ಲೇಖಕ: admin

ನಾಪೋಕ್ಲು ಆ.1 NEWS DESK : ನಾಪೋಕ್ಲು ಬಿಲ್ಲವ ಸಮಾಜದ ವತಿಯಿಂದ ಆ.4 ರಂದು ಆಟಿಡೊಂಜಿ ದಿನ -2024 ಕಾರ್ಯಕ್ರಮ ನಡೆಯಲಿದೆ ಎಂದು ಬಿಲ್ಲವ ಸಮಾಜದ ಅಧ್ಯಕ್ಷ ಬಿ.ಎಂ.ಪ್ರತೀಪ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಪೋಕ್ಲು ಹೋಬಳಿ ಮಟ್ಟದಲ್ಲಿ ಸಮಾಜ ಬಾಂಧವರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಆಟಿಡೊಂಜಿ ದಿನ-2024 ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಬೆಳಿಗ್ಗೆ 11 ಗಂಟೆಗೆ ನಾಪೋಕ್ಲುವಿನ ಕೊಡವ ಸಮಾಜದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಇದಕ್ಕೂ ಮುನ್ನ ಬಿಲ್ಲವ ಸಮಾಜದ ಸಂಘದ ಉದ್ಘಾಟನೆ ನಡೆಯಲಿದ್ದು, ಪ್ರಯುಕ್ತ ಬೃಹತ್ ರಕ್ತದಾನ ಶಿಬಿರವನ್ನು ಜಿಲ್ಲಾ ರಕ್ತ ನಿಧಿ ಕೇಂದ್ರದ ಸಹಯೋಗದಲ್ಲಿ ಆಯೋಜಿಸಲಾಗಿದೆ. ಬಳಿಕ ಬಿಲ್ಲವ ಸಮಾಜದ ಮಹಾಸಭೆ ನಡೆಯಲಿದೆ ಎಂದರು. ಮಧ್ಯಾಹ್ನ 12 ಗಂಟೆಗೆ ಆಟಿ ಮಾಸದಲ್ಲಿ ತಯಾರಿಸುವ ವಿಶೇಷ ಖಾದ್ಯಗಳ ತಿನಿಸುಗಳ ಪ್ರದರ್ಶನ ಹಾಗೂ ಊಟೋಪಚಾರ ಹಮ್ಮಿಕೊಳ್ಳಲಾಗಿದೆ ಎಂದ ಅವರು ನಿರಂತರವಾಗಿ ಸಮಾಜ ಸೇವೆ ಮಾಡುವ ಉದ್ದೇಶದಿಂದ ಸಂಘವನ್ನು ಸ್ಥಾಪಿಸಲಾಗಿದ್ದು, ಕನಿಷ್ಠ 50 ಯೂನಿಟ್ ರಕ್ತ ಸಂಗ್ರಹಿಸುವ ಉದ್ದೇಶವನ್ನು ಹೊಂದಿದ್ದೇವೆ. ಮಧ್ಯಾಹ್ನ ಬಿಲ್ಲವ ಸಮಾಜದ…

Read More

ಮಡಿಕೇರಿ ಆ.1 NEWS DESK : ಐತಿಹಾಸಿಕ ನಾಡಹಬ್ಬ ಮಡಿಕೇರಿ ದಸರಾ ಉತ್ಸವದ ಪ್ರಮುಖ ಆಕರ್ಷಣೆಯಾದ ದಶಮಂಟಪಗಳ ಸಮಿತಿಯ ಜವಾಬ್ದಾರಿ ಈ ಬಾರಿ ಶ್ರೀ ಕೋಟೆಮಾರಿಯಮ್ಮ ದೇವಾಲಯಕ್ಕೆ ಸಿಕ್ಕಿದ್ದು, ಅಧ್ಯಕ್ಷರಾಗಿ ಜಿ.ಸಿ.ಜಗದೀಶ್ ಅಧಿಕಾರ ವಹಿಸಿಕೊಂಡರು. ನಗರದ ಕೋದಂಡರಾಮ ದೇವಾಲಯದ ಸಭಾಂಗಣದಲ್ಲಿ ನಡೆದ ದಶಮಂಟಪ ಸಮಿತಿ ಸಭೆಯಲ್ಲಿ ಕಳೆದ ಬಾರಿಯ ಅಧ್ಯಕ್ಷ ಹೆಚ್.ಮಂಜುನಾಥ್, ಜಿ.ಸಿ.ಜಗದೀಶ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಈ ಸಂದರ್ಭ ಮಾತನಾಡಿದ ನೂತನ ಅಧ್ಯಕ್ಷರು, ಎಲ್ಲಾ ಮಂಟಪ ಸಮಿತಿಗಳನ್ನು ವಿಸ್ವಾಸಕ್ಕೆ ತೆಗೆದುಕೊಂಡು ಒಗ್ಗಟ್ಟಿನಿಂದ ದಸರಾ ಉತ್ಸವ ಆಚರಿಸಲಾಗವುದು. ಮಂಟಪಗಳಿಗೆ ಹೆಚ್ಚಿನ ಅನುದಾನ ಒದಗಿಸಲು ಪ್ರಯತ್ನಿಸಲಾಗುವುದು ಎಂದರು. ಹೆಚ್.ಮಂಜುನಾಥ್ ಮಾತನಾಡಿ, ಜಿಲ್ಲಾಡಳಿತ, ದಸರಾ ಸಮಿತಿ, ಶಾಸಕರ ಸಹಕಾರದಿಂದ ಕಳೆದ ಬಾರಿ ದಸರಾವನ್ನು ಉತ್ತಮವಾಗಿ ನಡೆಸಲಾಗಿದೆ ಎಂದರು. ದಸರಾ ಸಮಿತಿಯಿಂದ ದಶಮಂಟಪ ಸಮಿತಿಗೆ ಸೂಕ್ತ ಮಾನ್ಯತೆ ಸಿಗಬೇಕೆಂದರು. ದಸರಾ ಸಮಿತಿ ಕಾಯಾಧ್ಯಕ್ಷ ಪ್ರಕಾಶ್ ಆಚಾರ್ಯ, ಕೋಟೆ ಗಣಪತಿ ದೇವಾಲಯದ ಬಿ.ಎಂ.ರಾಜೇಶ್, ಕರವಲೆ ಭಗವತಿ ದೇವಾಲಯದ ಗಜೇಂದ್ರ, ಕೋಟೆ ಗಣಪತಿ ದೇವಾಲಯದ ವಿಕ್ಕಿ, ದಶಮಂಟಪ ಸಮಿತಿ…

Read More

ಮಡಿಕೇರಿ ಆ.1 NEWS DESK : ಕೊಡಗು ಜಿಲ್ಲಾ ಸಹಕಾರ ಯೂನಿಯನ್ ವರ್ಷಂಪ್ರತೀ ಜಿಲ್ಲೆಯ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆ.6 ರಂದು ಪ್ರಬಂಧ ಸ್ಪರ್ಧೆ ಮತ್ತು ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಚರ್ಚಾ ಸ್ಪರ್ಧೆ ನಡೆಯಲಿದೆ. ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಸಭಾಂಗಣ, ಪೆನ್‌ಶನ್ ಲೇನ್, ಮಡಿಕೇರಿಯಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ‘ಶಾಲಾ ಕಾಲೇಜುಗಳ ಪಠ್ಯ ವಿಷಯಗಳಲ್ಲಿ “ಸಹಕಾರ” ವಿಷಯ ಅಳವಡಿಕೆ’ ‘Introduction of subject on Co operation in the syllabus of schools and colleges’ ವಿಷಯದ ಕುರಿತು ಪ್ರಬಂಧ ಸ್ಪರ್ಧೆಯನ್ನು ಪೂರ್ವಾಹ್ನ 10.30 ಗಂಟೆಗೆ ಏರ್ಪಡಿಸಲಾಗಿದೆ. ಅಲ್ಲದೆ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ‘ಮಾಹಿತಿ ತಂತ್ರಜ್ಞಾನ ಬಳಕೆ ಮತ್ತು ತಾಂತ್ರಿಕತೆ ಅಳವಡಿಕೆಯಿಂದ ಮಾತ್ರವೇ ಸಹಕಾರಿ ಚಳುವಳಿ ಬಲಾಡ್ಯಗೊಳ್ಳಬಲ್ಲದು’‘Co operative movement will be strengthened only when information technology and adoption of technology is accepted’ ವಿಷಯದ ಕುರಿತು ಚರ್ಚಾ ಸ್ಪರ್ಧೆಯನ್ನು ಅದೇ ದಿನ ಪೂರ್ವಾಹ್ನ 11 ಗಂಟೆಯಿ0ದ…

