಇದರೊಂದಿಗೆ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ ಪದಕಗಳ ಸಂಖ್ಯೆ ಮೂರಕ್ಕೇರಿದೆ. ಇಂದು ನಡೆದ ಫೈನಲ್ ಪಂದ್ಯದಲ್ಲಿ ಭಾರತ ಶೂಟಿಂಗ್ ಸ್ಪರ್ಧೆಯಲ್ಲಿ 451.4 ಅಂಕಗಳೊಂದಿಗೆ ಮೂರನೇ ಸ್ಥಾನ ಪಡೆಯುವ ಮೂಲಕ ಕಂಚಿನ ಪದಕ ಗೆದ್ದಿದ್ದಾರೆ.ಪ್ಯಾರಿಸ್ ಒಲಿಂಪಿಕ್ಸ್‌ನ ಆರನೇ ದಿನವಾದ ಇಂದು ಭಾರತದ ಏಕೈಕ ಪದಕದ ಭರವಸೆ ಅವರ ಮೇಲಿತ್ತು. ಅದರಂತೆ ಪದಕ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಕುಶಾಲನಗರ ಆ.1 NEWS DESK : ಮನುಷ್ಯನ ನೋವು – ನಲಿವು, ದುಃಖ – ದುಮ್ಮಾನಗಳು ಹಾಗೂ ಆತನ ನಾಶಕ್ಕೆ ಆಸೆಗಳೇ ಕಾರಣವಾಗಿವೆ. ಮನುಷ್ಯ ನೆಮ್ಮದಿಯ ಬದುಕು ಕಟ್ಟಬೇಕಿದ್ದಲ್ಲಿ ಹನ್ನೆರಡನೇ ಶತಮಾನದ ವಚನಕಾರರ ತತ್ವ ಆದರ್ಶಗಳ ಪಾಲನೆಯೇ ಮೂಲ ಆಶಯವಾಗಬೇಕೆಂದು ಕುಶಾಲನಗರದ ಮಹಾತ್ಮಗಾಂಧಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಹೆಚ್.ಬಿ.ಲಿಂಗಮೂರ್ತಿ ಹೇಳಿದರು. ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಬಸವನಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸುತ್ತೂರು ಜಗದ್ಗುರು ಶ್ರೀ ಗುರುಚನ್ನಬಸವ ಶಿವಾಚಾರ್ಯರ ದತ್ತಿ ಕಾರ್ಯಕ್ರಮ ” ಶರಣ ಸಂಸ್ಕೃತಿ ಪ್ರಸಾರ ಗೋಷ್ಠಿ ” ಉದ್ಘಾಟಿಸಿ ಮಾತನಾಡಿದ ಅವರು, ಬಸವಾದಿ ಶರಣರು ಹನ್ನೆರಡನೇ ಶತಮಾನದಲ್ಲಿ ಅನುಭವ ಮಂಟಪವನ್ನು ಸ್ಥಾಪಿಸಿ ನಡೆ ನುಡಿಗಳೆರಡು ಒಂದಾಗಿಸಿಕೊಂಡ ಎಲ್ಲಾ ಜಾತಿ ಸಮುದಾಯಗಳ ವಚನಕಾರರನ್ನು ಸೇರಿಸಿ ನಾಡಿಗೆ ಸಾರಿದ ಸಂದೇಶಗಳನ್ನು ನಾವು ಪಾಲಿಸಿದ್ದೇ ಆದಲ್ಲಿ ಜನ ಹಿತ ಹಾಗೂ ಲೋಕ ಹಿತ ಅಗ್ರಪಂತಿಯಲ್ಲಿರುತ್ತದೆ ಎಂದು ವಚನಗಳ ಮೂಲಕ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು. “ಶರಣ ಸಂಸ್ಕೃತಿ – ಪ್ರಸಾರ…
ಮಡಿಕೇರಿ ಆ.1 NEWS DESK : ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆಯು ಸರ್ಕಾರದ ಒಂದು ಪ್ರತಿಷ್ಠಿತ ಸ್ವಾಯತ್ತ ಸಂಸ್ಥೆಯಾಗಿದ್ದು, ಗುಣಮಟ್ಟದ ಕ್ಯಾನ್ಸರ್ ಚಿಕಿತ್ಸೆಗೆ ಹೆಸರುವಾಸಿಯಾದ ಆಸ್ಪತ್ರೆಯಾಗಿರುತ್ತದೆ. ಕಿದ್ವಾಯಿ ಚಿಕಿತ್ಸೆಯಲ್ಲಿ ಕ್ಯಾನ್ಸರ್‌ಗೆ ಸಂಬ0ಧಿಸಿದ0ತೆ ಗುಣಮಟ್ಟದ ವಿವಿಧ ರೀತಿಯ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಬಡತನ ರೇಖೆಗಿಂತ(ಬಿಪಿಎಲ್) ಕೆಳಗಿರುವ ಜನರಿಗೆ ಉಚಿತ ಚಿಕಿತ್ಸೆಯನ್ನು ಹಾಗೂ ಬಡತನ ರೇಖೆಗಿಂತ ಮೇಲಿರುವ(ಎಪಿಎಲ್) ಜನರಿಗೆ ಅತಿ ಕಡಿಮೆ ದರದಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಅದೇ ರೀತಿ ಪರಿಶಿಷ್ಟ ಪಂಗಡದ ಜನರಿಗೂ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಉಚಿತವಾಗಿ ಗುಣಮಟ್ಟದ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಆದ್ದರಿಂದ ಮಡಿಕೇರಿ ತಾಲ್ಲೂಕು ವ್ಯಾಪ್ತಿಯಲ್ಲಿ ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ ಪರಿಶಿಷ್ಟ ಪಂಗಡದ ಜನಾಂಗದವರು ಉಚಿತವಾಗಿ ಗುಣಮಟ್ಟದ ಚಿಕಿತ್ಸೆಯನ್ನು ಪಡೆದು ಗುಣಮುಖರಾಗಬಹುದಾಗಿದ್ದು, ಆಸಕ್ತರು ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ ಬೆಂಗಳೂರು ಇವರನ್ನು ಸಂಪರ್ಕಿಸಬಹುದು ಎಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
*ಆ.2ರಂದು ಸಿಎಂ ಸಿದ್ದರಾಮಯ್ಯ ಕೊಡಗು ಜಿಲ್ಲೆಗೆ ಭೇಟಿ : ಮಳೆಹಾನಿ ಪ್ರದೇಶ ಪರಿಶೀಲನೆ*
ಮಡಿಕೇರಿ ಆ.1NEWS DESK : ಸೋಮವಾರಪೇಟೆ ತಾಲ್ಲೂಕಿನ ಚೆನ್ನಾಪುರ, ದೊಡ್ಡಮಳ್ತೆ, ಒಡೆಯನಪುರ ಗ್ರಾಮಗಳ ಮಳೆಹಾನಿ ಪ್ರದೇಶಗಳಿಗೆ ಶಾಸಕ ಡಾ. ಮಂತರ್ ಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದೇ ಸಂದರ್ಭ ಸಂತ್ರಸ್ತರಿಗೆ ಆಹಾರ ಸಾಮಾಗ್ರಿಗಳನ್ನು ಒದಗಿಸಲಾಯಿತು.
ಮಡಿಕೇರಿ ಆ.1 NEWS DESK : ಭಾಗಮಂಡಲದ ಶ್ರೀ ಭಗಂಡೇಶ್ವರ ದೇವಾಲಯದಲ್ಲಿ ರೂಢಿ ಸಂಪ್ರದಾಯದಂತೆ, ಕ್ರೋಧಿ ಸಂವತ್ಸರದ ಗ್ರೀಷ್ಮ ಋತುವಿನ ದಕ್ಷಿಣಾಯನದ ಕರ್ಕಾಟಕ ಮಾಸ ಆಷಾಢ ಕೃಷ್ಣಪಕ್ಷದ ಅಮಾವಾಸ್ಯೆಯಂದು ಆ.4 ರಂದು ಮಧ್ಯಾಹ್ನ 12 ಗಂಟೆಗೆ ಮಹಾ ಪೂಜೆಯ ನಂತರ ಶ್ರದ್ಧಾ ಭಕ್ತಿಯಿಂದ “ಪೊಲಿಂಕಾನ ಉತ್ಸವ”ವನ್ನು ಆಚರಿಸಲಾಗುವುದು. ಆದುದರಿಂದ ಭಕ್ತಾದಿಗಳು ದೇವಾಲಯಗಳಲ್ಲಿ ನಡೆಯಲಿರುವ “ಪೊಲಿಂಕಾನ ಉತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಎನ್.ಜಿ.ಚಂದ್ರಶೇಖರ್ ಕೋರಿರುತ್ತಾರೆ.