Read More

ಮಡಿಕೇರಿ ಆ.1 NEWS DESK : ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯು ಮುಂಬರುವ ದಿನಗಳಲ್ಲಿ ಹಮ್ಮಿಕೊಳ್ಳುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಜಿಲ್ಲೆಯ ಮತ್ತು ಹೊರಭಾಗದ ಕೊಡವ ಸಾಂಸ್ಕೃತಿಕ ಕಲಾವಿದರುಗಳು ಹಾಗೂ ಕಲಾತಂಡಗಳಿಗೆ ಅವಕಾಶ ಕಲ್ಪಿಸಲಾಗುವುದು. ಆದ್ದರಿಂದ ಕೊಡವ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಉಮ್ಮತ್ತಾಟ್, ಬೊಳಕಾಟ್, ಕೊಂಬಾಟ್, ಕಪ್ಪೆಯಾಟ್, ಚೌರಿಯಾಟ್, ಕೋಲಾಟ್, ಪರೆಯಕಳಿ, ಉರ್‌ಟಿಕೊಟ್ಟ್ ಆಟ್, ಬಿಲ್ಲಾಟ್, ಪೀಲಿಯಾಟ್, ಕಾಪಳಕಳಿ, ಕತ್ತಿಯಾಟ್, ದುಡಿಕೊಟ್ಟ್ ಪಾಟ್, ಧೋಳ್‌ಪಾಟ್, ದೇವಡ ಪಾಟ್, ಕೊಡವ ಸಂಸ್ಕೃತಿ ಹಾಗೂ ಸಾಹಿತ್ಯಕ್ಕೆ ಸೇರಿದಂತೆ ಇತರ ಕಲಾವಿದರುಗಳು ತಮ್ಮ ಹೆಸರು, ವಿಳಾಸ ಹಾಗೂ ದೂರವಾಣಿ ಸಂಖ್ಯೆಗಳ ವಿವರವನ್ನು ಅಕಾಡೆಮಿ ಕಛೇರಿಗೆ ದಿನಾಂಕ 31.08.2024ರ ಒಳಗೆ ಲಿಖಿತವಾಗಿ ತಲುಪಿಸಬಹುದು. ನೋಂದಾಯಿತ ತಂಡಗಳಿಗೆ ಹಾಗೂ ಕಲಾವಿದರುಗಳಿಗೆ ಅಕಾಡೆಮಿಯ ಕಾರ್ಯಕ್ರಮಗಳಲ್ಲಿ ತಮ್ಮ ಪ್ರತಿಭೆಗಳ ಪ್ರದರ್ಶನ ಹಾಗೂ ಸ್ಪರ್ಧೆಯ ಅನಾವರಣಕ್ಕೆ ಆದ್ಯತೆಯನ್ನು ನೀಡಲಾಗುವುದು ಎಂದು ಅಕಾಡೆಮಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ: 08272-229074, 8971958996 ಸಂಪರ್ಕಿಸಬಹುದಾಗಿದೆ.

Read More

ಮಡಿಕೇರಿ ಆ.1 NEWS DESK  : ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಬೊಳ್ಳುಮಾಡು ಗ್ರಾಮದಲ್ಲಿ ಆ.14 ರಂದು “ಬೇಲ್ ನಮ್ಮೆ” ಕಾರ್ಯಕ್ರಮ ನಡೆಯಲಿದೆ. ಬೊಳ್ಳುಮಾಡು ಗ್ರಾಮದ ಮಾತಂಡ ಕುಟುಂಬಸ್ಥರ ಗದ್ದೆಯಲ್ಲಿ ಬೆಳಗ್ಗೆ 9.30 ಗಂಟೆಗೆ ನಡೆಯಲಿದ್ದು, ರಾಜ್ಯ ಕೃಷಿ ಸಚಿವರು ಹಾಗೂ ಜಿಲ್ಲೆಯ ಶಾಸಕರೂ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ನಮ್ಮೆಯ ಪ್ರಯುಕ್ತ ಓಟಾಕ ಓಟ ಹಾಗೂ ಹಗ್ಗ ಜಗ್ಗಾಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಓಟಾಕ ಓಟದಲ್ಲಿ ಪುರುಷರು, ಮಹಿಳೆಯರು, ಬಾಲಕರು ಹಾಗೂ ಬಾಲಕಿಯರು ಸೇರಿದಂತೆ ನಾಲ್ಕು ವಿಭಾಗಗಳಿದ್ದು, ಓಟಾಕ ಓಟದಲ್ಲಿ ಪುರುಷ ಹಾಗೂ ಮಹಿಳೆಯರ ವಿಭಾಗದ ಪ್ರಥಮ ವಿಜೇತರಿಗೆ ಕೋರಿಕೊಡೆ, ನಗದು ರೂ.2000, ದ್ವಿತೀಯ ರೂ.1500 ಹಾಗೂ ತೃತೀಯ ರೂ.1000 ಹಾಗೂ ಸ್ಮರಣಿಕೆ, ಅಭಿನಂದನಾ ಪತ್ರ, ಬಾಲಕರಿಗೆ ಮತ್ತು ಬಾಲಕಿಯರಿಗೆ ಪ್ರಥಮ ರೂ.1500, ದ್ವಿತೀಯ ರೂ.1000 ಹಾಗೂ ತೃತೀಯ 700 ಸ್ಮರಣಿಕೆ, ಅಭಿನಂದನಾ ಪತ್ರ ನೀಡಲಾಗುವುದು. ಹಗ್ಗ ಜಗ್ಗಾಟದಲ್ಲಿ ಪುರುಷರು ಹಾಗೂ ಮಹಿಳೆಯರು ಸೇರಿ 2 ವಿಭಾಗಗಳಿದ್ದು, ಹಗ್ಗ…

Read More

ಮಡಿಕೇರಿ NEWS DESK  ಆ.1 : ಬೆಂಗಳೂರಿನಲ್ಲಿ ನಡೆದ ಆಹ್ವಾನಿತ CBSC ಶಾಲೆಗಳ  ರಾಜ್ಯಮಟ್ಟದ ರಿಂಕ್ ಹಾಕಿ ಪಂದ್ಯಾಟದ 16 ವರ್ಷ ವಯೋಮಿತಿಯೊಳಗಿನ ಹಾಕಿ ಪಂದ್ಯಾಟದಲ್ಲಿ ಮಡಿಕೇರಿಯ *ಕೊಡಗು ವಿದ್ಯಾಲಯ* ಬಾಲಕಿಯರ ತಂಡವು ಪ್ರಥಮ ಹಾಗೂ ಬಾಲಕರ ತಂಡ  ದ್ವಿತೀಯ ಸ್ಥಾನದೊಂದಿಗೆ ಪ್ರಶಸ್ತಿ ಮುಡಿಗೇರಿಸಿಕೊಂಡಿತು.  ಕೊಡಗು ವಿದ್ಯಾಲಯ ತಂಡದ ನಾಯಕಿ *ಜಾಸ್ಮೀನ್*  ಮುಂದಾಳತ್ವದಲ್ಲಿ ಮೈದಾನಕ್ಕಿಳಿದ ಬಾಲಕಿಯರ ತಂಡವು ತಾನಾಡಿದ ಎಲ್ಲಾ ಪಂದ್ಯಾಟಗಳಲ್ಲೂ ಅಮೋಘ ಪ್ರದರ್ಶನ ನೀಡಿ  ಫೈನಲ್ ಪಂದ್ಯಾಟದಲ್ಲಿ ಬೆಂಗಳೂರಿನ ಚಿನ್ಮಯ ವಿದ್ಯಾಲಯ ತಂಡವನ್ನು *6-3* ಗೋಲುಗಳಿಂದ ಮಣಿಸುವ ಮೂಲಕ ಪ್ರಶಸ್ತಿಯನ್ನು ಮುಡಿಗೇರಿಸಿತು.ನಾಯಕ *ನಮನ್* ಮುಂದಾಳತ್ವದ ಬಾಲಕರ ತಂಡ ಲೀಗ್ ಹಂತದ ಎಲ್ಲಾ ಪಂದ್ಯಾಟಗಳಲ್ಲೂ ಉತ್ತಮ  ಆಟ ಪ್ರದರ್ಶಿಸಿ  ಫೈನಲ್ ಪಂದ್ಯದಲ್ಲಿ  ಡಿ.ಪಿ.ಎಸ್. ಶಾಲಾ ತಂಡದ ವಿರುದ್ಧ  *7-2* ಗೋಲುಗಳಿಂದ  ಪರಾಭವಗೊಂಡು ದ್ವಿತೀಯ ಸ್ಥಾನ ಪಡೆದುಕೊಂಡಿತು.14 ರ ವಯೋಮಿತಿಯೊಳಗಿನ ಪಂದ್ಯಾಟದಲ್ಲಿ ಭಾಗವಹಿಸಿದ್ದ ಕೊಡಗು ವಿದ್ಯಾಲಯದ ಬಾಲಕ ಹಾಗೂ ಬಾಲಕಿಯರ ತಂಡಗಳು ಪ್ರಶಸ್ತಿ ಸುತ್ತಿಗೇರುವಲ್ಲಿ ವಿಫಲವಾದವು.     ಕೊಡಗು ವಿದ್ಯಾಲಯ ತಂಡದ *ನೀತು…

Read More

ಸಕಲೇಶಪುರ NEWS DESK ಜು.31 : ಸಕಲೇಶಪುರ ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಶಿರಾಡಿಘಾಟ್ ರಸ್ತೆಯಲ್ಲಿ ಮತ್ತೆ ಗುಡ್ಡ ಕುಸಿದಿದೆ. ಸಕಲೇಶಪುರ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 75 ಬೆಂಗಳೂರು-ಮಂಗಳೂರು ಶಿರಾಡಿಘಾಟ್ ದೊಡ್ಡತಪ್ಲು ಬಳಿ ಬೃಹತ್ ಗುಡ್ಡ ಕುಸಿದಿದ್ದು, ವಾಹನಗಳು ಮಣ್ಣಿನಡಿ ಸಿಲುಕಿವೆ. ಗುಡ್ಡ ಕುಸಿದ ರಭಸಕ್ಕೆ ಕಂಟೇನರ್ ಪಲ್ಟಿಯಾಗಿದೆ. ಹೆದ್ದಾರಿ ಬಂದ್ ಆಗಿದ್ದು, ನೂರಾರು ವಾಹನಗಳು ಸಾಲುಗಟ್ಟಿ ನಿಂತಿವೆ. ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿಂದೆ ಗುಡ್ಡ ಕುಸಿದು ಕಾರು, ಟಿಪ್ಪರ್ ಗಳು ಕೆಸರಿನಲ್ಲಿ ಸಿಲುಕಿಕೊಂಡಿದ್ದವು. ಇದೀಗ ಮತ್ತೆ ಇದೇ ರೀತಿಯ ಘಟನೆ ನಡೆದಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ.

Read More

ಮಡಿಕೇರಿ NEWS DESK ಜು.31 : ಹವಾಮಾನ ವೈಪರಿತ್ಯದಿಂದ ಅತಿವೃಷ್ಟಿ ಉಂಟಾಗಿದ್ದು, ಜುಲೈ ತಿಂಗಳಲ್ಲಿ ಹೆಚ್ಚಿನ ಮಳೆಯಾಗಿದೆ. ಆದ್ದರಿಂದ ಆಗಸ್ಟ್ ತಿಂಗಳಲ್ಲಿಯೂ ಹೆಚ್ಚಿನ ಮುನ್ನೆಚ್ಚರ ವಹಿಸಬೇಕಿದೆ. ಆ ನಿಟ್ಟಿನಲ್ಲಿ ಕೊಡಗು ಜಿಲ್ಲೆಯಲ್ಲಿ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಸಿವಿಲ್ ಪೊಲೀಸ್ ತಂಡಗಳನ್ನು ನಿಯೋಜಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ತಿಳಿದ್ದಾರೆ. ಅತ್ತೂರು ಗ್ರಾಮದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಸಚಿವರು ಕೊಡಗು ಜಿಲ್ಲಾ ಉಸ್ತುವಾರಿ ಸಚಿವರು ಸಹ ಜಿಲ್ಲೆಯ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ವೀಕ್ಷಣೆ ಮಾಡಿದ್ದಾರೆ. ಸರ್ಕಾರ ಜಿಲ್ಲಾಡಳಿತದ ಜೊತೆ ಸದಾ ಸ್ಪಂದಿಸಿದೆ ಎಂದು ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರು ಹೇಳಿದರು. ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಹೆಚ್ಚಿನ ಮಳೆ ಆಗುತ್ತಿರುವುದರಿಂದ ರಸ್ತೆ, ವಿದ್ಯುತ್ ಪರಿವರ್ತಕ ಮತ್ತು ಕಂಬಗಳು, ಬೆಳೆ ಹಾನಿ ಸೇರಿದಂತೆ ಸಾಕಷ್ಟು ನಷ್ಟ ಉಂಟಾಗಿದೆ ಎಂದು ಕಂದಾಯ ಸಚಿವರು ಮಾಹಿತಿ ನೀಡಿದರು. ಕೊಡಗು ಜಿಲ್ಲೆಯಲ್ಲಿ ಗುಡ್ಡ ಕುಸಿಯುವ ಪ್ರದೇಶವನ್ನು ಜಿಎಸ್‌ಐ ತಾಂತ್ರಿಕ ಸಂಸ್ಥೆ ಅಧ್ಯಯನ ಮಾಡಿ…

Read More

ಮಡಿಕೇರಿ ಜು.31 NEWS DESK : ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್.ಭೋಸರಾಜು, ಕಂದಾಯ ಸಚಿವರಾದ ಕೃಷ್ಣ ಭೈರೇಗೌಡ, ಶಾಸಕರಾದ ಡಾ.ಮಂತರ್ ಗೌಡ ಅವರು ಕೊಡಗು ಜಿಲ್ಲೆಯ ಮಳೆ ಹಾನಿ ಪ್ರದೇಶಗಳಿಗೆ ಬುಧವಾರ ಭೇಟಿ ನೀಡಿ ವೀಕ್ಷಿಸಿದರು. ಕುಶಾಲನಗರ ತಾಲ್ಲೂಕಿನ ಹಾರಂಗಿ ಬಳಿಯ ಅತ್ತೂರು ಗ್ರಾಮಕ್ಕೆ ತೆರಳಿ, ಅಲ್ಲಿನ ಮನೆ ಹಾನಿ ವೀಕ್ಷಿಸಿದ ಸಚಿವದ್ವಯರು ಸಂತ್ರಸ್ತ ಕುಟುಂಬದವರಿಗೆ ಧೈರ್ಯ ತುಂಬಿದರು. ಮುಂಗಾರು ಸಂದರ್ಭದಲ್ಲಿ ಅವಘಡಗಳನ್ನು ತಪ್ಪಿಸಿಕೊಳ್ಳುವುದು ಅತೀಮುಖ್ಯ. ಆ ನಿಟ್ಟಿನಲ್ಲಿ ಜೀವ ಉಳಿಸಿಕೊಳ್ಳುವತ್ತ ಗಮನಹರಿಸಬೇಕು ಎಂದು ಇದೇ ಸಂದರ್ಭದಲ್ಲಿ ಸಚಿವರು ಸಲಹೆ ಮಾಡಿದರು. ಸರ್ಕಾರ ಅಗತ್ಯ ಪರಿಹಾರ ನೀಡುವುದರ ಜೊತೆಗೆ ಸೂಕ್ತ ಸ್ಥಳದಲ್ಲಿ ಮನೆ ನಿರ್ಮಿಸಿಕೊಡಲಿದೆ. ಯಾರೂ ಸಹ ಆತಂಕಕ್ಕೆ ತುತ್ತಾಗಬಾರದು. ಸದ್ಯ ಪರಿಹಾರ ಕೇಂದ್ರದಲ್ಲಿ ವಾಸ್ತವ್ಯ ಹೂಡುವಂತಾಗಬೇಕು ಎಂದು ಕಂದಾಯ ಸಚಿವರು ಮನವಿ ಮಾಡಿದರು. ಬಳಿಕ ವಾಲ್ನೂರು ತ್ಯಾಗತ್ತೂರು ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ತೆರೆದಿರುವ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ಸಂತ್ರಸ್ತರ ಯೋಗಕ್ಷೇಮ ವಿಚಾರಿಸಿದರು. ಜುಲೈನಲ್ಲಿ ಹೆಚ್ಚಿನ ಮಳೆಯಾಗಿರುವುದರಿಂದ ಆಗಸ್ಟ್ ತಿಂಗಳಲ್ಲಿ…

Read More

ಸೋಮವಾರಪೇಟೆ NEWS DESK ಜು.31 : ಗಾಳಿ ಮಳೆಯಿಂದ ವಾಸದ ಮನೆಗೆ ಹಾನಿಯಾಗಿದ್ದ ಬಡ ಕುಟುಂಬಗಳಿಗೆ ದಾನಿಗಳು ನೀಡಿದ ಆಹಾರ ಸಾಮಾಗ್ರಿಗಳ ಕಿಟ್‌ನ್ನು ಕರ್ನಾಟಕ ರಕ್ಷಣ ವೇದಿಕೆಯ ಪದಾಧಿಕಾರಿಗಳು ವಿತರಣೆ ಮಾಡಿದರು. ಗೌಡಳ್ಳಿ ಗ್ರಾಮ ಪಂಚಾಯತಿಗೆ ಸೇರಿದ ಚನ್ನಾಪುರ ಹಾಗೂ ಶುಂಠಿ ಮಂಗಳೂರು ಗ್ರಾಮದಲ್ಲಿ ಮಳೆಗಾಳಿಗೆ ಮನೆಗಳಿಗೆ ಹಾನಿಯಾಗಿತ್ತು. ಕರ್ನಾಟಕ ರಕ್ಷಣಾ ವೇದಿಕೆ(ಶಿವರಾಮೇಗೌಡ ಬಣ) ಅಧ್ಯಕ್ಷರಾದ ಫ್ರಾನ್ಸಿಸ್ ಡಿಸೋಜ ಅವರು, ಕೊಪರ್ ಎಸ್ಟೇಟ್ ಮಾಲೀಕರಾದ ಕೆ.ವಿ.ನಿಶಾಂತ್ ಅವರಿಗೆ ಮಾಹಿತಿ ನೀಡಿದ ಹಿನ್ನೆಲೆ, ಅವರು ನೀಡಿದ ಆಹಾರ ಸಾಮಾಗ್ರಿಗಳನ್ನು ಸಂತ್ರಸ್ಥರಾದ ಎಂಟು ಕುಟುಂಬಗಳಿಗೆ ವಿತರಿಸಿದ್ದಾರೆ. ಈ ಸಂದರ್ಭ ಪ್ರಮುಖರಾದ ಶಿವಪ್ರಸಾದ್, ಟಿ ಆರ್ ರಾಮಚಂದ್ರ, ವಿಶ್ವನಾಥ್, ವಿಶ್ವರೂಪ ಆಚಾರ್ಯ, ಡೀವನ್ ಡಿಸೋಜ ಇದ್ದರು.

Read More